Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕುಂದಾಪುರ ತಾಲೂಕು ಯುವ ಬಂಟರ ಸಂಘ: ಪ್ರತಿಭಾ ಪುರಸ್ಕಾರ, ವಿದ್ಯಾದೀವಿಗೆ ಯೋಜನೆಗೆ ಅರ್ಜಿ ಆಹ್ವಾನ
    ಊರ್ಮನೆ ಸಮಾಚಾರ

    ಕುಂದಾಪುರ ತಾಲೂಕು ಯುವ ಬಂಟರ ಸಂಘ: ಪ್ರತಿಭಾ ಪುರಸ್ಕಾರ, ವಿದ್ಯಾದೀವಿಗೆ ಯೋಜನೆಗೆ ಅರ್ಜಿ ಆಹ್ವಾನ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ನೀಡಲಾಗುವ 2026ನೇ ವರ್ಷದ ವಿದ್ಯಾದೀವಿಗೆ’ ಯೋಜನೆಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    Click Here

    Call us

    Click Here

    ವಿದ್ಯಾರ್ಥಿಗಳಿಗೆ ಸೂಚನೆಗಳು:
    1. ವಿದ್ಯಾರ್ಥಿಯು 2026ನೇ ವರ್ಷದಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಅಥವಾ 10ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ 60% ಹಾಗೂ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರಬೇಕು.
    2. ಸರ್ಕಾರಿ ಅಥವಾ ಸರ್ಕಾರಿ ಅನುದಾನಿತ ಶಿಕ್ಷಣ ಸಂಸ್ಥೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳಿಗೆ ಮಾತ್ರ ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶವಿದೆ.
    3. ಬಂಟ ಸಮುದಾಯವನ್ನು ಪ್ರತಿನಿಧಿಸುವ ಕುಂದಾಪುರ ತಾಲೂಕಿನ ನಿವಾಸಿಯಾಗಿರಬೇಕು. ಅವಿಭಜಿತ ಬೈಂದೂರು ತಾಲೂಕಿನ ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು.
    4. ಹೆತ್ತವರ (ಕುಟುಂಬದ) ವಾರ್ಷಿಕ ಆದಾಯ ಮಿತಿ ಒಂದು ಲಕ್ಷ ರೂಪಾಯಿ ಆಗಿರುತ್ತದೆ.
    5. ಪ್ರಸ್ತುತ ಪ್ರಥಮ ವರ್ಷದ ಪದವಿಪೂರ್ವ ತರಗತಿಯಲ್ಲಿ ಅಥವಾ ಯಾವುದೇ ವೃತ್ತಿಪರ ಶಿಕ್ಷಣ/ ತರಬೇತಿಯ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರಬೇಕು ಅಥವಾ ಪ್ರವೇಶ ಪಡೆದಿರಬೇಕು.

    ಅರ್ಜಿ ಸಲ್ಲಿಸುವ ವಿಧಾನ:
    ವಿದ್ಯಾರ್ಥಿಯು ಈ ಅಧಿಸೂಚನೆಯೊಂದಿಗೆ ಲಗತ್ತಿಸಿರುವ ‘ನಮೂನೆ-ಸಿ’ ಯಲ್ಲಿ ಮಾತ್ರ ‘ವಿದ್ಯಾದೀವಿಗೆ’ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ‘ನಮೂನೆ-ಸಿ’ ಯಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿಮಾಡಿ youthbunts.scholarship@gmail.com ಇ ಮೇಲ್ ಗೆ ಕಳುಹಿಸಲು ಸೂಚಿಸಲಾಗಿದೆ. ಅರ್ಜಿಯೊಂದಿಗೆ ಈ ಕೆಳಗಿನ ಪೂರಕ ದಾಖಲೆಗಳನ್ನು PDF ನಮೂನೆಯಲ್ಲಿ ಸಿದ್ದಪಡಿಸಿ ಇ ಮೇಲ್ ನಲ್ಲಿ ಲಗತ್ತಿಸುವುದು ಅತ್ಯವಶ್ಯವಾಗಿದೆ.

