Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಸುರಭಿ ಎಸ್. ಶೆಟ್ಟಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ರಲ್ಲಿ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಎಲ್‌ಕೆಜಿಯಿಂದ ಅದೇ ಶಾಲೆಯಲ್ಲಿ ಅಧ್ಯಯನ ನಡೆಸಿರುವ ಸುರಭಿ ಖಂಬದಕೋಣೆ ಗ್ರಾಮದ ಹಳಗೇರಿ ಮೂಲದ ಎಚ್. ಸುರೇಶ ಶೆಟ್ಟಿ – ಸೀಮಾ ಎಸ್. ಶೆಟ್ಟಿ ಅವರ ಪ್ರಥಮ ಪುತ್ರಿ. ಸುರೇಶ ಶೆಟ್ಟಿ ಉಪ್ಪುಂದದಲ್ಲಿ ಪೀಠೋಪಕರಣ ಮಳಿಗೆ ನಡೆಸುತ್ತಿದ್ದಾರೆ. ಸುರಭಿ ಕನ್ನಡದಲ್ಲಿ 125, ಇಂಗ್ಲೀಷ್ 100, ಹಿಂದಿ – 100, ಗಣಿತ – 100, ವಿಜ್ಞಾನ – 100 ಹಾಗೂ ಸಮಾಜ ವಿಜ್ಞಾನದಲ್ಲಿ – 99 ಅಂಕ ಗಳಿಸಿದ್ದಾಳೆ. ಮುಂದೆ ವಿಜ್ಞಾನ ಓದಿ ವೈದ್ಯಳಾಗಬೇಕೆಂದಿದ್ದಾಳೆ. ಸುರಭಿಯ ಸಹೋದರಿ ಸುವಿಧಾ ಅದೇ ಶಾಲೆಯಲ್ಲಿ ಈ ವರ್ಷ ಎಸ್‌ಎಸ್‌ಎಲ್‌ಸಿ ಅಧ್ಯಯನ ನಿರತಳು. ’ಶಾಲೆಯಲ್ಲಿ ನಿಗದಿಗೊಳಿಸಿದ್ದ ಒಂದು ಗಂಟೆಯ ಓದಿನ ಅವಧಿಯ ಜತೆಗೆ ಮನೆಯಲ್ಲಿ ಪ್ರತಿದಿನ ಕನಿಷ್ಠ ನಾಲ್ಕು ಗಂಟೆ ಓದುತ್ತಿದ್ದೆ. ಆಯಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ ಪ್ರಸಕ್ತ ಸಾಲಿನ ಎಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು,ಈ ಕುರಿತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಟಿಯಲ್ಲಿ ಫಲಿತಾಂಶದ ಮಾಹಿತಿ ನೀಡಿದ್ದಾರೆ. ಈ ಭಾರಿ ಗ್ರೇಡ್ ಪದ್ದತಿ ಇದ್ದು 10 ಜಿಲ್ಲೆಗಳು ಎ ಗ್ರೇಡ್, 20 ಜಿಲ್ಲೆಗಳು ಬಿ ಗ್ರೇಡ್ ಹಾಗೂ 4 ಜಿಲ್ಲೆಗಳು ಸಿ ಗ್ರೇಡ್ ಪಡೆದಿವೆ. (34 ಶೈಕ್ಷಣಿಕ ಜಿಲ್ಲೆಗಳು) ಒಟ್ಟಾರೆ ಶೇ. 71.81 ಫಲಿತಾಂಶ ಈ ಬಾರಿ ಬಂದಿದೆ. ಕಳೆದ ಬಾರಿ ಶೇ.73.70 ರಷ್ಟು ಫಲಿತಾಂಶ ಬಂದಿತ್ತು. ಉಡುಪಿ ಜಿಲ್ಲೆ ಎ ಗ್ರೇಡ್‌ನಲ್ಲಿದ್ದು 7ನೇ ಸ್ಥಾನದಲ್ಲಿದೆ, ಉತ್ತರ ಕನ್ನಡ ಜಿಲ್ಲೆ ಎ ಗ್ರೇಡ್‌ನಲ್ಲಿದ್ದು, 10ನೇ ಸ್ಥಾನದಲ್ಲಿದೆ, ದ.