ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಜೂ.16ರ ಮಂಗಳವಾರ ಒಟ್ಟು 7 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಈ ಪೈಕಿ ನಾಲ್ವರು ಪುರುಷರು, ಓರ್ವ ಮಹಿಳೆ ಹಾಗೂ ಇಬ್ಬರು ಮಕ್ಕಳಿಗೆ ಪಾಸಿಟಿವ್ ದೃಢವಾಗಿದೆ. ಎಲ್ಲರೂ ಮಹಾರಾಷ್ಟ್ರದಿಂದ ಹಿಂದಿರುಗಿದವರಾಗಿದ್ದಾರೆ. ಜಿಲ್ಲೆಯಲ್ಲಿ ಸದ್ಯ ಒಟ್ಟು 1035 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 885 ಮಂದಿ ಬಿಡುಗಡೆಯಾಗಿದ್ದು, 149 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ► ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಮೇಲ್ದರ್ಜೆಗೆ ಕ್ರಮ: ಜಿಲ್ಲಾಧಿಕಾರಿ ಜಿ. ಜಗದೀಶ್ – https://kundapraa.com/?p=38663 . ► ಬೆಂಗಳೂರಿನಿಂದ ಕೋಟೇಶ್ವರಕ್ಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 25ವರ್ಷದ ಟೆಕ್ಕಿ ಸಾವು – https://kundapraa.com/?p=38668 . ► ಉಡುಪಿ ಜಿಲ್ಲೆ: ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲಿದ್ದಾರೆ 14,034 ಮಂದಿ ವಿದ್ಯಾರ್ಥಿಗಳು – https://kundapraa.com/?p=38652 .
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕೊರೊನಾ ಮಹಾಮಾರಿಯಿಂದ ಜನರು ತತ್ತರಿಸಿರುವ ಸಂದರ್ಭ ಆಶಾ ಕಾರ್ಯಕರ್ತರು ತಮಗೆ ಸಿಗುವ ಕನಿಷ್ಠ ಸಂಭಾವನೆಯನ್ನು ಗಣನೆಗೆ ತೆದುಕೊಳ್ಳದೆ ಸಮಾಜದ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಸೋಂಕು ತಗಲುವ ಭೀತಿಯಿಂದ ಜನರು ಮನೆಗಳಿಂದ ಹೊರಬರಲು ಅಂಜುತ್ತಿರುವ ಸನ್ನಿವೇಶದಲ್ಲಿ ಅವರು ಮನೆಮನೆಗೆ ತೆರಳಿ ತಮಗೆ ಒಪ್ಪಿಸಿದ ಕರ್ತವ್ಯ ನೆರವೇರಿಸುತ್ತಿದ್ದಾರೆ. ಅವರ ಈ ಕೊಡುಗೆಯನ್ನು ಸಮಾಜ ಬಹುಕಾಲ ಸ್ಮರಿಸಲಿದೆ ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು. ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ರೈತಸಿರಿ ಸಭಾಭವನದಲ್ಲಿ ಮಂಗಳವಾರ ತಾಲ್ಲೂಕಿನ ಆಶಾ ಕಾರ್ಯಕರ್ತರಿಗೆ ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ವತಿಯಂದ ನಂದಿನಿ ಉತ್ಪನ್ನಗಳ ಕಿಟ್ ವಿತರಿಸಿ ಮಾತನಾಡಿದರು. ಕೊರೊನಾ ಕಾಟ ಇನ್ನೂ ಕೆಲಕಾಲ ಇರಲಿದೆ. ಆಶಾ ಕಾರ್ಯಕರ್ತರ ಇದೇ ತೆರನಾದ ಸೇವೆ ಮುಂದೆಯೂ ಅಗತ್ಯ ಇದೆ. ಅವರಿಗೆ ದೊರೆಯುತ್ತಿರುವ ಸೇವಾ ಸೌಲಭ್ಯಗಳನ್ನು ಸುಧಾರಿಸುವ ನಿಟ್ಟಿನಲ್ಲಿ ತಾವು ಶ್ರಮಿಸುವುದಾಗಿ ಭರವಸೆ ನೀಡಿದ ಸುಕುಮಾರ ಶೆಟ್ಟಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೇಂದ್ರ ಸರ್ಕಾರ ಮೀನುಗಾರರಿಗೆ ಇಪ್ಪತ್ತು ಸಾವಿರ ಕೋಟಿ ಹಣ ತೆಗೆದಿಡುವ ಮೂಲಕ ಅತ್ಯುತ್ತಮ ಕೊಡುಗೆ ನೀಡಿದ್ದು, ಇದರಲ್ಲಿ ಮೂರುವರೆಯಿಂದ ನಾಲ್ಕು ಸಾವಿರ ಕೋಟಿ ಹಣ ರಾಜ್ಯಕ್ಕೆ ಬರಲಿದೆ. ಈ ಅನುದಾನದ ಮೂಲಕ ಕಾರವಾರದಿಂದ ಉಳ್ಳಾಲದ ತನಕ 320 ಕಿಮೀ ವ್ಯಾಪ್ತಿಯಲ್ಲಿ ಕಡಲು ಮೀನುಗಾರಿಕೆ ಹಾಗೂ ಬೇರೆ ರೀತಿಯ ಮೀನುಗಾರಿಕೆ ಹೇಗೆ ಅಭಿವೃದ್ಧಿ ಮಾಡಬಹುದು ಎನ್ನುವ ಬಗ್ಗೆ ಯೋಜನೆ ತಯಾರಿಸಲಾಗುತ್ತಿದೆ ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಮಂಗಳವಾರ ಕುಂದಾಪುರ ಮಿನಿ ವಿಧಾನಸೌಧ ವೀಡಿಯೋ ಕಾನ್ಪರೆನ್ಸ್ ಹಾಲ್ನಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಒಳನಾಡಲ್ಲಿ 30 ರಿಂದ 40 ಸಾವಿರ ಕೆರೆಗಳಿದ್ದು, ಅವುಗಳ ಅಭಿವೃದ್ಧಿ ಪಡಿಸಿ, ಕಡು ಬಡವರಿಗೆ ರೈತರಿಗೆ ಕೊಡುವಂತೆ ಕಿಸಾನ್ ಕಾರ್ಡ್ ನೀಡಿ, ಮೀನು ಸಾಕಣಿಕೆಗೆ ಉತ್ತೇಜನ ನೀಡುವ ಬಗ್ಗೆಯೂ ಸಮಾಲೋಚನೆ ನಡೆಸಲಾಗುತ್ತದೆ ಎಂದು ಹೇಳಿದರು. ಕರಾವಳಿಯಲ್ಲಿ ಮೀನುಗಾರರಿಗೆ ಹಾಗೂ ಮೀನುಗಾರಿಕೆ ಮೂಲಕ ಬದುಕು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಲಾಕ್ಡೌನ್ ಸಂತ್ರಸ್ಥರ ಪರಿಹಾರಕ್ಕಾಗಿ ಆಗ್ರಹಿಸಿ, ಕರೋನ ತಡೆಗಟ್ಟುವಲ್ಲಿ ಕೇಂದ್ರ ಸರ್ಕಾರದ ವೈಪಲ್ಯವನ್ನು ಖಂಡಿಸಿ ಮಂಗಳವಾರ ಕುಂದಾಪುರದಲ್ಲಿ ಸಿಪಿಐ(ಎಂ) ಕುಂದಾಪುರ ವಲಯ ಸಮಿತಿಯಿಂದ ಕಾರ್ಮಿಕ ಭವನದ ಬಳಿ ಹಾಗೂ ಬೈಂದೂರು ವಲಯ ಸಮಿತಿಯಿಂದ ಬೈಂದೂರು ಸಿಪಿಐ(ಎಂ) ಕಛೇರಿ ಬಳಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಆದಾಯ ತೆರಿಗೆ ಪಾವತಿದಾರರನ್ನು ಹೊರತುಪಡಿಸಿ ಎಲ್ಲಾ ದುಡಿಯುವ ವರ್ಗವರಿಗೆ ಮಾಸಿಕ ರೂ.7,500 ರಂತೆ ಕೊರೋನಾ ಪರಿಹಾರ ಒದಗಿಸಿಕೊಡಬೇಕು, ಪ್ರತಿಯೊಬ್ಬರಿಗೂ ಹೆಚ್ಚುವರಿ ರೇಷನ್ ರೇಷನ್ ಹಾಗೂ ನರೇಗಾ ಕೂಲಿ ಕಾರ್ಮಿಕರಿಗೆ 200 ದಿನಗಳ ಕೆಲಸ ನೀಡುವಂತೆ ಆಗ್ರಹಿಸಲಾಯಿತು. ಕುಂದಾಪುರದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಿಪಿಐ(ಎಂ) ಕಾರ್ಯದರ್ಶಿ ಎಚ್. ನರಸಿಂಹ, ಬೈಂದೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ವಲಯ ಸಮಿತಿ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿದರು. ಪ್ರತ್ಯೇಕ ಪ್ರತಿಭಟನೆಯಲ್ಲಿ ರಾಜ್ಯ ಮುಖಂಡರಾದ ಕೆ. ಶಂಕರ್, ಮಹಾಬಲ ವಡೇರಹೋಬಳಿ, ವೆಂಕಟೇಶ ಕೋಣಿ, ರಾಜೀವ ಪಡುಕೋಣೆ, ನಾಗರತ್ನ ನಾಡ, ಗಣೇಶ್ ತೊಂಡೆಮಕ್ಕಿ ಮೊದಲಾದವರು ಭಾಗವಹಿಸಿದ್ದರು. ಇದನ್ನೂ ಓದಿ: ► ಬೆಂಗಳೂರಿನಿಂದ ಕೋಟೇಶ್ವರಕ್ಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಜ್ವರ ಶೀತ ಕೆಮ್ಮು ರೋಗಿಗಳಿಗೆ ವೈದ್ಯರ ಸಲಹಾ ಚೀಟಿಯಿಲ್ಲದೇ ಯಾವುದೇ ಮೆಡಿಕಲ್ ಶಾಪ್ ಗಳಲ್ಲಿ ಔಷಧ ವಿತರಿಸದಂತೆ ಈಗಾಗಲೇ ಸೂಚಿಸಲಾಗಿದ್ದು, ವೈದ್ಯರ ಚೀಟಿಯಿಲ್ಲದೇ ಮಾರಾಟ ಮಾಡಿದಲ್ಲಿ ಅಂತಹವರ ಮೇಲೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ. ಜಿಲ್ಲೆಯ ಎಲ್ಲಾ ಮೆಡಿಕಲ್ ಶಾಪ್ ಗಳು ಪ್ರತಿದಿನ ತಮ್ಮಲ್ಲಿ ಮಾರಾಟವಾದ ಔಷಧಗಳ ವಿವರ ನೀಡುವಂತೆ ಸೂಚನೆ ನೀಡಲಾಗಿದ್ದು, ಹಲವು ಮೆಡಿಕಲ್ ಶಾಪ್ ಗಳು ಪ್ರತಿದಿನ ವರದಿ ನೀಡದೇ ಇರುವುದು ಗಮನಕ್ಕೆ ಬಂದದ್ದು , ಎಲ್ಲರೂ ಕಡ್ಡಾಯವಾಗಿ ಪ್ರತಿದಿನದ ವರದಿ ನೀಡುವಂತೆ , ಇಲ್ಲವಾದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸೂಚಿಸಿದ್ದಾರೆ. ಇದನ್ನೂ ಓದಿ: ► ಬೆಂಗಳೂರಿನಿಂದ ಕೋಟೇಶ್ವರಕ್ಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 25ವರ್ಷದ ಟೆಕ್ಕಿ ಸಾವು – https://kundapraa.com/?p=38668 . ► ಉಡುಪಿ ಜಿಲ್ಲೆ: ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲಿದ್ದಾರೆ 