Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಯುವಕ ಮಂಡಲಗಳ ನಿರಂತರ ಚಟುವಟಿಕೆ ನಡೆಸುತ್ತಾ ಸಮಾಜದ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಸಮಾಜದ ಕಟ್ಟಕಡೆಯ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಗಂಗೊಳ್ಳಿಯ ಡಾ. ಬಿ. ಆರ್. ಯುವಕ ಮಂಡಲ, ಅಮೃತ ಯುವತಿ ಮಂಡಲ ಮತ್ತು ಅರ್ಚನಾ ಮಹಿಳಾ ಮಂಡಲಗಳು ಈ ನಿಟ್ಟಿನಲ್ಲಿ ಪರಿಸರದಲ್ಲಿ ಉತ್ತಮ ಕಾರ್ಯಚಟುವಟಿಕೆ ನಡೆಸುತ್ತಿರುವುದು ಶ್ಲಾಘನೀಯ. ಡಾ.ಅಂಬೇಡ್ಕರ್ ಅವರ ಆದರ್ಶ, ಧ್ಯೇಯೋದ್ದೇಶಗಳನ್ನು ಅಳವಡಿಸಿಕೊಂಡು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವಂತಾಗಲಿ ಎಂದು ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಹೇಳಿದರು. ಗಂಗೊಳ್ಳಿ ಮೇಲ್‌ಗಂಗೊಳ್ಳಿಯ ಪೋರ್ಟ್ ಬಂಗ್ಲೆ ಮೈದಾನದಲ್ಲಿ ಬುಧವಾರ ಜರಗಿದ ಮೇಲ್‌ಗಂಗೊಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಮಂಡಲದ ೩೪ನೇ ವಾರ್ಷಿಕೋತ್ಸವ, ಅಮೃತ ಯುವತಿ ಮಂಡಲ ಮತ್ತು ಅರ್ಚನಾ ಮಹಿಳಾ ಮಂಡಲದ ೨೮ನೇ ವಾರ್ಷಿಕೋತ್ಸವ ಹಾಗೂ ಡಾ.ಬಿ.ಆರ್.ಅಂಬೇಡ್ಕರ್‌ರವರ ೧೩೦ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗಂಗೊಳ್ಳಿ ಟಔನ್ ಸೌಹಾರ್ದ ಸಹಕಾರಿಯ ನಿರ್ದೇಶಕ ಬಿ.ರಾಘವೇಂದ್ರ ಪೈ ಶುಭಾಶಂಸನೆಗೈದರು. ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತ ದೈಹಿಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಆಲೂರು ಕಳಿಯ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯ ‘ಚಿತ್ರಕೂಟ ಹೊಸ ಉತ್ಪನ್ನವಾದ ‘ಪೋಷಕ್’ ಮತ್ತು ‘ರಿಲಾಕ್ಸ್ ಟೀ’ ಎ.16ರಂದು ಮಾರುಕಟ್ಟೆಗೆ ಬಿಡುಗಡೆಗೊಳ್ಳಲಿದೆ. ಬೈಂದೂರು ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ ಹಾಗೂ ಮಾರಣಕಟ್ಟೆ ಸುಬ್ರಹ್ಮಣ್ಯ ಮಂಜ ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಅಧ್ಯಕ್ಷ ಎಂ. ಕೃಷ್ಣಮೂರ್ತಿ ಮಂಜ ಅವರು ಬಿಡುಗಡೆ ಮಾಡಲಿದ್ದಾರೆ ಎಂದು ಚಿತ್ರಕೂಟದ ಡಾ. ರಾಜೇಶ್ ಬಾಯರಿ ಹಾಗೂ ಅನುಲೇಖಾ ರಾಜೇಶ್ ಬಾಯರಿ ತಿಳಿಸಿದ್ದಾರೆ. ಚಿತ್ರಕೂಟ ಪೋಷಕ್: ನೈಸರ್ಗಿಕ ಸಿರಿಧಾನ್ಯಗಳು, ಬಹುಧಾನ್ಯಗಳು ಹಾಗೂ ಗಿಡಮೂಲಿಕೆಗಳನ್ನು ಸೇರಿಸಿ ತಾಯಾರಿಸಿದ ಉತ್ಪನ್ನವೇ ‘ಚಿತ್ರಕೂಟ ಪೋಷಕ್. 3ವರ್ಷ ಮೇಲ್ಪಟ್ಟ ಎಲ್ಲಾ ವಯಸ್ಸಿನವರನ್ನು ಗಮನದಲ್ಲಿರಿಸಿಕೊಂಡು ಈ (ಆಹಾರ) ಉತ್ಪನ್ನವನ್ನು ತಯಾರಿಸಲಾಗಿದೆ. ಗಿಡಮೂಲಿಕೆ ಹಾಗೂ ನಾನಾ ರೀತಿಯ ಧಾನ್ಯಗಳನ್ನು ಬಳಸಿ ತಯಾರಿಸಿದ್ದರಿಂದ ಜನರ ಆರೋಗ್ಯ ಮತ್ತು ರೋಗ ನಿರೋಧಕ ಶಕ್ತಿಗೆ ಪರಿಣಾಮಕಾರಿಯಾಗಿದೆ. ಇದು ದೇಹದ ಮಾಸ್ ಇಂಡೆಕ್ಸ್ನ್ನು ಕಾಪಾಡಲಿದೆ. ಅಕಾಲಿಕ ಮುಪ್ಪಿನ ನಿಯಂತ್ರಣಕ್ಕೆ, ದೇಹದ ಅಂಗಾಂಶಗಳ ಪುನಶ್ಚೇತನಕ್ಕೆ, ಥೈರಾಯ್ಡ್ ಸಮಸ್ಯೆಗಳ ನಿವಾರಣೆಗೆ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್‌ರವರ 130ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶುಭದಾ ಎಜುಕೇಶನಲ್ ಟ್ರಸ್ಟ್ ರಿ. ನಾವುಂದ ಇದರ ಸದಸ್ಯರಾದ ಆರ್. ಕೆ ಬಿಲ್ಲವ, ನಾವೆಲ್ಲರೂ ಅಂಬೇಡ್ಕರ್‌ರವರ ಆದರ್ಶವನ್ನು ಪಾಲಿಸಿ ಸಂವಿಧಾನಕ್ಕೆ ಗೌರವ ನೀಡಬೇಕು ಎಂದರು. ಮುಖ್ಯ ಶಿಕ್ಷಕ ರವಿದಾಸ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು .ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಸಿದರು. ಶಿಕ್ಷಕ ರಾಘವೇಂದ್ರ ಬಿಲ್ಲವ ಎಲ್ಲರನ್ನೂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ, ಹತ್ತು ವರ್ಷಗಳಿಂದ ಕುಂಟುತ್ತಾ ಸಾಗಿ ಬಂದು ಇನ್ನೇನು ಮುಗಿಯುವ ಹಂತದಲ್ಲಿದ್ದು, ಹೆದ್ದಾರಿ ಹೋರಾಟ ಸಮಿತಿ ಮತ್ತು ಸಾರ್ವಜನಿಕರ ಒತ್ತಡಕ್ಕೆ ಮಣಿದು ಮೇಲ್ಸೇತುವೆ ಮತ್ತು ಬಸ್ರೂರು ಮೂರುಕೈ ಎಂಬ್ಯಾಕ್ಮೆಂಟ್ ಕಾಮಗಾರಿಯನ್ನು ತರಾತುರಿಯಲ್ಲಿ ಮುಗಿಸುವ ಲಕ್ಷಣ ಗೋಚರಿಸುತ್ತಿದೆ. ಉಳಿದಂತೆ, ಅಸಮರ್ಪಕ ಸರ್ವಿಸ್ ರಸ್ತೆಗಳು, ಹೆದ್ದಾರಿ ಮತ್ತು ಸರ್ವಿಸ್ ರಸ್ತೆಯಲ್ಲಿ ಅಲ್ಲಲ್ಲಿ ನೀರು