    1. ಅರ್ಜಿ ನಮೂನೆ
    2. 2026ನೇ ಮಾರ್ಚ್ ತಿಂಗಳಲ್ಲಿ ನಡೆದ ಎಸ್‌ಎಸ್ಎಲ್‌ಸಿ ಅಥವಾ ಹತ್ತನೇ ತರಗತಿಯ ಅಂಕಪಟ್ಟಿ
    3. ಜಾತಿ ಮತ್ತು ಆದಾಯ ಪ್ರಮಾಣಪತ್ರ
    4. ಪಡಿತರ ಚೀಟಿ

    ಅರ್ಜಿ ಸಲ್ಲಿಸುವ ವೇಳೆ ಗಮನಿಸಬೇಕಾದ ಪ್ರಮುಖ ಅಂಶಗಳು:
    1. ಅರ್ಜಿಯಲ್ಲಿ ಪ್ರಸ್ತುತ ಬಳಕೆಯಲ್ಲಿರುವ ವಾಟ್ಸಪ್ ಸಂಪರ್ಕ ಹೊಂದಿದ ಮೊಬೈಲ್ ಸಂಖ್ಯೆಯನ್ನು ಸರಿಯಾಗಿ ದಾಖಲಿಸಬೇಕು. ಮುಂದೆ ನೋಂದಾಯಿತ ವಾಟ್ಸಪ್ ಸಂಪರ್ಕವಿರುವ ಮೊಬೈಲ್ ಸಂಖ್ಯೆಗೆ ಮಾತ್ರ ಆಯ್ಕೆ ವಿವರಗಳನ್ನು ರವಾನಿಸಲಾಗುವುದು.
    2. ವಿದ್ಯಾರ್ಥಿಯು ತನ್ನ ಆಧಾರ್ ಗುರುತಿನ ಸಂಖ್ಯೆ, ಪಡಿತರ ಚೀಟಿ ಸಂಖ್ಯೆ, ಜಾತಿ ಮತ್ತು ಆದಾಯ ಪ್ರಮಾಣಪತ್ರದ ನೋಂದಣಿ ಸಂಖ್ಯೆ, ಮತ್ತು ಪಡೆದ ಅಂಕಗಳ ವಿವರಗಳನ್ನು ಅರ್ಜಿಯಲ್ಲಿ ಸ್ಪಷ್ಟವಾಗಿ ನಮೂದಿಸಬೇಕು.
    3. ವಿದ್ಯಾರ್ಥಿಯು ದಾಖಲಿಸಿದ ಮಾಹಿತಿಯು ಸಲ್ಲಿಸಿದ ದಾಖಲೆಗಳೊಂದಿಗೆ ಮರುಪರಿಶೀಲನೆಗೆ ಒಳಗಾಗುವುದರಿಂದ ತಪ್ಪು ಅಥವಾ ಅಪೂರ್ಣ ಮಾಹಿತಿ ನೀಡಬಾರದು.
    4. ಅರ್ಜಿ ನಮೂನೆ ಮತ್ತು ಪೂರಕ ದಾಖಲೆಗಳನ್ನು ಭೌತಿಕವಾಗಿ ಸಲ್ಲಿಸುವಂತಿಲ ಅಥವಾ ಅಂಚೆಯ ಮೂಲಕ ಕಳುಹಿಸಿಕೊಡುವಂತಿಲ್ಲ. ಇ ಮೇಲ್ ಮೂಲಕ ಸ್ವೀಕೃತಗೊಂಡ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು.
    5. ಇ ಮೇಲ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26-07-2026 ಆಗಿರುತ್ತದೆ.
    6. ಇದು ಅತ್ಯಂತ ಸರಳ ಮತ್ತು ಬಳಕೆಸ್ನೇಹಿ ವಿಧಾನವಾಗಿದ್ದು ವಿದ್ಯಾರ್ಥಿಗಳು ಅಂತರ್ಜಾಲ ಸಂಪರ್ಕವಿರುವ ಮೊಬೈಲ್ ಫೋನ್ ಬಳಸಿ ಕೆಲವೇ ನಿಮಿಷಗಳೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

