Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಸ್ತ್ರೀ ಸೃಜನಶೀಲತೆ ಸಮಾಜದ ಅಂತರಂಗವನ್ನು ಬೆಳಗಿಸುವ ಶಕ್ತಿ: ಡಾ. ಎಂ. ಮೋಹನ್ ಆಳ್ವ
    alvas nudisiri

    ಸ್ತ್ರೀ ಸೃಜನಶೀಲತೆ ಸಮಾಜದ ಅಂತರಂಗವನ್ನು ಬೆಳಗಿಸುವ ಶಕ್ತಿ: ಡಾ. ಎಂ. ಮೋಹನ್ ಆಳ್ವ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಮೂಡುಬಿದಿರೆ: ಸ್ತ್ರೀಎಂಬುದು ಪರಿಪೂರ್ಣತೆಯ ಸಂಕೇತ. ಆಕೆಯ ಅಂತರಂಗದ ಶಕ್ತಿ, ಸಂವೇದನೆ ಮತ್ತು ಚಿಂತನೆ ಅಕ್ಷರ ರೂಪದಲ್ಲಿ ಅಭಿವ್ಯಕ್ತಿಯಾದಾಗ ಅದು ಸಮಾಜದ ಮೌಲ್ಯಗಳನ್ನು ಶ್ರೀಮಂತಗೊಳಿಸುತ್ತದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ನುಡಿದರು.

    Click Here

    Call us

    Click Here

    ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಳ್ವಾಸ್‌ನ ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸೌಮ್ಯ ತಿಲಕ್ ಶೆಟ್ಟಿಯವರ ‘ಮಸಿಯ ಮಾತು’ ಕವನ ಸಂಕಲನವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

    ಈ ಸಂಕಲನದಲ್ಲಿರುವ ಎಲ್ಲಾ ಕವನಗಳೂ ಕವಯಿತ್ರಿ ಸೌಮ್ಯರವರ ಹೆಸರಿನಂತೆಯೇ ಮೃದುತ್ವ, ಸಂಯಮ ಮತ್ತು ಸಂವೇದನಾಶೀಲತೆಯಿಂದ ಕೂಡಿವೆ. ಸಮತೆ, ಮಾನವೀಯತೆ ಮತ್ತು ಸಹಬಾಳ್ವೆಯ ತತ್ವವೇ ಈ ಕವನಗಳ ಜೀವಾಳವಾಗಿದೆ. ಆದ್ದರಿಂದ ಇಲ್ಲಿ ರೋಷ, ಆವೇಶ, ಸೇಡು ಅಥವಾ ದ್ವೇಷದ ಅಭಿವ್ಯಕ್ತಿಗಳಿಗೆ ಅವಕಾಶವಿಲ್ಲ, ಬದಲಾಗಿ ಪ್ರೀತಿ, ಕರುಣೆ, ಸಹಾನುಭೂತಿ ಮತ್ತು ಜೀವನದ ಸಕಾರಾತ್ಮಕ ದೃಷ್ಟಿಕೋನವೇ ಪ್ರಧಾನವಾಗಿ ಹರಿದುಬರುತ್ತದೆ.

    ಕವನಗಳಲ್ಲಿ ಪ್ರತಿಫಲಿಸಿರುವ ಚಿಂತನೆಗಳು ಮೌಲ್ಯಾಧಾರಿತ ಬದುಕಿನತ್ತ ಓದುಗರನ್ನು ಕರೆದೊಯ್ಯುತ್ತವೆ. ಮಹತ್ವಾಕಾಂಕ್ಷೆಯ ಅಂಧ ಓಟಕ್ಕಿಂತ ಬದುಕಿನ ಸರಳತೆ, ಇರುವುದರಲ್ಲಿ ತೃಪ್ತಿ, ಸಂಬಂಧಗಳ ಮೌಲ್ಯ ಹಾಗೂ ಸುಖ–ದುಃಖಗಳನ್ನು ಸಮಚಿತ್ತದಿಂದ ಸ್ವೀಕರಿಸುವ ಜೀವನದರ್ಶನವನ್ನು ಕವಯಿತ್ರಿ ಅತ್ಯಂತ ಸಹಜವಾಗಿ ಅಭಿವ್ಯಕ್ತಿಸಿದ್ದಾರೆ. ಬದುಕನ್ನು ಪ್ರಬುದ್ಧವಾಗಿ ಅರ್ಥೈಸಿಕೊಳ್ಳುವ ಮನೋಭಾವವನ್ನು ಬೆಳೆಸುವ ಈ ಕವನಗಳು ಓದುಗರಲ್ಲಿ ಆತ್ಮಾವಲೋಕನ, ಸಂವೇದನೆ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಹೊಸ ಅರಿವನ್ನು ಮೂಡಿಸುತ್ತವೆ ಎಂದರು.

