ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಡಾ. ಬಿ. ಬಿ. ಹೆಗ್ಡೆ ಕಾಲೇಜಿನಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮಹಿಳಾ ಸಬಲೀಕರಣ ಘಟಕ ಹಾಗೂ ಜೇಸಿರೆಟ್ ವಿಂಗ್ ಆಫ್ ಜೆಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯನ್ನು ಸನ್ಮಾನಿಸಲಾಯಿತು. ಡಾ. ಶ್ರಾವ್ಯ (ಸಮಾಜಸೇವೆ), ಮಮತಾ ಆರ್. ಶೆಟ್ಟಿ ಹದ್ದೂರು (ಕೃಷಿ), ಲಿರಾ ಜೂಲಿಯೇಟ್ (ವ್ಯಾವಹಾರಿಕ), ಡಾ. ಸರೋಜಿನಿ (ಶಿಕ್ಷಣ), ನಿವೇದಿತಾ ತೃತೀಯ ಬಿ.ಕಾಂ. (ಕ್ರೀಡೆ), ಶುಭಲಕ್ಷ್ಮೀ, ದ್ವಿತೀಯ ಬಿ.ಬಿ.ಎ. (ಶಿಕ್ಷಣ) ಇವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ, ಜೇಸಿ ಅಕ್ಷತಾ ಶೆಟ್ಟಿ ನಿರ್ದೇಶಕರು, ಜೇಸಿರೆಟ್ ವಿಭಾಗ, ಜೇಸಿ ಆಯಿಷಾ ಫೈಜಾ, ವಲಯ ಸಂಯೋಜಕರು, ವಿಜಯ ಭಂಡಾರಿ, ಅಧ್ಯಕ್ಷರು ಜೆಸಿಐ ಕುಂದಾಪುರ ಸಿಟಿ, ಉಪಾಧ್ಯಕ್ಷ ಅಭಿಲಾಷ್, ಪ್ರಶಾಂತ್ ಹವಾಲ್ದಾರ್, ವಲಯಾಧಿಕಾರಿ ಜೆಸಿಐ ಕುಂದಾಪುರ ಸಿಟಿ, ಜೆಸಿಐ ಕುಂದಾಪುರ ಸಿಟಿಯ ನಿಕಟಪೂರ್ವ ಅಧ್ಯಕ್ಷರಾದ ರೇಖಾ,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ಲೆಕ್ಕಾಪರಿಶೋಧನೆ ಸರಿಯಾಗಿಲ್ಲ. ಮುಜರಾಯಿ ಇಲಾಖೆಯಡಿ ಬಡುವ ದೇವಾಯಲಗಳ ಆರ್ಥಿಕ ಸ್ಥಿತಿ ಒಂದೇ ಸಾಲಿನಲ್ಲಿದೆ. ಮಹಾಸಂಗವು ಇತರ ಮುಜರಾಯಿ ದೇವಾಲಯದ ಆರ್ಥಿಕ ಅವ್ಯವಹಾರವನ್ನು ಒಂದೊಂದಾಗಿ ಬಹಿರಂಗಪಡಿಸುತ್ತದೆ. ಕೊಲ್ಲೂರು ಕರ್ನಾಟಕದ ಎರಡನೇ ಅತಿ ದೊಡ್ಡ ಆದಾಯ ಗಳಿಸುವ ದೇವಾಲಯವಾಗಿದೆ ಎಂದು ಮಹಾಸಂಘದ ವಕ್ತಾರ ಗುರುಪ್ರಸಾದ್ ಗೌಡ ಆರೋಪ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಕೊಲ್ಲೂರು ದೇವಾಲಯದಲ್ಲಿ ಆರ್ಥಿಕ ಅವ್ಯವಹಾರ ನಡೆಯುತ್ತಿದೆ ಎಂದು ಹೇಳಿದರು. 2018-19ನೇ ಸಾಲಿನಲ್ಲಿ ಜಿಲ್ಲಾ ಆಯುಕ್ತರ ಮನೆಯ 23,363 ರೂ. ದೂರವಾಣಿ ಬಿಲ್ ಅನ್ನು ದೇವಾಲಯ ಸಮಿತಿಯೇ ಪಾವತಿಸಿದೆ. ಕೆಲವು ಸರ್ಕಾರಿ ನೌಕರರ ವೇತನವನ್ನು ದೇವಾಲಯದಿಂದಲೂ ನೀಡಲಾಗುತ್ತದೆ. ದೇವಾಲಯದ ಲೆಕ್ಕಪರಿಶೋಧನೆ ಸರಿಯಿಲ್ಲ. 20 ಕೋಟಿಗೂ ಅಧಿಕ ಆರ್ಥಿಕ ಅವ್ಯವಹಾರ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈಗ ಮಹಾಸಂಘವು ಪೊಲೀಸ್ ಇಲಾಖೆಯಿಂದ ನ್ಯಾಯಯುತ ತನಿಖೆ ನಡೆಸಬೇಕೆಂದು