Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು,ಅ.17: ಸಮುದ್ರದಲೆಗಳ ಹೊಡೆತಕ್ಕೆ ಸಿಲುಗಿ ಮುಗುಚಿ ಬಿದ್ದಿದ್ದ ದೋಣಿಯಲ್ಲಿ ನಾಪತ್ತೆಯಾಗಿದ್ದ ನಾಲ್ವರ ಪೈಕಿ ಎಲ್ಲಾ ಮೃತದೇಹಗಳು ಇಂದು ಬೆಳಿಗ್ಗೆ ಹಾಗೂ ರಾತ್ರಿಯ ವೇಳೆಗೆ ಪತ್ತೆಯಾಗಿದೆ. ರಾತ್ರಿ ಶೇಖರ ಖಾರ್ವಿ(39) ಹಾಗೂ ಲಕ್ಷಣ ಖಾರ್ವಿ(34) ಹಾಗೂ ಮಂಜುನಾಥ ಖಾರ್ವಿ (40) ಎಂದು ಗುರುತಿಸಲಾಗಿದೆ. ಶೇಖರ ಖಾರ್ವಿ ಅವರ ಮೃತದೇಹ ಕಿರಿಮಂಜೇಶ್ವರ ಹೊಸಹಕ್ಲು ಬಳಿ, ಲಕ್ಷಣ ಖಾರ್ವಿ ಅವರ ಮೃತದೇಹ ಆದ್ರಗೋಳಿ ಹಾಗೂ ಮಂಜುನಾಥ ಖಾರ್ವಿ ಅವರ ಮೃತದೇಹ ಗಂಗಿಬೈಲು ಬಳಿ ದೊರೆತಿದೆ. ಇಂದು ಬೆಳಿಗ್ಗೆ ನಾಗ ಖಾರ್ವಿ ಎಂಬುವವರ ಮೃತದೇಹ ಹೊಸಹಕ್ಲುವಿನಲ್ಲಿ ಪತ್ತೆಯಾಗಿತ್ತು. ಕೊಡೇರಿಯಲ್ಲಿ ಸಾಗರಶ್ರೀ ಎಂಬ ಹೆಸರಿನ ದೋಣಿ ಮೀನುಗಾರಿಕೆ ಮುಗಿಸಿ ಹಿಂದಿರುಗುತ್ತಿದ್ದ ಸಂದರ್ಭ ನಡೆದ ಅವಘಡದಲ್ಲಿ ಬಿ. ನಾಗ, ಲಕ್ಷಣ, ಶೇಖರ ಜಿ., ಮಂಜುನಾಥ ಖಾರ್ವಿ ಸೇರಿ ಒಟ್ಟು ನಾಲ್ವರು ವ್ಯಕ್ತಿಗಳು ನಾಪತ್ತೆಯಾಗಿದ್ದರು. ದೋಣಿಯಲ್ಲಿದ್ದ ಎಂಟು ಮಂದಿ ಅಪಾಯದಿಂದ ಪಾರಾಗಿದ್ದರು. ಅವರಿಗಾಗಿ ರಾತ್ರಿಯ ತನಕ ಶೋಧ ಕಾರ್ಯ ಮುಂದುವರಿದಿತ್ತು. ಇಂದು ರಾತ್ರಿಯ ಹೊತ್ತಿಗೆ ಎಲ್ಲಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು,ಅ.17: ಸಮುದ್ರದಲೆಗಳ ಹೊಡೆತಕ್ಕೆ ಸಿಲುಗಿ ಮುಗುಚಿ ಬಿದ್ದಿದ್ದ ದೋಣಿಯಲ್ಲಿ ನಾಪತ್ತೆಯಾಗಿದ್ದ ಇನ್ನೆರಡು ಮೃತದೇಹಗಳು ಸಂಜೆ ಪತ್ತೆಯಾಗಿದೆ. ಮೃತರನ್ನು ಶೇಖರ ಖಾರ್ವಿ(39) ಹಾಗೂ ಲಕ್ಷಣ ಖಾರ್ವಿ(34) ಎಂದು ಗುರುತಿಸಲಾಗಿದೆ. ಶೇಖರ ಖಾರ್ವಿ ಅವರ ಮೃತದೇಹ ಕಿರಿಮಂಜೇಶ್ವರ ಹೊಸಹಕ್ಲು ಬಳಿ ಪತ್ತೆಯಾಗಿದ್ದು, ಲಕ್ಷಣ ಖಾರ್ವಿ ಅವರ ಮೃತದೇಹ ಆದ್ರಗೋಳಿ ಎಂಬಲ್ಲಿ ದೊರೆತಿದೆ. ಇಂದು ಬೆಳಿಗ್ಗೆ ನಾಗ ಖಾರ್ವಿ ಎಂಬುವವರ ಮೃತದೇಹ ಹೊಸಹಕ್ಲುವಿನಲ್ಲಿ ಪತ್ತೆಯಾಗಿತ್ತು. ನಾಪತ್ತೆಯಾದ ಮಂಜುನಾಥ್ ಎಂಬುವವರ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿಸಲಾಗಿದೆ. ಕೊಡೇರಿಯಲ್ಲಿ ಸಾಗರಶ್ರೀ ಎಂಬ ಹೆಸರಿನ ದೋಣಿ ಮೀನುಗಾರಿಕೆ ಮುಗಿಸಿ ಹಿಂದಿರುಗುತ್ತಿದ್ದ ಸಂದರ್ಭ ನಡೆದ ಅವಘಡದಲ್ಲಿ ಬಿ. ನಾಗ, ಲಕ್ಷಣ, ಶೇಖರ ಜಿ., ಮಂಜುನಾಥ ಖಾರ್ವಿ ಸೇರಿ ಒಟ್ಟು ನಾಲ್ವರು ವ್ಯಕ್ತಿಗಳು ನಾಪತ್ತೆಯಾಗಿದ್ದರು. ಅವರಿಗಾಗಿ ರಾತ್ರಿಯ ತನಕ ಶೋಧ ಕಾರ್ಯ ಮುಂದುವರಿದಿತ್ತು. ಇಂದು ಮೂವರು ಮೃತದೇಹಗಳು ಪತ್ತೆಯಾಗಿವೆ. Follow-Up ► ಕೊಡೇರಿ ದೋಣಿ ದುರಂತ: ನಾಪತ್ತೆಯಾಗಿದ್ದ ನಾಲ್ವರ ಮೃತದೇಹ ಪತ್ತೆ- https://kundapraa.com/?p=40416 . ►…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಆ.17ರ ಸೋಮವಾರ 270 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 141, ಉಡುಪಿ ತಾಲೂಕಿನ 107 ಹಾಗೂ ಕಾರ್ಕಳ ತಾಲೂಕಿನ 15 ಮಂದಿಗೆ ಪಾಸಿಟಿವ್ ಬಂದಿದೆ. 7 ಮಂದಿ ಬೇರೆ ಜಿಲ್ಲೆಯವರಾಗಿದ್ದಾರೆ. ಒಟ್ಟು ಪ್ರಕರಣಗಳಲ್ಲಿ 86 ಸಿಂಥಮೇಟಿವ್ ಹಾಗೂ 184 ಅಸಿಂಥಮೆಟಿಕ್ ಪ್ರಕರಣಗಳಲ್ಲಿದ್ದು, 171 ಪುರುಷರು, 99 ಮಹಿಳೆಯರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಒಟ್ಟು ಪ್ರಕರಣಗಳಲ್ಲಿ ಪ್ರಾಥಮಿಕ ಸಂಪರ್ಕದಿಂದ 114, ILI 62, ಸಾರಿ 10 ಪ್ರಕರಣವಿದ್ದು, 83 ಪ್ರಕರಣದ ಮೂಲ ಪತ್ತೆಹಚ್ಚಲಾಗುತ್ತಿದೆ. ಓರ್ವ ವ್ಯಕ್ತಿ ಅಂತರ್ಜಿಲ್ಲಾ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಇಂದು 85 ಮಂದಿ ಆಸ್ಪತ್ರೆಯಿಂದ ಹಾಗೂ 184 ಮಂದಿ ಹೋಮ್ ಐಸೋಲೇಶನ್’ನಿಂದ ಬಿಡುಗಡೆಗೊಂಡಿದ್ದಾರೆ. ಕಾರ್ಕಳದ 56 ವರ್ಷದ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ► ರಸ್ತೆ ದಾಟುತ್ತಿದ್ದ ವೇಳೆ ಲಾರಿ ಡಿಕ್ಕಿ: ಪಿಯುಸಿ ವಿದ್ಯಾರ್ಥಿ ಸಾವು – https://kundapraa.com/?p=40390 . 