Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಸಮಗ್ರ ಸಂಸ್ಕೃತಿಯ ಸಾರ ಆಳ್ವಾಸ್‌ನಲ್ಲಿ: ಯು.ಟಿ. ಖಾದರ್
    alvas nudisiri

    ಸಮಗ್ರ ಸಂಸ್ಕೃತಿಯ ಸಾರ ಆಳ್ವಾಸ್‌ನಲ್ಲಿ: ಯು.ಟಿ. ಖಾದರ್

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಮೂಡುಬಿದಿರೆ:
    ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಹಮ್ಮಿಕೊಂಡ ಐದು ದಿನಗಳ ‘85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಫ್ 2025-26’ ಸೋಮವಾರ ಅಚ್ಚುಕಟ್ಟಾದ ಮೂಲಸೌಕರ್ಯ, ತಾಂತ್ರಿಕ ನಿಖರತೆ, ಸಮಯ ನಿರ್ವಹಣೆ, ಆತಿಥ್ಯ ವ್ಯವಸ್ಥೆಗಳ, ಶಿಸ್ತುಬದ್ಧತೆ, ಅದ್ಧೂರಿ ಮೆರವಣಿಗೆಗಳ ಜೊತೆ ಆರಂಭಗೊಂಡಿತು.

    Click Here

    Call us

    Click Here

    ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆತಿಥ್ಯದಲ್ಲಿ 6ನೇ ಬಾರಿಗೆ (72, 75, 80, 79 ಹಾಗೂ 81) ನಡೆಯುತ್ತಿರುವ 85ನೇ ಕ್ರೀಡಾಕೂಟವನ್ನು ವಿಧಾನಸಭೆಯ ಸಭಾಪತಿ ಯು.ಟಿ. ಖಾದರ್ ಫರೀದ್  ಉದ್ಘಾಟಿಸಿ ಮಾತನಾಡಿ, ‘ಆಳ್ವಾಸ್‌ನಲ್ಲಿ ನಡೆಯುವ ಕ್ರೀಡಾಕೂಟವು ಜಾಗತಿಕ ಕೂಟದ ಮಾದರಿ. ದೇಶದ ಎಲ್ಲ ಕ್ರೀಡಾಕೂಟಗಳಿಗೂ ಹೆಗ್ಗುರುತು’ ಎಂದು ಶ್ಲಾಘಿಸಿದರು.

    ‘ವಿಶ್ವದ ಸಂಸ್ಕೃತಿಗಳ ಸಾರ ಭಾರತದ ಸಂಸ್ಕೃತಿಗಳ, ಭಾರತದ ಸಂಸ್ಕೃತಿ ಸಾರ ಕರ್ನಾಟಕ, ಕರ್ನಾಟಕದ ಸಂಸ್ಕೃತಿಗಳ ಸಾರ ದಕ್ಷಿಣ ಕನ್ನಡ, ದಕ್ಷಿಣ ಕನ್ನಡದ ಸಂಸ್ಕೃತಿಯ ಸಾರ ಆಳ್ವಾಸ್ ನಲ್ಲಿ’ ಎಂದು ಬಣ್ಣಿಸಿದರು.

    ಸತ್ಪಪ್ರಜೆಗಳ ನಿರ್ಮಿಸುವ ಹಾಗೂ ಬಲಿಷ್ಠ ಭಾರತದ ನಿರ್ಮಾಣದ ಬುನಾದಿ ಈ ಕ್ರೀಡಾಕೂಟ ಎಂದ ಅವರು, ವಿದ್ಯಾರ್ಥಿಗಳೇ ದೇಶದ ಭವ್ಯ ಭವಿಷ್ಯ ಎಂದರು.

    ಉದ್ಘಾಟನಾ ಸಂಕೇತವಾಗಿ ತ್ರಿವರ್ಣ ಬಲೂನು ಗಾಳಿಗೆ ಹಾರಿ ಬಿಡಲಾಯಿತು. ಕ್ರೀಡಾಜ್ಯೋತಿ ಬೆಳಗಿದ ಬಳಿಕ, ಕ್ರೀಡಾಪಟು ದೀಕ್ಷಿತಾ ರಾಮಕೃಷ್ಣ ಪ್ರತಿಜ್ಞಾ ವಿಧಿ ಬೋಧಿಸಿದರು.

    Click here

    Click here

    Click here

    Call us

    Call us

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್ ಬಿ.ಸಿ.ವಿಶ್ವವಿದ್ಯಾಲಯದ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಧ್ವಜಾರೋಹಣ ನೆರವೇರಿಸಿದರು.