14,034 ಮಂದಿ ವಿದ್ಯಾರ್ಥಿಗಳು – https://kundapraa.com/?p=38652 . ► ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಮೇಲ್ದರ್ಜೆಗೆ ಕ್ರಮ: ಜಿಲ್ಲಾಧಿಕಾರಿ ಜಿ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟೇಶ್ವರ: ಬೆಂಗಳೂರಿನಿಂದ ಕೋಟೇಶ್ವರಕ್ಕೆ ಪ್ರಯಾಣಿಸುತ್ತಿದ್ದ ಟೆಕ್ಕಿಯೋರ್ವ ಖಾಸಗಿ ಬಸ್ಸಿನಲ್ಲಿ ಮೃತರಾದ ಬಗ್ಗೆ ಘಟನೆ ನಡೆದಿದೆ. ಕುಂಬ್ರಿಯ ವಿಷ್ಣುಮೂರ್ತಿ ಎಂಬುವವರ ಮಗ ಚೈತನ್ಯ (25) ಮೃತ ದುರ್ದೈವಿ. ಚೈತನ್ಯ ಜೂ.15 ರಂದು ರಾತ್ರಿ 09 ಗಂಟೆಗೆ ಖಾಸಗಿ ಬಸ್ಸಿನಲ್ಲಿ ಕೋಟೇಶ್ವರಕ್ಕೆ ಹೊರಟಿದ್ದರು. ಜೂ.16 ಬೆಳಿಗ್ಗೆ 06:30ರ ಸುಮಾರಿಗೆ ತಂದೆ ವಿಷ್ಣುಮೂರ್ತಿ ಅವರಿಗೆ ಕರೆಮಾಡಿಬಸ್ಸು ಬಾರ್ಕೂರುನಲ್ಲಿ ಇರುವುದಾಗಿ ತಿಳಿಸಿದ್ದರು. ಆ ನಂತರ ಆತ ಅಸ್ವಸ್ಥಗೊಂಡಿರುವ ಬಗ್ಗೆ ತಿಳಿದುಬಂದಿದ್ದು, ಕೂಡಲೇ ಕುಂದಾಪುರ ಸರಕಾರಿ ಆಸ್ಪತ್ರೆಗೆ ಬಳಿಕ ವಿನಯಾ ಆಸ್ಪತ್ರಗೆ ಕರೆದೊಯ್ಯಲಾಗಿತ್ತು. ಅಷ್ಟರಲ್ಲಿ ಆತ ಮೃತಪಟ್ಟಿರುವುದನ್ನು ವೈದ್ಯರು ಖಚಿಪಡಿಸಿದ್ದಾರೆ. ಚೈತನ್ಯ ಹೃದಯಾಘಾತದಿಂದ ಅಥವಾ ಇತರ ಯಾವುದೋ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿರುವ ಬಗ್ಗೆ ಶಂಕಿಸಲಾಗಿದ್ದು, ಕೋವಿಡ್-19 & ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮಣಿಪಾಲಕ್ಕೆ ಕೊಂಡೊಯ್ಯಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೂಲತಃ ಬ್ರಹ್ಮಾವರದವರಾದ ಚೈತನ್ಯ ಕಳೆದೆರಡು ವರ್ಷಗಳಿಂದ ಬೆಂಗಳೂರು ಮಾರತಹಳ್ಳಿಯ ಖಾಸಗಿ ಕಂಪೆನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ದುಡಿಯುತ್ತಿದ್ದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಜಿಲ್ಲಾಡಳಿತದಿಂದ ಅಗತ್ಯ ಸಹಕಾರ ಮತ್ತು ಹಣ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ , ಜಿಲ್ಲೆಯ ಕೋವಿಡ್-19 ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತೆಗಳು ಮೇಲ್ದರ್ಜೆಗೆ ಏರಿಸಲು ಅಗತ್ಯವಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡುವಂತೆ ತಿಳಿಸಿರುವ ಜಿಲ್ಲಾಧಿಕಾರಿ ಜಿ.