ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ತೆಕ್ಕಟ್ಟೆ ಗ್ರಾಮದ ಜನಪ್ರಿಯ ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿರುವ ಎಸ್.ಪಿ. ಕ್ರಿಯೇಶನ್ ಕ್ಲಬ್‌ನಲ್ಲಿ ಪಣವಾಗಿಟ್ಟು ಇಸ್ಪೀಟ್ ಜುಗಾರಿ ಆಡುತ್ತಿದ್ದರೆಂಬ ಖಚಿತ ಮಾಹಿತಿಯ ಮೇರೆಗೆ ಕೋಟ ಪೊಲೀಸರು ದಾಳಿ ನಡೆಸಿ ಏಳು ಮಂದಿಯನ್ನು ಬಂಧಿಸಿದ್ದಾರೆ.
ಕೋಟ ಪಿಎಸ್‌ಐ ಪ್ರವೀಣ್ ಕುಮಾರ್ ಮತ್ತು ಸಿಬ್ಬಂದಿ ದಾಳಿ ನಡೆಸಿ ನಡೆಸಿದ್ದು, ಆರೋಪಿಗಳಾದ ಹಂಗಳೂರು ಕೋಡಿ ರಸ್ತೆಯ ಶ್ರೀನಿವಾಸ (63), ಬಿದ್ಕಲಕಟ್ಟೆ ಸೂರ್ಯ (51), ಅಂಬಾಗಿಲು ಹನುಮಂತ ನಗರದ ಚಂದ್ರಹಾಸ (40), ಬೀಜಾಡಿ ಗ್ರಾಮದ ಕೃಷ್ಣ (46), ಕುಂಭಾಶಿ ಗ್ರಾಮದ ಕೊರವಾಡಿಯ ಪುರಂದರ (44), ಬ್ರಹ್ಮಾವರ ಕೊಳಂಬೆಯ ರಜಾಕ್ (52), ನೀಲಾವರ ಗ್ರಾಮದ ಸದಾಶಿವ ದೇವಾಡಿಗ (48) ಬಂಧಿತ ಆರೋಪಿಗಳು.
ಆರೋಪಿಗಳಿಂದ ಅಂದರ್ – ಬಾಹರ್ ಜುಗಾರಿ ಆಟಕ್ಕೆ ಬಳಸಿದ್ದ ನಗದು 1,130 ರೂ., 7 ಮೊಬೈಲ್ ಫೋನ್‌ಗಳು, 40 ಪ್ಲಾಸ್ಟಿಕ್ ಚೇರ್, 3 ರೌಂಡ್ ಟೇಬಲ್, 5 ಪ್ಲಾಸ್ಟಿಕ್ ಸ್ಟೂಲ್, 1 ಟೇಬಲ್, ಸಿಸಿ ಟಿವಿ ಡಿವಿಆರ್ ಮತ್ತು ಮಾನಿಟರ್ ಕ್ಲಬ್ ಲೆಡ್ಜರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















