ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಮಹಾತ್ಮ ಗಾಂಧಿ ಮೆಮೋರಿಯಲ್ ಸಂಧ್ಯಾ ಕಾಲೇಜು ವತಿಯಿಂದ ‘ಮೊಬೈಲ್ ಛಾಯಾಗ್ರಹಣದ ಮೂಲಕ ದೃಶ್ಯ ಸಂವಹನ’ ಕಾರ್ಯಕ್ರಮ ಎಂಬ ವಿಷಯದ ಕುರಿತು ವಿಶೇಷ ಕಾರ್ಯಕ್ರಮವು ಬುಧವಾರ ಕಾಲೇಜಿನ ಟಿ. ಮೋಹಂದಾಸ್ ಪೈ ಪ್ಲಾಟಿನಂ ಜುಬಿಲಿ ಬ್ಲಾಕ್ನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಉದಯವಾಣಿಯ ಹಿರಿಯ ಸುದ್ದಿ ಛಾಯಾಗ್ರಾಹಕ ಹಾಗೂ ಫೋಟೋ ಜರ್ನಲಿಸ್ಟ್ ಆಸ್ಟ್ರೋ ಮೋಹನ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮೊಬೈಲ್ ಛಾಯಾಗ್ರಹಣದ ಮೂಲಕ ಪರಿಣಾಮಕಾರಿ ದೃಶ್ಯ ಸಂವಹನ ನಡೆಸುವ ವಿಧಾನಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಛಾಯಾಚಿತ್ರದ ಮಹತ್ವ, ಸರಿಯಾದ ದೃಷ್ಟಿಕೋನ, ಬೆಳಕು, ಸಂಯೋಜನೆ ಹಾಗೂ ಸುದ್ದಿಯೊಂದನ್ನು ಚಿತ್ರಗಳ ಮೂಲಕ ಪರಿಣಾಮಕಾರಿಯಾಗಿ ಕಟ್ಟಿಕೊಡುವ ಕುರಿತು ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ಎಸ್ ನಾಯಕ್ ಉಪಸ್ಥಿತರಿದ್ದರು. ಪ್ರಥಮ ಬಿಬಿಎ ವಿದ್ಯಾರ್ಥಿ ವಿಹಾನ್ ಸ್ವಾಗತ ಭಾಷಣ ಮಾಡಿದರು. ಕಾರ್ಯಕ್ರಮವನ್ನು ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ಭೂಮಿಕಾ ಪಾಟ್ಕರ್ ನಿರೂಪಿಸಿದರು. ದ್ವಿತೀಯ ಬಿಬಿಎ ವಿದ್ಯಾರ್ಥಿನಿ ಕಮಲಾ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಗೋಕರ್ಣ: ತುಪ್ಪದ ಬೆಲೆ ಸಮಾಜಕ್ಕೆ ತಿಳಿದಿಲ್ಲ. ಪುರಾಣ ಘೃತ, ಮಹಾಘೃತಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇವುಗಳ ಮೌಲ್ಯ ಸಮಾಜಕ್ಕೆ ಗೊತ್ತಾದರೆ ಬಹುಶಃ ಇವುಗಳಿಗೆ ಬಿಗಿ ಭದ್ರತೆಯನ್ನು ಒದಗಿಸುವ ಸಂದರ್ಭ ಬರಬಹುದು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ಅವರು ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಹತ್ತು ವರ್ಷ ಹಳೆಯದಾದ ತುಪ್ಪವನ್ನು