Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಸಾರ್ವಜನಿಕ ಸ್ಥಳಗಳ ಸ್ವಚ್ಚತೆಯನ್ನು ಕಾಪಾಡಲು ಪ್ರತಿಯೊಬ್ಬರೂ ಕ್ರಿಯಾಶೀಲ ಪ್ರಯತ್ನಗಳನ್ನು ಮಾಡಿದರೆ ಸ್ವಚ್ಛ ಭಾರತ ಪರಿಕಲ್ಪನೆ ಸಾಕಾರಗೊಳ್ಳುವುದು ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹೇಳಿದರು. ಅವರು, ಭಾರತ ಸರ್ಕಾರದ ನೆಹರು ಯುವ ಕೇಂದ್ರ ಉಡುಪಿ ಜಿಲ್ಲೆ ನೇತೃತ್ವದಲ್ಲಿ, ಭಾರತೀಯ ರೈಲ್ವೆ, ರೋವರ್ಸ್ ರೇಂಜರ್ಸ್, ಲಯನ್ಸ್ ಕ್ಲಬ್ ಸಂತೆಕಟ್ಟೆ ಹಾಗೂ ಇತರ ಸಹಯೋಗದೊಂದಿಗೆ ಇಂದ್ರಾಳಿ ರೈಲು ನಿಲ್ದಾಣದಲ್ಲಿ ನಡೆದ ಕ್ಲೀನ್ ಇಂಡಿಯಾ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರವಾಸಿ ಸ್ಥಳಗಳ ಸ್ವಚ್ಛತೆಯನ್ನು ಕಾಪಾಡಲು ಪ್ರವಾಸಿಗರು ಮಹತ್ವದ ಪಾತ್ರವನ್ನು ನಿರ್ವಹಿಸಬೇಕು. ಮರುಬಳಕೆಯ ವಸ್ತುಗಳನ್ನು ಹೆಚ್ಚೆಚ್ಚು ಉಪಯೋಗಿಸಿದರೆ ತ್ಯಾಜ್ಯ ಉತ್ಪತ್ತಿ ಕಡಿಮೆಯಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಿದರೆ ಕ್ಲೀನ್ ಇಂಡಿಯಾ ಪರಿಕಲ್ಪನೆ ಸಾಕಾರಗೊಳ್ಳುತ್ತದೆ ಎಂದರು. ಲಯನ್ಸ್ ಕ್ಲಬ್ ಸಂತೆಕಟ್ಟೆ ಅಧ್ಯಕ್ಷರಾದ ಶಿಲ್ಪ ಸುದರ್ಶನ್, ರೈಲ್ವೇ ಇಲಾಖೆಯ ಸ್ಟೀವನ್ ಜಾರ್ಜ್, ಕಮರ್ಷಿಯಲ್ ಸೂಪರ್ವೈಸರ್ ಎಸ್.ಕೆ. ಭಟ್, ಸುದರ್ಶನ್ ನಾಯಕ್, ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್ ಉಡುಪಿ ಜಿಲ್ಲೆಯ ಆನಂದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ದೇಶದ ಆರ್ಥಿಕ, ಸಾಮಾಜಿಕ ಸೇರಿದಂತೆ ಎಲ್ಲಾ ಅಭಿವೃದ್ದಿಗೆ ಭ್ರಷ್ಠಾಚಾರವು ಪ್ರಮುಖ ಅಡಚಣೆಯಾಗಿದ್ದು, ಇದರ ನಿರ್ಮೂಲನೆಯಿಂದ ದೇಶದ ಅಭಿವೃದ್ದಿ ಸಾಧ್ಯವಾಗಲಿದ್ದು, ಇದರ ನಿರ್ಮೂಲನೆಗೆ ಪ್ರತಿಯೊಬ್ಬರೂ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಉಡುಪಿ ಮತ್ತು ದ.