ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಮುಂದಿನ 5 ವರ್ಷಗಳ ನೂತನ ಆಡಳಿತ ಮಂಡಳಿಗೆ ಚುನಾವಣೆಯು ಭಾನುವಾರ ದೇವಳದ ವಠಾರದಲ್ಲಿ ಬೆಳಗ್ಗೆ 8ರಿಂದ ಸಂಜೆ 4ರ ವರೆಗೆ ನಡೆಯಿತು.

ಒಟ್ಟು 9 ಸ್ಥಾನಗಳಲ್ಲಿ ಒಂದು ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 8 ಸ್ಥಾನಕ್ಕೆ 18 ಮಂದಿ ಸ್ಪರ್ಧೆಯಲ್ಲಿದ್ದು, ಹೊರರಾಜ್ಯದಿಂದ ಲಕ್ಷ್ಮೀನಾರಾಯಣ ರಾವ್ ವರ್ಕಾಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ ಒಟ್ಟು 6ಬೂತ್‌ಗಳಲ್ಲಿ 7226 ಮತದಾರರ ಪೈಕಿ ಸಾಕಷ್ಟು ಮತದಾರರು ತಮ್ಮ ಮತವನ್ನು ಶ್ರೀ ದೇಗುಲ ವಿವಿಧ ಭಾಗಗಳ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಪೂರ್ವಾಹ್ನದಿಂದಲೇ ದೇಗುಲದ ವಠಾರದಲ್ಲಿ ಹಬ್ಬದ ವಾತಾವರಣ ಏರ್ಪಟ್ಟಿತು. ಸಂಜೆ 4ಕ್ಕೆ ಮತದಾನ ಪೂರ್ಣಗೊಂಡಿದ್ದು ನಂತರ ಮತ ಏಣಿಕೆ ಕಾರ್ಯ ನಡೆಯಿತು. ಮುಖ್ಯ ಚುನಾವಣಾಕಾರಿಯಾಗಿ ಎ. ಅಮೃತ ಹೊಳ್ಳ ಸಹಾಯಕ ಚುನಾವಣಾಧಿಕಾರಿಯಾಗಿ ವಿಶ್ವನಾಥ ಹೊಳ್ಳ ಕರ್ತವ್ಯ ನಿರ್ವಹಿಸಿದರು.