ಕ ಜಿಲ್ಲೆ ಬಿ. ಗ್ರೇಡ್‌ನಲ್ಲಿದ್ದು 12ನೇ ಸ್ಥಾನ ಪಡೆದುಕೊಂಡಿದೆ. ಎ ಗ್ರೇಡ್ ಜಿಲ್ಲೆಗಳು: ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಧುಗಿರಿ, ಮಂಡ್ಯ, ಚಿತ್ರದುರ್ಗ, ಕೋಲಾರ, ಉಡುಪಿ, ರಾಮನಗರ, ಹಾಸನ, ಉತ್ತರ ಕನ್ನಡ ಜಿಲ್ಲೆಗಳು, ಬಿ ಗ್ರೇಡ್ ಜಿಲ್ಲೆಗಳು:  ಚಾಮರಾಜನಗರ, ಮಂಗಳೂರು, ಬಳ್ಳಾರಿ, ತುಮಕೂರು,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪರಂಪಾನುಗತವಾಗಿ ಜಾನಪದ ಸಂಗೀತ ಕಲಿತುಕೊಂಡು ಅದರಿಂದಲೇ ಬದುಕು ಕಟ್ಟಿಕೊಳ್ಳುವ ಕಲಾವಿದರು ವೃದ್ಧರಾದಾಗ ಅವರಿಗೆ ಸರ್ಕಾರ ಮಾಸಾಶನ ನೀಡಬೇಕು. ಅವರು ಹೊಂದಿರುವ ಕಲಾಸಂಪತ್ತನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಗಂಗೊಳ್ಳಿ ಹೇಳಿದರು. ರಾಜ್ಯ ಮತ್ತು ಜಿಲ್ಲಾ ಕನ್ನಡ ಜಾನಪದ ಪರಿಷತ್ತು, ಯುವ ಬ್ರಿಗೇಡ್ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಕೋಶದ ಆಶ್ರಯದಲ್ಲಿ ಭಾನುವಾರ ಆಚರಿಸಿದ ವಿಶ್ವ ಬುಡಕಟ್ಟು ದಿನಾಚರಣೆ ಅಂಗವಾಗಿ ಹೊಸಾಡು ಗ್ರಾಮದ ಮುಳ್ಳಿಕಟ್ಟೆಯಲ್ಲಿ ನೆಲೆಸಿರುವ ಹಿರಿಯ ಜಾನಪದ ಕಲಾವಿದ ಶಿವಲಿಂಗಪ್ಪ ಈಶ್ವರಪ್ಪ ವೇಶಗಾರ್-ಶಂಕರಮ್ಮ ದಂಪತಿಯನ್ನು ಅವರು ಸನ್ಮಾನಿಸಿ ಮಾತನಾಡಿದರು. ಕೋವಿಡ್-೧೯ರ ಕಾರಣದಿಂದ ಪರಿಷತ್ತಿಗೆ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿಲ್ಲ. ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಬಾಲಾಜಿ ಅವರ ಮಾರ್ಗದರ್ಶನದಲ್ಲಿ ಅಂತರ್ಜಾಲ ಬಳಸಿಕೊಂಡು ಎಲ್ಲೆಡೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಅವುಗಳಿಗೆ ಕಲಾವಿದರಿಂದ ಮತ್ತು ಕಲಾಸಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಉತ್ತರ ಕರ್ನಾಟಕದಿಂದ ಬಂದು ಮುಳ್ಳಿಕಟ್ಟೆಯಲ್ಲಿ ನೆಲೆಸಿರುವ ಕಲಾವಿದರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಾವುಂದ ಹಾಗೂ ನಾಡಾ ಗ್ರಾಮಪಂಚಾಯತ್ ವ್ಯಾಪ್ತಿಯ ನದಿಪಾತ್ರದಲ್ಲಿ ನೆರೆ ನೀರು ಹೆಚ್ಚಿದ್ದು, ನೆರೆ ಪೀಡಿತ ಪ್ರದೇಶಗಳಿಗೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಭಾನುವಾರ ಭೇಟಿ ನೀಡಿದರು. ಈ ಸಂದರ್ಭ ಅವರು ಮಾತನಾಡಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಿರುವುದರಿಂದ ಕುದ್ರು ಪ್ರದೇಶಗಳಲ್ಲಿ ನೆರೆ ಹೆಚ್ಚಿದ್ದು ಅಲ್ಲಿನ ಜನರ ಓಡಾಟಕ್ಕೆ ಅನುಕೂಲವಾಗುವಂತೆ ಸರಕಾರದಿಂದ ಒಂದು ಬೋಟ್ ವ್ಯವಸ್ಥೆ ಮಾಡಲಾಗುತ್ತದೆ. ಜಿಲ್ಲಾಧಿಕಾರಿಗಳ ತುರ್ತು ಪರಿಹಾರನಿಧಿ ಖಾತೆಯಲ್ಲಿ ಸುಮಾರು 5 ಕೋಟಿ ಹಣವಿದೆ. ಮನೆ ಹಾನಿ, ಪ್ರಾಣಹಾನಿ ಹಾಗೂ ಜಾನುವಾರು ನಷ್ಟಕ್ಕೆ ತಕ್ಷಣ ಪರಿಹಾರ ನೀಡಲು ಸರಕಾರ ಆದೇಶ ನೀಡಿದ್ದು ಅದರಂತೆಯೇ ಜಿಲ್ಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೂ ಸೂಚಿಸಲಾಗಿದೆ. ಪ್ರವಾಹ ಸ್ಥಿತಿ ಎದುರಿಸಿ ಜನರಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ಉಡುಪಿ ಜಿಲ್ಲಾಡಳಿತ ಕಾರ್ಯಪ್ರವೃತ್ತವಾಗಿದೆ, ಆತಂಕ ಬೇಡ ಎಂದರು. ಈ ಮಧ್ಯೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವಿಳಂಬದಿಂದಾಗಿ ಕೃತಕ ನೆರೆ ಸೃಷ್ಟಿಯಾಗುತ್ತಿರುವ ಕುಂದಾಪುರ ಬಸ್ರೂರು ಭಾಗದಲ್ಲಿ ಸಮಸ್ಯೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಆ.09ರ ಭಾನುವಾರ 282 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 86, ಉಡುಪಿ ತಾಲೂಕಿನ 152 ಹಾಗೂ ಕಾರ್ಕಳ ತಾಲೂಕಿನ 43 ಮಂದಿಗೆ ಪಾಸಿಟಿವ್ ಬಂದಿದೆ. ಓರ್ವ ವ್ಯಕ್ತಿ ಬೇರೆ ಜಿಲ್ಲೆಯವರಾಗಿದ್ದಾರೆ. ಒಟ್ಟು ಪ್ರಕರಣಗಳಲ್ಲಿ 77 ಸಿಂಥಮೇಟಿವ್ ಹಾಗೂ 205 ಅಸಿಂಥಮೆಟಿಕ್ ಪ್ರಕರಣಗಳಲ್ಲಿದ್ದು, 147 ಪುರುಷರು, 135 ಮಹಿಳೆಯರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಇಂದು 48 ಮಂದಿ ಆಸ್ಪತ್ರೆಯಿಂದ ಹಾಗೂ 49 ಮಂದಿ ಹೋಮ್ ಐಸೋಲೇಶನ್’ನಿಂದ ಬಿಡುಗಡೆಗೊಂಡಿದ್ದಾರೆ. ಒಟ್ಟು ಪ್ರಕರಣಗಳಲ್ಲಿ ಪ್ರಾಥಮಿಕ ಸಂಪರ್ಕದಿಂದ 132, ILI 69 ಪ್ರಕರಣ, ಸಾರಿ 6 ಪ್ರಕರಣವಿದ್ದು, 66 ಪ್ರಕರಣದ ಮೂಲ ಪತ್ತೆಹಚ್ಚಲಾಗುತ್ತಿದೆ. 