ನಿಲ್ಲುವುದು, ಚರಂಡಿಯಲ್ಲಿ ನೀರು ಹರಿಯದೆ ಕೃತಕ ಕೆರೆಯಾಗುವುದು ಹೀಗೆ ಹತ್ತಾರು ತೊಂದರೆಗಳನ್ನು ಸಾರ್ವಜನಿಕರಿಗೆ ಕೊಡುಗೆಯಾಗಿ ನೀಡುತ್ತಾ ಬಂದಿರುವ ನವಯುಗ ಕಂಪೆನಿ ಇಲ್ಲಿಂದ ಕಾಲ್ಕೀಳುವ ಹುನ್ನಾರ ನಡೆಸುತ್ತಿದೆ ಇದರ ಬಗ್ಗೆ ಸಾರ್ವಜನಿಕರು ತಕ್ಷಣವೇ ಜಾಗೃತರಾಗಬೇಕಾಗಿದೆ. ಎಪ್ರಿಲ್ 17ರಂದು ಸಂಜೆ 4.00ಕ್ಕೆ ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿ ಇರುವ ಆರ್. ಎನ್. ಶೆಟ್ಟಿ ಕಲ್ಯಾಣ ಭವನದಲ್ಲಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಜಾಗೃತಿ ಸಮಿತಿಯವರು ಈ ಕುರಿತು ಸಾರ್ವಜನಿಕರೊಂದಿಗೆ ಚರ್ಚಿಸಲು ಸಭೆ ಕರೆದಿದ್ದು, ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯವನ್ನು ತಿಳಿಸಬೇಕು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಪ್ಪತ್ತೋಂದನೇ ವರ್ಷದ ಸಂಭ್ರಮದಲ್ಲಿರುವ ಬೈಂದೂರಿನ ಕಲಾ ಸಂಸ್ಥೆ ಸುರಭಿ ಆಶ್ರಯದಲ್ಲಿ ಎ.18ರಿಂದ ಮೂರು ದಿನಗಳ ಕಾಲ ಸುರಭಿ ಜೈಸಿರಿ ಕಾರ್ಯಕ್ರಮ ಹಾಗೂ ಬಿಂದುಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಪ್ರತಿದಿನ ಸಂಜೆ 6ಕ್ಕೆ ಇಲ್ಲಿನ ಶಾರದಾ ವೇದಿಕೆಯಲ್ಲಿ ಜರುಗಲಿದೆ. ವಿವಿಧ ಕ್ಷೇತ್ರದ ಸಾಧಕರಿಗೆ ಪ್ರತಿವರ್ಷ ಕೊಡಮಾಡುತ್ತಿರುವ ಬಿಂದಶ್ರೀ ಪ್ರಶಸ್ತಿಗೆ ಈ ಭಾರಿ ತುಳುನಾಡಿನ ಪ್ರಸಿದ್ಧ ಪಾಡ್ಡನ ಕವಿ ಹಾಗೂ ಗಾಯಕಿ ಆಯ್ಕೆಯಾಗಿದ್ದು ಎ.20 ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು ಹತ್ತು ಸಾವಿರ ರೂ. ನಗದು ಚಿನ್ನದ ಪದಕ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಎಪ್ರಿಲ್18ರಂದು ಸುರಭಿ ಜೈಸಿರಿಯನ್ನು ಶ್ರೀ ವರಲಕ್ಷ್ಮೀ ಚಾರೀಟೇಬಲ್ ಟ್ರಸ್ಟ್ನ ಮ್ಯಾನೆಜಿಂಗ್ ಡೈರೆಕ್ಟರ್ ಗೋವಿಂದ ಪೂಜಾರಿ ಉದ್ಘಾಟಿಸಲಿದ್ದು, ಶ್ರೀ ರಾಮ ಸೌಹಾರ್ದ ಕ್ರಡಿಟ್ ಕೋ- ಆಪರೇಟಿವ್್ನಿ ಅಧ್ಯಕ್ಷ ಎಸ್. ರಾಜು ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಲಾಕ್ಷೇತ್ರ ಕುಂದಾಪುರ ಅದ್ಯಕ್ಷರಾದ ಬಿ. ಕಿಶೋರ ಕುಮಾರ್ ದಿಕ್ಸೂಚಿ ಬಾಷಣ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಬೈಂದೂರು ತಾಲೂಕು ಪಂಚಾಯತ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಡಾ. ಬಿ. ಆರ್. ಅಂಬೇಡ್ಕರ್ ಅವರು ದೀನ ದಲಿತರ ಏಳಿಗೆಗಾಗಿ ಅವಿರತ ಶ್ರಮಿಸಿದ್ದರು. ಇಡೀ ಜಗತ್ತಿನ ಶ್ರೇಷ್ಠವಾದ ನಮ್ಮ ದೇಶದ ಸಂವಿಧಾನವನ್ನು ಅನುಷ್ಠಾನಗೊಳಿಸಿ ಸಮಾಜದಲ್ಲಿ ಸಮಾನತೆಗಾಗಿ ಹೋರಾಟ ನಡೆಸಿದ್ದರು. ಅಸ್ಪ್ರಶ್ಯತೆ, ಅಸಮಾನತೆ ವಿರುದ್ಧ ಹೋರಾಡಿ ಪರಿಶಿಷ್ಟ ಜಾತಿ, ಪ.ಪಂಗಡದವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದರು ಎಂದು ನಿವೃತ್ತ ಮುಖ್ಯೋಪಾಧ್ಯಾಯ ಮುಡೂರ ಅಂಬಾಗಿಲು ಹೇಳಿದರು. ಗಂಗೊಳ್ಳಿಯ ಇಂದುಧರ ಯುವಕ ಮಂಡಲ ಇದರ ಆಶ್ರಯದಲ್ಲಿ ಗಂಗೊಳ್ಳಿಯ ಶ್ರೀ ಇಂದುಧರ ಸಭಾಭವನದಲ್ಲಿ ಇಂದು ಆಯೋಜಿಸಲಾಗಿದ್ದ ಡಾ. ಬಿ. ಆರ್. ಅಂಬೇಡ್ಕರ್‌ರವರ 130ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಶುಭ ಹಾರೈಸಿದರು. ಪತ್ರಕರ್ತ ಬಿ.ರಾಘವೇಂದ್ರ ಪೈ ಮತ್ತು ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಬಿ.ಲಕ್ಷ್ಮೀಕಾಂತ ಮಡಿವಾಳ ಶುಭಾಶಂಸನೆಗೈದರು. ಇದೇ ಸಂದರ್ಭ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಸಮೀಕ್ಷಾ ನಾಯಕವಾಡಿ, ರಾಜ್ಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಆದಿದ್ರಾವಿಡ ಸೇವಾ ಸಂಘದ ವತಿಯಿಂದ ಡಾ. ಬಿ. ಆರ್. ಅಂಬೇಡ್ಕರ್ ರವರ 130ನೇ ಜನ್ಮದಿನಾಚರಣೆಯ ಅಂಗವಾಗಿ ನರ್ಸು ಹಾಗೂ ಭಗವಾನ್ ದಾಸ್ರವರ ಸ್ಮರಣಾರ್ಥ ಅವರ ಮಗ ವಿ. ಗಣೇಶ್ ಇವರಿಂದ 28ನೇ ವರ್ಷದ ಹಣ್ಣು- ಹಂಪಲು ವಿತರಣಾ ಕಾರ್ಯಕ್ರಮ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಇಂದು ನಡೆಯಿತು. ಕುಂದಾಪುರದ ಠಾಣಾಧಿಕಾರಿ ಸದಾಶಿವ ಗವರೋಜಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಹೆಮ್ಮಾಡಿ ಗ್ರಾಮ ಪಂಚಾಯತ್ನ ಅಧ್ಯಕ್ಷರಾದ ಯು. ಸತ್ಯನಾರಾಯಣ ರಾವ್, ವೈದ್ಯರಾದ ವೀಣಾ ಶಂಕರ್, ನರ್ಸ್ ಜಯ ಡಿಸೋಜಾ, ಅನ್ನಪೂರ್ಣ, ಮೃತರ ಹಿತೈಷಿಗಳಾದ ಮಿಥುನ್, ವಿನಯ್ ಕುಮಾರ್,ಮುತ್ತ, ಮಂಜುನಾಥ್, ಪ್ರದೀಪ್ ಕೆಎಸ್, ಗಂಗಾಧರ್ ಬಿಹೆಚ್ಎಂ, ಶಶಿಧರ್ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಕರಾವಳಿಯ ಅಸಂಖ್ಯ ಮೀನುಗಾರರ ಜೀವನಾಧಾರ. ಅದರಲ್ಲಿನ ಅವರ ಕಠಿಣ ದುಡಿಮೆ ಮತ್ತು ಅನಿಶ್ಚಿತ ಬದುಕನ್ನು ಮನಗಂಡ ಸರ್ಕಾರಗಳು ಅವರಿಗೆ ವಿವಿಧ ನೆರವು ನೀಡುತ್ತ ಬಂದಿದ್ದರೆ, ಪ್ರಸಕ್ತ ಬಿಜೆಪಿ ಸರ್ಕಾರ ಅವುಗಳನ್ನು ಒಂದೊಂದಾಗಿ ಕೈಬಿಡುವ ಮೂಲಕ ಅವರ ಜೀವನದೊಂದಿಗೆ ಚೆಲ್ಲಾಟ ಆಡುತ್ತಿದೆ ಎಂದು ಬೈಂದೂರು ಬ್ಲಾಕ್ ಕಾಂಗ್ರೆಸ್ ಮೀನುಗಾರಿಕಾ ಸಮಿತಿ ಅಧ್ಯಕ್ಷ ನಾಗೇಶ ಖಾರ್ವಿ ಆರೋಪಿಸಿದ್ದಾರೆ. ಹಿಂದಿನ ಸರ್ಕಾರಗಳು ನಾಡದೋಣಿ ಮೀನುಗಾರಿಕೆಗೆ ರಿಯಾಯಿತಿ ದರದಲ್ಲಿ ನೀಡುತ್ತಿದ್ದ ಸೀಮೆ ಎಣ್ಣೆ ಮೀನುಗಾರಿಕಾ ಎಂಜಿನ್ ಮತ್ತು ಅಗತ್ಯ ಸಲಕರಣೆಗಳ ಖರೀದಿಗೆ ನೀಡುತ್ತಿದ್ದ ಸಬ್ಸಿಡಿಯಿಂದ ಉಡುಪಿ ಜಿಲ್ಲೆಯ 4760 ದೋಣಿಗಳನ್ನು ಅವಲಂಬಿಸಿರುವ ಮೀನುಗಾರ ಕುಟುಂಬಗಳಿಗೆ ಅನುಕೂಲವಾಗುತ್ತಿತ್ತು. ಬಿಜೆಪಿ ಸರ್ಕಾರ ಇದನ್ನು ಹಂತಹಂತವಾಗಿ ನಿಲ್ಲಿಸಿರುವುದರಿಂದ ಮೀನುಗಾರರು ಕಂಗಾಲಾಗಿದ್ದಾರೆ. ಹಿಂದಿನ ಕಾಂಗ್ರೆಸ್ ಸರ್ಕಾರವು ಮೀನುಗಾರ ಮಹಿಳೆಯರಿಗೆ ಮೀನು ವ್ಯಾಪಾರದ ಮೂಲಕ ಸ್ವಾವಲಂಬಿಗಳಾಗಲು ಶೇ 4ರ ಬಡ್ಡಿ ದರದಲ್ಲಿ ನೀಡುತ್ತಿದ್ದ ರೂ 50 ಸಾವಿರದಿಂದ ಒಂದು ಲಕ್ಷದ ವರೆಗೆ ಸಾಲವನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ದೇಶದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮಾನತೆ ಮೂಡಿಸುವ ಉದ್ದೇಶದಿಂದ ಹಲವು ವಿಷಯಗಳನ್ನು ಸಂವಿಧಾನದಲ್ಲಿ ಅಳವಡಿಸುವುದರ ಜೊತೆಗೆ ಪ್ರಜಾಪ್ರಭುತ್ವದ ಬಲವರ್ದನೆಗೆ ಅವರು ನೀಡಿರುವ ಸಲಹೆಗಳ ಕಾರಣದಿಂದ ದೇಶದ ಜನತೆ ಅಂಬೇಡ್ಕರ್ ಅವರನ್ನು ಪ್ರತೀ ದಿನ ನೆನೆಯಬೇಕು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು. ಅವರು ಬುಧವಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಸಮಾಜಕಲ್ಯಾಣ ಇಲಾಖೆ ಹಾಗೂ ಪ.