ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಪ್ರಕೃತಿ ಸಂಜೀವಿನಿ ಕೋಟ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಕೋಟ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಪ್ರಸಾದ್ ನೇತ್ರಾಲಯ ಉಡುಪಿ ಅವರಿಂದ ಉಚಿತ ನೇತ್ರ ತಪಾಸಣೆ ಶಿಬಿರವು ಇಲ್ಲಿನ ಪಂಚಾಯತ್ ಸಭಾಭವನದಲ್ಲಿ ಜರಗಿತು.
ಪ್ರಕೃತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಮಾಲತಿ ಶೇಖರ್ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಡುಪಿ ಪ್ರಸಾದ್ ನೇತ್ರಾಲಯದ ವೈದ್ಯರಾದ ಡಾ. ಪ್ರೇಮ್ ಕಣ್ಣಿನ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.

ಒಕ್ಕೂಟದ ಸಾರ್ವಜನಿಕ ಸಂಪರ್ಕ ಅಧಿಕಾರಿ ಗಣೇಶ್ ಹಾಗೂ ಬಿ.ಆರ್.ಪಿ.ಪಿ.ಆರ್.ಐ ರೀತಾ, ಎನ್.ಎಲ್.ಆರ್.ಎಂ. ಸಿಬ್ಬಂದಿಗಳು, ಪದಾಧಿಕಾರಿಗಳು ಇದ್ದರು.
ಕೋಟ ಗ್ರಾಮ ಪಂಚಾಯತ್ ಕಾರ್ಯದರ್ಶಿ ಜಲಜ ಪ್ರಸ್ತಾವನೆ ಸಲ್ಲಿಸಿದರು. ಎಂಬಿಕೆ ಪ್ರೇಮ ಆಚಾರ್ ನಿರೂಪಿಸಿ, ಒಕ್ಕೂಟದ ಎಲ್ ಸಿ.ಆರ್.ಪಿ ಲಲಿತಾ ಸ್ವಾಗತಿಸಿ, ಎಲ್.ಸಿ.ಆರ್.ಪಿ. ಪ್ರತಿಮಾ ವಂದಿಸಿದರು.










