Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಆಳ್ವಾಸ್‌ ಕಾಲೇಜಿನ 22 ಫೋರಂಗಳ ವಾರ್ಷಿಕ ಕಾರ್ಯಕ್ರಮ – ಇನಾಮು 2026’
    alvas nudisiri

    ಆಳ್ವಾಸ್‌ ಕಾಲೇಜಿನ 22 ಫೋರಂಗಳ ವಾರ್ಷಿಕ ಕಾರ್ಯಕ್ರಮ – ಇನಾಮು 2026’

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಮೂಡುಬಿದಿರೆ
    : ಆಳ್ವಾಸ್ ಪದವಿ ಕಾಲೇಜಿನ 22 ಫೋರಂಗಳ ವಾರ್ಷಿಕ ಕಾರ್ಯಕ್ರಮ ‘ಇನಾಮು 2026’  ಕೃಷಿಸಿರಿ ವೇದಿಕೆಯಲ್ಲಿ ಸಂಭ್ರಮದಿಂದ ನಡೆಯಿತು.

    Click Here

    Call us

    Click Here

    ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ನಟ ಸ್ವರಾಜ್ ಶೆಟ್ಟಿ,  ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಆಳ್ವಾಸ್‌ನಷ್ಟು ಪ್ರೋತ್ಸಾಹ ನೀಡುವ ಸಂಸ್ಥೆ ಬೇರೊಂದಿಲ್ಲ. ಶಿಕ್ಷಣದೊಂದಿಗೆ ಮೌಲ್ಯಗಳನ್ನೂ ಬೆಳೆಸುವ ಮೂಲಕ, ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವ ಕಾರ್ಯವನ್ನು ಸಂಸ್ಥೆ ಯಶಸ್ವಿಯಾಗಿ ನಿರ್ವಹಿಸುತ್ತಿದೆ ಎಂದರು.

    ಜೀವನದಲ್ಲಿ ಸೋಲುಗಳು ಸಹಜ. ಆದರೆ ಸೋಲಿಗೆ ಎದೆಗುಂದದೆ ಧೈರ್ಯದಿಂದ ಎದುರಿಸಬೇಕು. ಪ್ರತಿಯೊಂದು ಅನುಭವವೂ ಹೊಸ ಪಾಠ ಕಲಿಸುತ್ತದೆ. ಇಷ್ಟವಿಲ್ಲದ ವಿಷಯಗಳಲ್ಲಿ ತೊಡಗಿಕೊಳ್ಳಬೇಡಿ. ನಿಮ್ಮ ಆಸಕ್ತಿ ಮತ್ತು ಸಾಮರ್ಥ್ಯವನ್ನು ಗುರುತಿಸಿ ಮುಂದುವರಿಯಿರಿ. ಸಾಧ್ಯವಾದರೆ ಇತರರನ್ನು ಪ್ರೀತಿಸಿ, ಯಾವುದೇ ಸಂದರ್ಭದಲ್ಲೂ ದ್ವೇಷಕ್ಕೆ ಅವಕಾಶ ಕೊಡಬೇಡಿ. ಸತ್ಯ, ಪ್ರಾಮಾಣಿಕತೆ, ಸಹಾನುಭೂತಿ ಮತ್ತು ದಯೆ ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಜೀವನ ನಿರ್ಮಾಣ ಸಾಧ್ಯ,  ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.  

    ಆಳ್ವಾಸ್ ಸಂಸ್ಥೆಯ ಸಾಧನೆಯಲ್ಲಿ ವಿದ್ಯಾರ್ಥಿಗಳ ಕೊಡುಗೆ ಅಪಾರ. ಆದ್ದರಿಂದ ನಿಮ್ಮ ಮೇಲೆ ಇರುವ ನಿರೀಕ್ಷೆಗಳು ಹೆಚ್ಚಾಗಿವೆ. ಅವುಗಳನ್ನು ಈಡೇರಿಸಲು ಶ್ರಮಿಸಿ ಎಂದು ಕರೆ ನೀಡಿದರು.

    ತಮ್ಮ ಆರಂಭಿಕ ದಿನಗಳನ್ನು ಹಂಚಿಕೊಂಡ ಅವರು, ನಾನು ನಟಿಸಿದ್ದ ಹಲವು ಸಿನಿಮಾಗಳು ವಿವಿಧ ಕಾರಣಗಳಿಂದ ಮಧ್ಯದಲ್ಲೇ ನಿಂತು ಹೋಗುತ್ತಿದವು. ಆಗ ಜನರು ನಾನು ನಟಿಸುವ ಯಾವ ಸಿನಿಮಾವು ಸಂಪೂರ್ಣಗೊಳ್ಳದು, ಬಿಡುಗಡೆಯಾಗಲಾರದು ಎಂದು ಲೇವಡಿ ಮಾಡುತ್ತಿದ್ದರು. ಆದರೆ ಇಂದು, ನನ್ನ ಸಿನಿಮಾಗಳು ದೊಡ್ಡ ಚಿತ್ರಮಂದಿರಗಳಲ್ಲಿ ಒಂದೇ ಸಮಯದಲ್ಲಿ ಮೂರು-ಮೂರು ಸ್ಕ್ರೀನ್‌ಗಳಲ್ಲಿ ಪ್ರದರ್ಶನಗೊಳ್ಳುತ್ತಿವೆ. ಬಾಲ್ಯದಲ್ಲಿ ಟಿವಿಯ ಹಿಂದೆ ಹೋಗಿ ಒಳಗೆ ಹೇಗೆ ಹೋಗಬಹುದು ಎಂದು ಕುತೂಹಲದಿಂದ ಹುಡುಕುತ್ತಿದ್ದ ದಿನಗಳಿಂದ, ಇಂದು ಟಿವಿಯಲ್ಲಿ ಕಾಣಿಸಿಕೊಳ್ಳುವ ಮಟ್ಟಕ್ಕೆ ಬೆಳದಿರುವುದು ಕೇವಲ ಬದಲಾವಣೆ ಅಲ್ಲ, ಅದು ಕನಸು, ಪರಿಶ್ರಮ ಮತ್ತು ಹೋರಾಟದ ಫಲ ಎಂದರು.

