ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಸಾಲಿಗ್ರಾಮ ಪಟ್ಟಣಪಂಚಾಯತ್ ನಲ್ಲಿ ಸತತ 35 ವರ್ಷಗಳ ಸುಧೀರ್ಘ ಅವಧಿಯಲ್ಲಿ ಸೇವೆ ಸಲ್ಲಿಸಿದ ಪ್ರಭಾರ ಕಂದಾಯ ನಿರೀಕ್ಷಕ ಕಾರ್ಕಡ ಚಂದ್ರಶೇಖರ ಸೋಮಯಾಜಿ ಇವರ ಸೇವಾ ಬಿಳ್ಕೋಡುಗೆ ಕಾರ್ಯಕ್ರಮ ಮಂಗಳವಾರ ಸಾಲಿಗ್ರಾಮ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಜೀವನದ ಸಾರ್ಥಕ್ಯ ಕಂಡ ಕ್ಷೇತ್ರ ಅದು ಅವರು ಕಾರ್ಯನಿರ್ವಹಿಸಿದ ಕ್ಷೇತ್ರ ಸೋಮಯಾಜಿ ಅವರು ನಿಷ್ಕಲ್ಮಶ ಕಾರ್ಯವೈಕರಿಗೆ ಸಾರ್ವಜನಿಕರು ಪ್ರಶಂಸೆಯ ಗರಿ ನೀಡಿದ್ದಾರೆ. ಪಟ್ಟಣಪಂಚಾಯತ್‌ನಲ್ಲಿ ಹಿರಿತನದ ಅನುಭವಿ ಕಾರ್ಯನಿರ್ವಹಣೆ ಎಲ್ಲರಿಗೂ ಮಾದರಿಯಾಗಿದೆ, ವೃತ್ತಿ ಕಾಯಕದ ಜತೆ ಸಾಮಾಜಿಕ ಕಾರ್ಯ ಅತ್ಯಂತ ಶ್ರೇಷ್ಠತೆಯನ್ನು ಪಡೆದುಕೊಂಡಿದೆ ಎಂದರು.
ಇದೇ ವೇಳೆ ಪಟ್ಟಣಪಂಚಾಯತ್ ವತಿಯಿಂದ ಸೇವಾನಿವೃತ್ತಿಯ ಚಂದ್ರಶೇಖರ ಸೋಮಯಾಜಿ ದಂಪತಿಗಳಿಗೆ ಗೌರವಾಭಿನಂದನೆಯನ್ನು ಸಲ್ಲಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಪಟ್ಟಣಪಂಚಾಯತ್ ಮುಖ್ಯಾಧಿಕಾರಿ ಅಜೇಯ್ ಭಂಡಾರ್ಕರ್ ವಹಿಸಿ ಸೋಮಯಾಜಿಯವರಿಗೆ ವಿಶೇಷ ಕೃತಜ್ಞತೆ ಸಲ್ಲಿಸಿ ಬಿಳ್ಕೋಡುಗೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪಟ್ಟಣಪಂಚಾಯತ್ ಮಾಜಿ ಅಧ್ಯಕ್ಷೆ ಸುಕನ್ಯಾ ಜೆ. ಶೆಟ್ಟಿ, ಜಿಲ್ಲಾ ಪೌರ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಹೇಶ್ ಶೆಟ್ಟಿ, ಪಟ್ಟಣಪಂಚಾಯತ್ ಹಿರಿಯ ಗ್ರಾಮಸ್ಥ ಶ್ರೀನಿವಾಸ್ ಉಪಾಧ್ಯಾ, ಚಂದ್ರಶೇಖರ ಸೋಮಯಾಜಿ ಪತ್ನಿ ಪವಿತ್ರ ಸೋಮಯಾಜಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಟ್ಟಣಪಂಚಾಯತ್ ಸಿಬ್ಬಂದಿ ಸುಮಿತ್ರಾ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
