ಜಗದೀಶ್, ಕುಂದಾಪುರದ ಡಾ. ಜಿ. ಶಂಕರ್ ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್ ಆಸ್ಪತ್ರೆ ಮಾಡಲು ನಿರ್ಧರಿಸಲಾಗಿದ್ದು, ಈಗಾಗಲೇ ಎಸ್.ಬಿ.ಐ ನಿಂದ 4 ಮತ್ತು ಇನ್ಪೋಸಿಸ್ ನಿಂದ 3 ವೆಂಟಿಲೇಟರ್ ಗಳ ಸರಬರಾಜು ಆಗಿದ್ದು, ಅವುಗಳ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ,ಅಲ್ಲದೇ ಕನಿಷ್ಠ 40 ಬೆಡ್ ಗಳ ಆಕ್ಸ್ಸಿಜಿನ್ ಸಂಪರ್ಕ ವ್ಯವಸ್ಥೆ ಕಲ್ಪಿಸುವುದರ ಮೂಲಕ ಇದನ್ನು ಸುಸಜ್ಜಿತ ಕೋವಿಡ್ ಆಸ್ಪತ್ರೆ ಮಾಡಲು ನಿರ್ಧರಿಸಲಾಗಿದೆ ಎಂದರು. ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಾಡ ಗ್ರಾಮದ ಪಡುಕೋಣೆಯ ನಿವೃತ್ತ ಶಿಕ್ಷಕಿ ಪಾವ್ಲೀನ್ ಫೆನಾಂಡೀಸ್ (82) ಮಂಗಳವಾರ ಮನೆಯಲ್ಲಿ ನಿಧನರಾದರು. ಶಿರೂರು, ನಾವುಂದ ಮತ್ತು ಪಡುಕೋಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು ೩೪ ವರ್ಷ ಸುದೀರ್ಘ ಸೇವೆ ಸಲ್ಲಿಸಿ, ವಿದ್ಯಾರ್ಥಿಗಳ ಪ್ರೀತಿಯ ಶಿಕ್ಷಕಿ ಎನಿಸಿದ್ದರು. ಅವಿವಾಹಿತರಾಗಿದ್ದ ಅವರು ತಮ್ಮ ಹಲವು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಸಹಾಯ ಮಾಡಿದ್ದರು. ಪಡುಕೋಣೆ ಚರ್ಚ್ನ ಪಾಲನಾ ಮಂಡಳಿಯ ಸದಸ್ಯರಾಗಿ, ಬಡವರ ಆರೋಗ್ಯ, ಶಿಕ್ಷಣದ ಬಗೆಗೆ ನೆರವಾಗುವ ಸ್ಥಳೀಯ ಸಂಘಟನೆ ಎಸ್.ವಿ.ಪಿಯ ಕಾರ್ಯದರ್ಶಿಯಾಗಿ ದೀರ್ಘಕಾಲ ದುಡಿದಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಬದಲಾದ ಕಾಲಘಟ್ಟ ದಲ್ಲಿ ವಿದ್ಯಾರ್ಥಿಗಳು ಹೊಸತನದ ಕಲಿಕೆಯ ಸಾಧ್ಯತೆಗಳನ್ನು ಇರುವ ಅವಕಾಶಗಳಲ್ಲಿಯೇ ಸಂಪೂರ್ಣವಾಗಿ ಬಳಸಿಕೊಳ್ಳುವ ಪ್ರಯತ್ನ ಮಾಡಬೇಕು. ನಮ್ಮ ವಿದ್ಯಾರ್ಥಿಗಳು ಕಲಿಯುವ ಯಾವುದೇ ಹೊಸ ಅವಕಾಶಗಳಿಂದ ವಂಚಿತರಾಗಬಾರದೆನ್ನುವ ಉದ್ದೇಶದಿಂದ ಈ ಆನ್ಲೈನ್ ತರಗತಿಗಳನ್ನು ನಾವು ಪ್ರಾರಂಭಿಸುತ್ತಿದ್ದೇವೆ ಎಂದು ಗಂಗೊಳ್ಳಿಯ ಜಿ.ಎಸ್.ವಿ.