ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಅನ್ನಭಾಗ್ಯ ಯೋಜನೆಯಡಿ ವೈದ್ಯಕೀಯ ನೆಲೆಯಲ್ಲಿ ನೀಡುವ ಹೊಸ ಪಡಿತರ ಚೀಟಿಯನ್ನು ಅರ್ಹ ಫಲಾನುಭವಿಗಳಿಗೆ ತಡಮಾಡದೆ ವಿತರಿಸಬೇಕು ಎಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಪರ್ಕ ಅಧ್ಯಕ್ಷ ಮೋಹನ ಪೂಜಾರಿ ಹೇಳಿದರು.

ಅವರು ಇಲ್ಲಿನ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ನಡೆದ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಆಹಾರ ನಿರೀಕ್ಷಕರಿಗೆ ತಿಳಿಸಿದರು. ಮೆಸ್ಕಾಂನಿಂದ ಬಂದಿರುವ ಮೇ. ತಿಂಗಳ ಬಿಲ್ ರೀಡಿಂಗ್‌ನಲ್ಲಿ ತಾಂತ್ರಿಕ ಅಧಿ ದೋಷ ಉಂಟಾಗಿ, ಕೆಲವರಿಗೆ ಹೆಚ್ಚು ಬಿಲ್ ಬಂದಿದೆ. ಬಡವರಿಗೆ ಇದರಿಂದ ಸಮಸ್ಯೆಯಾಗಿದೆ ಎಂದು ಅಧ್ಯಕ್ಷರು ಹೇಳಿದರು. ಉತ್ತರಿಸಿದ ಅಧಿಕಾರಿ, ಮುಂದಿನ ತಿಂಗಳ ಬಿಲ್ ಮೊತ್ತದಲ್ಲಿ ಹೊಂದಾಣಿಕೆ ಆಗುತ್ತದೆ ಎಂದರು.
ಮಂಗಳವಾರ ಸಹಿತ ವಾರದ ಬೇರೆ ದಿನಗಳಲ್ಲಿ ವಿದ್ಯುತ್ ನಿಲುಗಡೆ ಮಾಡು ವುದಾದರೆ ಮುಂಚಿತವಾಗಿ ಸಾರ್ವಜನಿಕ ರಿಗೆ ಮಾಹಿತಿ ನೀಡುವಂತೆ ಅಧ್ಯಕ್ಷರು ಅಧಿಕಾರಿಗಳಿಗೆ ತಿಳಿಸಿದರು.
ಗ್ಯಾರಂಟಿ ಯೋಜನೆ ನಿಲ್ಲುವ ಪ್ರಶ್ನೆಯೇ ಇಲ್ಲ, ಗ್ಯಾರಂಟಿ ಯೋಜನೆಯ ಪರಿಷ್ಕರಣೆ ನಡೆಯುತ್ತಿದ್ದು, ಫಲಾನು ಭವಿಗಳು ಹೊಸದಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಅಧ್ಯಕ್ಷರು ಸೂಚನೆ ನೀಡಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಸದಸ್ಯರು, ನಾನಾ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
