    Click here

    Click here

    Click here

    Call us

    Call us

    ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂತರ್ ಫೋರಂ ಸ್ಪರ್ಧೆಗಳಲ್ಲಿ ಎನ್‌ಎಸ್‌ಎಸ್ ಫೋರಂ ಸಮಗ್ರ ಚಾಂಪಿಯನ್ಸ್ ಪ್ರಶಸ್ತಿ ಪಡೆದರೆ, ತುಳು ಫೋರಂ ಮೊದಲ ರನ್ರ‍್ಸ್ ಅಪ್ ಹಾಗೂ ವಾಣಿಜ್ಯ ಫೋರಂ ಎರಡನೇ ರನ್ರ‍್ಸ್ ಅಪ್ ಪ್ರಶಸ್ತಿ ಪಡೆದುಕೊಂಡವು.

    ಪ್ರಾಂಶುಪಾಲ ಡಾ ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಪರೀಕ್ಷಾಂಗ ಕುಲಸಚಿವ ಡಾ ನಾರಾಯಣ ಶೆಟ್ಟಿ, ಕುಲಸಚಿವ ಡಾ ಟಿಕೆ ರವೀಂದ್ರನ್,  ಕಾರ್ಯಕ್ರಮದ ಮುಖ್ಯ ಸಂಯೋಜಕ ಡಾ. ಯೋಗೀಶ್ ಕೈರೋಡಿ, ಸಂಯೋಜಕ ಮನು ಡಿಎಲ್, ವಿದ್ಯಾರ್ಥಿ ಸಂಯೋಜಕ ನಿರ್ಮಲ್ ಪೈ ಇದ್ದರು. ಶ್ರಾವ್ಯ ಶೆಟ್ಟಿ ನಿರೂಪಣೆ, ರಶ್ಮಿ ಡಿಸಿ ಸ್ವಾಗತಿಸಿ, ಸಾಗರ್ ವಂದಿಸಿದರು. 

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಆಳ್ವಾಸ್‌ನಿಂದ ರಾಜ್ಯ ಮಟ್ಟದ ಮಹಿಳಾ ಮಧ್ಯವರ್ಜನ ಶಿಬಿರ

    04/07/2026

    ಜುಲೈ 6ರಂದು ಯಡಾಡಿ – ಮತ್ಯಾಡಿಯಲ್ಲಿ ಕುಂದಾಪ್ರ ಕನ್ನಡ ʼವಾಲ್ಬೆಲ್ಲʼ ಕಾರ್ಯಕ್ರಮ

    04/07/2026

    ಸಿಎ ಫೌಂಡೇಶನ್ ಫಲಿತಾಂಶ ಪ್ರಕಟ: ಕಾರ್ಕಳದ ಕ್ರಿಯೇಟಿವ್  ಕಾಲೇಜಿನ 14 ವಿದ್ಯಾರ್ಥಿಗಳು ತೇರ್ಗಡೆ

    04/07/2026
    Leave A Reply Cancel Reply

    9 + twenty =

    Call us

    Click Here

    Call us

    Call us

    Call us
    Highest Viewed Recently
    • ಉಡುಪಿ: ವಿದ್ಯಾರ್ಥಿವೇತನ ಸೌಲಭ್ಯಕ್ಕೆ ಅರ್ಜಿ ಆಹ್ವಾನ
    • ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನದಲ್ಲಿ ನಾಥಪಂಥದ ಪೀರ್‌ ಯೋಗಿ ಜಗದೀಶ್‌ನಾಥ್ ಜೀ ಭೇಟಿ
    • ಆಳ್ವಾಸ್‌ನಿಂದ ರಾಜ್ಯ ಮಟ್ಟದ ಮಹಿಳಾ ಮಧ್ಯವರ್ಜನ ಶಿಬಿರ
    • ನಿವೃತ್ತ ಮುಖ್ಯೋಪಾಧ್ಯಾಯಿನಿ ನಿರ್ಮಲಾ ಕೆ.ಎಸ್. ಅವರಿಗೆ ಅಭಿನಂದನೆ
    • ಕುಂದಾಪುರ: ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನಲ್ಲಿ ಕ್ಯಾಂಪಸ್ ಪ್ಲೇಸ್ಮೆಂಟ್

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.