Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಕಂದಾವರ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ – ಸಂಜೀವಿನಿ, ಜಿಲ್ಲಾ ಪಂಚಾಯತ್ ಉಡುಪಿ, ತಾಲೂಕು ಪಂಚಾಯತ್ ಕುಂದಾಪುರ, ಬ್ರಹ್ಮಾವರ ರೂಡ್‌ಸೆಟ್ ಸಂಸ್ಥೆ, ಗ್ರಾಮ ಪಂಚಾಯತ್ ಕಂದಾವರ ಹಾಗೂ ಶ್ರೀದೇವಿ ಸಂಜೀವಿನಿ ಒಕ್ಕೂಟ ಕಂದಾವರ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ 12 ದಿನಗಳ ಸ್ವಉದ್ಯೋಗ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಗಾರದ ಸಮಾರೋಪ ಸಮಾರಂಭವು ಅರ್ಥಪೂರ್ಣವಾಗಿ ಹಾಗೂ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ಪಂಚಾಯತ್ ಕುಂದಾಪುರದ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕೆ.ಜಿ. ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಶೈಕ್ಷಣಿಕ ಪದವಿಗಳಿಂದ ಮಾತ್ರ ಉದ್ಯೋಗಾವಕಾಶಗಳು ಸೃಷ್ಟಿಯಾಗುವುದಿಲ್ಲ. ಬದಲಾಗಿ, ಕೌಶಲ್ಯಾಧಾರಿತ ಜ್ಞಾನ ಮತ್ತು ಪ್ರಾಯೋಗಿಕ ತರಬೇತಿಗಳು ವ್ಯಕ್ತಿಯ ಬದುಕಿಗೆ ಹೊಸ ದಿಕ್ಕು ನೀಡುತ್ತವೆ ಎಂದು ತಿಳಿಸಿದರು. ಇಂದಿನ ಸಮಾಜವು ಕೌಶಲ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದೆ. ಆದ್ದರಿಂದ ಯುವಜನರು ಹಾಗೂ ಸಂಜೀವಿನಿ ಮಹಿಳೆಯರು ವಿವಿಧ ಕೌಶಲ್ಯಾಭಿವೃದ್ಧಿ ತರಬೇತಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ತಮ್ಮ ಉದ್ಯೋಗ ಹಾಗೂ ಸ್ವಉದ್ಯೋಗದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರವನ್ನು ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ. ಸೊಸೈಟಿ ರಿಜಿಸ್ಟ್ರೆಷನ್ ಆ್ಯಕ್ಟ್/ಟ್ರಸ್ಟ್ ಆ್ಯಕ್ಟ್ ನಡಿ ನೋಂದಣಿಯಾಗಿ ಕನಿಷ್ಠ 02 ವರ್ಷಗಳಾಗಿರುವ, ಹಗಲು ಯೋಗಕ್ಷೇಮ ಕೇಂದ್ರದಲ್ಲಿ ಸರ್ಕಾರದ ಆದೇಶಗಳಲ್ಲಿ ನಿಗದಿಪಡಿಸಲಾದ ವಿದ್ಯಾರ್ಹತೆಯುಳ್ಳ ಸೇವಾ ಮನೋಭಾವದ ಸಿಬ್ಬಂದಿಗಳನ್ನು ಹೊಂದಿರುವ, ಹಿರಿಯ ನಾಗರಿಕರ ಅವಶ್ಯಕತೆಗಳನ್ನು ಪೂರೈಸುವ ಮೂಲಭೂತ ಸೌಕರ್ಯ ಒದಗಿಸುವ ಸೇವಾ ಮನೋಭಾವ ಹೊಂದಿರುವ ಆಡಳಿತ ಮಂಡಳಿಯನ್ನು ಹೊಂದಿರುವ, ಸಂಸ್ಥೆಯ ಆಡಳಿತ ಮಂಡಳಿಯ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ಸ್ಪಷ್ಟ ಹಾಗೂ ಖಚಿತವಾಗಿರುವ ಉಪನಿಯಮಗಳನ್ನು (ಬೈಲಾ) ಹೊಂದಿರುವ, ಸಂಸ್ಥೆಯ ಆರ್ಥಿಕ ಸ್ಥಿತಿಗತಿಯು ಸದೃಢವಾಗಿರುವ, ಯಾವುದೇ ಓರ್ವ ವ್ಯಕ್ತಿ ಹಾಗೂ ಜನಾಂಗದ ಲಾಭಕ್ಕಾಗಿ ಸಂಸ್ಥೆಯನ್ನು ನಡೆಸದೇ ಸಂಸ್ಥೆಯು ಯಾವುದೇ ಜಾತಿ, ಪಂಥ, ಮತ ಮತ್ತು ಭಾಷೆಗಳನ್ನು ಪರಿಗಣಿಸದೇ ಎಲ್ಲರಿಗೂ ಸೌಲಭ್ಯ ಒದಗಿಸುವ ಹಾಗೂ ಇತರೇ ಅರ್ಹತೆ ಹೊಂದಿರುವ ಸ್ವಯಂ ಸೇವಾ ಸಂಸ್ಥೆಗಳು ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನ.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಪರಿಸರ ದಿನಾಚರಣೆ ಎಂಬುದು ಕೇವಲ ಒಂದೇ ದಿನದಲ್ಲಿ ಮಾಡುವ ಆಚರಣೆಯಲ್ಲ. ಪ್ರತಿದಿನ ಮಾಡಬೇಕಾದ ಕಾರ್ಯ. ಒಂದು ದಿನ ಗಿಡ ನೆಟ್ಟರೆ ಸಾಲದು, ಅದನ್ನು ಪ್ರತಿದಿನ ಪೋಷಿಸಬೇಕು. ಅದೇ ರೀತಿ ಪರಿಸರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಕೂಡ ಮಾಡಬೇಕು. ಇದರಲ್ಲಿ ಮಾಧ್ಯಮದವರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಕಾರ್ಕಳ ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಮ್ ಬಾಬು ಎಂ. ಹೇಳಿದ್ದಾರೆ. ಅವರು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ಶುಕ್ರವಾರ ಉಡುಪಿ ಪತ್ರಿಕಾ ಭವನದಲ್ಲಿ ಆಯೋಜಿಸಲಾದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಪತ್ರಿಕಾ ಭವನದ ಆವರಣದಲ್ಲಿ ಗಿಡ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಇಡೀ ಪರಿಸರ ವ್ಯವಸ್ಥೆಯ ಪ್ರತಿಯೊಂದು ಕೂಡ ಬಹಳ ಮುಖ್ಯವಾಗಿ ರುತ್ತದೆ. ಒಂದು ಅಳಿದು ಹೋದರೂ ಅದರ ಪ್ರಾಮುಖ್ಯತೆ ನಮಗೆ ಅರ್ಥ ಆಗುತ್ತದೆ. ಹಾಗಾಗಿ ನಾವು ಇಡೀ ಪರಿಸರ ವ್ಯವಸ್ಥೆಯನ್ನು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ದೇಶಾದ್ಯಂತ ಉದ್ಯೋಗ ಸೃಷ್ಟಿಗೆ ವೇಗ ನೀಡಲು, ವಿಶೇಷವಾಗಿ ಉತ್ಪಾದನಾ ಕ್ಷೇತ್ರದಲ್ಲಿ ಉದ್ಯೋಗಾರ್ಹತೆಯನ್ನು ಹೆಚ್ಚಿಸಲು ಮತ್ತು ವಿವಿಧ ವಲಯಗಳಲ್ಲಿ ಸಾಮಾಜಿಕ ಭದ್ರತೆಯ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶ ಹೊಂದಿರುವ ಪ್ರಧಾನಮಂತ್ರಿ ವಿಕಸಿತ ಭಾರತ ರೋಜಗಾರ್ ಯೋಜನೆಯಡಿಯಲ್ಲಿ ಈಗಾಗಲೇ ದೇಶಾದ್ಯಂತ 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿಗೆ ಬೆಂಬಲ ನೀಡಿದೆ ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು. ಅವರು ಮಣಿಪಾಲದ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಧಾನಮಂತ್ರಿ ವಿಕಸಿತ ಭಾರತ ರೋಜಗಾರ್ ಯೋಜನೆಯಡಿ ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತನ್ನ ಮತ್ತು ನಾಳಿನ ಸಮಾಜದ ಭವಿಷ್ಯಕ್ಕಾಗಿ ದುಡಿಯುತ್ತಿರುವ ಕಾರ್ಮಿಕರ ಭದ್ರತೆಗೆ ಪ್ರಥಮ ಪ್ರಾಶಸ್ತ್ಯ ನೀಡುವ ದೃಷ್ಟಿಯಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದ್ದು ಒಟ್ಟು 99,446 ಕೋಟಿ ರೂ. ವೆಚ್ಚದ ಈ ಯೋಜನೆಯು ಎರಡು ವರ್ಷಗಳ ಅವಧಿಯಲ್ಲಿ 3.5 ಕೋಟಿಗೂ ಹೆಚ್ಚು ಉದ್ಯೋಗಗಳ ಸೃಷ್ಟಿಗೆ ಪ್ರೋತ್ಸಾಹ ನೀಡುವ ಗುರಿಯನ್ನು ಹೊಂದಿದೆ ಎಂದರು. 145 ಕೋಟಿ ಜನಸಂಖ್ಯೆಯ ಭಾರತದಲ್ಲಿ ಅಂಕಿ…

Read More

ಕುಂದಾಪ್ರ ಡಾಟ್ ಕಾಂ‌ ಸುದ್ದಿ.ಬೈಂದೂರು: ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ಮೇ ತಿಂಗಳಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ತಾಲೂಕಿನ ಶಿರೂರು ಗ್ರಾಮದ ಆಶಿಶ್ ಶೆಟ್ಟಿ ತೇರ್ಗಡೆಯಾಗಿದ್ದಾರೆ. ಶಿರೂರಿನಲ್ಲಿ‌ ಜನಿಸಿದ ಆಶಿಶ್ ಶೆಟ್ಟಿ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಂಬೈ, ಪಿಯು ಶಿಕ್ಷಣವನ್ನು ಬೆಂಗಳೂರು ಹಾಗೂ ಬಿಕಾಂ‌ ಪದವಿಯಲ್ಲಿ ಉಡುಪಿಯಲ್ಲಿ ಪಡೆದಿದ್ದರು. ಸಿಎ ಆರ್ಟಿಕಲ್‌ಶಿಪ್ಪನ್ನು ಮಂಗಳೂರಿನ ಸಿಎ ನಿತಿನ್ ಜೆ. ಶೆಟ್ಟಿ ಅವರಲ್ಲಿ ಪೂರೈಸಿದ್ದರು. ಹೆಚ್.ಯು.ಎಲ್‌ನಲ್ಲಿ ಇಂಡಸ್ಟ್ರಿಯಲ್ ಟ್ರೇನಿಂಗ್ ಪೂರ್ಣಗೊಳಿಸಿದ್ದರು. ಶಿರೂರು ಹೊಸಮನೆ ಅನಿತಾ ಶೆಟ್ಟಿ ಅವರ ಪುತ್ರರಾದ ಆಶಿಶ್, ತನ್ನ 25ನೇ ವಯಸ್ಸಿಗೆ ಸಿಎ ಅಂತಿಮ‌ ಪರೀಕ್ಷೆ ತೇರ್ಗಡೆಯಾಗಿದ್ದಾರೆ

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಅಂಪಾರು ಗ್ರಾಮದ ಗುಡಿಬೆಟ್ಟು ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ನಡೆಯುತ್ತಿದ್ದಲ್ಲಿಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯ ಸಹಾಯಕ ಪೊಲೀಸ್‌ ಉಪ ನಿರೀಕ್ಷಕರಾದ ಉಮೇಶ್ ನಾಯ್ಕ ಅವರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಉಮೇಶ್ ನಾಯ್ಕ ಅವರು ಠಾಣೆಯಲ್ಲಿರುವಾಗ ಅಂಪಾರು ಗ್ರಾಮದ ಗುಡಿಬೆಟ್ಟು ಎಂಬಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಸೇರಿ ಕೋಳಿ ಅಂಕ ಜುಗಾರಿ ಆಟ ಆಡುತ್ತಿರುವುದಾಗಿ ದಾಳಿ ನಡೆಸುವಂತೆ ಮೇಲಾಧಿಕಾರಿಗಳು ತಿಳಿಸಿದ ಮೇರೆಗೆ ಕೂಡಲೇ ಹಾಡಿಯ ಬಳಿ ತಲುಪಿ ನೋಡಿದಾಗ ಕೆಲವು ವ್ಯಕ್ತಿಗಳು, ಹಾಡಿ ಜಾಗದಲ್ಲಿ ಸೇರಿದ್ದು ಅದರಲ್ಲಿ ಇಬ್ಬರು ವ್ಯಕ್ತಿಗಳು 2 ಕೋಳಿ ಹುಂಜಗಳ ಕಾಲಿಗೆ ಬಾಳನ್ನು ಕಟ್ಟಿ ಜೂಜಾಟಕ್ಕೆ ಬಿಟ್ಟಿದ್ದು ಉಳಿದವರು ಸುತ್ತುವರೆದು ತಮ್ಮ ತಮ್ಮ ಕೋಳಿಗಳನ್ನು ಕೈ ನಲ್ಲಿ ಹಿಡಿದುಕೊಂಡು ಕಾದಾಟಕ್ಕೆ ಬಿಟ್ಟಿದ್ದ ಕೋಳಿಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿ ಕೋಳಿ ಅಂಕ ಜುಗಾರಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ರಸ್ತೆಯಲ್ಲಿ ನಡೆದುಕೊಂಡು ಹೋಗುತಿದ್ದ ಮಹಿಳೆಯೊಬ್ಬರಿಗೆ ಓಮ್ನಿ ಕಾರು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ ಘಟನೆ ಗುರುವಾರ ಬೆಳಗ್ಗೆ ತಾಲೂಕಿನ ಬೀಜಾಡಿ ಗ್ರಾಮದ ಅರಸರಬೆಟ್ಟು ಕ್ರಾಸ್ ಬಳಿ ನಡೆದಿದೆ. ಮೃತರನ್ನು ಗೋಪಾಡಿ ಗ್ರಾಮದ ಚಂದ್ರಮತಿ (78) ಎಂದು ಗುರುತಿಸಲಾಗಿದೆ. ಅವರು ಬೀಜಾಡಿ ಕಡೆಯಿಂದ ಕೊಟೇಶ್ವರ ರಥಬೀದಿ ಕಡೆಗೆ ನಡೆದುಕೊಂಡು ಹೋಗುತಿದ್ದಾಗ ಅದೇ ದಾರಿಯಲ್ಲಿ ಅತಿ ವೇಗವಾಗಿ ಅಜಾಗರೂಕತೆಯಿಂದ ರಾಘವೇಂದ್ರ ಅವರು ಚಲಾಯಿಸುತ್ತಿದ್ದ ಓಮ್ನಿ ಕಾರು ಹಿಂದಿನಿಂದ ಡಿಕ್ಕಿ ಹೊಡೆದ  ಪರಿಣಾಮ, ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಪ್ರಜ್ಞೆ ಕಳೆದುಕೊಂಡ ಚಂದ್ರಮತಿ ಅವರನ್ನು ಕೂಡಲೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಪರಿಕ್ಷೀಸಿದ ವೈದ್ಯರು ಅದಾಗಲೇ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಸಕಾಲಿಕ  ಮಳೆ ಮತ್ತು ಸಮೃದ್ಧ ಬೆಳೆಗಾಗಿ ಜಗದೊಡೆಯ ಶ್ರೀ ಮದ್ಯೋಗಾನಂದ ಗುರು ನರಸಿಂಹ ಮತ್ತು ಪರಿವಾರ ದೇವತೆಗಳಿಗೆ ವಿವಿಧ  ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸೀಯಾಳ ಅಭಿಷೇಕವನ್ನು ಅನೂಚಾನವಾಗಿ ಸೋಮವಾರದಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಭಾಗವಹಿಸಿ ಶ್ರೀ ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸಿದರು. ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ ಕಾರಂತರು, ಉಪಾಧ್ಯಕ್ಷ ಸಿ. ಚಂದ್ರ ಶೇಖರ ಉಪಾಧ್ಯ, ಕಾರ್ಯದರ್ಶಿ ಪರಶುರಾಮ ಭಟ್ಟರು ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಕೆ. ತಾರಾನಾಥ ಹೊಳ್ಳ, ಪ್ರಸನ್ನ ತುಂಗ ಮತ್ತು ಕೃಷ್ಣ ಮೂರ್ತಿ ಉಪಸ್ಥಿತರಿದ್ದರು. ಸಾಲಿಗ್ರಾಮ ದೇವಸ್ಥಾನಕ್ಕೆ ಡಿಸಿ ಭೇಟಿ:ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲಕ್ಕೆ ಉಡುಪಿ ಜಿಲ್ಲಾಧಿಕಾರಿ ಸ್ವರೂ ಟಿ.ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ದೇಗುಲದ ವತಿಯಿಂದ ಜಿಲ್ಲಾಧಿಕಾರಿಯವರಿಗೆ ಪ್ರಸಾದ ವಿತರಿಸಿ ಗೌರವಿಸಲಾಯಿತು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಕುಂದಾಪುರ ತಾಲೂಕು ಹವ್ಯಕ ಸಭಾ ರಿ. ಇದರ ವತಿಯಿಂದ ಇತ್ತೀಚಿಗೆ ನಿಧನರಾದ ನಿವೃತ್ತ ಉಪನ್ಯಾಸಕ, ಪತ್ರಕರ್ತರಾದ ಎಸ್. ಜನಾರ್ಧನ್ ಮರವಂತೆ ಅವರ ಶೃದ್ಧಾಂಜಲಿ ಸಭೆಯು ಉಪ್ಪುಂದದಲ್ಲಿ ನಡೆಯಿತು. ನಿವೃತ್ತ ಉಪನ್ಯಾಸಕರಾದ ಎಮ್.ವಿ. ನಾರಾಯಣ ಸ್ವಾಮೀ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಎಸ್. ಜನಾರ್ಧನ್ ಅವರು ಮೃದು ಸ್ವಭಾವದವರು, ಸರಳ ಜೀವನ ಶೈಲಿ ಹೊಂದಿದ್ದರು ಹಾಗೂ ಶಿಕ್ಷಣ, ಸಾಮಾಜಿಕ ಸೇವೆ, ಪಂಚಾಯತ್‌ ರಾಜ್, ಪತ್ರಕರ್ತರಾಗಿ ಕಾರ್ಯನಿರ್ವಹಿಸಿ ಈ ಎಲ್ಲಾ ಕ್ಷೇತ್ರದ ಘನತೆಯನ್ನು ಹೆಚ್ಚಿಸಿ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿರುವುದು ನಮಗೆ ಹಾಗೂ ಜಿಲ್ಲೆಗೆ ಹೆಮ್ಮೆಯಾಗಿರುತ್ತದೆ ಎಂದು ಹೇಳಿದರು. ಹವ್ಯಕ ಸಭಾ ರಿ. ಸಂಘದ ಅಧ್ಯಕ್ಷರಾದ ಎಮ್. ನಾಗರಾಜ್ ಭಟ್ ಮಕ್ಕಿದೇವಸ್ಥಾನ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಗುರಿಕಾರರಾದ ಗಣೇಶ್ ಪುರಾಣಿಕ್, ಶ್ರೀಧರ ಜೋಶಿ, ಉಮೇಶ್‌ಚಂದ್ರ ಭಟ್, ಕೋಶಾಧಿಕಾರಿ ಬೇಳೂರು ಗಣೇಶ್ ರಾವ್, ಕೃಷ್ಣಮೂರ್ತಿ ಕರ್ಣಿಕ್, ವರದಾಂಭಿಕಾ ಭಟ್ ಉಪಸ್ಥಿತರಿದ್ದರು. ಮೃತರಿಗೆ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ಜೂನ್ 21 ರಂದು ನಡೆಯಲಿರುವ ನೀಟ್ (ಯುಜಿ) ಮರು ಪರೀಕ್ಷೆಯಲ್ಲಿ ಯಾವುದೇ ಲೋಪದೋಷ ಉಂಟಾಗದಂತೆ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಅಗತ್ಯವಿರುವ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಗುರುವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ನೀಟ್ ಮರು ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ನಡೆಸುವ ಸಂಬಂಧ ಆಯೋಜಿಸಲಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ವತಿಯಿಂದ ನೀಟ್ ಮರು ಪರೀಕ್ಷೆಯು ಜೂನ್ 21 ರಂದು ಜಿಲ್ಲೆಯ ಒಟ್ಟು 6 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಜಿಲ್ಲೆಯಲ್ಲಿ 938 ಬಾಲಕರು, 2032 ಬಾಲಕಿಯರು, 7 ಪಿಡಬ್ಲ್ಯೂ ಬಿ.ಡಿ ಅಭ್ಯರ್ಥಿಗಳು ಹಾಗೂ 1 ಸ್ಕ್ರೆಬ್ ಸೌಲಭ್ಯ ಪಡೆದಿರುವ ಅಭ್ಯರ್ಥಿಗಳು ಸೇರಿದಂತೆ ಒಟ್ಟು 2970 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗದಂತೆ ಪರೀಕ್ಷಾ ಕಾರ್ಯವನ್ನು ನಡೆಸಬೇಕು. ವಿದ್ಯಾರ್ಥಿಗಳು ಯಾವುದೇ ರೀತಿಯ ಗೊಂದಲವಾಗದಂತೆ ನಿರಾಳವಾಗಿ ಪರೀಕ್ಷೆ ಬರೆಯಲು…

Read More