    ಕೃತಿ ಪರಿಚಯ ಮಾಡಿ ಮಾತನಾಡಿದ ಮೂಡುಬಿದಿರೆ ತಾಲೂಕು ಕನ್ನಡ ಸಾಹಿತ್ಯ  ಪರಿಷತ್ತು ಅಧ್ಯಕ್ಷ ವೇಣುಗೋಪಾಲ ಶೆಟ್ಟಿ, ಭಾಷೆ ಎನ್ನುವುದು ಕೇವಲ ವೃತ್ತಿಯ ವಿಷಯವಲ್ಲ; ಅದು ಮನಸ್ಸಿನ ಅಭಿವ್ಯಕ್ತಿ ಮತ್ತು ಸಂಸ್ಕೃತಿಯ ಪ್ರತೀಕ.  ಸೌಮ್ಯ ಶೆಟ್ಟಿಯವರು ಇಂಗ್ಲಿಷ್ ಭಾಷೆಯನ್ನು ಬೋಧಿಸುವ  ಶಿಕ್ಷಕಿಯಾಗಿದ್ದರೂ ಕನ್ನಡದ ಮೇಲಿನ ಪ್ರೀತಿ, ಬದ್ಧತೆ ಹಾಗೂ ಸಾಹಿತ್ಯಾಸಕ್ತಿಯನ್ನು ಉಳಿಸಿಕೊಂಡು ಸೃಜನಶೀಲ ಬರವಣಿಗೆಯಲ್ಲಿ ತೊಡಗಿರುವುದು ಪ್ರಶಂಸನೀಯ.

    Click here

    Click here

    Click here

    Click Here

    Call us

    Call us

    ಇವರ ಕವನ ಸಂಕಲನದಲ್ಲಿ ಮೃದುತ್ವ, ಮಾನವೀಯತೆ ಮತ್ತು ಸಮಾನತೆಯ ಭಾವ ಸ್ಪಷ್ಟವಾಗಿ ಕಾಣುತ್ತದೆ. ಬದಲಾಗುತ್ತಿರುವ ಸಂವೇದನೆಗಳ ಕಾಲಘಟ್ಟದಲ್ಲಿ ಸಂಬಂಧಗಳನ್ನು ಬೆಸೆಯುವ ಆಶಯ ಈ ಕವನಗಳಲ್ಲಿ ವ್ಯಕ್ತವಾಗಿದ್ದು, ಕವಿತೆಗಳು ಹೊಸ ಚಿಂತನೆಗೆ ದಾರಿಯಾಗಬಲ್ಲದು ಎಂದರು.   ಕೃತಿಯಲ್ಲಿನ ಹೆಚ್ಚಿನ ಕವನಗಳು ಪ್ರಾಸಬದ್ಧವಾಗಿವೆ. ಮುಂದಿನ ದಿನಗಳಲ್ಲಿ ಕವಯಿತ್ರಿ ಪ್ರಾಸದ ಮಿತಿಯನ್ನು ಮೀರಿ ಭಾಷೆಯ ಹೊಸ ಸಾಧ್ಯತೆಗಳನ್ನು ಅನ್ವೇಷಿಸಿದರೆ ಅವರ ಸಾಹಿತ್ಯ ಇನ್ನಷ್ಟು ವಿಸ್ತಾರಗೊಳ್ಳಲಿದೆ ಎಂದು ಸಲಹೆ ನೀಡಿದರು.

