ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕೋಟ ಶ್ರೀ ವಿರಾಡ್ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಂಘ ಸಾಲಿಗ್ರಾಮ ಇವರ ಆಶ್ರಯದಲ್ಲಿ ವಿಶ್ವಜ್ಯೋತಿ ಮಹಿಳಾ ಬಳಗ ಸಾಲಿಗ್ರಾಮ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ವಿಶ್ವಕರ್ಮ ಸಾಂಸ್ಕೃತಿಕ ಸಭಾಭವನದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಾರಿಜಾ ರಾಘವೇಂದ್ರ ಆಚಾರ್ಯ, ಶ್ರೀರಂಗ ಸಾಹೇಬರಕಟ್ಟೆ ಇವರನ್ನು ಗುರುತಿಸಿ ಸನ್ಮಾನಿಸಲಾಯಿತು. ಇದೇ ವೇಳೆ ಸದಸ್ಯರಿಗೆ ಆಟೋಟ ಸ್ಪರ್ಧೆಗಳನ್ನು ನಡೆಸಿ ಬಹುಮಾನ ನೀಡಲಾಯಿತು.
ವೇದಿಕೆಯಲ್ಲಿ ಮಹಿಳಾ ಬಳಗದ ಅಧ್ಯಕ್ಷ ರಮ್ಯಾ ರಮೇಶ್ ಆಚಾರ್, ಗೌರವಾಧ್ಯಕ್ಷರಾದ ಸವಿತಾ ಚಂದ್ರಶೇಖರ್ ಆಚಾರ್, ಉಪಾಧ್ಯಕ್ಷರಾದ ಸರಿತಾ ಚಂದ್ರ ಆಚಾರ್ ಉಪಸ್ಥಿತರಿದ್ದರು.
ಸಭೆಯಲ್ಲಿ ಗೌರವ ಸಲಹೆಗಾರರು, ಕಾರ್ಯಕಾರಿ ಮಂಡಳಿಯ ಸದಸ್ಯರು, ಹಾಗೂ ಸರ್ವ ಸದಸ್ಯರು ಭಾಗಿಯಾದರು.ಮಹಿಳಾ ಬಳಗದ ಕಾರ್ಯದರ್ಶಿ ಸಹನಾ ರಾಘವೇಂದ್ರ ಆಚಾರ್ಯ ಸ್ವಾಗತಿಸಿ, ನಿರೂಪಿಸಿದರು. ಕೋಶಾಧಿಕಾರಿ ಸುಶೀಲಾ ಸತೀಶ್ ಆಚಾರ್ಯ ವಂದನಾರ್ಪಣೆಗೈದರು.










