Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ದೋಹಾ ಕತಾರ್‌ನಲ್ಲಿ ಮನಸೂರೆಗೈದ ಬಿಲ್ಲವಾಸ್ ಕತಾರ್‌ನ ಚೊಚ್ಚಲ ತ್ರೋಬಾಲ್‌ ಟೂರ್ನಮೆಂಟ್
    ಊರ್ಮನೆ ಸಮಾಚಾರ

    ದೋಹಾ ಕತಾರ್‌ನಲ್ಲಿ ಮನಸೂರೆಗೈದ ಬಿಲ್ಲವಾಸ್ ಕತಾರ್‌ನ ಚೊಚ್ಚಲ ತ್ರೋಬಾಲ್‌ ಟೂರ್ನಮೆಂಟ್

    Updated:18/02/2026No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ಬಿಲ್ಲವಾಸ್ ಕತಾರ್ ಸಂಸ್ಥೆಯು ದೋಹಾದ “ದಿ ಹ್ಯಾಮಿಲ್ಟನ್ ಇಂಟರ್‌ನ್ಯಾಷನಲ್ ಸ್ಕೂಲ್”ನ  ಭವ್ಯವಾದ ಒಳ ಕ್ರೀಡಾಂಗಣದಲ್ಲಿ ತನ್ನ ಚೊಚ್ಚಲ ತ್ರೋಬಾಲ್ ಟೂರ್ನಮೆಂಟ್‌ನ್ನು ಯಶಸ್ವಿಯಾಗಿ ಆಯೋಜಿಸಿತು. ಪುರುಷರು, ಮಹಿಳೆಯರು ಹಾಗೂ ಮಿಶ್ರ ವಿಭಾಗಗಳಲ್ಲಿ ಒಟ್ಟು 20 ತಂಡಗಳು ಭಾಗವಹಿಸಿದ್ದವು. ಕತಾರ್ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ನಡೆದ ಈ ಪಂದ್ಯಾಟ ಕ್ರೀಡಾಸ್ಫೂರ್ತಿ, ಕ್ರೀಡಾ ಚಾಕಚಕ್ಯತೆ, ದೈಹಿಕ ಕ್ಷಮತೆ ಮತ್ತು ವಿಶೇಷವಾಗಿ ಸಾಮೂಹಿಕ ಒಗ್ಗಟ್ಟನ್ನು ಬಿಂಬಿಸುವ ಕೇಂದ್ರ ಬಿಂದುವಾಗಿತ್ತು.

    Click Here

    Call us

    Click Here

    ಈ ಪಂದ್ಯಾಟವನ್ನು ಕತಾರ್‌ನ ದೋಹಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿ (ಶಿಕ್ಷಣ, ಸಂಸ್ಕೃತಿ ಮತ್ತು ವೀಸಾ) ಹರೀಶ್ ಪಾಂಡೆ ಅವರು ಉದ್ಘಾಟಿಸಿದರು.

    ಸಮಾರಂಭದಲ್ಲಿ ಕಾರ್ಯಕ್ರಮದ ಪ್ರಧಾನ ಪ್ರಾಯೋಜಕರಾದ ಎಂ. ಪಲ್ಲೊಂಜಿ ಸಂಸ್ಥೆಯ ನಿರ್ದೇಶಕರಾದ ಚಿದಾನಂದ ನಾಯಕ್, ಐ.ಎಸ್‌.ಸಿ ಸಲಹಾ ಸದಸ್ಯರಾದ ಸುಬ್ರಹ್ಮಣ್ಯ ಹೆಬ್ಬಾಗಿಲು, ಐ.ಸಿ.ಸಿ, ಐ.ಸಿ.ಬಿ.ಎಫ್, ಐ.ಎಸ್‌.ಸಿ. ಪ್ರತಿನಿಧಿಗಳು ಹಾಗೂ ವಿವಿಧ ಸಂಘಗಳ ಅಧ್ಯಕ್ಷರು ಸೇರಿದಂತೆ  ಅನೇಕ ಗಣ್ಯರು ಭಾಗವಹಿಸಿದ್ದರು.

    ಬಿಲ್ಲವಾಸ್ ಕತಾರ್‌ನ ಅಧ್ಯಕ್ಷೆಯಾದ ಅಪರ್ಣ ಶರತ್ ಅವರು ಸಭೆಯನ್ನು ಸ್ವಾಗತಿಸಿ, ಕ್ರೀಡೆಯ ಮೂಲಕ ಸಮುದಾಯದ ಸಾಮರಸ್ಯ, ಸಹಬಾಳ್ವೆ ಮತ್ತು ಪರಸ್ಪರ  ಅಭಿವೃದ್ಧಿಗೆ  ತಮ್ಮ ಸಂಸ್ಥೆಯ ಬದ್ಧತೆಯನ್ನು ಪುನರುಚ್ಚರಿಸಿದರು. ಉದ್ಘಾಟನಾ ಕಾರ್ಯಕ್ರಮವನ್ನು ಆರ್‌.ಜೆ. ಅಷ್ಟಮಿ ನಿರೂಪಿಸಿದರು.

    ಅನಂತರ ಪೂಜಾ ಜಿತಿನ್ ಹಾಗೂ ಮಂಜು ಕರಿಗಾರ್ ಕಾರ್ಯಕ್ರಮವನ್ನು ಮುಂದುವರಿಸಿದರು. ಪುಟಾಣಿಗಳು ಮತ್ತು ಪೋಷಕರು ಒಟ್ಟು ಸೇರಿ ನಡೆಸಿದ ಗುಂಪು ನೃತ್ಯ ಜನರಲ್ಲಿ ಮಿಂಚಿನ ಸಂಚಾರವನ್ನು ಮೂಡಿಸಿತು.

    Click here

    Click here

    Click here

    Click Here

    Call us

    Call us

    ಕ್ರೀಡಾ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಕಲಾ, ಫ್ಯಾಷನ್ ಮತ್ತು ಸಾಂಸ್ಕೃತಿಕ ರಾಜತಾಂತ್ರಿಕತೆಯ ಸ್ಥಾಪಕ ಹಾಗೂ ಪೋಷಕರಾದ ಫರ್ಹಾನ್ ಅಲ್ ಶೇಖ್ ಅಲ್ ಸಯೀದ್ ಭಾಗವಹಿಸಿದ್ದರು.  

    ಅವರು ಟೂರ್ನಮೆಂಟ್ ಯಶಸ್ವಿಯಾಗಿ ಆಯೋಜಿಸಿದ ಬಿಲ್ಲವಾಸ್ಇ ಕತಾರ್ ತಂಡವನ್ನು ಅಭಿನಂದಿಸಿ, ಕ್ರೀಡೆಗಳು ಶಿಸ್ತು, ಏಕತೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ವಿಶ್ವಕಪ್ ಕಬಡ್ಡಿ 2025 ಚಾಂಪಿಯನ್ ಧನಲಕ್ಷ್ಮೀ ಪೂಜಾರಿ ಅವರ ಅತ್ಯುತ್ತಮ ಸಾಧನೆಗಾಗಿ “ಬಿರುವ ಬೊಲ್ಪು” (ಬಿಲ್ಲವಾಸ್ ನ ಉದಯೋನ್ಮುಖ ತಾರೆ) ಎಂಬ ಬಿರುದು ನೀಡಿ ಎಲ್ಲರ ಸಮ್ಮುಖದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು.  

    ಇದೇ ಸಂದರ್ಭದಲ್ಲಿ ಕರ್ನಾಟಕ ಸಂಘ ಕತಾರ್ ನ ಅಧ್ಯಕ್ಷರು ಡಾ. ಎಂ. ರವಿಶೆಟ್ಟಿ ಮತ್ತು ಕಾರ್ಯಕಾರಿ ಮಂಡಳಿಯವರು ಕರ್ನಾಟಕ ಸಂಘ ಕತಾರ್ ನ ಪರವಾಗಿ ಧನಲಕ್ಷ್ಮೀ  ಪೂಜಾರಿಯವರನ್ನು ಸನ್ಮಾನಿಸಿದರು.  

    ಸಲಾಂ ಶೇಖ್ ಅವರು ತಮ್ಮ ಅನುಭವದ ಮಾತಿನಿಂದ ಜನರಿಗೆ ಕ್ರೀಡಾ ವಾರ್ತೆಯನ್ನು ತಲುಪಿಸಿ ತಮ್ಮ ಕ್ರೀಡಾ ಸ್ಫೂತಿಯನ್ನು ತುಂಬಿಸಿ ಕ್ರೀಡಾಭಿಮಾನಿಗಳ ಮನಸೂರೆಗೊಂಡರು. ಚಿದಾನಂದ ರೈ ಅವರು ತಮ್ಮ ಕಂಚಿನ ಕಂಠದಿಂದ ಕ್ರೀಡಾ ವಾರ್ತೆಯನ್ನು ಜನರಿಗೆ ತಲುಪಿಸುವುದರೊಂದಿಗೆ ಸಮಾರೋಪ ಕಾರ್ಯಕ್ರಮವಾದ ನಿರೂಪಣೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿದರು.