ಎಸ್ ಅಸೋಸಿಯೇಷನ್ನಿನ ಅಧ್ಯಕ್ಷ ಡಾ. ಕಾಶೀನಾಥ್ ಪೈ ಅವರು ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಆರಂಭಗೊಂಡ ಆನ್ಲೈನ್ ತರಗತಿಗಳ ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ರಸಾಯನ ಶಾಸ್ತ್ರ ಉಪನ್ಯಾಸಕರಾದ ಆರ್.ಎನ್ ರೇವಣ್ಕರ್ ಪಾಠವನ್ನು ಆರಂಭಿಸುವುದರ ಮೂಲಕ ತರಗತಿಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿ.ಎಸ್.ವಿ.ಎಸ್ ಅಸೋಸಿಯೇಷನ್ ಕಾರ್ಯದರ್ಶಿ ಹೆಚ್ ಗಣೇಶ್ ಕಾಮತ್, ಸರಸ್ವತಿ ವಿದ್ಯಾಲಯ ಸಂಸ್ಥೆಗಳ ಕಾರ್ಯದರ್ಶಿ ಎನ್ ಸದಾಶಿವ ನಾಯಕ್, ಪ್ರಾಂಶುಪಾಲೆ ಕವಿತಾ ಎಮ್ ಸಿ ಉಪಸ್ಥಿತರಿದ್ದರು. ಇಂಗ್ಲೀಷ್ ಉಪನ್ಯಾಸಕ ಥಾಮಸ್ ಪಿ.ಎ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಸುಜಯೀಂದ್ರ ಹಂದೆ ಕಾರ್ಯಕ್ರಮ ನಿರ್ವಹಿಸಿದರು. ಹಿಂದಿ ಉಪನ್ಯಾಸಕ…
ಕುಂದಾಪುರ: ಐದನೇ ತರಗತಿಯ ತನಕದ ವಿಧ್ಯಾರ್ಥಿಗಳಿಗೆ ಆನ್ಲೈನ್ ತರಗತಿ ಕ್ಲಾಸುಗಳನ್ನು ರದ್ದು ಮಾಡಿರುವ ರಾಜ್ಯದ ಯಡಿಯೂರಪ್ಪ ಸರ್ಕಾರದ ಕ್ರಮ ಸ್ವಾಗತಾರ್ಹ. ಹಾಗೆಯೇ ಅದರ ಮುಂದುವರಿಕೆಯಾಗಿ ಪಿಯುಸಿಯ ತನಕವೂ ಈ ಆನ್ಲೈನ್ ಕ್ಲಾಸುಗಳನ್ನು ರದ್ದು ಪಡಿಸುವ ಕುರಿತು ಸರ್ಕಾರ ತೀರ್ಮಾನಕ್ಕೆ ಬರಬೇಕೆಂದು ಕಾಂಗ್ರೆಸ್ ಐಟಿ ಸೆಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ರಾಜ್ಯ ಉಸ್ತುವಾರಿ ಕೆ. ಚಂದ್ರಶೇಖರ ಶೆಟ್ಟಿ ಆಗ್ರಹಿಸಿದ್ದಾರೆ. ಈ ನಾಡಿನ ಜನತೆ ಮೋದಿ ಸರ್ಕಾರದ ಅವೈಜ್ಞಾನಿಕವಾದ ನೋಟು ನಿಷೇಧ ಮತ್ತು ಇದೀಗ ಪೂರ್ವತಯಾರಿ ಇಲ್ಲದ ಲಾಕ್ಡೌನ್ ನಿಂದಾಗಿ ಕೆಲಸವಿಲ್ಲದೆ, ಆದಾಯವಿಲ್ಲದೆ ಆರ್ಥಿಕವಾಗಿ ಸಂಪೂರ್ಣವಾಗಿ ಕಂಗೆಟ್ಟಿದ್ದಾರೆ. ಇಂತಹ ಸಮಯದಲ್ಲಿ ಆನ್ಲೈನ್ ಶಿಕ್ಷಣದ ಹೆಸರಿನಲ್ಲಿ ಮಕ್ಕಳಿಗೆ ಕಂಪ್ಯೂಟರ್/ ಲ್ಯಾಪ್ಟಾಪ್, ಆಂಡ್ರಾಯ್ಡ್ ಮೊಬೈಲ್ ಕೊಡಿಸಲು ಆ ಹೆತ್ತವರಿಗೆ ಖಂಡೀತವಾಗಿಯೂ ಸಾಧ್ಯವಿಲ್ಲ. ಒಂದು ವೇಳೆ ಅವುಗಳನ್ನು ಕೊಡಿಸಿದರೂ ರಾಜ್ಯದ ಬಹುಭಾಗ ಗ್ರಾಮೀಣ ಪ್ರದೇಶವಾಗಿರುವ ಕಾರಣಕ್ಕಾಗಿ ಅಲ್ಲಿ ಇಂಟರ್ನೆಟ್ ಸೇವೆ ಇರಲಾರದು. ಇಂತಹ ಅವ್ಯವಸ್ಥೆಯಲ್ಲಿ ಆನ್ಲೈನ್ ಕ್ಲಾಸ್ ಗಳನ್ನು ಆರಂಭಿಸಿದರೆ ಖಂಡಿತವಾಗಿಯೂ ಗ್ರಾಮೀಣ…