6 ಮಂದಿ ಬೇರೆ ರಾಜ್ಯ ಹಾಗೂ 3 ಮಂದಿ ವಿದೇಶ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. 1,343 ನೆಗೆಟಿವ್: ಈ ತನಕ ಒಟ್ಟು 44824 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 37325 ನೆಗೆಟಿವ್, 6201 ಪಾಸಿಟಿವ್ ಬಂದಿದ್ದು, 1298 ಮಂದಿಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ನದಿಗಳು ತುಂಬಿ ಹರಿಯುತ್ತಿದೆ. ತಾಲೂಕಿನ ಸೌಪರ್ಣಿಕಾ, ವಾರಾಹಿ, ಚಕ್ರಾ ಸೇರಿದಂತೆ ಪಂಚಗಂಗಾವಳಿ ನದಿಗಳು ಹಾಗೂ ಉಪನದಿಗಳು ತುಂಬಿ ಹರಿಯುತ್ತಿದ್ದು, ನಾವುಂದದ ಸಾಲ್ಬುಡ ಸೇರಿದಂತೆ ಕೆಲವೆಡೆ ತಗ್ಗು ಪ್ರದೇಶಗಳು ನೆರೆಯಿಂದ ಆವರಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ನಗರ ಭಾಗದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಅವ್ಯವಸ್ಥೆಯ ಆಗರವಾಗಿದ್ದು ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಸ್ರೂರು ಮೂರುಕೈನಿಂದ ವಿನಾಯಕ ಟಾಕೀಸ್ ತನಕ ಕೃತಕ ನೆರೆ ಸೃಷ್ಟಿಯಾಗಿದ್ದಲ್ಲದೇ, ಕಿಲೋ ಮೀಟರ್ ಉದ್ದಕ್ಕೂ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಯಿತು. ಈ ಭಾಗದಲ್ಲಿ ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಮಾಡಿಕೊಡದಿರುವುದರಿಂದ ಮಳೆಗಾಲ ಆರಂಭವಾದಾಗಲಿಂದಲೂ ಕೃತಕ ನೆರೆ ಸೃಷ್ಟಿಯಗಿದ್ದು, ವಾಹನ ಸವಾರರು ನಿತ್ಯ ಯಾತನೆ ಅನುಭವಿಸುವಂತಾಗಿತ್ತು. ಬೆಳಿಗ್ಗೆಯಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ಸಂಚಾರ ಕಷ್ಟಸಾಧ್ಯವಾಗಿ ಕಿಲೋಮೀಟರ್ ಉದ್ದಕ್ಕೂ ಜಾಮ್ ಉಂಟಾಗಿತ್ತು. ಇದೇ ವೇಳೆಯಲ್ಲಿ ಕುಂದಾಪುರದಲ್ಲಿ ಕಾರ್ಯಕ್ರಮ ಮುಗಿಸಿ ಹಿಂದಿರುಗುತ್ತಿದ್ದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಕಾರನ್ನು ತಡೆದ ಸಾರ್ವಜನಿಕರು, ಅವ್ಯವಸ್ಥೆಯ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸಚಿವರು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿ ತೆರಳಿದ್ದು, ಸಂಜೆಯ ವೇಳೆಗೆ ತಾತ್ಕಾಲಿಕವಾಗಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡಿಕೊಡಲಾಗಿದೆ. ಈ ಸಂದರ್ಭ ರಾಷ್ಟ್ರೀಯ ಹೆದ್ದಾರಿ ಹೋರಾಟ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೇಂದ್ರ ಸರಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ರಚಿಸಲ್ಪಟ್ಟಿರುವ “ಪ್ರಧಾನಮಂತ್ರಿ ಜನಕಲ್ಯಾಣಕಾರಿ ಯೋಜನೆ ಪ್ರಚಾರ ಪ್ರಸಾರ ಅಭಿಯಾನದ ಮಹಿಳಾ ವಿಭಾಗ ಅಧ್ಯಕ್ಷರಾಗಿ ಅಕ್ಷತಾ ಗಿರೀಶ್ ಆಯ್ಕೆಯಾಗಿದ್ದಾರೆ. ಅಕ್ಷತಾ ಅವರು ಪತ್ರಕರ್ತೆಯಾಗಿ, ಟಿ.ವಿ. ನಿರೂಪಕರಾಗಿ, ವ್ಯಕ್ತಿತ್ವ ವಿಕಸನ ತರಬೇತುದಾರರಾಗಿ ಸಕ್ರೀಯರಾಗಿದ್ದು, ಜೆಸಿಐ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮೂಲಕ, ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟಿಸಿದ ಕೀರ್ತಿ ಹೊಂದಿದ್ದಾರೆ. ಮಹಿಳಾ ವಿಭಾಗದ ಸಂಘಟನಾ ಕಾರ್ಯದರ್ಶಿ ಲಕ್ಷೀ ಪಿ., ಎಸ್ ಸಹ ಕಾರ್ಯದರ್ಶಿ ಕಸ್ತೂರಿ ಆಚಾರ್ಯ ಆಯ್ಕೆಯಾಗಿದ್ದಾರೆ. ಪ್ರಧಾನಮಂತ್ರಿ ಜನಕಲ್ಯಾಣಕಾರಿ ಯೋಜನೆ ಪ್ರಚಾರ ಪ್ರಸಾರ ಅಭಿಯಾನದ ಉಡುಪಿ ಜಿಲ್ಲಾಧ್ಯಕ್ಷರಾಗಿ ಮನ್ ಸುಖ್ ಲಾಲ್ ಜೆ. ಪಟೇಲ್, ಸಂಘಟನಾ ಕಾರ್ಯದರ್ಶಿ ನಟೇಶ್ ವೈ ಆರ್. ಉಡುಪಿ, ಸಹ ಕಾರ್ಯದರ್ಶಿ ಮೋಹನ್ ಭಟ್, ಯುವ ವಿಭಾಗ ಅಧ್ಯಕ್ಷರಾಗಿ ರಘುನಾಥ ಜೆ. ಆಚಾರ್ಯ, ಸಂಘಟನಾಕಾರ್ಯದರ್ಶಿ ಅಶೋಕ್ ಕಿಣಿ, ಗ್ರಾಮ ವಿಕಾಸ ಅಧ್ಯಕ್ಷರಾಗಿ ಮಕರಂದ ಪಡುಬಿದ್ರಿ, ಸಂಘಟನಾ ಕಾರ್ಯದರ್ಶಿ ವಿಜಯಕುಮಾರ್ ಶೆಟ್ಟಿ, ಕಾನೂನು ವಿಭಾಗ ದಿನೇಶ್ ಸಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಆ.08ರ ಶನಿವಾರ 314 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 87, ಉಡುಪಿ ತಾಲೂಕಿನ 192 ಹಾಗೂ ಕಾರ್ಕಳ ತಾಲೂಕಿನ 30 ಮಂದಿಗೆ ಪಾಸಿಟಿವ್ ಬಂದಿದೆ. 