ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪುದುಚೇರಿಯಲ್ಲಿ ನಡೆದ 21ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ ಸ್ಪರ್ಧೆಯಲ್ಲಿ ಭಾಗವಹಿಸಿದ ಓಕವುಡ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಪ್ರಗ್ಯಾ ದೇವಾಡಿಗ ಪ್ರಥಮ ಸ್ಥಾನ ಪಡೆದು ವಿನ್ನರ್ ಪ್ರಶಸ್ತಿ ಜಯಿಸಿದ್ದಾರೆ ಹಾಗೂ ದ್ವಿತಾ ದೇವಾಡಿಗ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಅವರು ಶಿಕ್ಷಕಿ ಅಂಬಿಕಾ ಕುಂದಾಪುರ ಮತ್ತು ಕೊಂಕಣ ರೈಲ್ವೆ ಟಿ.ಟಿ ಮೋಹನ ದೇವಾಡಿಗ ಬಿಜೂರು ಅವರ ಪುತ್ರಿಯರು.
ಅವರಿಗೆ ಕುಂದಾಪುರ ಅಬಾಕಸ್ ಸೆಂಟರ್‌ನ ಪ್ರಸನ್ನ ಕೆ.ಬಿ, ಮಹಾಲಕ್ಷ್ಮಿ ಹಾಗೂ ದೀಪಾ ಅವರು ತರಬೇತಿ ನೀಡಿದ್ದರು .