    ಕ್ರೀಡಾ ಕಾರ್ಯದರ್ಶಿ ಸೀಮಾ ಪೂಜಾರಿ ಅವರು ತಮ್ಮ ಧನ್ಯವಾದ ಭಾಷಣದಲ್ಲಿ ಪ್ರಾಯೋಜಕರು, ತಂಡಗಳು, ಸ್ವಯಂಸೇವಕರು ಮತ್ತು ಸದಸ್ಯರ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದರು

    ಪಂದ್ಯಾಟಗಳ ಫಲಿತಾಂಶಗಳು:
    ಪುರುಷರ ವಿಭಾಗ: ತುಳುಕೂಟ 1 (ಚಾಂಪಿಯನ್ಸ್); ಸ್ಟಾರ್ ಸ್ಟ್ರೈಕರ್ಸ್ (ರನ್ನರ್ಸ್-ಅಪ್)
    ಮಹಿಳಾ ವಿಭಾಗ: ಎಂಸಿಸಿ (ಚಾಂಪಿಯನ್ಸ್); ತುಳುಕೂಟ 1 (ರನ್ನರ್ಸ್-ಅಪ್); ತುಳುಕೂಟ 2 (ದ್ವಿತೀಯ ರನ್ನರ್ಸ್-ಅಪ್)
    ಮಿಶ್ರ ವಿಭಾಗ: ತುಳುಕೂಟ 1 (ಚಾಂಪಿಯನ್ಸ್); ಆಲ್ಫಾ ಸ್ಕ್ವಾಡ್ (ರನ್ನರ್ಸ್-ಅಪ್)

    ಬಿಲ್ಲವಾಸ್ ಕತಾರ್ ಆಯೋಜಿಸಿದ ಈ ಪಂದ್ಯಾಟವು  ಒಟ್ಟಿನಲ್ಲಿ ಎಲ್ಲಾ ಕ್ರೀಡಾಭಿಮಾನಿಗಳ ಮನ ಸೂರೆಗೊಂಡು, ಅತ್ಯಂತ ಯಶಸ್ವಿಯಾಗಿ ಸಮಾರೋಪಗೊಂಡು, ಸಮುದಾಯದ ಒಗ್ಗಟ್ಟು, ಕಾರ್ಯಕ್ಷಮತೆ ಮತ್ತು ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಕತಾರ್ ಕ್ರೀಡಾ ದಿನಾಚರಣೆಯ ಅಂಗವಾಗಿ ನಡೆದ ಈ ಕಾರ್ಯಕ್ರಮವು ಆರೋಗ್ಯಕರ ಜೀವನಶೈಲಿಯನ್ನು ಪ್ರೋತ್ಸಾಹಿಸುವ ಜೊತೆಗೆ ಸಮುದಾಯ ಬಾಂಧವ್ಯ ಹಾಗೂ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಿದೆ.

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಒಡಗಿನ ಶ್ರೀ ನಂದಿಕೇಶ್ವರ ದೇವಸ್ಥಾನದ ಕೆರೆ ಹಸ್ತಾಂತರ ಕಾರ್ಯಕ್ರಮ

    21/05/2026

    ಕ್ಯಾಂಪಸ್ ನೇಮಕಾತಿಯಲ್ಲಿ ಮಿಂಚಿದ ಐಎಂಜೆಐಎಸ್‌ಸಿಯ ದ್ವಿತೀಯ ವರ್ಷದ 30 ವಿದ್ಯಾರ್ಥಿಗಳು

    21/05/2026

    ಹಾಲಾಡಿ ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ

    21/05/2026
    Leave A Reply Cancel Reply

    fourteen − four =

    Call us

    Click Here

    Call us

    Call us

    Call us
    Highest Viewed Recently
    • ಒಡಗಿನ ಶ್ರೀ ನಂದಿಕೇಶ್ವರ ದೇವಸ್ಥಾನದ ಕೆರೆ ಹಸ್ತಾಂತರ ಕಾರ್ಯಕ್ರಮ
    • ಕ್ಯಾಂಪಸ್ ನೇಮಕಾತಿಯಲ್ಲಿ ಮಿಂಚಿದ ಐಎಂಜೆಐಎಸ್‌ಸಿಯ ದ್ವಿತೀಯ ವರ್ಷದ 30 ವಿದ್ಯಾರ್ಥಿಗಳು
    • ಹಾಲಾಡಿ ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ
    • 21ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಆಳ್ವಾಸ್ ವಿದ್ಯಾರ್ಥಿನಿಯರು
    • ಕುಂದಾಪುರ: ಬಲಾಡಿಯಲ್ಲಿ ಹಿರಿಯ ಯಕ್ಷಗಾನ ಕಲಾವಿದರಿಗೆ ಸನ್ಮಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.