ಒತ್ತಾಯಿಸುತ್ತಿದೆ. ”ಹಣಕಾಸಿನ ದುರುಪಯೋಗವು 2016 ರಲ್ಲಿ ಬೆಳಕಿಗೆ ಬಂದಿದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಒಬ್ಬ ಮನುಷ್ಯನಿಗೆ ಕಾವ್ಯದ ಅಧ್ಯಯನ ತುಂಬಾ ಮುಖ್ಯ. ವಿವಿಧ ಕ್ಷೇತ್ರಗಳಲ್ಲಿ ಪರಿಣತರಾಗಿ ನಾಡು ಕಟ್ಟಲು ಸಾಹಿತ್ಯದ ಅರಿವು ಅವಶ್ಯ. ಒಂದು ಉತ್ತಮ ಸಾಹಿತ್ಯ ನಮ್ಮ ಬದುಕು ಹೇಗೆ ಇರಬೇಕೆಂದು ಹೇಳುತ್ತದೆ. ಕುವೆಂಪುರವರ ಸಾಹಿತ್ಯ ಕೃತಿಗಳು ಮನುಜನಾಗಲಿ ಅಥವಾ ಯಾವುದೇ ಜೀವಿಗಳಾಗಲಿ ಎಲ್ಲರೂ ಸಮಾನರೆಂಬ ತತ್ವವನ್ನು ಸಾರುತ್ತವೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಸ. ಚಿ ರಮೇಶ್ ಹೇಳಿದರು. ಕುಪ್ಪಳಿಯ ಕುವೆಂಪು ಕನ್ನಡ ಕೇಂದ್ರ, ಕನ್ನಡ ವಿಶ್ವವಿದ್ಯಾಲಯ, ಹಂಪಿ ಹಾಗೂ ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಕುವೆಂಪು ಕಾವ್ಯ: ಅನುಸಂಧಾನದ ನೆಲೆಗಳು’ ಕುರಿತ ಎರಡು ದಿನಗಳ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕುವೆಂಪು ಸಾಹಿತ್ಯ ಕೃತಿಗಳನ್ನು ವಿಶ್ಲೇಷಿಸಿದ ಅವರು, ‘ಸಾಲದ ಮಗು’, ‘ಧನ್ವಂತರಿ’ ಕ್ರಮವಾಗಿ ಜೀತ ಹಾಗೂ ರೈತಾಪಿ ವರ್ಗದ ಮೇಲೆ ಬೆಳಕು ಚೆಲ್ಲಿದರೆ ಅವರ ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ ಸುಬ್ಬಮ್ಮ ಅಂದಿನ ಸಾಮಾಜಿಕ ವ್ಯವಸ್ಥೆಗಳನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿವೆ. ಜೊತೆಗೆ ಸಮಾನತೆಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಅಜ್ಜರಕಾಡು ಕ್ರೀಡಾಂಗ ಣದಲ್ಲಿ ಮಾರ್ಚ್ 17ರಿಂದ ನಡೆಯುವ ಭಾರತೀಯ ಸೇನಾ ನೇಮಕಾತಿ ರ‍್ಯಾಲಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು. ಕಚೇರಿಯಲ್ಲಿ ಸೇನಾ ನೇಮಕಾತಿ ರ್ಯಾಲಿ ಕುರಿತು ಸೇನಾ ನೇಮಕಾತಿ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ಅಭ್ಯರ್ಥಿಗಳಿಗೆ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆಯನ್ನು ನಗರಸಭೆ ನೋಡಿಕೊಳ್ಳುತ್ತಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕ್ರೀಡಾಂಗಣದಲ್ಲಿ ತುರ್ತು ಚಿಕಿತ್ಸೆಗೆ ಆಂಬುಲೆನ್ಸ್ ಹಾಗೂ ವೈದ್ಯಕೀಯ ಸಿಬ್ಬಂದಿ ಹಾಗೂ ಅಂಕಪಟ್ಟಿಗಳ ಪರಿಶೀಲನೆಗೆ ಶಿಕ್ಷಣ ಇಲಾಖೆಯ 20 ಸಿಬ್ಬಂದಿ ನಿಯೋಜಿಸಲಾಗಿದೆ. ಅಗತ್ಯವಿದ್ದಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು. ರ‍್ಯಾಲಿಯಲ್ಲಿ ಪ್ರತಿದಿನ 3,000 ಅಭ್ಯರ್ಥಿಗಳು ಬರಲಿದ್ದು, ನೂಕು ನುಗ್ಗಲು ತಪ್ಪಿಸಲು, ರ‍್ಯಾಲಿ ಸುಗಮವಾಗಿ ನಡೆಯಲು ಸೂಕ್ತ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು. ಕ್ರೀಡಾಂಗಣಕ್ಕೆ ನಿರಂತರ ವಿದ್ಯುತ್ ಮತ್ತು ವೇಗದ ಇಂಟರ್ನೆಟ್ ಸೌಲಭ್ಯ ಒದಗಿಸಲಾಗುವುದು ಎಂದು ಡಿಸಿ ಹೇಳಿದರು. ಜಿಲ್ಲೆಯಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜು ಕುಂದಾಪುರ ಇದರ ಜಂಟಿ ಆಶ್ರಯದಲ್ಲಿ ಕುಂದಾಪುರ ತಾಲೂಕು ಮಟ್ಟದ ಕ್ರಿಕೆಟ್(ಲೆದರ್ ಬಾಲ್) ಪಂದ್ಯಾಟದಲ್ಲಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಸೆಮಿಫೈನಲ್‌ನಲ್ಲಿ ಡಾ. ಬಿ.ಬಿ.ಹೆಗ್ಡೆ ಕಾಲೇಜನ್ನು ಸೋಲಿಸಿ ಫೈನಲ್ ಪ್ರವೇಶಿಸಿದ ತಂಡ ಫೈನಲ್‌ನಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ವಿರುದ್ದ ಜಯ ಸಾಧಿಸಿ ಪ್ರಥಮ ಸ್ಥಾನಿಯಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ತೃತೀಯ ಬಿ.ಕಾಂ ನ ಮಹಮ್ಮದ್ ಹಯಾಝ್ ಪಂದ್ಯಶ್ರೇಷ್ಠನಾಗಿ ಆಯ್ಕೆಯಾದರು, ಸಂಸ್ಥೆಯ ಅಧ್ಯಕ್ಷರಾದ ಕೆ.ಎಮ್ ಅಬ್ದುಲ್ ರೆಹಮಾನ್ , ನಿರ್ದೇಶಕರಾದ ದೋಮ ಚಂದ್ರಶೇಖರ್ ಹಾಗೂ ಪ್ರಾಂಶುಪಾಲರಾದ ಡಾ. ಶಮೀರ್ ಉಪಸ್ಥಿತರಿದ್ದರು. ಮಹಮ್ಮದ್ ಇಲಿಯಾಸ್ ಹಾಗೂ ವೀಣಾ ಅಗೇರ್ ತಂಡವನ್ನು ತರಬೇತುಗೊಳಿಸಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಷ್ಟ್ರಮಟ್ಟದಲ್ಲಿ ಜರುಗಿದ 2021ನೇ ಸಾಲಿನ ಜೆಇಇ ಮೈನ್ಸ್ ಸ್ಪರ್ಧಾತ್ಮಕ ಪರೀಕ್ಷೆಯಲಿ ಕುಂದಾಪುರ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಾದ ಕಶಿಶ್ ಕೆ.ಸಿ., ತಿಲಕ್ ಚಂದ್ರ ಶಾಸ್ತ್ರೀ, ಸಂಧ್ಯಾ, ನಿಧಿ, ಶ್ರೇಯಾ, ಶ್ರೀವತ್ಸ ಕಾಮತ್, ಸ್ವಸ್ತಿಕ್ ಎಂ. ಭಂಡಾರಿ, ರಶ್ಮಿ, ರಕ್ಷಿತಾ, ಸತ್ವಿಕ್ ಎ ಶೆಟ್ಟಿ, ಶಶಾಂಕ್ ಎ. ಶೇಟ್, ಮಂಜುಶಾ ಭಾಸ್ಕರ್ ಶೆಟ್ಟಿ, ಸಿಂಚನ ಎಸ್., ಅಚಿಂತ್ಯ ಉಪಾಧ್ಯಾಯ, ಶ್ರೀನಿಧಿ ಉಡುಪಾ ಇವರುಗಳು ಕಾಲೇಜಿನಲ್ಲಿ ಲಭ್ಯವಿರುವ ಜೆಇಇ ಕೋಚಿಂಗ್ ನ ಸದುಪಯೋಗವನ್ನು ಪಡೆದುಕೊಂಡು ಉತ್ತೀರ್ಣರಾಗಿದ್ದಾರೆ. ಉತ್ತಮ ಫಲಿತಾಂಶ ಪಡೆದಿರುವ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕವೃಂದ ಅಭಿನಂದಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ದೇವಾಡಿಗರ ಸಮಾಜ ಸೇವಾ ಸಂಘ ಇದರ ಕಛೇರಿ ಕಟ್ಟಡಕ್ಕೆ ಶಿಲಾನ್ಯಾಸ ಇತ್ತೀಚೆಗೆ ನಡೆಯಿತು. ಮುಂಬೈ ಉದ್ಯಮಿ ಸುರೇಶ ಡಿ ಪಡುಕೋಣೆ ಶಿಲಾನ್ಯಾಸ ನೆರವೇರಿಸಿದರು ಈ ಸಂದರ್ಭದಲ್ಲಿ ಮುಖ್ಯ ಅಥಿತಿಗಳಾಗಿ ಸಾಪ್ಟ್‌ವೇರ್ ಇಂಜಿನಿಯರ್ ಗಣೇಶ ದೇವಾಡಿಗ, ಸಂಸ್ಥೆಯ ಅಧ್ಯಕ್ಷರಾದ ನಾಗರಾಜ ರಾಯಪ್ಪನ ಮಠ, ಗೌರವಾಧ್ಯಕ್ಷರಾದ ಚಂದ್ರಶೇಖರ ದೇವಾಡಿಗ, ಉಪಾಧ್ಯಕ್ಷರಾದ ರಾಜಾ ದೇವಾಡಿಗ, ಕರುಣಾಕರ ಬಳ್ಕೂರು, ಕಾರ್ಯದರ್ಶಿ ಉದಯ ಹೇರಿಕೇರಿ, ಕೋಶಾಧಿಕಾರಿ ಆನಂದ ಕೆ ಎನ್, ಮಾಜಿ ಅಧ್ಯಕ್ಷರಾದ ದತ್ತಾತ್ರೇಯ ದೇವಾಡಿಗ, ನಾರಾಯಣ ದೇವಾಡಿಗ, ದಿನೇಶ ದೇವಾಡಿಗ ಪ್ರಮುಖರಾದ ನಿತ್ಯಾನಂದ ಸುರಭಿ, ಕೃಷ್ಣ ಭಟ್ರಹಾಡಿ, ಗಿರಿಜ, ರಾಮ ದೇವಾಡಿಗ, ಕೃಷ್ಣ ದೇವಾಡಿಗ, ಜಯರಾಮ ದೇವಾಡಿಗ ಮುಂತಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದರೆ: ಆಳ್ವಾಸ್ ಕಾಲೇಜಿನ ವುಮೆನ್ ಡೆವಲಪ್‌ಮೆಂಟ್ ಸೆಲ್ ವತಿಯಿಂದ ಮಹಿಳಾ ದಿನಾಚರಣೆಯ ಅಂಗವಾಗಿ ನಡೆಯುತ್ತಿರುವ ‘ಮಹಿ-2021’ ಮಹಿಳಾ ಸಪ್ತಾಹದಲ್ಲಿ ಮಹಿಳಾ ಆರೋಗ್ಯದ ಕುರಿತು ಅತಿಥಿ ಉಪನ್ಯಾಸ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಆಳ್ವಾಸ್ ನ್ಯಾಚುರೋಪತಿ ಕಾಲೇಜಿನ ಉಪನ್ಯಾಸಕಿ ಡಾ.ಸ್ವಾತಿ ಪಿ.ಎಸ್., ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಪಿಸಿಒಸ್ (ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್) ಬಗ್ಗೆ ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು. ಹುಡುಗಿಯರು ತಮ್ಮ ದೇಹದ ಆರೋಗ್ಯ ಹಾಗೂ ಋತುಚಕ್ರದ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕು. ಪಿಸಿಒಎಸ್ ಸಮಸ್ಯೆ ಇರುವ ಮಹಿಳೆಯರ ಹಾರ್ಮೋನ್ ಸ್ರವಿಕೆಯಲ್ಲಿ ಏರಿಳಿತಗಳಿದ್ದು ಅದು ಸಮಸ್ಯೆಗಳನ್ನು ಸೃಷ್ಟಿಸಬಹುದು. ಇಂತಹ ಸಂದರ್ಭಗಳಲ್ಲಿ ಹುಡುಗಿಯರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದ ಅವರು ಪಿಸಿಒಎಸ್‌ನ ಲಕ್ಷಣಗಳನ್ನು ವಿವರಿಸಿದರು. ಪಿಸಿಒಎಸ್‌ನಂತಹ ಸಮಸ್ಯೆಗಳುಂಟಾದಾಗ ವಹಿಸಬೇಕಾದ ಎಚ್ಚರಿಕೆಯ ಕ್ರಮಗಳ ಬಗ್ಗೆ ಹೇಳಿದ ಅವರು ಮಹಿಳಾ ಆರೋಗ್ಯದ ಪಂಚತಂತ್ರಗಳನ್ನು ವಿವರಿಸಿದರು. ದಿನನಿತ್ಯ ಯೋಗ-ವ್ಯಾಯಾಮ-ಧ್ಯಾನ, ಪ್ರಾರ್ಥನೆ, ನಿಯಮಿತ ನೀರು ಸೇವನೆ, ನಿಗದಿತ ಆಹಾರ ಹಾಗೂ ವಾರದಲ್ಲೊಂದು ದಿನ ಉಪವಾಸ ದೇಹಾರೋಗ್ಯವನ್ನು ಸರಿಯಾಗಿಡಲು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಹೇರಂಜಾಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ತಾಯಂದಿರ ಪಾದ ಪೂಜೆ ನೆರವೇರಿಸುವ ಮೂಲಕ ವಿಶಿಷ್ಠವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಮಹಾಬಲೇಶ್ವರ ಐತಾಳ್, ಗ್ರಾ.ಪಂ. ಸದಸ್ಯೆ ಜಲಜಾಕ್ಷಿ ಗಾಣಿಗ, ಎಸ್ ಡಿಎಂಸಿ ಅಧ್ಯಕ್ಷ ಅರುಣ್ ಕುಮಾರ ಹೆಬ್ಬಾರ್, ಶಾಲಾ ಮುಖ್ಯ ಶಿಕ್ಷಕ ಜಯಾನಂದ ಪಟಗಾರ್, ಶಿಕ್ಷಕಿ ಗೀತಾ, ಗೌರವ ಶಿಕ್ಷಕಿಯರಾದ ಸುಮನಾ, ಚೈತನ್ಯ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿಜ್ಞಾನ ವೇದಿಕೆ ಆಶ್ರಯದಲ್ಲಿ ‘ರಾಷ್ಟ್ರೀಯ ವಿಜ್ಞಾನ ದಿನ – ತರಂಗ 2k21’ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಣಿಪಾಲ ರೋಟರಿ, ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್3182 RC ಅಸಿಸ್‌ಟೆಂಟ್ ಗವರ್ನರ್ ಡಾ. ಬಾಲಕೃಷ್ಣ ಮದ್ದೋಡಿ, ರಾಷ್ಟ್ರೀಯ ವಿಜ್ಞಾನ ದಿನದ ಮಹತ್ವವನ್ನು ವಿವರಿಸಿದರು, ಜೊತೆಗೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ. ದಶರಥರಾಜ್ ಕೆ. ಶೆಟ್ಟಿ, ಅಸೋಸಿಯೇಟ್ ಪ್ರೊಫೆಸರ್, ಎಂ.ಐ.ಟಿ., ಮಣಿಪಾಲ ಇವರು ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ, ಸಿ.ವಿ. ರಾಮನ್ ಕುರಿತು ಹಲವಾರು ವಿಚಾರಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ, ರಾಷ್ಟ್ರೀಯ ವಿಜ್ಞಾನ ದಿನದ ಆಚರಣೆಗೆ ಶುಭಹಾರೈಸಿ, ಅನ್ವೇಷಣೆ ಬಗ್ಗೆ ವಿವರಿಸಿದರು. ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ, ಕಾರ್ಯಕ್ರಮದ ಸಂಯೋಜಕರಾದ ವನಿತಾ ಜಿ., ಉಪಸ್ಥಿತರಿದ್ದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಚೈತ್ರಾ ಸ್ವಾಗತಿಸಿ, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ…
