ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿವೇಕ ವಿದ್ಯಾರ್ಥಿ-2025, ಇವರು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ತಾಲ್ಲೂಕು ಮಟ್ಟದ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯಲ್ಲಿ ತೆಕ್ಕಟ್ಟೆಯ ವಿಶ್ವ ವಿನಾಯಕ ಸಿ.ಬಿ.ಎಸ್.ಇ. ಸ್ಕೂಲ್‌ನ 9ನೇ ತರಗತಿಯ ವಿದ್ಯಾರ್ಥಿನಿಯಾದ ಸಾನ್ವಿ ಅವರು ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಅವರಿಗೆ ಕಾರ್ಯಕ್ರಮ ಸಂಘಟಕರಾದ ನಿವೃತ್ತ ಶಿಕ್ಷಕ ಬಸ್ರೂರು ದಿನಕರ ಶೆಟ್ಟಿ ಅವರು ಬಹುಮಾನವನ್ನು ವಿತರಿಸಿ ಸನ್ಮಾನಿಸಿದರು.
ಅವರು ತಾಲ್ಲೂಕು ಮಟ್ಟದ ಸಾಧನೆಗೆ ಶಾಲಾ ಮ್ಯಾನೇಜಿಂಗ್ ಡೈರೆಕ್ಟರ್ ಎಂ. ಪ್ರಭಾಕರ್ ಶೆಟ್ಟಿ, ಪ್ರಾಂಶುಪಾಲ ನಿತಿನ್ ಡಿ. ಆಲ್ಮೇಡ ಹಾಗೂ ಶಿಕ್ಷಕ ವೃಂದದವರು ಅಭಿನಂದನೆಯನ್ನು ತಿಳಿಸಿರುತ್ತಾರೆ.