ಪುರಾಣ ಘೃತ, ಹತ್ತು ವರ್ಷದ ನಂತರದ ತುಪ್ಪವನ್ನು ಪ್ರಪುರಾಣ ಘೃತ, ನೂರು ವರ್ಷದ ತುಪ್ಪವನ್ನು ಕುಂಭ ಸರ್ಪಿ, ಮಹಾಘೃತ ಎಂದು ಕರೆಯಲಾಗಿದ್ದು, ಇವುಗಳು ಮಹೌಷಧವಾಗಿ ಕಾರ್ಯ ನಿರ್ವಹಿಸುತ್ತವೆ. ಯೋಗರತ್ನಾಕರವು ಮಹಾಘೃತದ ಕುರಿತಾಗಿ ಹೇಳುತ್ತಾ ಇದಕ್ಕೆ ಭೂತೋಚ್ಚಾಟನೆ ಮಾಡುವ ದೈವೀಶಕ್ತಿಯೂ ಇದೆ ಎಂಬುದನ್ನು ಉಲ್ಲೇಖಿಸಿದೆ. ತುಪ್ಪದ ಗುಣಗಳನ್ನು ಹೇಳಿ ಮುಗಿಯುವುದಲ್ಲ ಎಂದರು. ಕ್ಷೀರ ಕುಟುಂಬದ ವಿವಿಧ ಪದಾರ್ಥಗಳ ಆಯಸ್ಸು ಸಂಸ್ಕಾರವಾದಂತೆ ಹೆಚ್ಚುತ್ತಾ ಹೋಗುತ್ತದೆ. ಹಾಲು, ಮೊಸರು,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಬರುವ ಕಾರಂತಜ್ಜಿಯರು ಬರೇ ಸುಕ್ಕುಗಟ್ಟಿದ ವಯಸ್ಸಾದ ಅಜ್ಜಿಯರಲ್ಲ ಶತಶತಮಾನಗಳ ಪ್ರಬುದ್ಧತೆಯನ್ನು ವಿಚಾರಧಾರೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಮುದುಕಿಯರು ಎಂದು ಭಂಡಾರಕಾರ್ಸ್ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕಿಯಾದ ಡಾ. ರೇಖಾ ವಿ. ಬನ್ನಾಡಿ ಅಭಿಪ್ರಾಯಪಟ್ಟರು. ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಇಲ್ಲಿನ ಕನ್ನಡ ವಿಭಾಗ ಮತ್ತು ‘ಗಿಳಿವಿಂಡು’ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು ವಿಶ್ವವಿದ್ಯಾನಿಲಯ ಇದರ ಸಹಯೋಗದೊಂದಿಗೆ “ಬಾರಿಸು ಕನ್ನಡ ಡಿಂಡಿಮವ” “ಗಿಳಿವಿಂಡು ಯಾನ ಮರಳಿ ಮನೆಗೆ” ಎಂಬ ಕಾರ್ಯಕ್ರಮದ ಅಂಗವಾಗಿ ನಡೆದ ‘ಕಾರಂತಜ್ಜಿಯರು’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು ಗಿಳಿವಿಂಡು ಇದರ ಅಧ್ಯಕ್ಷರಾದ ಬಿ. ಶಿವರಾಮ ಶೆಟ್ಟಿ ಅವರು ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಗೂ ತಾನು ಕಲಿತ ಸಂಸ್ಥೆಯ ಋಣವಿರುತ್ತದೆ ಹಾಗಾಗಿ ಕಲಿತ ಸಂಸ್ಥೆಯನ್ನು ಎಂದಿಗೂ ಮರೆಯಬಾರದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸಾಹಿತ್ಯದ ಓದಿನ ಪ್ರಾಮುಖ್ಯತೆ ತಿಳಿಸಿ ನಮ್ಮದು ಕೊಲ್ಲುವ ಸಂಸ್ಕೃತಿಯಲ್ಲ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಇಲ್ಲಿನ ಕೂಟ ಮಹಾಜಗತ್ತು ಅಂಗಸಂಸ್ಥೆ ಸಾಲಿಗ್ರಾಮ ಅಂಗ ಸಂಸ್ಥೆಯ ಮಹಿಳಾ ವೇದಿಕೆಯ ಮಹಾಸಭೆ ಇತ್ತೀಚಿಗೆ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಜ್ಞಾನ ಮಂದಿರದಲ್ಲಿ ಜರಗಿತು. ಮಹಿಳಾ ವೇದಿಕೆ ಅಧ್ಯಕ್ಷೆ ಯಶೋದ. ಸಿ. ಹೊಳ್ಳ ಅವರು ಅಧ್ಯಕ್ಷತೆ ವಹಿಸಿದ್ದರು. ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್ ಕಾರಂತ್ ಶುಭಾಶಂಸನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇಗುಲದ ಅಧ್ಯಕ್ಷ ಪ್ರಕಾಶ್ ಕಾರಂತ್ ಸಹ ಧರ್ಮದರ್ಶಿಗಳಾದ ಚಂದ್ರಶೇಖರ ಉಪಾಧ್ಯ ಚಿತ್ರಪಾಡಿ, ಪರಶುರಾಮ ಭಟ್ಟ ಎಡಬೆಟ್ಟು, ಎಂ. ಲಕ್ಷ್ಮೀನಾರಾಯಣ ಹೊಳ್ಳ, ಮರಿಕಾಪು, ಬಿ. ಚಂದ್ರಶೇಖರ ನಾವಡ ಬೈಂದೂರು, ಬಿ.ಜಿ .ಕೃಷ್ಣಮೂರ್ತಿ ಮಯ್ಯ ಕಾಸರವಳ್ಳಿ, ಕೆ. ತಾರಾನಾಥ ಹೊಳ್ಳ ಕಾರ್ಕಡ, ಪ್ರಸನ್ನ ತುಂಗ ಐರೋಡಿ, ಇವರನ್ನು ಗೌರವಿಸಲಾಯಿತು. ಕೋಟತಟ್ಟು ಪಡುಕೆರೆಯ ಡಾ. ಮೇಘನಾ ನಾವಡ ಆಯುರ್ವೇದದ ಎಂ.ಡಿ. ಪದವಿಯಲ್ಲಿ (ಹ್ಯೂಮನ್ ಎನೋಟಮಿ) ಬೆಂಗಳೂರಿನ ಸರಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಚಿನ್ನದ ಪದಕ ಪಡೆದ ಹೆಗ್ಗಳಿಕೆಗಾಗಿ ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ,ಅಶಕ್ತರಿಗೆ ನೆರವು ನೀಡಲಾಯಿತು. ಸಭೆಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) 2025–26ನೇ ಶೈಕ್ಷಣಿಕ ಸಾಲಿನ ವಿವಿಧ ಎಂಜಿನಿಯರಿಂಗ್ ವಿಭಾಗಗಳ ರ್ಯಾಂಕ್ ಪಟ್ಟಿಯಲ್ಲಿ ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ (ಎಐಇಟಿ) ವಿದ್ಯಾರ್ಥಿಗಳು ಒಟ್ಟು 9 ರ್ಯಾಂಕ್ಗಳನ್ನು ಗಳಿಸಿ ಗಮನಾರ್ಹ ಸಾಧನೆ ಮೆರೆದಿದ್ದಾರೆ. ಕೃಷಿ ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರಜ್ಞಾಶ್ರೀ 2ನೇ ರ್ಯಾಂಕ್, ಪ್ರಾಪ್ತಿ ಎನ್.