ಕನ್ನಡ ಜಿಲ್ಲೆಯ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಕುಮಾರಸ್ವಾಮಿ ಹೇಳಿದರು. ಅವರು ಉಡುಪಿಯ ಅಬಕಾರಿ ಭವನದಲ್ಲಿ, ಜಾಗೃತ ಅರಿವು ಸಪ್ತಾಹದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರಿ ಕಚೇರಿಗಳಲ್ಲಿ, ಸಮಾಜದಲ್ಲಿ ಭ್ರಷ್ಠಾಚಾರ ಆಳವಾಗಿ ಬೇರೂರಿದ್ದು, ಕೆಟ್ಟ ಪಿಡುಗು ಆಗಿದೆ. ಇದನ್ನು ನಿರ್ಮೂಲನೆ ಮಾಡಲು ಎಲ್ಲಾ ನಾಗರೀಕರು,ಸರ್ಕಾರಿ ನೌಕರರು ಒಟ್ಟಾಗಿ ಕೆಲಸ ಮಾಡಬೇಕಿದೆ, ನೌಕರರು ಸಾರ್ವಜನಿಕರ ಕೆಲಸಗಳಲ್ಲಿ ಅನಗತ್ಯ ವಿಳಂಬಕ್ಕೆ ಆಸ್ಪದ ನೀಡದೇ , ಸಕಾಲದಲ್ಲಿ , ಪ್ರಾಮಾಣಿಕವಾಗಿ ಮಾಡಿಕೊಡಬೇಕು, ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ ಮುಂದಿನ ಪೀಳಿಗೆಗೆ ಸ್ಪೂರ್ತಿ ಮತ್ತು ಆದರ್ಶಪ್ರಾಯವಾಗಬೇಕು. ಭ್ರಷ್ಠಾಚಾರ ಪ್ರಕರಣಗಳಲ್ಲಿ ಸಿಲುಕಿದರೆ ಮಾನಸಿಕ ಮತ್ತು ದೈಹಿಕ ಖಿನ್ನತೆ ಅನುಭವಿಸಬೇಕಾಗುತ್ತದೆ. ಭ್ರಷ್ಠಾಚಾರ ಮುಕ್ತ ಸಮಾಜ ನಿರ್ಮಾಣ ಮಾಡಲು ಲೋಕಾಯುಕ್ತ ಸಂಸ್ಥೆಯೊಂದಿಗೆ ಸಮಾಜದ ಎಲ್ಲರೂ ಕೈ ಜೋಡಿಸ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕು ಕಂಬಳ ಸಮಿತಿಯ ಅಧ್ಯಕ್ಷ ವೆಂಕಟ ಪೂಜಾರಿ ಸಸಿಹಿತ್ಲು ಅಧ್ಯಕ್ಷತೆಯಲ್ಲಿ 2021-22ನೇ ಸಾಲಿನ ಕಂಬಳದ ಪೂರ್ವಭಾವಿ ಸಭೆ ಉಪ್ಪುಂದದ ಮಾತಾಶ್ರೀ ಸಭಾ ಭವನದಲ್ಲಿ ನಡೆಯಿತು. ಕಂಬಳ ಸಮಿತಿಯ ಕಾರ್ಯಕಾರಿಯನ್ನು ಮುಂದಿನ ಒಂದು ವರ್ಷದ ಅವಧಿಗೆ ಪುನರಾಯ್ಕೆ ಮಾಡಲಾಯಿತು. ಗಂತಿನಲ್ಲಿ ಕೋಣವನ್ನು ಸ್ಪರ್ಧೆಗೆ ಅಣಿಮಾಡುವ ಸಮಯವನ್ನು ಗರಿಷ್ಠ ಐದು ನಿಮಿಷಕ್ಕೆ ಸೀಮಿತ ಗೊಳಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಈ ಸಂದರ್ಭ ಸಮಿತಿ ಉಪಾಧ್ಯಕ್ಷರಾದ ವೆಂಕಟರಮಣ ಗಾಣಿಗ, ಶ್ರೀರಾಮ್ ಚೈತ್ರ ಪರಮೇಶ್ವರ ಭಟ್ ಬೋಳಂಬಳ್ಳಿ, ರಾಜು ದೇವಾಡಿಗ ಮಿಯ್ಯಾಣಿ, ಕೊಡೇರಿ ಕಂಬಳದ ಯಜಮಾನ ಚನ್ನಕೇಶವ್ ಕಾರಂತ್, ಗುಡಾಡಿ ಶೆಖರ ಪೂಜಾರಿ, ಸುರೇಶ್ ಕಾಡಿತಾರ್, ಕಂಬಳ ಸಮಿತಿಯ ಕಾರ್ಯದರ್ಶಿ ಸುಧೀರ್ ದೇವಾಡಿಗ, ಕೋಶಾಧಿಕಾರಿ ಜನಾರ್ದನ ದೇವಾಡಿಗ, ಕಂಬಳ ಗದ್ದೆ ಯಜಮಾನರು, ಹಗ್ಗದ ಜೋಟಗಾರರು, ಗೋರಿ ಸವಾರಿಗರು, ಕಂಬಳ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿಕುಂದಾಪುರ: ಶಿರೂರಿನಿಂದ ಕುಂದಾಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಒಂದರಲ್ಲಿ ಆಕಸ್ಮಿಕವಾಗಿ ಶಾರ್ಟ್ ಸರ್ಕ್ಯೂಟ್ ಉಂಟಾದ ಪರಿಣಾಮ, ದಟ್ಟ ಹೊಗೆ ಕಾಣಿಸಿಕೊಂಡ ಘಟನೆ ಶನಿವಾರ ಅರಾಟೆಯಲ್ಲಿ ರಾ.ಹೆ. 66ರಲ್ಲಿ ಸಂಭವಿಸಿದೆ. ಬಸ್ಸಿನಲ್ಲಿ ಹೊಗೆ ಕಾಣಿಸಿಕೊಂಡ ತಕ್ಷಣ ಚಾಲಕ ಹಾಗೂ ನಿರ್ವಾಹಕರು ಪ್ರಯಾಣಿಕರನ್ನು ಕೆಳಗಿಳಿಸಿ, ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಹೆಚ್ಚಿನ ಅವಘಢ ಸಂಭವಿಸುವುದನ್ನು ತಪ್ಪಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಂಡ್ಸೆ ಶ್ರೀ ಬ್ರಹ್ಮಶ್ರೀ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿಯ ನೂತನ ಆಯ್ಕೆ ಪಕ್ರಿಯೆ ಇತ್ತಿಚೆಗೆ ನಡೆಯಿತು. ಅಧ್ಯಕ್ಷರಾಗಿ ಕೆ. ಬಸವರಾಜ್ ರಾಯಪ್ನಾಡಿ ಮತ್ತು ಉಪಾಧ್ಯಕ್ಷರಾಗಿ ವೆಂಕಟೇಶ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಶಿವರಾಮ ಶೆಟ್ಟಿ ವಂಡ್ಸೆ, ಉದಯ ಕೆ. ನಾಯ್ಕ ವಂಡ್ಸೆ, ಉದಯ ಕೆ. ನಾಯ್ಕ ವಂಡ್ಸೆ, ರವೀಂದ್ರ ಎಸ್. ಬಂಗೇರ ಕುಂದಾಪುರ, ಶಂಕರ್ ಗಾಣಿಗ ಹೋಸಾಡು, ಜಲಜ ಪೂಜಾರಿ ಮಾವಿನಕಟ್ಟೆ, ಶಶಿಕಲಾ ಎಸ್. ವಂಡ್ಸೆ, ಚಂದ್ರ ರಾಯಪ್ನಾಡಿ, ದಿವಾಕರ ವಂಡ್ಸೆ, ದೇವು ಮೆಂಡನ್ ರಾಯಪ್ನಾಡಿ, ನಾಗರಾಜ ಪುತ್ರನ್ ಅಂಬ್ಲಾಡಿ, ಹರೀಶ್ ನಾಯ್ಕ್ ವಂಡ್ಸೆ ಆಯ್ಕೆಯಾಗಿದ್ದಾರೆ. ಈ ಸಂದರ್ಭ ಸಹಕಾರಿ ಕಾನೂನು ಸಲಹೆಗಾರರಾದ ಉಮೇಶ್ ಶೆಟ್ಟಿ, ಸತ್ಯನಿಧಿ ಸಂಗ್ರಾಹಕ ಗುರುರಾಜ ಗಾಣಿಗ ಉಪಸ್ಥಿತರಿದ್ದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಆರ್. ಸಂತೋಷ ಸ್ವಾಗತಿಸಿದರು. ಶಾಖಾ ಸಿಬ್ಬಂದಿ ಅಭಿಷೇಕ್ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ದಕ್ಷಿಣ ಭಾರತದ ಮುಂಚೂಣಿ ಸಂಗೀತ ನಿರ್ದೇಶಕ, ಕುಂದಾಪುರ ತಾಲೂಕಿನ ರವಿ ಬಸ್ರೂರು ಬಾಲಿವುಡ್‌ಗೆ ಲಗ್ಗೆಯಿಟ್ಟಿದ್ದು, ಸಲ್ಮಾನ್ ಖಾನ್ ಅವರು