ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ಶ್ರೀ ರಾಮ ಕ್ಷತ್ರಿಯ ಯುವ ಸೇವಾ ಸಂಘ ರಿ. ಬೆಂಗಳೂರು ಇದರ 22ನೇ ವರ್ಷದ ಸಂಭ್ರಮಾಚರಣೆ – ನಮ್ಮ ಸಾಂಸ್ಕೃತಿಕ ಹಬ್ಬ ಸಮಾಜ ಬಂಧುಗಳ ಸಮ್ಮಿಲನ ಜುಲೈ 5ರ ಭಾನುವಾರ ಬೆಳಿಗ್ಗೆ 9:00 ರಿಂದ ಸಂಜೆ 6.30ರ ತನಕ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.
ಸಾಂಸ್ಕೃತಿಕ ಹಬ್ಬದ ಉದ್ಘಾಟನೆಯನ್ನು ಮಂಗಳೂರು ವಾಣಿಜ್ಯ ತೆರಿಗೆ ಇಲಾಖೆ ಜಾರಿ ವಿಭಾಗದ ಸಹಾಯಕ ಆಯುಕ್ತ ಸತೀಶ್ ಬಟ್ವಾಡಿ ಅವರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಬೆಂಗಳೂರು ರಾಮಕ್ಷತ್ರಿಯ ಯುವ ಸೇವಾ ಸಂಘದ ಅಧ್ಯಕ್ಷರಾದ ಗಣೇಶ್ ಬಾಳಯ್ಯನಮನೆ ವಹಿಸಲಿದ್ದಾರೆ ಹಾಗೂ ಇನ್ನಿತರ ಅತಿಥಿ ಗಣ್ಯರು ಭಾಗವಹಿಸಲಿದ್ದಾರೆ.

ಅಂದು ಬೆಳಿಗ್ಗೆ 9:30 ರಿಂದ ಸಮಾಜ ಬಾಂಧವರಿಂದ ಸಾಂಸ್ಕೃತಿಕ ವೈಭವ (ನೃತ್ಯ, ಭರತನಾಟ್ಯ, ಪ್ರಹಸನ), ಸ್ಪರ್ಶ ಟ್ರಸ್ಟ್ ಮಕ್ಕಳ ಧಾಮ ಇವರಿಂದ ಡೊಳ್ಳು ಕುಣಿತ ಮತ್ತು ಮಧ್ಯಾಹ್ನ 1.00 ರಿಂದ 2.00 ಗಂಟೆಗೆ ಸಹ ಭೋಜನ ನಡೆಯಲಿದೆ.
ಮಧ್ಯಾಹ್ನ 2ರಿಂದ 3.00 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷತೆಯನ್ನು ಬೆಂಗಳೂರು ರಾಮಕ್ಷತ್ರಿಯ ಯುವ ಸೇವಾ ಸಂಘದ ಅಧ್ಯಕ್ಷರಾದ ಗಣೇಶ್ ಬಾಳಯ್ಯನಮನೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ವಿವಿಧ ಅತಿಥಿ ಗಣ್ಯರು ಭಾಗವಹಿಸಲಿದ್ದಾರೆ.
ಮಧ್ಯಾಹ್ನ 3.00 ರಿಂದ ನೃತ್ಯ ರೂಪಕ – ರಾಮಕ್ಷತ್ತಿಯ ಯುವ ಸಂಘ ಉಡುಪಿ ಇವರಿಂದ ʼಪರಂಪರೆ ಕರಾವಳಿʼಗರ ಬದುಕು ನಡೆಯಲಿದೆ. ಬಳಿಕ ಮಧ್ಯಾಹ್ನ 4.30ರಿಂದ ಸುರಭಿ ರಿ. ಬೈಂದೂರು ತಂಡದಿಂದ ಚೋಮನ ದುಡಿ ನಾಟಕ ಪ್ರದರ್ಶನಗೊಳ್ಳಲಿದೆ.

















