ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಮೃದ್ಧ ಬೈಂದೂರು ಪರಿಕಲ್ಪನೆಯ ಅರುಣಾಚಲಂ ಕಾಲುಸಂಕ ಯೋಜನೆಯಲ್ಲಿ ಬೆಂಗಳೂರಿನ ಸಮ್ಯತ ಫೌಂಡೇಶನ್ ಇವರ ಸಹಕಾರದಿಂದ ಇಂಡಸ್ಟ್ 555 ಟಿಎಂಟಿ ಇವರ ಸಿಎಸ್ಆರ್ ನಿಧಿಯಿಂದ ಆಜ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕ್ಯಾಕೋಡು ಎಂಬಲ್ಲಿ ಎಸ್. ಆರ್. ಸತಾನಂತಮ್ ಕಾಲು ಸಂಕದ ಭೂಮಿ ಪೂಜೆಯನ್ನು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ನೆರವೇರಿಸಿದರು.
ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಸಿಎಸ್ಆರ್ ಅನುದಾನದಿಂದ ಹಲವು ಸಾಮಾಜಿಕ ಕಾರ್ಯಕ್ರಮಗಳು ಆಯೋಜನೆಯಾಗುತ್ತಿದ್ದು ಈ ಕಾಲು ಸಂಕವನ್ನು ಕೊಡುಗೆಯಾಗಿ ನೀಡಿದ ಇಂಡಸ್ 555 ಟಿಎಂಟಿ ಸಂಸ್ಥೆಯ ಮಾಲಕರಾದ ಎಸ್.ಎಸ್ ಶ್ರೀಕಾಂತ್ ಹಾಗೂ ಸಹಕಾರಿಸಿದ ಸಮ್ಯತ ಫೌಂಡೇಶನ್ ಸ್ಥಾಪಕರಾದ ಮುರುಳಿ ಅವರಿಗೆ ಶಾಸಕರು ಧನ್ಯವಾದವನ್ನು ತಿಳಿಸಿದರು.

ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು ಸಿಎಸ್ಆರ್ ನಿಧಿಯ ಸದ್ಬಳಕೆ ಕ್ಷೇತ್ರದಲ್ಲಿ ನಡೆಯುತ್ತಿದ್ದು ಕಾರ್ಯಕರ್ತರ ಸಹಕಾರದಿಂದ ಇವೆಲ್ಲವೂ ಸಾಧ್ಯವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಬಾಲಚಂದ್ರ ಭಟ್ ಹಾಗೂ ಪ್ರವೀಣ್ ಶೆಟ್ಟಿ ಕೊಡ್ಲಾಡಿ ಶುಭ ಆಶಿಸಿದರು. ಗ್ರಾಮ ಪಂಚಾಯತ್ ನಿಕಟ ಪೂರ್ವ ಸದಸ್ಯರಾದ ಅಶೋಕ್ ಕುಲಾಲ್, ಪ್ರದೀಪ್ ಹೆಗ್ಡೆ, ಗೋಪಾಲ್ ಕಾಂಚನ್, ಯಡಮೊಗೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಪ್ರಾಣೇಶ್ ಯಡಿಯಾಳ್, ವಿದ್ಯಾಧರ್ ಶೆಟ್ಟಿ ಕೊಡ್ಲಾಡಿ ಹಾಗೂ ವಾರ್ಡ್ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.
ಗ್ರಾಮ ಪಂಚಾಯತ್ ನಿಕಟ ಪೂರ್ವ ಸದಸ್ಯರಾದ ವೇಣುಗೋಪಾಲ್ ಶೆಟ್ಟಿ ಆಜ್ರಿ ಸ್ವಾಗತಿಸಿ, ಪ್ರಸ್ತಾವಿಕ ಮಾತನಾಡಿದರು.
