    ಕರ್ನಾಟಕ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮೊಹಿಸೀನ್ ಮಾತನಾಡಿ, ಕ್ರೀಡೆ ನಮ್ಮ ಏಕತೆಯ ಸಂಕೇತ. ಕ್ರೀಡಾ ಸ್ಫೂರ್ತಿಯ ಗೆಲುವು ನಮ್ಮದಾಗಬೇಕು. ಆಳ್ವಾಸ್ ಉತ್ತಮ ಶಿಕ್ಷಣ ನೀಡುವ ಸಂಸ್ಥೆಯಾಗಿದೆ. ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಹಾರೈಸಿದರು.

    ಕೂಟದ ವೀಕ್ಷಕರಾದ ವಿ. ಶಂಕರ್  ಮಾತನಾಡಿ, ಡಾ. ಆಳ್ವ ಅವರ ಸಾಧನೆ ಅಪರಿಮಿತ. ಈ ರೀತಿ ಬೃಹತ್ ಕೂಟ ಸಂಘಟಿಸಲು ಆಳ್ವಾಸ್ ಗೆ ಮಾತ್ರ ಸಾಧ್ಯ ಎಂದರು.

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್ ಬಿ.ಸಿ. ಮಾತನಾಡಿ, ‘ಅತ್ಯುತ್ತಮ  ಆತಿಥ್ಯ, ಸಂಘಟನೆ ಹಾಗೂ ಅಚ್ಚುಕಟ್ಟುತನದ ಸಾಕ್ಷಾತ್ಕಾರದಂತೆ ಡಾ. ಎಂ. ಮೋಹನ ಆಳ್ವ ಕ್ರೀಡಾಕೂಟ ಸಂಘಟಿಸಿದ್ದಾರೆ’ ಎಂದು ಅಭಿನಂದಿಸಿದರು.

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವ ಅರ್ಜುನ್, ಮಾಜಿ ಸಚಿವ ಅಭಯಚಂದ್ರ ಜೈನ್ , ಇಫ್ತಿಕರ್ ಅಲಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ವ್ಯವಸ್ಥಾಪಕ ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ. ವಿನಯ್ ಆಳ್ವ ಮತ್ತಿತರರು ಇದ್ದರು.

    ಕ್ರೀಡಾಕೂಟದಲ್ಲಿ ದೇಶದ 324ಕ್ಕೂ ಅಧಿಕ ವಿಶ್ವವಿದ್ಯಾಲಯಗಳ ನಾಲ್ಕು ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಹಾಗೂ ಸುಮಾರು 1000 ಕ್ರೀಡಾಧಿಕಾರಿಗಳು ಪಾಲ್ಗೊಂಡಿದ್ದಾರೆ.

    ಮೆರವಣಿಗೆ:  
    ಭಾರತೀಯ ಕಲಾ ಸಂಸ್ಕೃತಿಯನ್ನು ಪ್ರತಿಬಿಂಬಿಸಿದ ಮೆರವಣಿಗೆಯು, ಕ್ರೀಡಾಕೂಟದ ಉದ್ಘಾಟನೆಯಲ್ಲಿ  ಗಮನ ಸಳೆಯಿತು. ದೇಶದ ವೈವಿಧ್ಯತೆಯನ್ನು ಅಭಿವ್ಯಕ್ತಿಸಿದ ಮೆರವಣಿಗೆಯು ಉತ್ತಮ ನಾಳೆಗಾಗಿ ಕ್ರೀಡೆ, ಶಿಕ್ಷಣ, ಸಂಸ್ಕೃತ ಎಂಬ ಸಂದೇಶವನ್ನು ಸಾರಿತು.

    ಶುಭಸೂಚಕವಾದ ಸಾಂಪ್ರದಾಯಿಕ ಕೊಂಬು ವಾದನ, ಗಣಪತಿ ಪ್ರತಿರೂಪ, ಕೊಡೆಗಳನ್ನು ಹಿಡಿದ ವಿದ್ಯಾರ್ಥಿನಿಯರು, ಘಟೋತ್ಕಜ ರೂಪ, ಊರಿನ ಚೆಂಡೆ, ಪೂರ್ಣಕುಂಭ ಹಿಡಿದ ಸ್ತ್ರೀಯರು, ಮಣಿಪುರ ಸಂಸ್ಕ್ರತಿ, ತಟ್ಟಿರಾಯ, ಕಿಂಗ್ಕಾಂಗ್, ಮರಗಾಲು, ತಮಟೆವಾದನ ಆಂಜನೇಯ, ಲಂಗದಾವಣಿ ಹುಡುಗಿಯರು, ರಾಮ, ಯಕ್ಷಗಾನ ವೇಷಧಾರಿಗಳು, ತೆಂಕು ಹಾಗೂ ಬಡಗು ಯಕ್ಷಗಾನ, ವರಾಹ, ಸ್ಯಾಕ್ಸೋಫೋನ್ ವಾದನ, ವೆಂಕಟರಮಣ, ಪುರುಷರ ನಗಾರಿ, ಮಹಿಳೆಯರ ನಗಾರಿ, ನರಸಿಂಹ, ದಪ್ಪು, ಹಿಮಕರಡಿ, ಡೊಳ್ಳುಕುಣಿತ, ನಂದಿ, ಕೊಂಚಾಡಿ ಚೆಂಡೆ, ಕಾಟಿ, ಬ್ಯಾಂಡ್ ಸೆಟ್, ಆಳ್ವಾಸ್ ಗೊಂಬೆ ಬಳಗ, ಶಿಲ್ಪಾ ಗೊಂಬೆ ಬಳಗ, ಹೊನ್ನಾವರ ಬ್ಯಾಂಡ್, ಏಂಜೆಲ್ಸ್, ಎಲ್ವ್ಸ್‌, ಸಂತಕ್ಲಾಸ, ನಾಸಿಕ್ ಬ್ಯಾಂಡ್,  ಡೊಳ್ಳು ಕುಣಿತ, ಶಿಂಗಾರಿ ಮೇಳ, ಪಲ್ಲಕಿ, ಎನ್‌ಸಿಸಿಯ ಭೂ, ವಾಯು ಮತ್ತು ನೌಕಾಪಡೆ ಹಾಗೂ ಸ್ಕೌಟ್ಸ್  ಆ್ಯಂಡ್ ಗೈಡ್ಸ್, ರೋವರ್ಸ್ ಆ್ಯಂಡ್ ರೇಂಜರ್ಸ್ ವಿದ್ಯಾರ್ಥಿಗಳ ಪಥಸಂಚಲನ ಮೆರುಗು ನೀಡಿದವು. ಟ್ರೋಫಿಯನ್ನು ಪಲ್ಲಕ್ಕಿಯಲ್ಲಿ ತರಲಾಯಿತು. ಇದಕ್ಕೂ ಮೊದಲು ಕ್ರೀಡಾಕೂಟದಲ್ಲಿ ಪಾಲ್ಗೊಂಡ ಎಲ್ಲ ವಿಶ್ವವಿದ್ಯಾಲಯಗಳ ಕ್ರೀಡಾಪಟುಗಳ ಪಥಸಂಚಲನ ನಡೆಯಿತು. ವಿಧಾನಸಭೆಯ ಸಭಾಪತಿ ಯು.ಟಿ. ಖಾದರ್ ಫರೀದ್ ಗೌರವ ರಕ್ಷೆ ಸ್ವೀಕರಿಸಿದರು.

    ಮಹಿಳಾ ಕಬಡ್ಡಿ ವಿಶ್ವಕಪ್ ವಿಜೇತ ಭಾರತೀಯ ತಂಡ ಪ್ರತಿನಿಧಿಸಿದ ಧನಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು. ಬಳಿಕ ಸಿಡಿಮದ್ದಿನ ಪ್ರದರ್ಶನವು ಆಗಸದಲ್ಲಿ ಚಿತ್ತಾರ ಮೂಡಿಸಿತು. ರಾಜೇಶ್ ಡಿಸೋಜಾ, ವೇಣುಗೋಪಾಲ್, ರಾಮಚಂದ್ರ ಕಾರ್ಯಕ್ರಮ ನಿರೂಪಿಸಿದರು.

    ಸ್ಪರ್ಧೆಗಳು:
    ‘85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಫ್ 2025-26’ ಕ್ರೀಡಾಕೂಟದ ಮೊದಲ ದಿನವಾದ ಸೋಮವಾರ ನಡೆದ ಪುರುಷರ ಮತ್ತು ಮಹಿಳೆಯರ 10 ಸಾವಿರ ಮೀಟರ್ಸ್ ಓಟದ ಸ್ಪರ್ಧೆ ನಡೆಯಿತು.
    ಉಳಿದಂತೆ ಮಹಿಳಾ ಮತ್ತು ಪುರುಷರ ವಿಭಾಗದ 800 ಮೀ. ಓಟ, ತ್ರಿವಿಧ ಜಿಗಿತ, ಎತ್ತರ ಜಿಗಿತ, ಗುಂಡೆಸೆತ, ಡಿಸ್ಕಸ್ ಥ್ರೋ, 400 ಮೀ. ಹರ್ಡಲ್ಸ್, 100 ಮೀ. ಓಟ,  4*400 ಮೀ. ರಿಲೇ ಸ್ಪರ್ಧೆಗಳ ಅರ್ಹತಾ ಸುತ್ತು ಹಾಗೂ ಸೆಮಿಫೈನಲ್ ನಡೆದವು.

