ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಭಾರತೀಯ ಜೀವ ವಿಮಾ ನಿಗಮ ಮೈಕ್ರೋ ಇನ್ಸೂರೆನ್ಸ್ ವಿಭಾಗುಡುಪಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬ್ರಹ್ಮಾವರ ತಾಲೂಕು ಇವರ ಆಶ್ರಯದಲ್ಲಿ ವಿಮಾ ಗ್ರಾಮ 2024-25 ಅಂಗವಾಗಿ ಕೋಟದ ಕಾಸನಗುಂದು ಅಂಗನವಾಡಿಗೆ ಸೋಲಾರ್ ದಾರಿದೀಪ ಹಾಗೂ ವಾಟರ್ ಫಿಲ್ಟರ್‌ನ್ನು ಕೊಡುಗೆಯಾಗಿ ನೀಡಿದ್ದು ಅದನ್ನು ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಮಾ ವಿಭಾಗದ ಪ್ರಾದೇಶಿಕ ನಿರ್ದೇಶಕ ಗಣೇಶ ಬಿ. ಲೋಕಾರ್ಪಣೆಗೊಳಿಸಿದರು.

ಭಾರತೀಯ ಜೀವವಿಮಾ ಸಂಸ್ಥೆಯ ದಿನೇಶ್ ಪ್ರಭು ಸೋಲಾರ್ ದೀಪವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಮಾ ವಿಭಾಗದ ಯೋಜನಾಧಿಕಾರಿ ಸತೀಶ್, ಕೋಟ ಗ್ರಾಮಪಂಚಾಯತ್ ಮಾಜಿ ಸದಸ್ಯ ಚಂದ್ರ ಪೂಜಾರಿ, ಲೆಕ್ಕಪರಿಶೋಧಕ ಶೇಖರ್, ಸ್ಥಳೀಯ ಕೃಷಿಕ ರಾಘವೇಂದ್ರ ಮಡಿವಾಳ, ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಸೇವಾಪ್ರತಿನಿಧಿ ಸರೋಜ ಪೂಜಾರಿ, ಒಕ್ಕೂಟದ ಉಪಾಧ್ಯಕ್ಷೆ ಸ್ಮಿತಾ ರಾಘವೇಂದ್ರ, ಅಂಗನವಾಡಿ ಕಾರ್ಯಕರ್ತೆ ನೇತ್ರಾ, ಸಹಾಯಕಿ ಜಲಜ ಮತ್ತಿತರರು ಉಪಸ್ಥಿತರಿದ್ದರು. ಗ್ರಾ.ಯೋ ಮೇಲ್ವಿಚಾರಕ ನಾಗೇಶ್ ಸ್ವಾಗತಿಸಿ, ನಿರೂಪಿಸಿದರು.










