ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆದ 17ರ ವಯೋಮಿತಿಯ ಬಾಲಕ ಬಾಲಕಿಯರ ಕರ್ನಾಟಕ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಯು ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
17ರ ವಯೋಮಿತಿಯ ಹುಡುಗಿಯರ ವಿಭಾಗದಲ್ಲಿ ಪಾವನಿ ಆರ್. ದ್ವಿತೀಯ ಸ್ಥಾನ, ಪ್ರಕೃತಿ ಪಿ. ಶೆಟ್ಟಿ ತೃತೀಯ ಸ್ಥಾನ, ಹುಡುಗರ ವಿಭಾಗದಲ್ಲಿ ವೈಭವ್ ಸಂಗನಭ ಶೆಟ್ಟರ್ ದ್ವಿತೀಯ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇದೇ ತಿಂಗಳು ನವೆಂಬರ್ 25, 26 ರಂದು ತ್ರಿಪುರದಲ್ಲಿ ನಡೆಯುವ ರಾಷ್ಟ್ರ ಮಟ್ಟದಲ್ಲಿ ತ್ರಿವಳಿ ಪ್ರಶಸ್ತಿ ವಿಜೇತರು ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಅವರು ಕಶ್ಚಿ ಚೆಸ್ ಸ್ಕೂಲ್ ಕುಂದಾಪುರದಲ್ಲಿ ಚೆಸ್ ತರಬೇತಿ ಪಡೆದಿದ್ದಾರೆ.