ಎಸ್. 4ನೇ ರ್ಯಾಂಕ್, ತೇಜಸ್ ಎ.ವಿ. 5ನೇ ರ್ಯಾಂಕ್ ಹಾಗೂ ನಿಹಾರ್ ಎಸ್. ಆಚಾರ್ಯ 7ನೇ ರ್ಯಾಂಕ್ ಗಳಿಸಿದ್ದಾರೆ. ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ (ಐಒಟಿ) ವಿಭಾಗದಲ್ಲಿ ಪ್ರಜ್ವಲ್ ಎಸ್.ಬಿ. 6ನೇ ರ್ಯಾಂಕ್ ಪಡೆದಿದ್ದಾರೆ. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್ ವಿಭಾಗದಲ್ಲಿ ಮಧು ಮಹಾಂತೇಶ್ ಅವ್ವಕ್ಕನವರ್ 8ನೇ ರ್ಯಾಂಕ್ ಹಾಗೂ ಸಹನಾ ಬಸವರಾಜ ಅಸುಂಡಿ 10ನೇ ರ್ಯಾಂಕ್ ಗಳಿಸಿದ್ದಾರೆ. ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಎಲ್ವಿನ್ ಕ್ರಿಸ್ ಡಿಸೋಜಾ 4ನೇ ರ್ಯಾಂಕ್ ಹಾಗೂ ಕಂಪ್ಯೂಟರ್ ಸೈನ್ಸ್ ಮತ್ತು ಡಿಸೈನ್ ವಿಭಾಗದಲ್ಲಿ ಮೌನಶ್ರೀ ಡಿ.ಪಿ. 6ನೇ ರ್ಯಾಂಕ್ ಗಳಿಸಿದ್ದಾರೆ. ವಿದ್ಯಾರ್ಥಿಗಳ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲಾ ವ್ಯಾಪ್ತಿಯ ಸಾರ್ವಜನಿಕ ಎಲ್ಲಾ ರಸ್ತೆಗಳಲ್ಲಿ ಜನಸಾಮಾನ್ಯರ ವಾಹನಗಳು ಸುರಕ್ಷಿತವಾಗಿ ಸಂಚರಿಸಲು ಅಗತ್ಯವಿರುವ ಎಲ್ಲಾ ರೀತಿಯ ರಸ್ತೆ ಅಭಿವೃದ್ಧಿ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ ಅಪಘಾತ ಪ್ರಕರಣಗಳು ಆಗದಂತೆ ಕ್ರಮವಹಿಸಬೇಕೆಂದು ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸೂಚನೆ ನೀಡಿದರು. ಅವರು ಬುಧವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾರ್ವಜನಿಕ ವಾಹನಗಳು ಸಂಚರಿಸುವಾಗ ಪ್ರಾಧಿಕಾರದ ವತಿಯಿಂದ ನಗರ ಹಾಗೂ ನಗರದ ಹೊರ ವಲಯದಲ್ಲಿ ವಾಹನಗಳ ವೇಗದ ಮಿತಿಯನ್ನು ನಿಗಧಿಪಡಿಸಿದ್ದು, ಇದನ್ನು ಎಲ್ಲರೂ ಪಾಲಿಸಬೇಕು. ರಸ್ತೆ ಸುರಕ್ಷತಾ ನಿಯಮಗಳನ್ನು ಸಹ ಚಾಚೂ ತಪ್ಪದೇ ಪಾಲಿಸಿದ್ದಲ್ಲಿ ಅಪಘಾತ ಪ್ರಕರಣಗಳ ಪ್ರಮಾಣ ಹೇರಳವಾಗಿ ಕಡಿಮೆಯಾಗಲು ಸಾಧ್ಯ. ಇದಕ್ಕೆ ಒತ್ತು ನೀಡಬೇಕು ಎಂದರು. ಜಿಲ್ಲೆಯಲ್ಲಿ 3785 ಸಂಚರಿಸುವ 6 ಚಕ್ರ ಮತ್ತು ಮೇಲ್ಪಟ್ಟ ಎಲ್ಲಾ ಸರಕು ಸಾಗಾಣಿಕೆ ವಾಹನಗಳಿದ್ದು, ಅವುಗಳಲ್ಲಿ 1952 ವಾಹನಗಳಿಗೆ ವೇಗ ನಿಯಂತ್ರಕಗಳನ್ನು ಅಳವಡಿಸಲಾಗಿದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಟರ್ಕಿ ದೇಶದ ಇಸ್ತಾಂಬುಲ್ ನಲ್ಲಿ ಮಂಗಳವಾರ ನಡೆದ ಏಷ್ಯನ್ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ ನಲ್ಲಿ ಭಾರತ ದೇಶದ ಪ್ರತಿನಿಧಿಯಾಗಿ ಕರ್ನಾಟಕ ರಾಜ್ಯದಿಂದ ಸ್ಪರ್ಧಿಸಿ ಯು.84 ಓಪನ್ ವಿಭಾಗದಲ್ಲಿ ಕೀರ್ತನಾ ನಾಗೇಂದ್ರ ಅವರು ಬೆಳ್ಳಿ ಪದಕ ಪಡೆದುಕೊಂಡರು. ಅವರು ಉಡುಪಿ ಜಿಲ್ಲೆಯ ಸಾಲಿಗ್ರಾಮದ ರಾ ಫಿಟ್ನೆಸ್ ಜಿಮ್ ನ ಸದಸ್ಯರಾಗಿದ್ದು, ಅವರು ರಾ ಫಿಟ್ನೆಸ್ ಜಿಮ್ನ ಮಾಲಕರು ಹಾಗೂ ಪವರ್ ಲಿಫ್ಟಿಂಗ್ನ ಪ್ರಮುಖ ತರಬೇತುದರಾದ ಮಹೇಶ್ ದೇವಾಡಿಗ ಹಾಗೂ ರೋಷನ್ ದೇವಾಡಿಗ ಅವರಲ್ಲಿ ತರಬೇತಿ ಪಡೆದಿಯುತ್ತಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ. ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಡಾ. ಶಿವರಾಮ ಕಾರಂತರ ಜನ್ಮದಿನವನ್ನು ಅಕ್ಟೋಬರ್ 10 ರಂದು ವೈಶಿಷ್ಟ ಪೂರ್ಣ ಕಾರ್ಯಕ್ರಮಗಳ ಮೂಲಕ ನಡೆಸಲು ಟ್ರಸ್ಟಿನ ಸರ್ವಸದಸ್ಯರ ಸಭೆಯಲ್ಲಿ ನಿರ್ಧರಿಸಲಾಗಿದೆ. ಅದರ ಅಂಗವಾಗಿ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ವಿವಿಧ ಸ್ಪರ್ಧೆಗಳನ್ನು ನಡೆಸಲಾಗುವುದು. ಪ್ರಾಥಮಿಕ ಶಾಲಾ ಮಕ್ಕಳಿಗೆ ಕಾರಂತರ ಬಾಲಪ್ರಪಂಚದ ಚಿತ್ರಗಳನ್ನು ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬಾಲಪ್ರಪಂಚದ ಚಿತ್ರಗಳ ರಂಗವಲ್ಲಿಯನ್ನು ಸ್ಥಳದಲ್ಲೇ ಬಿಡಿಸುವ ಸ್ಪರ್ಧೆ, ಪದವಿ ಪೂರ್ವ ವಿದ್ಯಾರ್ಥಿಗಳಿಗೆ ನನ್ನ ದೃಷ್ಟಿಯಿಂದ ಕಾರಂತರ ಬದುಕು ಮತ್ತು ಬರಹ ಎಂಬ ವಿಷಯದಲ್ಲಿ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗುವುದು. ಪ್ರತಿ ವಿಭಾಗದಲ್ಲೂ ಪ್ರಥಮ ದ್ವೀತಿಯ ಹಾಗೂ ತೃತೀಯ ಬಹುಮಾನಗಳನ್ನು ಪ್ರಶಸ್ತಿ ಪತ್ರದೊಂದಿಗೆ ಪುಸ್ತಕ ರೂಪದಲ್ಲಿ ನೀಡಲಾಗುವುದು. ಸ್ಪರ್ಧೆಯು ಅಕ್ಟೋಬರ್ ೪ ರಂದು ಜಿಲ್ಲಾ ರೆಡ್ ಕ್ರಾಸ್ ಭವನದಲ್ಲಿ ಜರಗಲಿದೆ. ಹೆಚ್ಚಿನ ವಿವರಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಅಥವಾ ಮೊಬೈಲ್ ಸಂಖ್ಯೆ…
