ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕಲಾಕದಂಬ ಆರ್ಟ್ ಸೆಂಟರ್ ಸಂಸ್ಥೆ ಬೆಂಗಳೂರು 16ನೇ ವರ್ಷದ ಕಾಳಿಂಗ ನಾವಡ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ಚೆನ್ನಮ್ಮನಕೆರೆ ಪರಂಪರಾ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
42 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಪ್ರಸಿದ್ಧ ಭಾಗವತ ರಾಘವೇಂದ್ರ ಮಯ್ಯ ಹಾಲಾಡಿ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಾಹಿತಿಗಳಾದ ಕೆ.ಇ.ರಾಧಾಕೃಷ್ಣ, ಖಾಸಗಿ ವಾಹಿನಿಯ ಸಂಪಾದಕ ರವೀಂದ್ರ ಭಟ್, ಯಕ್ಷಗಾನದ ಚಂಡೆ ವಾದಕ ಕೋಟ ಶಿವಾನಂದ, ಕಲಾ ಪೋಷಕ ಪದ್ಮಾ ನವನೀತ್, ನರಸಿಂಹ ಸೋಮಯಾಜಿ, ಕೃಷ್ಣಮೂರ್ತಿ ಅಡಿಗ, ಪ್ರಕಾಶ್ ಭಟ್, ಗಣಪಯ್ಯ ನಾವಡ ಹಾಗೂ ಕಲಾಕದಂಬದ ನಿರ್ದೇಶಕ ಡಾ. ರಾಧಾಕೃಷ್ಣ ಉರಾಳ, ದೇವರಾಜ ಕರಬ ಉಪಸ್ಥಿತರಿದ್ದರು.










