ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಾಯಕತ್ವದ ಜವಾಬ್ದಾರಿ ಅರಿಯಲು ಶಾಲಾ ವಿದ್ಯಾರ್ಥಿ ಸಂಘ ಅಡಿಗಲ್ಲು ಎಂದು ಬಾರಕೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಕೆ. ಹೇಳಿದರು.
ಅವರು ಶ್ರೀ ವಿದ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ ಬಾರಕೂರಿನಲ್ಲಿ ಶಾಲಾ ವಿದ್ಯಾರ್ಥಿ ಸಂಘ ಮತ್ತು ಇತರ ಸಂಘಗಳ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶಾಲೆಯ ಸಂಚಾಲಕರಾದ ರಾಜಾರಾಮ್ ಶೆಟ್ಟಿ ವಹಿಸಿದ್ದರು, ವೇದಿಕೆಯಲ್ಲಿ ಶಾಲೆಯ ಮುಖ್ಯಸ್ಥರಾದ ಲಿಖಿತಾ ಕೊಠಾರಿ ಉಪಸ್ಥಿತರಿದ್ದರು.
ಶಾಲೆಯಲ್ಲಿ ವಿದ್ಯುನ್ಮಾನ ಯಂತ್ರಗಳ ಮೂಲಕ ಮತದಾನ ನಡೆಸಲಾಗಿತ್ತು. ಶಾಲಾ ವಿದ್ಯಾರ್ಥಿ ನಾಯಕ ನಾಗಿ ಶೋಭಿತ್ ಎಸ್. ಶೆಟ್ಟಿ, ಉಪ ವಿದ್ಯಾರ್ಥಿ ನಾಯಕನಾಗಿ ಲಿಖಿತ್ ಕೆ., ಕ್ರೀಡಾ ಕಾರ್ಯದರ್ಶಿಯಾಗಿ ಆಯುಷ್, ಸಾಂಸ್ಕೃತಿಕ ಮಂತ್ರಿಯಾಗಿ ವೈಷ್ಣವಿ.ಜಿ. ಭಟ್, ಆರೋಗ್ಯ ಮಂತ್ರಿಯಾಗಿ ಅನುಷಾ, ವಿರೋಧ ಪಕ್ಷದ ನಾಯಕಿಯಾಗಿ ಸಿಯಾನಾ ಶೆಟ್ಟಿ, ಸಭಾಪತಿಯಾಗಿ ಪ್ರಸ್ತುತಿ ಅಧಿಕಾರ ವಹಿಸಿಕೊಂಡರು.
ವಿಜ್ಞಾನ ಸಂಘದ ಅಧ್ಯಕ್ಷರಾಗಿ ಸಂಕೇತ ಮತ್ತು ಸನ್ನಿಧಿ ಪಿ., ಪರಿಸರ ಸಂಘದ ಅಧ್ಯಕ್ಷರಾಗಿ ಮಯೂರ್ ಮತ್ತು ಯಶಿಕಾ, ಸಾಹಿತ್ಯ ಸಂಘದ ಅಧ್ಯಕ್ಷರಾಗಿ ಇಶಾನಿ ಮತ್ತು ಯಶ್ವಿಕಾ, ಗ್ರಾಹಕರ ಸಂಘದ ಅಧ್ಯಕ್ಷರಾಗಿ ವಿವಿಕ್ತಾ ಅಧಿಕಾರ ವಹಿಸಿಕೊಂಡರು.
ವಿದ್ಯಾರ್ಥಿ ಗಳಾದ ಅದಿತಿ ಭಟ್ ಧರಿತ್ರಿ ಅಡಿಗ, ದೃತೀ ಶಾನುಭಾಗ್ ಅವರು ಪ್ರಾರ್ಥನೆ ಮಾಡಿದರು. ಅನ್ವೇಷಾ ಸ್ವಾಗತಿಸಿ, ಶಾಲಾ ಮುಖ್ಯಸ್ಥರಾದ ಲಿಖಿತಾ ಕೊಠಾರಿ ಅವರು ಪ್ರಾಸ್ತಾವಿಕ ಮಾತು ಗಳನ್ನಾಡಿದರು. ಆರ್ಯನ್ ಅತಿಥಿಗಳನ್ನು ಪರಿಚಯಿಸಿ, ಪ್ರತಿಜ್ಞಾ ವಂದಿಸಿದರು. ಮನಸ್ವಿ ಕಾರ್ಯಕ್ರಮ ನಿರೂಪಿಸಿದರು.
ಈ ಕಾರ್ಯಕ್ರಮವನ್ನು ಶಿಕ್ಷಕಿಯರಾದ ಜ್ಯೋತಿ ಶೆಟ್ಟಿ, ನಾಗರತ್ನ ಹೆಬ್ಬಾರ್ ಸಂಯೋಜನೆ ಮಾಡಿದರು. ಶಾಲಾ ಶಿಕ್ಷಕ ಶಿಕ್ಷಕೇತರರು ಸಹಕರಿಸಿದರು.

















