ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಮಂಗಳೂರಿನ ಟೌನ್ ಹಾಲ್ ನಲ್ಲಿ ಎ.11 ರಿಂದ 12ರ ವರೆಗೆ ನಡೆದ ಕರ್ನಾಟಕ ಸ್ಟೇಟ್ ಆರ್ಮ್ ರಸ್ಲಿಂಗ್ ಚಾಂಪಿಯನ್‌ಶಿಪ್ – 2026ರಲ್ಲಿ 90 ಕೆಜಿ ವಿಭಾಗದಲ್ಲಿ ಬಲ ಕೈ ಹಾಗೂ ಎಡ ಕೈ ವಿಭಾಗದಲ್ಲಿ ಸುರೇಶ್ ಪೂಜಾರಿ ಪಾಂಡೇಶ್ವರ ಸ್ಪರ್ಧಿಸಿ ಎರಡರಲ್ಲೂ ಚಿನ್ನದ ಪದಕ ಪಡೆದು ಮೇ ತಿಂಗಳಿನಲ್ಲಿ ಗುಜರಾತ್‌ನಲ್ಲಿ ನಡೆಯುವ ರಾಷ್ಟ ಮಟ್ಟದ ಸ್ವರ್ಧೆಗೆ ಆಯ್ಕೆಯಾಗಿದ್ದಾರೆ.
ಅವರು ಬ್ರಹ್ಮಾವರದ ಬಾಡಿ ಜೋನ್ ಜೀಮ್ ನಾ ಸದಸ್ಯರಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಬಾರಿ ಪ್ರಶಸ್ತಿಗಳನ್ನು ಮಡಿಲಿಗೆರಿಸಿಕೊಂಡಿದ್ದಾರೆ.










