ಕಾರಿಕಟ್ಟೆ ಪ್ರದೀಪ್ ಕುಮಾರ್ ಶೆಟ್ಟಿ ಅವರಿಗೆ ಯುವ ಜೇಸಿ ಪ್ರಶಸ್ತಿ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಉಪ್ಪುಂದ ಜೇಸಿಐ ವತಿಯಿಂದ ಇಲ್ಲಿನ ಹೋಟೆಲ್ ಅಂಬಿಕಾ ಇಂಟರ್ ನ್ಯಾಷನಲ್ ನಡೆದ ವಲಯಾಧ್ಯಕ್ಷರ ಭೇಟಿಯ ಕಾರ್ಯಕ್ರಮದಲ್ಲಿ 2017ನೇ ಸಾಲಿನಲ್ಲಿ ಜೆಸಿಐಗೆ ಪಾದಾರ್ಪಣೆ ಮಾಡಿ ಜೇಸಿಐ ಉಪ್ಪುಂದದ ಕಾರ್ಯದರ್ಶಿಯಾಗಿ ಅತೀ ಕಡಿಮೆ ಅವಧಿಯಲ್ಲಿ ಜೇಸಿಐನ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ 2021ನೇ ಸಾಲಿನಲ್ಲಿ ಜೇಸಿಐ ಉಪ್ಪುಂದದ ಹೆಸರನ್ನು ರಾಷ್ಟ್ರಮಟ್ಟದಲ್ಲಿ ರಾರಾಜಿಸುವಂತೆ ಮಾಡಿ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆಯವರಿಗೆ 2021ನೇ ಸಾಲಿನ ಯುವ ಪ್ರಶಸ್ತಿಯನ್ನು ವಲಯಾಧ್ಯಕ್ಷೆ ಸೌಜನ್ಯಾ ಹೆಗ್ಡೆಯವರು ಪ್ರದಾನಿಸಿದರು.

Call us

Click Here

ಈ ಸಂದರ್ಭದಲ್ಲಿ ಜೇಸಿಐ ಉಪ್ಪುಂದದ ಅಧ್ಯಕ್ಷರಾದ ಪುರುಷೋತ್ತಮದಾಸ್, ಕಾರ್ತಿಕೇಯ ಮದ್ಯಸ್ಥ, ದೀಪಕ್ ಗಂಗೂಲಿ ವಲಯಾಧಿಕಾರಿ, ಪ್ರೋಗ್ರಾಂ ಡೈರೆಕ್ಟರ್ ಅಬ್ದುಲ್ ಜಬ್ಬಾರ್ ಸಾಹೇಬ್, ಸುಬ್ರಮಣ್ಯ ಜಿ. ಪೂರ್ವಾದ್ಯಕ್ಷರಾದ ಸೆನೆಟರ್. ಯು. ಪ್ರಕಾಶ್ ಭಟ್, ಮಂಗೇಶ್ ಶ್ಯಾನ್ ಭಾಗ್, ಕಾರ್ಯಕ್ರಮದ ನಿರ್ದೇಶಕರಾದ ಪುರಂದರ ಖಾರ್ವಿ, ಕಾರ್ಯದರ್ಶಿ ಸಂದೀಪ್ ನಾಯಕ್, ಜೇಸಿರೇಟ್ ಅಧ್ಯಕ್ಷೆ ರಮಾದೇವಿ ಮೊದಲಾದವರು ಉಪಸ್ಥಿತರಿದ್ದರು

Leave a Reply