ಜಾತಿ ಮತ್ತು ಪ.ವರ್ಗಗಳ ಸಂಘಟನೆಗಳು ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ , ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ, ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಅರ್. ಅಂಬೇಡ್ಕರ್ ಅವರ 130 ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಜಾಪ್ರಭುತ್ವದ ಬಲವರ್ಧನೆಗೆ ಸಂವಿಧಾನದ ಮೂಲಕ ಅಂಬೇಡ್ಕರ್ ನೀಡಿರುವ ಪ್ರತಿಯೊಂದು ಸಲಹೆಗಳೂ ಅತ್ಯಮೂಲ್ಯವಾಗಿದ್ದು, ಭಾರತದ ಸಂವಿಧಾನವು ದೇಶದ ಎಲ್ಲಾ ವರ್ಗದ ನಾಗರೀಕರ ಶ್ರೇಯೋಭಿವೃದ್ದಿಯ ಉದ್ದೇಶ ಹೊಂದಿದ್ದು, ವೈವಿಧ್ಯಮಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಕಷ್ಟಸುಖಗಳನ್ನು ಸಮಾನವಾಗಿ ಸ್ವೀಕರಿಸಿ ಎಂಬ ಸಂದೇಶವನ್ನು ಸಾರುವ ಯುಗಾದಿ ಹಬ್ಬವನ್ನು ದೇಶದೆಲ್ಲೆಡೆ ವಿಶಿಷ್ಟವಾಗಿ ವಿಭಿನ್ನವಾಗಿ ಆಚರಿಸಿ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸುತ್ತಾರೆ. ಹಿಂದು ಧರ್ಮದಲ್ಲಿ ಪ್ರತಿಯೊಂದು ಆಚರಣೆಗಳು, ಹಬ್ಬ ಹರಿದಿನಗಳು ಸಾಂಪ್ರದಾಯಿಕ ದೈವಿಕ ಹಿನ್ನಲೆ ಹೊಂದಿದೆ ಎಂದು ಅಂಗನವಾಡಿ ಕಾರ್ಯಕರ್ತೆ ರೇಖಾ ಕೃಷ್ಣ ಖಾರ್ವಿ ಹೇಳಿದರು. ಇಂದುಶ್ರೀ ಮಹಿಳಾ ಸಂಘ ಗಂಗೊಳ್ಳಿ ಇವರ ಆಶ್ರಯದಲ್ಲಿ ಗಂಗೊಳ್ಳಿಯ ಶ್ರೀ ಇಂದುಧರ ಸಭಾಭವನದಲಿ ಜರಗಿದ ಬೇವು-ಬೆಲ್ಲ ಯುಗಾದಿ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎ ಒಕ್ಕೂಟದ ಅಧ್ಯಕ್ಷೆ ಸುಮಿತ್ರಾಜಿ., ಸಂಘದ ಅಧ್ಯಕ್ಷೆ ಸುಶೀಲಾ ಜಿ.ಟಿ., ಗಂಗೊಳ್ಳಿ ಗ್ರಾಪಂ ಮಾಜಿ ಸದಸ್ಯೆ ಜಯಂತಿ ಜಿ.ಟಿ., ನೇತ್ರಾವತಿ, ಗಂಗಾ ಜಿ.ಟಿ., ಸರೋಜ ಜಿ.ಟಿ., ರುದ್ರಮ್ಮ, ಗಿರಿಜಾ, ಕುಸುಮಾ, ವಸಂತಿ ಎನ್., ಪೂರ್ಣಿಮಾ, ಗಂಗಾ ಮತ್ತು ನೇತ್ರಾವತಿ ಉಪಸ್ಥಿತರಿದ್ದರು. ಸುಶೀಲ ಜಿ.ಟಿ. ಸ್ವಾಗತಿಸಿದರು. ಕಾರ್ಯದರ್ಶಿ ನಾಗಿಣಿ ಕಾರ್ಯಕ್ರಮ ನಿರೂಪಿಸಿದರು. ಕೀರ್ತಿ ಜಿ.ಟಿ.…

Read More