520 ನೆಗೆಟಿವ್: ಈ ತನಕ ಒಟ್ಟು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಸ್ತೆ ದಾಟುತ್ತಿದ್ದ ವೇಳೆ ಲಾರಿಯೊಂದು ಡಿಕ್ಕಿಯಾಗಿ ಪಿಯುಸಿ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಬೈಂದೂರು ತಾಲೂಕಿನ ನಾವುಂದದಲ್ಲಿ ಬಳಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಮರವಂತೆ ನೀರೋಣಿ ಬಳಿಯ ನಿವಾಸಿ ಬಣಸಾಲು ರವೀಂದ್ರ ಖಾರ್ವಿ ಎಂಬುವರ ಮಗ ಕಿಶನ್ ಖಾರ್ವಿ (17) ಎಂದು ಗುರುತಿಸಲಾಗಿದೆ. ಪ್ರಥಮ ಪಿಯುಸಿ ಮುಗಿಸಿರುವ ಕಿಶನ್ ಖಾರ್ವಿ ದ್ವಿತೀಯ ಪಿಯುಸಿಗೆ ಪ್ರವೇಶ ದಾಖಲಾತಿ ಮುಗಿಸಿ ಕಾಲೇಜಿನಿಂದ ಅಂಗಡಿಯೊಂದಕ್ಕೆ ಬಂದು ಅಗತ್ಯ ವಸ್ತುಗಳನ್ನು ಖರೀದಿಸಿ ರಸ್ತೆ ವಿಭಾಜಕ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಲಾರಿ ಢಿಕ್ಕಿ ಹೊಡೆದ ರಭಸಕ್ಕೆ ಕಿಶನ್ ಖಾರ್ವಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ. ಸ್ಥಳಕ್ಕೆ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸುರೇಶ ನಾಯಕ್, ಪಿಎಸ್‌ಐ ಸಂಗೀತಾ ಭೇಟಿ ನೀಡಿದ್ದಾರೆ. ಗಂಗೊಳ್ಳಿ ಆಪತ್ಬಾಂದವ ಅಂಬುಲೆನ್ಸ್ ಮೂಲಕ ಮೃತದೇಹವನ್ನು ಬೈಂದೂರು ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ/ಕುಂದಾಪ್ರ ಡಾಟ್ ಕಾಂ ಸುದ್ದಿ/

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು,ಅ.17: ಸಮುದ್ರದಲೆಗಳ ಹೊಡೆತಕ್ಕೆ ಸಿಲುಗಿ ಮುಗುಚಿ ಬಿದ್ದಿದ್ದ ದೋಣಿಯಲ್ಲಿ ನಾಪತ್ತೆಯಾಗಿದ್ದ ಓರ್ವ ವ್ಯಕ್ತಿಯ ಶವ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಕಿರಿಮಂಜೇಶ್ವರ ಹೊಸಹಕ್ಲು ಬಳಿ ಶವ ಪತ್ತೆಯಾಗಿದ್ದು, ಮೃತರನ್ನು ನಾಗ ಖಾರ್ವಿ ಎಂದು ಗುರುತಿಸಲಾಗಿದೆ. ಕಿರಿಮಂಜೇಶ್ವರ ಗ್ರಾಮದ ಕೊಡೇರಿಯಲ್ಲಿ ಅ.16 ಮಧ್ಯಾಹ್ನ ನಡೆದ ದೋಣಿ ಅವಘಡದಲ್ಲಿ ಎಂಟು ಮಂದಿ ಈಜಿ ಬಚಾವಾಗಿದ್ದರು.  ಬಿ. ನಾಗ, ಲಕ್ಷಣ, ಶೇಖರ ಜಿ., ಮಂಜುನಾಥ ಖಾರ್ವಿ ಸೇರಿ ಒಟ್ಟು ನಾಲ್ವರು ವ್ಯಕ್ತಿಗಳು ನಾಪತ್ತೆಯಾಗಿದ್ದರು. ದೋಣಿಯಲ್ಲಿದ್ದ ಬಲೆ ಸಿಲುಕಿಕೊಂಡಿದ್ದರಿಂದ ಅವರು ಮೇಲೆ ಬರಲು ಸಾಧ್ಯವಾಗಲಿಲ್ಲ ಎನ್ನಲಾಗುತ್ತಿದೆ. ಅವರಿಗಾಗಿ ರಾತ್ರಿ 8 ಗಂಟೆಯ ತನಕ ಶೋಧ ಕಾರ್ಯ ಮುಂದುವರಿದಿತ್ತು.  ಇಂದು ಬೆಳಿಗ್ಗೆ ನಾಗ ಖಾರ್ವಿ ಅವರ ಮೃತದೇಹ ಪತ್ತೆಯಾದ ಸ್ಥಳದಲ್ಲಿಯೇ ಇಬ್ಬರ ಮೃತದೇಹ ಪತ್ತೆಯಾಗುವ ಸಾಧ್ಯತೆ ಇದ್ದು, ಅಲ್ಲಿಯೇ ಶೋಧ ಕಾರ್ಯ ಮುಂದುವರಿಸಿದ್ದಾರೆ. ಕೊಡೇರಿಯ ಸಾಗರಶ್ರೀ ಎಂಬ ಹೆಸರಿನ ದೋಣಿ ಮೀನುಗಾರಿಕೆ ಮುಗಿಸಿ ಇಂದು ಮಧ್ಯಾಹ್ನ ಹಿಂದಿರುಗುತ್ತಿದ್ದ ಸಂದರ್ಭ ವಿಪರೀತ ಗಾಳಿ, ಸಮುದ್ರದ ಅಲೆಗಳ ರಭಸಕ್ಕೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕೃಷಿ ಇಲಾಖೆಯ ವತಿಯಿಂದ ಪ್ರಸ್ತಕ ಸಾಲಿನ ಕೃಷಿ ಪಂಡಿತ ಪ್ರಶಸ್ತಿಗೆ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.ಕೃಷಿ ಪಂಡಿತ ಪ್ರಶಸ್ತಿಗೆ ಭಾಗವಹಿಸಲು ಇಚ್ಚಿಸುವವರು ಉಡುಪಿ ಜಿಲ್ಲೆಯ ಕೃಷಿ ಕ್ಷೇತ್ರದಲ್ಲಿ ಹೊಸ ಅನ್ವೇಷಣೆ ಮತ್ತು ಸೃಜನಾತ್ಮಕ ಕಾರ್ಯಗಳಿಂದ ಗಮನಾರ್ಹ ಸಾಧನೆ ಮಾಡಿರುವ ಮತ್ತು ರೈತ ಸಮುದಾಯದ ಅಭಿವೃದ್ದಿಗೆ ಅಪಾರ ಕೊಡುಗೆ ನೀಡುತ್ತಿರುವವರಾಗಿರಬೇಕು. ಭಾಗವಹಿಸುವವರ ಸಂಶೋಧನೆ /ಸಾಧನೆಗಳು ಮೂಲ ಸ್ವರೂಪದ್ದಾಗಿದ್ದು ಬೇರೆಯವರ ಸಾಧನೆಗಿಂತ ವಿಭಿನ್ನವಾಗಿರಬೇಕು. ಹಾಗೂ ವ್ಯಾಪಕವಾಗಿ ಕೃಷಿ ಕ್ಷೇತ್ರದ ಏಳಿಗೆಗೆ ಕಾರಣವಾಗಿರಬೇಕು.ಅರ್ಜಿಯನ್ನು ಸ್ಥಳೀಯ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಿಂದ ಪಡೆದು ಸೆಪ್ಟೆಂಬರ್ 7 ರ ಒಳಗೆ ಸಲ್ಲಿಸಬಹುದು ಎಂದು ಉಡುಪಿ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ► ಕೃಷಿ ಪಂಡಿತ ಪ್ರಶಸ್ತಿಗೆ ರೈತರಿಂದ ಅರ್ಜಿ ಆಹ್ವಾನ – https://kundapraa.com/?p=40294 .