    ಫಲಿತಾಂಶ:
    10,000 ಮೀಟರ್ಸ್ ಓಟ (ಪುರುಷ): ಗೌರವ್, ಮಹಾತ್ಮ ಜ್ಯೋತಿಬಾ ಫುಲೆ ವಿ.ವಿ (29:19.46)-1, ಆವ್ಕಾಶ್, ಎಂಡಿಯು ರೋಹ್ತಕ್ ವಿ.ವಿ. (29:19.91)-2, ಪ್ರಿನ್ಸ್ರಾಜ್ ಯಾದವ್, ಆದಿಕವಿ ಶ್ರೀಮಹರ್ಷಿ ವಿ.ವಿ. (29:21.40)-3,
    10,000 ಮೀಟರ್ಸ್ ಓಟ (ಮಹಿಳೆ): ನಿರ್ಮಲಾ, ಮಂಗಳೂರು ವಿ.ವಿ. (34.47.20)-1, ರವಿನಾ ವಿಜಯ್ ಗಾಯಕವಾಡ್, ಸಾವಿತ್ರಿಬಾಯಿ ಫುಲೆ ವಿ.ವಿ ಪುಣೆ (34.48.07)-2, ಅಂಜಲಿ ದೇವಿ, ಲವ್ಲೀ ಪ್ರೊಫೆಷನಲ್ ವಿ.ವಿ. (34.49.54)-3

    ಮಹಿಳೆಯರ ಮೊದಲ ಚಿನ್ನ ಮುಡಿಗೇರಿಸಿದ ‘ಆಳ್ವಾಸ್’
    ಇಲ್ಲಿನ ಸ್ವರಾಜ್ ಮೈದಾನದಲ್ಲಿ ಸೋಮವಾರ ಆರಂಭಗೊಂಡ ಐದು ದಿನಗಳ ‘85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಫ್ 2025-26’ರ ಮೊದಲ ದಿನ ನಡೆದ ಮಹಿಳೆಯರ ವಿಭಾಗದ ಮೊದಲ ಸ್ಪರ್ಧೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕ್ರೀಡಾ ದತ್ತು ಯೋಜನೆಯ ವಿದ್ಯಾರ್ಥಿನಿ ನಿರ್ಮಲಾ ಚಿನ್ನಕ್ಕೆ ಮುತ್ತಿಕ್ಕಿದರು.

    ಆಳ್ವಾಸ್ ಸ್ವಾಯತ್ತ ಕಾಲೇಜಿನ ವಿದ್ಯಾರ್ಥಿನಿ ನಿರ್ಮಲಾ 10ಸಾವಿರ ಮೀಟರ್ಸ್ ಓಟದಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದು, ಮೊದಲಿಗರಾದರು.  

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಆಳ್ವಾಸ್‌ನಿಂದ ರಾಜ್ಯ ಮಟ್ಟದ ಮಹಿಳಾ ಮಧ್ಯವರ್ಜನ ಶಿಬಿರ

    04/07/2026

    ಜುಲೈ 6ರಂದು ಯಡಾಡಿ – ಮತ್ಯಾಡಿಯಲ್ಲಿ ಕುಂದಾಪ್ರ ಕನ್ನಡ ʼವಾಲ್ಬೆಲ್ಲʼ ಕಾರ್ಯಕ್ರಮ

    04/07/2026

    ಸಿಎ ಫೌಂಡೇಶನ್ ಫಲಿತಾಂಶ ಪ್ರಕಟ: ಕಾರ್ಕಳದ ಕ್ರಿಯೇಟಿವ್  ಕಾಲೇಜಿನ 14 ವಿದ್ಯಾರ್ಥಿಗಳು ತೇರ್ಗಡೆ

    04/07/2026
    Leave A Reply Cancel Reply

    1 × four =

    Call us

    Click Here

    Call us

    Call us

    Call us
    Highest Viewed Recently
    • ಉಡುಪಿ: ವಿದ್ಯಾರ್ಥಿವೇತನ ಸೌಲಭ್ಯಕ್ಕೆ ಅರ್ಜಿ ಆಹ್ವಾನ
    • ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನದಲ್ಲಿ ನಾಥಪಂಥದ ಪೀರ್‌ ಯೋಗಿ ಜಗದೀಶ್‌ನಾಥ್ ಜೀ ಭೇಟಿ
    • ಆಳ್ವಾಸ್‌ನಿಂದ ರಾಜ್ಯ ಮಟ್ಟದ ಮಹಿಳಾ ಮಧ್ಯವರ್ಜನ ಶಿಬಿರ
    • ನಿವೃತ್ತ ಮುಖ್ಯೋಪಾಧ್ಯಾಯಿನಿ ನಿರ್ಮಲಾ ಕೆ.ಎಸ್. ಅವರಿಗೆ ಅಭಿನಂದನೆ
    • ಕುಂದಾಪುರ: ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನಲ್ಲಿ ಕ್ಯಾಂಪಸ್ ಪ್ಲೇಸ್ಮೆಂಟ್

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.