ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕರಾವಳಿಯ ಜೀವನಾಡಿ ಮೀನುಗಾರಿಕೆ ಅದೆಷ್ಟೊ ಕುಟುಂಬಗಳು ಅದರ ಆಯಾಮದ ಮೇಲೆ ಜೀವನ ಕಂಡುಕೊಂಡಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಪಚ್ಚಿಲೆ ಸೇರಿದಂತೆ ಮುತ್ತು ಕೃಷಿಯ ಮೂಲಕ ಯುವ ಸಮೂಹ ಹೊಸ ಭಾಷ್ಯ ಬರೆಯುತ್ತಿರುವುದು ಶ್ಲಾಘನೀಯ ಎಂದು ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.
ಅವರು ಸಾಸ್ತಾನದಲ್ಲಿ ಕರಾವಳಿ ಕೃಷಿ ಸಂಶೋಧನಾ ಸಂಸ್ಥೆ (ICAR –CCARI) ಗೋವಾ, ಜಲಾನಯನ ಅಭಿವೃದ್ಧಿ ಇಲಾಖೆ-ಬೆಂಗಳೂರು, ಜಿಲ್ಲಾ ಪಂಚಾಯತ್-ಉಡುಪಿ, ಕೃಷಿ ಇಲಾಖೆ-ಉಡುಪಿ, ಮೀನುಗಾರಿಕೆ ಇಲಾಖೆ ಉಡುಪಿ, ಭಾ.ಕೃ.ಅ.ಪ. ಕೃಷಿ ವಿಜ್ಞಾನ ಕೇಂದ್ರ-ಬ್ರಹ್ಮಾವರ, ಗೀತಾನಂದ ಫೌಂಡೇಶನ್ ಮಣೂರು, ಅರಬ್ಬೀ ಸಮುದ್ರ ಮೀನುಗಾರಿಕೆ ನಿರ್ವಹಣೆ ಸಮನ್ವಯ ಸಮಿತಿ, ಸ್ಕೋಡವೆಸ್ ಸಂಸ್ಥೆ, ಆಯುಶ್ಮಾನ್ ಭವ ಸಂಸ್ಥೆ, ಉಡುಪಿ ಕಿನಾರ ಮೀನುಗಾರರ ಉತ್ಪಾದಕ ಕಂಪನಿ ನಿಯಮಿತ ಮತ್ತು ಅಮೃತೇಶ್ವರಿ ರೈತ ಉತ್ಪಾದಕ ಕಂಪನಿ ನಿಯಮಿತ ಜಂಟಿಯಾಗಿ ಆಯೋಜಿಸಿರುವ ಮುತ್ತು ಕೃಷಿ ಮಾಹಿತಿ ಕಾರ್ಯಾಗಾರ ಮನೆ ಮನೆಯಲ್ಲೂ ಮುತ್ತು ಕೃಷಿ ಹಾಗೂ ಯುಕೆ ಪರ್ಲ್ ಮಾರ್ಟ್ ಆಭರಣ ಮಳಿಗೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ದೇಶದ ಪ್ರಧಾನಮಂತ್ರಿಗಳು ಕರಾವಳಿ ತೀರದ ಸಂಸದರ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಮೀನುಗಾರಿಯ ಮತ್ಸ್ಯ ಸಂಪತ್ತಿನ ಬಗ್ಗೆ ರೂಪುರೇಷೆ ಸಿದ್ಧಪಡಿಸಿ ದೇಶಕ್ಕೆ ಹಾಗೂ ಅದರಲ್ಲಿ ಕಾರ್ಯನಿರ್ವಹಿಸುವರಿಗೆ ಅದಾಯದಕ್ಕೆ ಮುನ್ನುಡಿ ಬರೆಯಲಿದೆ ಎಂಬ ಬಗ್ಗೆ ಮಾಹಿತಿ ಸಲಹೆ ನೀಡಿದ್ದಾರೆ.
ಸಿಹಿ ನೀರಿನಲ್ಲಿ ಮುತ್ತು ಕೃಷಿ ಉತ್ಪಾದಿಸಿ ಒಂದಿಷ್ಟು ದುಡಿಯುವ ಕೈಗೆ ಆದಾಯ ನೀಡಲಿದೆ. ಈ ಬಗ್ಗೆ ಸಾಲ ಯೋಜನೆ ಕುರಿತು ನಾನು ಮತ್ತು ಶಾಸಕರ ಮೂಲಕ ಸಂವಹನ ನಡೆಸಿ ಚೈತನ್ಯ ತುಂಬುವ ಕಾರ್ಯ ಮಾಡಲಿದೆ ಎಂದರು.
ಸಭಾ ಕಾರ್ಯಕ್ರಮವನ್ನು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ಉದ್ಘಾಟಿಸಿ ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿರಸಿ ಸ್ಕೂಡ್ ವೆಸ್ ಸಂಸ್ಥೆ ಅಧಿಕಾರಿ ನಾರಾಯಣ ಹೆಗ್ಡೆ ವಹಿಸಿದ್ದರು. ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಕಾರ್ಯಾಗಾರಕ್ಕೆ ಚಾಲನೆ ನೀಡಿದರು.
ಇದೇ ವೇಳೆ ಕಾಂತಾರ ಚಿತ್ರದ ನಟ ರಕ್ಷಿತ್ ರಾಮಚಂದ್ರ ಶೆಟ್ಟಿ, ರಾಜ್ಯ ಯಶಸ್ವಿ ಮುತ್ತು ಕೃಷಿಕರಾದ ಸುಶ್ಮಿತಾ, ಕೋಡಿ ಪ್ರಜ್ವಲ್ ಎಸ್. ಆನೇಕಲ್ ಬೆಂಗಳೂರು , ವಿಜಯ್ ಕೋಲಾರ, ನವೀನ್ ಚಂದ್ರ ಜೈನ್ ಸುಳ್ಯ, ಪುರುಷೋತ್ತಮ್ ಕುಮಟಾ-ಯಾಣ ಅವರುಗಳನ್ನು ಸನ್ಮಾನಿಸಲಾಯಿತು.
ಮುಖ್ಯ ಅಭ್ಯಾಗತರಾಗಿ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಹಿರಿಯ ವಿಜ್ಞಾನಿಗಳಾದ ಡಾ. ಧನಂಜಯ್ ಬಿ., ಡಾ. ಸದಾನಂದ ಆಚಾರ್ಯ ಜಿ., ಕೋಟ ಪಡುಕರೆ ಲಕ್ಷ್ಮೀ ಸೋಮಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಂದ್ರ ಎಸ್. ನಾಯಕ್, ಮಾಜಿ ತಾಲೂಕು ಪಂಚಾಯತ್ ಜ್ಯೋತಿ ಉದಯ ಪೂಜಾರಿ, ಕೋಡಿ ಗ್ರಾಮ ಪಂಚಾಯತ್ ಸದಸ್ಯ ಕೃಷ್ಣ ಪೂಜಾರಿ, ಉಡುಪಿಕಿನಾರ ಮೀನುಗಾರರ ಉತ್ಪಾದಕ ಕಂಪನಿ ನಿರ್ದೇಶಕ ಸುದಿನ ಕೋಡಿ ಉಪಸ್ಥಿತರಿದ್ದರು.
ಸುಜಾತ ಬಾಯರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.















