ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕೋಟ ಹದಿನಾಲ್ಕು ಗ್ರಾಮ ಹಾಗೂ ವಡ್ಡರ್ಸೆ, ಬನ್ನಾಡಿ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯ ಇದರ ಅಧ್ಯಕ್ಷರಾಗಿ ಜಿ. ಪಟ್ಟಾಭಿರಾಮ ಸೋಮಯಾಜಿ ಗುಂಡ್ಮಿ ಅವರು ಮುಂದಿನ ಮೂರು ವರ್ಷ ಅವಧಿಗೆ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿ ಕೆ. ರಾಜಾರಾಮ ಐತಾಳ ಕೋಟತಟ್ಟು ಪಡುಕರೆ, ಜೊತೆ ಕಾರ್ಯದರ್ಶಿ ಪಿ.ಕೃಷ್ಣ ಪ್ರಸಾದ ಹೇಳೆ೯ ಪಾರಂಪಳ್ಳಿ, ಕೋಶಾಧಿಕಾರಿ ಕೆ. ನಾಗರಾಜ ಉಪಾಧ್ಯಾ ಕಾಕ೯ಡ, ಉಪಾಧ್ಯಕ್ಷರುಗಳಾಗಿ ಸಿ.ಸುಬ್ರಾಯ ಉರಾಳ ಚಿತ್ರಪಾಡಿ ಪಿ. ಚಂದ್ರಶೇಖರ ಹೊಳ್ಳ ಪಾಂಡೇಶ್ವರ, ಗೌರವ ಸಲಹೆಗಾರರಾದ ಯಂ. ಶಿವರಾಮ ಉಡುಪ ಇವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಪ್ರತಿನಿಧಿಗಳ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಹಿಂದಿನ ಸಾಲಿನ ಎಲ್ಲಾ ಗ್ರಾಮ ಪ್ರತಿನಿಧಿಗಳನ್ನು ಮುಂದಿನ ಮೂರು ವರ್ಷಕ್ಕೆ ಮುಂದುವರಿಸಲಾಯಿತು.










