ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: 2024-25 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ ನಡೆಸಿದ ಸ್ನಾತಕೋತ್ತರ ಪದವಿ ಪರೀಕ್ಷೆಯ ಸಾರ್ವಜನಿಕ ಆಡಳಿತ ವಿಭಾಗದಲ್ಲಿ ಪ್ರವೀಣ್ ಡಿ. ಕೋಟ್ಯಾನ್ ಪಡುಕೆರೆ ಅವರು ರಾಜ್ಯದಲ್ಲಿ 11ನೇ ರ‍್ಯಾಂಕ್‌ನೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ಅವರು ಉದ್ಯಾವರ ಕನಕೊಡ ಮೊಗವೀರ ಸಭೆಯ ಗುರಿಕಾರರಾಗಿದ್ದ ದಿ. ದಯಾಕರ ಕುಂದರ್ ಹಾಗೂ ಸುಂದರಿ ಕೋಟ್ಯಾನ್ ದಂಪತಿಗಳ ಪುತ್ರ.
ಕಳೆದ 15 ವರ್ಷಗಳಿಂದ ಕರ್ನಾಟಕ ಸರಕಾರದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತ ಪ್ರಸ್ತುತ ಬೈಂದೂರು ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರ ಆಪ್ತ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.










