ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಕುಂಭಾಶಿಯ ಯು. ಸಂಗೀತಾ ಶೆಣೈಗೆ “ಡಾಕ್ಟರ್ ಆಫ್ ಫಿಲಾಸಫಿ” ಪದವಿ ಪ್ರದಾನ ಮಾಡಿದೆ.

ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸಾಯನ್ಸ್ ನಲ್ಲಿ ಅಧ್ಯಯನ ಮಾಡುತ್ತಿದ್ದ ಅವರು ಡಾ. ರಘು ರಾಧಾಕ್ರೃಷ್ಣನ್ ಹಾಗೂ ಡಾ. ಶ್ಯಾಮ ಪ್ರಸಾದ್ ಕೆ. ಅವರ ಮಾರ್ಗದರ್ಶನದಲ್ಲಿ “ಓರಲ್ ಕ್ಯಾನ್ಸರ್ ” ವಿಷಯದಲ್ಲಿ ಸಂಶೋಧನೆ ನಡೆಸುತ್ತಿದ್ದರು.
ಈಕೆ ಕುಂದಪ್ರಭ ವಾರಪತ್ರಿಕೆ ಸಂಪಾದಕರಾದ ಯು.ಎಸ್. ಶೆಣೈ., ಸಾಧನಾ ಎಸ್. ಶೆಣೈ ಅವರು ದ್ವಿತೀಯ ಪುತ್ರಿ.