5 ಮಂದಿ ಬೇರೆ ಜಿಲ್ಲೆಯವರಾಗಿದ್ದಾರೆ. ಒಟ್ಟು ಪ್ರಕರಣಗಳಲ್ಲಿ 88 ಸಿಂಥಮೇಟಿವ್ ಹಾಗೂ 226 ಅಸಿಂಥಮೆಟಿಕ್ ಪ್ರಕರಣಗಳಲ್ಲಿದ್ದು, 164 ಪುರುಷರು, 150 ಮಹಿಳೆಯರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಇಂದು 59 ಮಂದಿ ಆಸ್ಪತ್ರೆಯಿಂದ ಹಾಗೂ 30 ಮಂದಿ ಹೋಮ್ ಐಸೋಲೇಶನ್’ನಿಂದ ಬಿಡುಗಡೆಗೊಂಡಿದ್ದಾರೆ. ಕುಂದಾಪುರ ತಾಲೂಕಿನ 56 ವರ್ಷದ ವ್ಯಕ್ತಿ, ಉಡುಪಿ ತಾಲೂಕಿನ 76, 65, 77 ಹಾಗೂ 50 ವರ್ಷದ ನಾಲ್ವರು ವ್ಯಕ್ತಿಗಳು ಸೇರಿ ಒಟ್ಟು ಇಂದು 5 ಮಂದಿ ಮೃತಪಟ್ಟಿದ್ದಾರೆ. 1,379 ನೆಗೆಟಿವ್: ಈ ತನಕ ಒಟ್ಟು 43441 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 35982 ನೆಗೆಟಿವ್, 5919 ಪಾಸಿಟಿವ್ ಬಂದಿದ್ದು, 1540 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಆ.07ರ ಶುಕ್ರವಾರ 245 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 92, ಉಡುಪಿ ತಾಲೂಕಿನ 125 ಹಾಗೂ ಕಾರ್ಕಳ ತಾಲೂಕಿನ 25 ಮಂದಿಗೆ ಪಾಸಿಟಿವ್ ಬಂದಿದೆ. 3 ಮಂದಿ ಬೇರೆ ಜಿಲ್ಲೆಯವರಾಗಿದ್ದಾರೆ. ಒಟ್ಟು ಪ್ರಕರಣಗಳಲ್ಲಿ 70 ಸಿಂಥಮೇಟಿವ್ ಹಾಗೂ 175 ಅಸಿಂಥಮೆಟಿಕ್ ಪ್ರಕರಣಗಳಲ್ಲಿದ್ದು, 125 ಪುರುಷರು, 120 ಮಹಿಳೆಯರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಇಂದು 57 ಮಂದಿ ಆಸ್ಪತ್ರೆಯಿಂದ ಹಾಗೂ 44 ಮಂದಿ ಹೋಮ್ ಐಸೋಲೇಶನ್’ನಿಂದ ಬಿಡುಗಡೆಗೊಂಡಿದ್ದಾರೆ. ಕುಂದಾಪುರ ತಾಲೂಕಿನ 75, 70 ಹಾಗೂ 65 ವರ್ಷದ ವ್ಯಕ್ತಿಗಳು, ಉಡುಪಿ ತಾಲೂಕಿನ 78 ವರ್ಷದ ವ್ಯಕ್ತಿ ಹಾಗೂ ಕಾರ್ಕಳ ತಾಲೂಕಿನ 49 ವರ್ಷದ ವ್ಯಕ್ತಿ ಸೇರಿ ಒಟ್ಟು ಇಂದು 5 ಮಂದಿ ಮೃತಪಟ್ಟಿದ್ದಾರೆ. 1148 ನೆಗೆಟಿವ್: ಈ ತನಕ ಒಟ್ಟು 41411 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 34603 ನೆಗೆಟಿವ್, 5605 ಪಾಸಿಟಿವ್ ಬಂದಿದ್ದು, 1203 ಮಂದಿಯ ವರದಿ…

Read More