ಕುಂದಾಪ್ರ ಡಾಟ್ಕಾಂ ಸುದ್ದಿ.ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಪ್ರತಿಭೆ ನಿಮ್ಮದು, ವೇದಿಕೆ ನಮ್ಮದು ವಿನೂತನ ಕಾರ್ಯಕ್ರಮ ಸರಣಿಯಡಿ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ ಉಳಿಸಿ ಬೆಳೆಸುವಲ್ಲಿ ವಿಶೇಷ ಪ್ರಯತ್ನ ಸತತ 123ನೇ ತಿಂಗಳ ಕಾರ್ಯಕ್ರಮ ಇತ್ತೀಚೆಗೆ ಗೊಂಬೆ ಮನೆಯಲ್ಲಿ ಜರುಗಿತು. ವಸಂತಿ ಆರ್. ಪಂಡಿತ್ ಪ್ರಾರ್ಥಿಸಿದರು. ನಿವೃತ್ತ ಪ್ರಾಂಶುಪಾಲ ಎಮ್. ರತ್ನಾಕರ್ ಪೈ, ನಿವೃತ್ತ ಅಧ್ಯಾಪಕ ಸದಾಶಿವ ಐತಾಳ್ ಉಪ್ಪಿನಕುದ್ರು, ತಲ್ಲೂರು ನಾರಾಯಣ ವಿಕಲ ಚೇತನ ಶಾಲೆಯ ಮುಖ್ಯಸ್ಥ ತಲ್ಲೂರು ಸುರೇಶ್, ಜೋತಿಷಿ ಗಜಾನನ ಗಣಪತಿ ಭಟ್, ಕರ್ನಾಟಕ ಬ್ಯಾಂಕ್ ನಿವೃತ್ತ ಉದ್ಯೋಗಿ ರಾಜಾರಾಮ್ ಹೊಳ್ಳ, ಪ್ರಾಧ್ಯಾಪಿಕೆ ಮಾಲತಿ ಪೂಜಾರಿ ಹಾಗೂ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಾಶಿವ ಐತಾಳ್ರವರನ್ನು ಅಕಾಡೆಮಿಯ ವತಿಯಿಂದ ಸಮ್ಮಾನಿಸಲಾಯಿತು. ನಂತರ ಸದಾಶಿವ ಐತಾಳ್ ರವರಿಂದ ಸಾಹಿತ್ಯ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಅರುಣ್ ಉಪ್ಪಿನಕುದ್ರು ಅವರು ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕರ್ನಾಟಕ ಪ್ರೆಸ್ ಕ್ಲಬ್ ವತಿಯಿಂದ ರಾಜ್ಯಮಟ್ಟದ ಗುರು ಶ್ರೇಷ್ಠ ಪ್ರಶಸ್ತಿ ಶಿಕ್ಷಣ ಸೇವ ರತ್ನ ಇದನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂಗಾರಕಟ್ಟೆ ಇಲ್ಲಿಯ ಶಿಕ್ಷಕಿ ವೀಣಾ ಶೆಟ್ಟಿ ಅವರಿಗೆ ಗಣ್ಯರ ಸಮ್ಮುಖದಲ್ಲಿ ಸೆ.20ರಂದು ಬೆಂಗಳೂರಿನ ಟೌನ್ ಹಾಲ್ನಲ್ಲಿ ನಿವೃತ್ತ ನ್ಯಾಯಾಧೀಶರಾದ ಸಂತೋಷ್ ಕುಮಾರ್ ಹೆಗಡೆ ಅವರು ಪ್ರಶಸ್ತಿ ಪ್ರದಾನಿಸಿದರು.
