ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ನಾಡೋಜ ಡಾ. ಜಿ. ಶಂಕರ್ ಅವರ 70ನೇ ಹುಟ್ಟು ಹಬ್ಬದ ಪ್ರಯುಕ್ತ ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಕುಂದಾಪುರ ಘಟಕದ ವತಿಯಿಂದ ಕುಂದಾಪುರದಲ್ಲಿರುವ ಲಕ್ಷ್ಮೀ ಸೋಮ ಬಂಗೇರ ಸ್ಮಾರಕ ತಾಲೂಕು ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಚಂದ್ರ ಮರಕಾಲ, ವೈದ್ಯರಾದ ಡಾ. ನಾಗೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಜಿ. ಶಂಕರ್ ಅವರಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಘಟಕ ಅಧ್ಯಕ್ಷ ನಾಗೇಶ್ ಮೊಗವೀರ ಹಳನಾಡು, ಮಾಜಿ ಜಿಲ್ಲಾಧ್ಯಕ್ಷ ಸದಾನಂದ್ ಬಳ್ಕೂರು, ಘಟಕದ ಕಾರ್ಯದರ್ಶಿ ಮಾಧವ, ಪಧಾಧಿಕಾರಿಗಳು, ಮಹಿಳಾ ಪಧಾಧಿಕಾರಿಗಳು, ಸಮಾಜದ ಮುಖಂಡರು ಭಾಗವಹಿಸಿದ್ದರು.
ನಾಡೋಜರಿಗೆ ಶುಭಹಾರೈಸಿ ಕುಂದಾಪುರದ ಕುಂದೇಶ್ವರ ದೇವರಿಗೆ ರುದ್ರಭಿಷೇಕ ನೀಡಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.















