ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ರೋಟರಿ ಕ್ಲಬ್ ಕೋಟ – ಸಾಲಿಗ್ರಾಮ ಇದರ ಮೂಡುಗಿಳಿಯಾರಿನ ರೋಟರಿ ಸಮುದಾಯದಳ ಇವರ ನೇತೃತ್ವದಲ್ಲಿ ಪಂಚವರ್ಣ ಸಂಘಟನೆ ಕೋಟ ಹಾಗೂ ಗೀತಾನಂದ ಫೌಂಡೇಶನ್ ಮಣೂರು ಇವರ ಮಾರ್ಗದರ್ಶನದಲ್ಲಿ ಗಿಡ ನೆಡುವ ಹಸಿರೇ ಉಸಿರು ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ಮೂಡುಗಿಳಿಯಾರು ಚಿಕ್ಕು ದೈವಸ್ಥಾನ ವಠಾರ ಹಾಗೂ ಗಿಳಿಯಾರು ಶಾಲಾ ವಠಾರದಲ್ಲಿ ನೆಡೆಯಿತು.
ಈ ಸಂದರ್ಭದಲ್ಲಿ ರೋಟರಿ ಸಮುದಾಯದಳ ಮೂಡುಗಿಳಿಯಾರು ಇದರ ಅಧ್ಯಕ್ಷ ದಯಾನಂದ ಪೂಜಾರಿ, ಕಾರ್ಯದರ್ಶಿ ಮಲ್ಲಿಕಾ, ಸಭಾಪತಿ ಗೋಪಾಲ್, ಶರಣಯ್ಯ ಹಿರೇಮಠ್, ರಾಘವೇಂದ್ರ, ರಾಕೇಶ್, ಸಂತೋಷ್, ರವಿ, ಲತಾ, ಗಿರಿಜಾ ಮಾತಾಜಿ, ಜಯ, ರಾಜೇಶ್ವರಿ, ಅವಿನಾಶ್, ಜಲಜ ಟೀಚರ್, ಸದಾ ಹೊನ್ನಾರಿ, ನಾಗ, ಪ್ರಪುಲ್ಲ ಇತರರು ಇದ್ದರು.