    ಕವಯಿತ್ರಿ ಸೌಮ್ಯ ತಿಲಕ್ ಶೆಟ್ಟಿ ಮಾತನಾಡಿ, ಮಸಿ ಕಾಗದದ ಮೇಲೆ ಮೂಡುವ ಗುರುತಷ್ಟೇ ಅಲ್ಲ, ಅದು ಹೃದಯದ ಮಾತುಗಳಿಗೆ ಜೀವ ನೀಡುವ ಮಾಧ್ಯಮ. ಪ್ರತಿಯೊಂದು ಕವನವೂ ನನ್ನ ಬದುಕಿನ ಅನುಭವ, ಆತ್ಮಸಂವಾದ ಮತ್ತು ಸಮಾಜವನ್ನು ನೋಡುವ ದೃಷ್ಟಿಕೋನದ ಪ್ರತಿಬಿಂಬವಾಗಿದೆ. ಓದುಗರ ಮನಸ್ಸಿನಲ್ಲಿ ಹೊಸ ಚಿಂತನೆ, ಸಂವೇದನೆ ಮತ್ತು ಆತ್ಮಾವಲೋಕನ ಮೂಡಿಸುವ ಉದ್ದೇಶದಿಂದ ಈ ಕವನಗಳನ್ನು ರಚಿಸಿದ್ದೇನೆ. ಈ ಕೃತಿಯಲ್ಲಿ ನೂರು ಕವನಗಳಿದ್ದು, ಓದುಗರ ಪ್ರೋತ್ಸಾಹ ತಮಗೆ ಇನ್ನಷ್ಟು ಬರೆಯುವ ಉತ್ಸಾಹ ತುಂಬಿದೆ ಎಂದು ತಿಳಿಸಿದರು.

    ವಿಶ್ರಾಂತ ಕುಲಸಚಿವ ಡಾ ಬಿ. ಪಿ. ಸಂಪತ್ ಕುಮಾರ್ ಮಾತನಾಡಿ, ಪ್ರತಿಯೊಬ್ಬ ಕವಿಯ ಸಾಹಿತ್ಯ ಪಯಣದಲ್ಲಿ ಮೊದಲ ಕವನ ಸಂಕಲನವು ಕೇವಲ ಒಂದು ಕೃತಿಯಲ್ಲ, ಅವರ ಸೃಜನಶೀಲ ಬದುಕಿನ ಮೈಲಿಗಲ್ಲಾಗಿರುತ್ತದೆ. ಅದು ಲೇಖಕರ ಸಂವೇದನೆ, ಚಿಂತನೆ ಮತ್ತು ಸಾಹಿತ್ಯದ ದಿಕ್ಕನ್ನು ಪರಿಚಯಿಸುವ ಮಹತ್ವದ ಹೆಜ್ಜೆಯಾಗಿರುತ್ತದೆ.  

    ‘ಮಸಿಯ ಮಾತು’ ಕವನ ಸಂಕಲನದಲ್ಲಿ ಭಾಷೆಯ ಸೊಗಸು, ಭಾವಬಂಧದ ಆಳ, ಅರ್ಥಸಾಂದ್ರತೆ ಮತ್ತು ಲಯಬದ್ಧ ಅಭಿವ್ಯಕ್ತಿ ಸಹಜವಾಗಿ ಮೂಡಿಬಂದಿವೆ. ಕವಯಿತ್ರಿ ಕೃತಕತೆಯಿಲ್ಲದ, ಸರಳವಾದರೂ ಪರಿಣಾಮಕಾರಿ ಭಾಷೆಯ ಮೂಲಕ ಓದುಗರ ಮನಸ್ಸನ್ನು ತಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಕವನಗಳಲ್ಲಿನ ಭಾವಗಳು ಓದುಗರನ್ನು ಆತ್ಮಾವಲೋಕನಕ್ಕೆ ಕರೆದೊಯ್ಯುವುದರ ಜೊತೆಗೆ ಬದುಕಿನ ವಿವಿಧ ಆಯಾಮಗಳನ್ನು ಸೂಕ್ಷ್ಮವಾಗಿ ಅನಾವರಣಗೊಳಿಸುತ್ತವೆ.  ಕೆಲವು ಕವನಗಳು ಬಸವಣ್ಣ ಹಾಗೂ ಅಕ್ಕಮಹಾದೇವಿಯವರ ವಚನಗಳ ಸರಳತೆ, ತಾತ್ವಿಕತೆ ಮತ್ತು ಅರ್ಥಗರ್ಭಿತ ಅಭಿವ್ಯಕ್ತಿಯನ್ನು ನೆನಪಿಸುತ್ತವೆ. ಕಾವ್ಯದ ಭಾಷೆ ಹೆಪ್ಪುಗಟ್ಟಿದ ಅನುಭವಗಳ ಸಾಂದ್ರ ಅಭಿವ್ಯಕ್ತಿಯಾಗಿದ್ದು, ಅದನ್ನು ಅರ್ಥಪೂರ್ಣವಾಗಿ ರೂಪಿಸುವ ಸಾಮರ್ಥ್ಯ ಕವಿಗೆ ಅತ್ಯಗತ್ಯ. ಆ ಸಾಮರ್ಥ್ಯದ ಸ್ಪಷ್ಟ ಲಕ್ಷಣಗಳು ಈ ಸಂಕಲನದಲ್ಲಿ ಕಂಡುಬರುತ್ತವೆ. ಸೌಮ್ಯ ತಿಲಕ್ ಶೆಟ್ಟಿ ಯವರು ಉತ್ತಮ ಕವಯಿತ್ರಿಯಾಗಿ ರೂಪುಗೊಳ್ಳುವ ಎಲ್ಲ ಭರವಸೆಯನ್ನು ಈ ಕೃತಿಯ ಮೂಲಕ ಮೂಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಹವ್ಯಾಸಿ ಬರಹಗಾರ್ತಿ ಆಶಾ ಅಡೂರು ಮಾತನಾಡಿ, ಕವಿ ಮನಸ್ಸಿನ ಭಾವಲೋಕದ ಪ್ರತಿಬಿಂಬವೇ ಈ ಕೃತಿ. ಜ್ಞಾನ, ಚಿಂತನೆ, ಆತ್ಮಾವಲೋಕನ ಮತ್ತು ಸಮಾಜಮುಖಿ ಸಂದೇಶಗಳನ್ನು ಒಳಗೊಂಡಿರುವ ಈ ಸಂಕಲನ ವೈವಿಧ್ಯಮಯ ಅನುಭವಗಳನ್ನು ನೀಡುವ ‘ಫ್ರೂಟ್ ಸಲಾಡ್’ನಂತಿದೆ ಎಂದರು.

