ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ”: ಇನ್‌ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಸಿಎಂಎ ಫೌಂಡೇಶನ್ ಜೂನ್–2026ರ ಪರೀಕ್ಷೆಯಲ್ಲಿ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳಾದ ಶ್ರಾವ್ಯ, ಶ್ರೇಯಾ, ರಂಜಿತ್ ಹಾಗೂ ನಿಶಾಂತ್ ಕೆ. ಶೆಟ್ಟಿ ಉತ್ತೀರ್ಣರಾಗಿ ಕಾಲೇಜಿಗೆ ಹೆಮ್ಮೆ ತಂದಿದ್ದಾರೆ.
ಕಾಲೇಜಿನ ಸಹಯೋಗದಲ್ಲಿ ವಿ-ರೀಚ್ ಅಕಾಡೆಮಿಯ ಮೂಲಕ ನೀಡಲಾದ ಗುಣಮಟ್ಟದ ಪಠ್ಯ-ಪ್ರವಚನಗಳು, ನಿಯಮಿತ ಮಧ್ಯಂತರ ಹಾಗೂ ಮಾದರಿ ಪರೀಕ್ಷೆಗಳು, ಅನುಭವಿ ತರಬೇತುದಾರರ ಸಮರ್ಪಕ ಮಾರ್ಗದರ್ಶನ ಮತ್ತು ವಿದ್ಯಾರ್ಥಿಗಳ ನಿರಂತರ ಪರಿಶ್ರಮದ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿ, ಮುಂದಿನ ಸಿ.ಎಂ.ಎ. ಹಂತಗಳಲ್ಲಿಯೂ ಇದೇ ರೀತಿಯ ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದ್ದಾರೆ.
















