ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಸೇವಾ ಸಂಗಮ ಶಿಶು ಮಂದಿರಕ್ಕೆ ವೈದ್ಯರಾದ ಡಾ. ಪ್ರವೀಣ್ ಶೆಟ್ಟಿ ಅವರು ರೋಟರಿ ಕ್ಲಬ್ ಬೈಂದೂರು ಮೂಲಕ ಕೊಡಮಾಡಿದ ಮಕ್ಕಳಿಗೆ ಆಟಿಕೆ ಹಾಗೂ ಕಲಿಕಾ ಸಾಮಗ್ರಿಗಳ ಹಸ್ತಾಂತರ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಅರುಣ್ ಕುಮಾರ್ ಶಿರೂರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಡಾ. ಪ್ರವೀಣ್ ಶೆಟ್ಟಿ ಅವರು ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಿದರು.
ಮಾಜಿ ಸಹಾಯಕ ಗವರ್ನರ್ ಐ. ನಾರಾಯಣ, ಕಾರ್ಯದರ್ಶಿ ಮಣಿಕಂಠ ಬೈಂದೂರು, ಸದಸ್ಯ ನಾರಾಯಣ ದೇವಾಡಿಗ, ಬೈಂದೂರು ಸೇವಾ ಸಂಗಮದ ಅಧ್ಯಕ್ಷ ಮಂಜುನಾಥ ಶೆಟ್ಟಿ, ಕಾರ್ಯದರ್ಶಿ ರಾಜೇಶ್ ಐತಾಳ್, ಸಂಚಾಲಕ ದಿನೇಶ್, ಸಮಿತಿಯ ರವೀಂದ್ರ ಶ್ಯಾನುಭಾಗ್, ರಾಮ ಟೈಲರ್, ಗುರುರಾಜ್ ಮಾಸ್ಟರ್, ನಿರ್ಮಲಾ ಕಿಣಿ, ಆಶಾ ದಿನೇಶ್, ಮಾತಾಜಿಯರಾದ ಸುಜಾತಾ, ಸೌಮ್ಯ ಮೊದಲಾದವರು ಉಪಸ್ಥಿತರಿದ್ದರು.