    ಕಾರ್ಯಕ್ರಮದಲ್ಲಿ ಆಮಂತ್ರಣ ಸೇವಾ ಪ್ರತಿಷ್ಠಾನದ ಟ್ರಸ್ಟಿ ವಿಜಯಕುಮಾರ್ ಜೈನ್  ಮಾತನಾಡಿದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ಡಾ ಸುಧಾರಾಣಿ ಕಾರ್ಯಕ್ರಮ ನಿರೂಪಿಸಿದರು.

    Alvas nudisiri
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಕುಂದಾಪುರ: ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಾಟ ವಿರೋಧಿ ದಿನ

    27/06/2026

    ವಿದ್ಯಾರಣ್ಯ ಅಂಗಳದಲ್ಲಿ ‘ಗೆಜ್ಜೆಯೊಂದಿಗೆ ಬೆಳ್ಳಿ ಹೆಜ್ಜೆ-9’ ಭರತನಾಟ್ಯ ಪ್ರಾತ್ಯಕ್ಷಿಕೆ

    27/06/2026

    ಸಿ.ಎ. ಇಂಟರ್ ಮೀಡಿಯೇಟ್ ಪರೀಕ್ಷೆ ಫಲಿತಾಂಶ: ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

    26/06/2026
    Leave A Reply Cancel Reply

    17 + nineteen =

    Call us

    Click Here

    Call us

    Call us

    Call us
    Highest Viewed Recently
    • ಜೂ.28 ರಂದು ಕುಂದಾಪುರ ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನ ನುಡಿಬೆಳಕು
    • ಕುಂದಾಪುರ: ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಾಟ ವಿರೋಧಿ ದಿನ
    • ಸ್ತ್ರೀ ಸೃಜನಶೀಲತೆ ಸಮಾಜದ ಅಂತರಂಗವನ್ನು ಬೆಳಗಿಸುವ ಶಕ್ತಿ: ಡಾ. ಎಂ. ಮೋಹನ್ ಆಳ್ವ
    • ಕೋಟ ವಿವೇಕ ವಿದ್ಯಾಸಂಸ್ಥೆಯಲ್ಲಿ ಯಕ್ಷಗಾನ ತರಬೇತಿ
    • ವಿದ್ಯಾರಣ್ಯ ಅಂಗಳದಲ್ಲಿ ‘ಗೆಜ್ಜೆಯೊಂದಿಗೆ ಬೆಳ್ಳಿ ಹೆಜ್ಜೆ-9’ ಭರತನಾಟ್ಯ ಪ್ರಾತ್ಯಕ್ಷಿಕೆ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.