ಕೊಡೇರಿ ದೋಣಿ ದುರಂತ: ಮತ್ತಿಬ್ಬರ ಮೃತದೇಹ ಪತ್ತೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಅ.17: ಸಮುದ್ರದಲೆಗಳ ಹೊಡೆತಕ್ಕೆ ಸಿಲುಗಿ ಮುಗುಚಿ ಬಿದ್ದಿದ್ದ ದೋಣಿಯಲ್ಲಿ ನಾಪತ್ತೆಯಾಗಿದ್ದ ಇನ್ನೆರಡು ಮೃತದೇಹಗಳು ಸಂಜೆ ಪತ್ತೆಯಾಗಿದೆ. ಮೃತರನ್ನು ಶೇಖರ ಖಾರ್ವಿ(39) ಹಾಗೂ ಲಕ್ಷಣ ಖಾರ್ವಿ(34) ಎಂದು ಗುರುತಿಸಲಾಗಿದೆ.

Call us

Click Here

ಶೇಖರ ಖಾರ್ವಿ ಅವರ ಮೃತದೇಹ ಕಿರಿಮಂಜೇಶ್ವರ ಹೊಸಹಕ್ಲು ಬಳಿ ಪತ್ತೆಯಾಗಿದ್ದು, ಲಕ್ಷಣ ಖಾರ್ವಿ ಅವರ ಮೃತದೇಹ ಆದ್ರಗೋಳಿ ಎಂಬಲ್ಲಿ ದೊರೆತಿದೆ. ಇಂದು ಬೆಳಿಗ್ಗೆ ನಾಗ ಖಾರ್ವಿ ಎಂಬುವವರ ಮೃತದೇಹ ಹೊಸಹಕ್ಲುವಿನಲ್ಲಿ ಪತ್ತೆಯಾಗಿತ್ತು. ನಾಪತ್ತೆಯಾದ ಮಂಜುನಾಥ್ ಎಂಬುವವರ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿಸಲಾಗಿದೆ.

ಕೊಡೇರಿಯಲ್ಲಿ ಸಾಗರಶ್ರೀ ಎಂಬ ಹೆಸರಿನ ದೋಣಿ ಮೀನುಗಾರಿಕೆ ಮುಗಿಸಿ ಹಿಂದಿರುಗುತ್ತಿದ್ದ ಸಂದರ್ಭ ನಡೆದ ಅವಘಡದಲ್ಲಿ ಬಿ. ನಾಗ, ಲಕ್ಷಣ, ಶೇಖರ ಜಿ., ಮಂಜುನಾಥ ಖಾರ್ವಿ ಸೇರಿ ಒಟ್ಟು ನಾಲ್ವರು ವ್ಯಕ್ತಿಗಳು ನಾಪತ್ತೆಯಾಗಿದ್ದರು. ಅವರಿಗಾಗಿ ರಾತ್ರಿಯ ತನಕ ಶೋಧ ಕಾರ್ಯ ಮುಂದುವರಿದಿತ್ತು. ಇಂದು ಮೂವರು ಮೃತದೇಹಗಳು ಪತ್ತೆಯಾಗಿವೆ.

 

Follow-Up

Click here

Click here

Click here

Click Here

Call us

Call us

► ಕೊಡೇರಿ ದೋಣಿ ದುರಂತ: ನಾಪತ್ತೆಯಾಗಿದ್ದ ನಾಲ್ವರ ಮೃತದೇಹ ಪತ್ತೆ- https://kundapraa.com/?p=40416 .
► ಕೊಡೇರಿ ದೋಣಿ ದುರಂತ: ನಾಗ ಖಾರ್ವಿ ಶವ ಪತ್ತೆ – https://kundapraa.com/?p=40380 .
► ಕೊಡೇರಿ ದೋಣಿ ದುರಂತ: ಮುಂದುವರಿದ ಶೋಧ ಕಾರ್ಯ. ಘಟನಾ ಸ್ಥಳಕ್ಕೆ ಡಿಸಿ, ಎಸ್ಪಿ ಭೇಟಿ – https://kundapraa.com/?p=40362 .
► ಕೊಡೇರಿಯಲ್ಲಿ ದೋಣಿ ದುರಂತ: ನಾಲ್ವರು ಮೀನುಗಾರರ ಮುಂದುವರಿದ ಶೋಧ ಕಾರ್ಯಾಚರಣೆ – https://kundapraa.com/?p=40347 .

Leave a Reply