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಕೊಡೇರಿಯಲ್ಲಿ ನಡೆದ ದೋಣಿ ಅವಘಡದಲ್ಲಿ ಒಟ್ಟು ನಾಲ್ವರು ವ್ಯಕ್ತಿಗಳು ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ. ದುರ್ಘಟನೆಯಲ್ಲಿ ಉಪ್ಪುಂದದ ನಿವಾಸಿಗಳಾದ ಬಿ. ನಾಗ(46), ಲಕ್ಷಣ(34), ಶೇಖರ ಜಿ(35), ಮಂಜುನಾಥ ಖಾರ್ವಿ(38) ನಾಪತ್ತೆಯಾಗಿದ್ದಾರೆ. ಕೊಡೇರಿಯ ಸಾಗರಶ್ರೀ ಎಂಬ ಹೆಸರಿನ ಜೋಡಿ ದೋಣಿ ಮೀನುಗಾರಿಕೆ ಮುಗಿಸಿ ಇಂದು ಮಧ್ಯಾಹ್ನ ಹಿಂದಿರುಗುತ್ತಿದ್ದ ಸಂದರ್ಭ ವಿಪರೀತ ಗಾಳಿ, ಸಮುದ್ರದ ಅಲೆಗಳ ರಭಸಕ್ಕೆ ಬಂದರು ಪ್ರವೇಶಿಸುವ ಬದುವಿನ ಕಲ್ಲಿನ ತಡೆಗೋಡೆಗೆ ಬಡಿದು ಮಗುಚಿ ಬಿದ್ದಿದೆ. ದೋಣಿಯಲ್ಲಿ 12 ಮಂದಿ ಮೀನುಗಾರರಿದ್ದರು. ಈ ಪೈಕಿ ನಾಲ್ವರು ನಾಪತ್ತೆಯಾಗಿದ್ದು, ಶೋಧಕಾರ್ಯ ನಡೆಸಲಾಗುತ್ತಿದೆ. ದೋಣಿಯನ್ನು ಮೇಲೆ ಎಳೆಯಲಾಗುತ್ತಿದೆ. ಬದುಕುಳಿದಿರುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗಿದೆ. ಉಳಿದ ಅಸ್ಪಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಾಸಕರು, ಡಿಸಿ ಭೇಟಿ: ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಎಸ್ಪಿ ವಿಷ್ಣುವರ್ದನ, ಎಸ್ಪಿ ಹರಿರಾಂ ಶಂಕರ್, ಎಸಿ ರಾಜು, ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ಮಾಜಿ ಶಾಸಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಆ.16ರ ಭಾನುವಾರ 237 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 100, ಉಡುಪಿ ತಾಲೂಕಿನ 122 ಹಾಗೂ ಕಾರ್ಕಳ ತಾಲೂಕಿನ 14 ಮಂದಿಗೆ ಪಾಸಿಟಿವ್ ಬಂದಿದೆ. ಓರ್ವ ಬೇರೆ ಜಿಲ್ಲೆಯವರಾಗಿದ್ದಾರೆ. ಒಟ್ಟು ಪ್ರಕರಣಗಳಲ್ಲಿ 67 ಸಿಂಥಮೇಟಿವ್ ಹಾಗೂ 170 ಅಸಿಂಥಮೆಟಿಕ್ ಪ್ರಕರಣಗಳಲ್ಲಿದ್ದು, 124 ಪುರುಷರು, 113 ಮಹಿಳೆಯರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಒಟ್ಟು ಪ್ರಕರಣಗಳಲ್ಲಿ ಪ್ರಾಥಮಿಕ ಸಂಪರ್ಕದಿಂದ 107, ILI 45, ಸಾರಿ 1 ಪ್ರಕರಣವಿದ್ದು, 84 ಪ್ರಕರಣದ ಮೂಲ ಪತ್ತೆಹಚ್ಚಲಾಗುತ್ತಿದೆ. ಇಂದು 106 ಮಂದಿ ಆಸ್ಪತ್ರೆಯಿಂದ ಹಾಗೂ 154 ಮಂದಿ ಹೋಮ್ ಐಸೋಲೇಶನ್’ನಿಂದ ಬಿಡುಗಡೆಗೊಂಡಿದ್ದಾರೆ. 523 ನೆಗೆಟಿವ್: ಈ ತನಕ ಒಟ್ಟು 55363 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 46104 ನೆಗೆಟಿವ್, 7975 ಪಾಸಿಟಿವ್ ಬಂದಿದ್ದು, 1284 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 523 ನೆಗೆಟಿವ್, 237 ಪಾಸಿಟಿವ್ ಬಂದಿದೆ. 2,537…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಕೊಡೇರಿಯಲ್ಲಿ ನಡೆದ ದೋಣಿ ದುರಂತದಲ್ಲಿ ನಾಲ್ವರು ನಾಪತ್ತೆಯಾಗಿದ್ದು ಶೋಧ ಕಾರ್ಯ ನಡೆಯುತ್ತಿದೆ. ಒಟ್ಟು 12 ಮಂದಿ ಇದ್ದರು ಎನ್ನಲಾಗುತ್ತಿದ್ದು, ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೀನುಗಾರಿಕೆಗೆ ತೆರಳಿ ಹಿಂದಿರುಗುತ್ತಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ. ಕೊಡೇರಿಯ ಸಾಗರಶ್ರೀ ಎಂಬ ಹೆಸರಿನ ಜೋಡಿ ದೋಣಿ ಮೀನುಗಾರಿಕೆ ಮುಗಿಸಿ ಹಿಂದಿರುಗುತ್ತಿದ್ದ ಸಂದರ್ಭ ವಿಪರೀತ ಗಾಳಿ, ಸಮುದ್ರದ ಅಲೆಗಳ ರಭಸಕ್ಕೆ ಬಂದರು ಪ್ರವೇಶಿಸುವ ಬದುವಿನ ಕಲ್ಲಿನ ತಡೆಗೋಡೆಗೆ ಬಡಿದು ಮಗುಚಿ ಬಿದ್ದಿದೆ. ದೋಣಿಯಲ್ಲಿ ಸುಮಾರು 12 ಮಂದಿ ಮೀನುಗಾರರಿದ್ದರು ಎನ್ನಲಾಗಿದ್ದು ಈ ಪೈಕಿ ನಾಪತ್ತೆಯಾಗಿರುವುದು ದೃಢವಾಗಿದೆ.  ದೋಣಿಯನ್ನು ಮೇಲೆ ಎಳೆಯಲಾಗುತ್ತಿದೆ. ಕುಂದಾಪ್ರ ಡಾಟ್ ಕಾಂ. ಘಟನಾ ಸ್ಥಳಕ್ಕೆ ಗಂಗೊಳ್ಳಿ ಕರಾವಳಿ ಕಾವಲು ಠಾಣೆಯ ಸಿಬ್ಬಂದಿಗಳು ತೆರಳಿದ್ದಾರೆ. ಬೈಂದೂರು ಶಾಸಕರಾದ ಶ್ರೀ ಸುಕುಮಾರ ಶೆಟ್ಟಿ, ಹಾಗೂ ಮಾಜಿ ಶಾಸಕರಾದ ಗೋಪಾಲ ಪೂಜಾರಿಯವರು ಭೇಟಿ ನೀಡಿದ್ದಾರೆ. ರಕ್ಷಣಾ ಸಿಬ್ಬಂದಿಗಳು, ಸ್ಥಳೀಯರು ಹಾಗೂ ಮೀನುಗಾರರಿಂದ ರಕ್ಷಣಾ ಕಾರ್ಯಚರಣೆ ಮುಂದುವರಿದಿದೆ. ಘಟನೆಯ ಬಗ್ಗೆ ಹೆಚ್ಚಿನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಆ.15ರ ಶನಿವಾರ 241 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 70, ಉಡುಪಿ ತಾಲೂಕಿನ 138 ಹಾಗೂ ಕಾರ್ಕಳ ತಾಲೂಕಿನ 30 ಮಂದಿಗೆ ಪಾಸಿಟಿವ್ ಬಂದಿದೆ. 3 ಮಂದಿ ಬೇರೆ ಜಿಲ್ಲೆಯವರಾಗಿದ್ದಾರೆ. ಒಟ್ಟು ಪ್ರಕರಣಗಳಲ್ಲಿ 191 ಸಿಂಥಮೇಟಿವ್ ಹಾಗೂ 50 ಅಸಿಂಥಮೆಟಿಕ್ ಪ್ರಕರಣಗಳಲ್ಲಿದ್ದು, 127 ಪುರುಷರು, 114 ಮಹಿಳೆಯರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಒಟ್ಟು ಪ್ರಕರಣಗಳಲ್ಲಿ ಪ್ರಾಥಮಿಕ ಸಂಪರ್ಕದಿಂದ 130, ILI 40 ಪ್ರಕರಣವಿದ್ದು, 71 ಪ್ರಕರಣದ ಮೂಲ ಪತ್ತೆಹಚ್ಚಲಾಗುತ್ತಿದೆ. ಇಂದು 102 ಮಂದಿ ಆಸ್ಪತ್ರೆಯಿಂದ ಹಾಗೂ 127 ಮಂದಿ ಹೋಮ್ ಐಸೋಲೇಶನ್’ನಿಂದ ಬಿಡುಗಡೆಗೊಂಡಿದ್ದಾರೆ. 65 ಹಾಗೂ 43 ವರ್ಷದ ಉಡುಪಿ ತಾಲೂಕಿನ ಇಬ್ಬರು ಪುರುಷರು ಇಂದು ಮೃತಪಟ್ಟಿದ್ದಾರೆ. 1,556 ನೆಗೆಟಿವ್: ಈ ತನಕ ಒಟ್ಟು 54794 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 45581 ನೆಗೆಟಿವ್, 7738 ಪಾಸಿಟಿವ್ ಬಂದಿದ್ದು, 1475 ಮಂದಿಯ ವರದಿ ಬರುವುದು ಬಾಕಿ ಇದೆ.…

Read More