    Click here

    Click here

    Click here

    Call us

    Call us

    ಅಗತ್ಯ ಮಾಹಿತಿಗಾಗಿ ಯೋಜನೆಯ ಸಂಚಾಲಕ ಶ್ರೀ ಪ್ರದೀಪ್ ಶೆಟ್ಟಿ ಕಾರಿಕಟ್ಟೆ ಇವರನ್ನು 7406196059 ಮೊಬೈಲ್ ಸಂಖ್ಯೆಯ ಮೂಲಕ ಹಾಗೂ ತಾಂತ್ರಿಕ ನೆರವಿಗಾಗಿ ವೆಬ್‌ ಸೈಟ್ ನಿರ್ವಾಹಕ ಪ್ರತಾಪಚಂದ್ರ ಶೆಟ್ಟಿ ಹಳ್ಳಾಡು ಇವರನ್ನು 8762822427 ಮೊಬೈಲ್ ಸಂಖ್ಯೆಯ ಮೂಲಕ ಸಂಪರ್ಕಿಸಬಹುದಾಗಿದೆ. ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳ ವಾಟ್ಸಪ್ ಸಂಪರ್ಕವಿರುವ ಮೊಬೈಲ್ ಸಂಖ್ಯೆಗೆ ಮಾಹಿತಿ ನೀಡಲಾಗುವುದು.

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಮಾಹೆಯಿಂದ ಸಂಗೀತಾ ಶೆಣೈಗೆ ಡಾಕ್ಟರ್ ಆಫ್‌ ಫಿಲಾಸಫಿ ಪದವಿ ಪ್ರದಾನ

    10/07/2026

    ತಲ್ಲೂರು: ನಾರಾಯಣ ವಿಶೇಷ ಮಕ್ಕಳ ಶಾಲೆಯಲ್ಲಿ ಸಮವಸ್ತ್ರ ವಿತರಣೆ ಮತ್ತು ಪಾಲಕರ ಸಭೆ

    10/07/2026

    ಕೋಡಿ ಗ್ರಾಮದಲ್ಲಿ 3ನೇ ವರ್ಷದ ಪಂಚವರ್ಣ ಹಸಿರು ಹೆಜ್ಜೆ ಮನೆಗೊಂದು ಗಿಡ ನೆಡುವ ಕಾರ್ಯಕ್ರಮ

    10/07/2026
    Leave A Reply Cancel Reply

    4 × three =

    Call us

    Click Here

    Call us

    Call us

    Call us
    Highest Viewed Recently
    • ಮಾಹೆಯಿಂದ ಸಂಗೀತಾ ಶೆಣೈಗೆ ಡಾಕ್ಟರ್ ಆಫ್‌ ಫಿಲಾಸಫಿ ಪದವಿ ಪ್ರದಾನ
    • ತಲ್ಲೂರು: ನಾರಾಯಣ ವಿಶೇಷ ಮಕ್ಕಳ ಶಾಲೆಯಲ್ಲಿ ಸಮವಸ್ತ್ರ ವಿತರಣೆ ಮತ್ತು ಪಾಲಕರ ಸಭೆ
    • ಕುಂದಾಪುರ ತಾಲೂಕು ಯುವ ಬಂಟರ ಸಂಘ: ಪ್ರತಿಭಾ ಪುರಸ್ಕಾರ, ವಿದ್ಯಾದೀವಿಗೆ ಯೋಜನೆಗೆ ಅರ್ಜಿ ಆಹ್ವಾನ
    • ಕೋಡಿ ಗ್ರಾಮದಲ್ಲಿ 3ನೇ ವರ್ಷದ ಪಂಚವರ್ಣ ಹಸಿರು ಹೆಜ್ಜೆ ಮನೆಗೊಂದು ಗಿಡ ನೆಡುವ ಕಾರ್ಯಕ್ರಮ
    • ಕೋಟೇಶ್ವರ: ಟ್ರಕ್‌ ಡಿಕ್ಕಿಯಾಗಿ ಬೈಕ್‌ ಸವಾರ ಸಾವು

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.