Author: Kundapra.com
ಕುಂದಾಪ್ರ ಡಾಟ್ ಕಾಂ ಲೇಖನ. ಕುಂದಾಪುರ:ಕುಂದಾಪುರ ತಾಲೂಕು ಹಕ್ಲಾಡಿಯಲ್ಲಿರುವ `ಹಲ್ಸನಾಡು ಮನೆ’ ಪ್ರಾಚೀನ ಕಾಲದ ಕಾಷ್ಠಕಲೆಯ ಅದ್ಬುತ ಸ್ಮಾರಕ. ನಾಲ್ಕೂವರೆ ಶತಮಾನದ ಹಿಂದೆ ನಿರ್ಮಾಣವಾದ ಈ ಮನೆ, ಮನೆಯಾಗಿ ಕಾಣೋದಿಲ್ಲ. ನೋಡುಗರ ದೃಷ್ಟಿಯಲ್ಲಿ ಕಲಾ ವೈಭವದ ಅರಮನೆ. ಅರವತ್ತು ಅಂಕಣದ ಮನೆಯ ಎಲ್ಲಿನೋಡಿದರೂ ಕಷ್ಠಕಲೆಯ ವೈಭವ ಮೇಳೈಸಿದೆ. ಜಂತಿ, ಉಪ್ಪಿರಿಗೆ ಹೊದಿಕೆ ಪಕಾಶಿ, ಕಿಟಕಿ, ಕಂಬ, ತೊಲೆ ಎಲ್ಲವೂ ಕಲಾಮಯ. ಕೆಳದಿ ಪ್ರಭವದ ನಂಟು: ಕೆಳದಿ ನಾಯಕರ ಪ್ರಭವ ಕುಂದಾಪುರ ಪ್ರಾಂತ್ಯದ ಮೇಲೆ ಅಧಿಕವಾಗಿದ್ದ ಕಾಲದಲ್ಲಿ ಹಲ್ಸನಾಡು ಮನೆಯವರು ದಕ್ಷಿಣ ಕನ್ನಡಕ್ಕೆ ವಲಸೆ ಬಂದರೆಂದು ಹೇಳಲಾಗುತ್ತಿದೆ. ಹಾಗೆಯೇ ಇವರು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಅತೀ ದೊಡ್ಡ ಹಿಡುವಳಿದಾರರಾಗಿದ್ದರು ಎಂಬ ನಂಬಿಕೆಯೂ ಇದೆ. ಅದೆಲ್ಲಾ ಒತ್ತಿಟ್ಟಿಗಿಟ್ಟು ನೋಡಿದರೆ ಮನೆಯಂತೂ ಕಾಷ್ಠದಲ್ಲಿ ಕಲೆ ಹೂವಾಗಿ ಅರಳಿದೆ. ಹಲ್ಸನಾಡು ಕಾಷ್ಠಕಲೆಯ ಕುರಿತು ಮದ್ರಾಸ್ (ಚೆನ್ನೈ) ಗೆಜಿಟಿಯರ್ ‘ಕೆಳದಿ ನೃಪ ವಿಜಯ’ ಆಕಾರ ಗ್ರಂಥದಲ್ಲಿ ನಮೂದಿಸಿದ್ದು ಹಲ್ಸನಾಡು ಮನೆಯ ಕಾಷ್ಠಕಲೆಯ ತಾಕತ್ತು. ಹಲ್ಸನಾಡು ಮನೆಯ ಹಿಂದಿನವರು ಕೆಳದಿ…
ವಿಶ್ವವಿಖ್ಯಾತಿ ಪಡೆದಿರುವ ಮರವಂತೆ ಕಡಲತೀರ ಕುಂದಾಪುರದಿಂದ ಸುಮಾರು 15ಕಿ.ಮೀ ದೂರದಲ್ಲಿದೆ. ಒಂದೆಡೆ ಸಮುದ್ರ ಮತ್ತೊಂದೆಡೆ ನದಿ ಮಧ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ 66 ಹಾದುಹೋಗುತ್ತದೆ. ಪ್ರವಾಸಾರ್ಥಿಗಳು ಕಡಲ ತೀರದ ಸವಿಯನ್ನು ಸವಿಯಲು ವಿಶೇಷ ವ್ಯವಸ್ಥೆ ಇದ್ದು, ಸೂರ್ಯೋದಯ ಹಾಗೂ ಸೂರ್ಯಾಸ್ಥವನ್ನು ವೀಕ್ಷಿಸಬಹುದಾಗಿದೆ. ಮಳೆಗಾಲದಲ್ಲಿ ಸಮುದ್ರ ಕೊರೆತದಿಂದಾಗಿ ಸಮುದ್ರದ ನೀರು ರಸ್ತೆಗೆ ಚಿಮ್ಮುವುದುಂಟು. ಸಮುದ್ರ ಹಾಗೂ ನದಿಯ ನಡುವೆ ಹಾದು ಹೋಗುವ ಭಾರತದ ಏಕಮಾತ್ರ ರಸ್ತೆ ಎಂಬ ಖ್ಯಾತಿ ಈ ಹೆದ್ದಾರಿಯದ್ದು. ಪ್ರವಾಸಿಗರಿಗೆ ಶೌಚಾಲಯ ಮುಂತಾದ ಮೂಲಭೂತ ಸೌಕರ್ಯಳಿವೆ. ಇಲ್ಲಿಯೇ ವರಹಸ್ವಾಮಿ ದೇವಸ್ಥಾನವಿದ್ದು ಕಾರಣಿಕ ಸ್ಥಳವಾಗಿದೆ.
ಸಂಪರ್ಕ: ಹರಿಪ್ರಸಾದ್ ಹೋಟೆಲ್ ಶಾಸ್ತ್ರಿ ವೃತ್ತದ ಸಮೀಪ, ರಾ.ಹೆ.66 ಕುಂದಾಪುರ ಕರ್ನಾಟಕ -576201 ಪೋನ್: 08254 720566 ಬಕ್ಕಿಂಗ್ :- 08254 724983 [divide icon=”square” icon_position=”left”] ಮಾರ್ಗ ಸೂಚಿ: ಮಂಗಳೂರು ವಿಮಾನ ನಿಲ್ದಾಣದಿಂದ 100 ಕಿ.ಮೀ. ಕೊಂಕಣ್ ರೈಲ್ವೇ ನಿಲ್ದಾಣದಿಂದ 3 ಕಿ.ಮೀ ಶಾಸ್ತ್ರಿ ವೃತ್ತದ ಬಸ್ ನಿಲ್ದಾಣಕ್ಕೆ ಸಮೀಪ