ಅಭಿಮಾನದ ಮಾತನಾಡಿದ್ದಾರೆ. ಬಾಲಿವುಡ್ ಕಿಂಗ್ ಸಲ್ಮಾನ್ ಖಾನ್ ನಿರ್ಮಾಣದ ಅಂತಿಮ್ ಸಿನಿಮಾನದ ಹಿನ್ನಲೆ ಸಂಗೀತ ಹಾಗೂ ಚಿತ್ರದ ಹಾಡುಗಳಿಗೆ ಸಂಗೀತ ನೀಡುವ ಮೂಲಕ ರವಿ ಬಸ್ರೂರು ಅವರು ಬಾಲಿವುಡ್‌ನಲ್ಲಿ ಸದ್ದು ಮಾಡಿದ್ದಾರೆ. ಕನ್ನಡದ ಅನೇಕ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿರುವ ರವಿ ಬಸ್ರೂರು ಅವರಿಗೆ ‘ಉಗ್ರಂ’ ಸಿನಿಮಾ ದೊಡ್ಡ ಬ್ರೇಕ್ ನೀಡಿತ್ತು. ‘ಕೆಜಿಎಫ್’ ಸಿನಿಮಾ ದೇಶದ್ಯಾಂತ ಸಿನಿಮಾ ದಿಗ್ಗಜರು ಇವರತ್ತ ನೋಡುವಂತೆ ಮಾಡಿತ್ತು. ಪ್ರಸ್ತುತ ಶ್ರೀಮುರುಳಿ ಅಭಿನಯದ ‘ಮದಗಜ’ ಸಿನಿಮಾ ಪೂರ್ಣಗೊಳಿಸಿದ್ದಾರೆ. ಕಡಲ್ ಹೆಸರಿನ ಚಲನಚಿತ್ರವೊಂದನ್ನು ಸ್ವಂತ ಬ್ಯಾನರ್‌ನಡಿ ನಿರ್ಮಿಸುತ್ತಿದ್ದಾರೆ. ದಕ್ಷಿಣ ಭಾರತದ ಬಹುತೇಕ ಭಾಷೆಗಳಿಗೆ ಸಂಗೀತ ಸಂಯೋಜನೆ ಮಾಡಿರುವ ರವಿ ಬಸ್ರೂರು ಹುಟ್ಟೂರು ಬಸ್ರೂರಿನಲ್ಲಿ ಅತ್ಯಾಧುನಿಕ ಸ್ಟುಡಿಯೊ ನಿರ್ಮಿಸಿಕೊಂಡಿದ್ದು, ಸಿನಿಮಾ ದಿಗ್ಗಜರು ಬಸ್ರೂರಿನತ್ತ ಕಣ್ಣು ಹಾಯಿಸುವಂತೆ ಮಾಡಿದ್ದಾರೆ. ಇತ್ತಿಚೆಗೆ ಮುಂಬಯಿಯಲ್ಲಿ ನಡೆದ ಚಿತ್ರದ ಟ್ರೇಲರ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಲಕ್ಷ ಕಂಠ ಗಾಯನ ಕಾರ್ಯಕ್ರಮದಡಿ ,ನಾಡಗೀತೆ ಜಯ ಭಾರತ ಜನನಿಯ ತನುಜಾತೆ ಸೇರಿದಂತೆ, ಕನ್ನಡದ ಶ್ರೇಷ್ಠತೆಯನ್ನು ಸಾರುವ, ಬಾರಿಸು ಕನ್ನಡ ಡಿಂಡಿಮವ, ಜೋಗದ ಸಿರಿ ಬೆಳಕಿನಲ್ಲಿ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಈ ಗೀತೆಗಳನ್ನು, ರಜತಾದ್ರಿಯ ಜಿಲ್ಲಾಡಳಿತ ಸಂಕೀರ್ಣದ ಆವರಣ ಸೇರಿದಂತೆ ಜಿಲ್ಲೆಯಾದ್ಯಂತ ಬೆಳಗ್ಗೆ 11 ಗಂಟೆಗೆ ಏಕಕಾಲದಲ್ಲಿ ಹಾಡುವ ಮೂಲಕ ಜಿಲ್ಲೆಯಾದ್ಯಂತ ಕನ್ನಡದ ಕಂಪನ್ನು ಹರಡಲಾಯಿತು. ರಜತಾದ್ರಿಯ ಜಿಲ್ಲಾಡಳಿತ ಸಂಕೀರ್ಣದ ಆವರಣದಲ್ಲಿ ಸುಮಾರು 750 ಕ್ಕೂ ಅಧಿಕ ಮಂದಿಯಿಂದ ಕನ್ನಡ ಗೀತೆಗಳ ಗಾಯನ ನಡೆಯಿತು, ಪ್ರಬಾರ ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿ.ಪಂ. ಉಪ ಕಾರ್ಯದರ್ಶಿ ಕಿರಣ್ ಪೆಡ್ನೇಕರ್ ಸೇರಿದಂತೆ ವಿವಿಧ ಇಲಾಖೆಗಳು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಮಣಿಪಾಲ ಜೂನಿಯರ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮಕ್ಕಾಗಿ ಬಹುತೇಕ ಪುರುಷ ಸಿಬ್ಬಂದಿಗಳು ಬಿಳಿ ಬಣ್ಣದ ಶರ್ಟ್ ಗಳು ಮತ್ತು ಮಹಿಳಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕನ್ನಡ ಎನೆ ಕುಣಿದಾಡುವುದೆನ್ನೆದೆ, ಕನ್ನಡ ಎನೆ ಕಿವಿ ನಿಮಿರುವುದು ಎಂದು ಕವಿ ಕುವೆಂಪು ಕನ್ನಡದ ಭಾಷೆಯ ಮಹತ್ವವನ್ನು ಸಾರಿದ್ದಾರೆ. ಕನ್ನಡಿಗರಾದ ನಾವುಗಳು ಕನ್ನಡ ಭಾಷೆಯ ಉಳಿವು ಮತ್ತು ಬೆಳೆಸುವುದಕ್ಕೆ ಪಣ ತೊಟ್ಟು ಕನ್ನಡವನ್ನು ಪ್ರಪಂಚ ಉದ್ದಗಲಕ್ಕೂ ಪಸರಿಸುವ ಕೆಲಸವಾಗಬೇಕು, ಕನ್ನಡ ನಮ್ಮ ದಿನ ನಿತ್ಯ ಮಾತನಾಡುವ ಭಾಷೆಯಾಗಿರದೇ ನಮ್ಮ ಎಲ್ಲಾ ಕಾಯಕದಲ್ಲೂ ಬಳಸಿಕೊಳ್ಳಬೇಕು, ಕನ್ನಡವೇ ಕನ್ನಡಿಗರ ಜೀವನಾಡಿಯಾಗಿದೆ ಎಂದು ಮಹಾತ್ಮ ಗಾಂಧಿ ಫ್ರೌಡಶಾಲೆಯ ಮುಖ್ಯೋಪಾಧ್ಯಯರಾದ ಸತೀಶ್ ನಾಯ್ಕ ಅವರು ಹೇಳಿದರು. ಅವರು ಮಹಾತ್ಮ ಗಾಂಧಿ ಫ್ರೌಡಶಾಲೆ ಸಾಬ್ರಕಟ್ಟೆ , ಶ್ರೀವಿನಾಯಕ ಯುವಕ ಮಂಡಲ ಸಾಬ್ರಕಟ್ಟೆ – ಯಡ್ತಾಡಿ ಇವರ ಸಹಯೋಗದಲ್ಲಿ ನಡೆದ ಮಾತಾಡ್ ಮಾತಾಡ್ ಕನ್ನಡ – ಕನ್ನಡಕ್ಕಾಗಿ ನಾವು ಕರ್ನಾಟಕ ರಾಜ್ಯೋತ್ಸವ ಅಭಿಯಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಕಾರ್ಯಕ್ರವನ್ನು ಶ್ರೀ ವಿನಾಯಕ ಯುವಕ ಮಂಡಲದ ಅಧ್ಯಕ್ಷ ರಾಜೇಶ್ ದೇವಾಡಿಗ ಅವರು ಉದ್ಘಾಟಿಸಿದರು. ಕಾರ್ಯಕ್ರಮದ ಬಗ್ಗೆ ಪ್ರಸ್ತಾವನೆ ಹಾಗೂ ಕನ್ನಡ ನಾಡು ನುಡಿಯ ರಕ್ಷಣೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್ ಆಫ್ ಇಂಡಿಯಾ (ಪಿ.ಆರ್.ಸಿ.ಐ.) ಉಡುಪಿ- ಮಣಿಪಾಲ ಘಟಕ ಆಶ್ರಯದಲ್ಲಿ ನಡೆಯುವ ವಿಶ್ವ ಸಂವಹನಕಾರರ ದಿನಾಚರಣೆಯಲ್ಲಿ ಅಂದು ಸಂಜೆ 6ರಿಂದ ಕರಾವಳಿ ಜಂಕ್ಷನ್ ಬಳಿಯ ಹೋಟೆಲ್ ಮಣಿಪಾಲ ಇನ್ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಗುವುದು ಎಂದು ಪಿ.ಆರ್.ಸಿ.ಐ. ಉಡುಪಿ- ಮಣಿಪಾಲ ಘಟಕ ಅಧ್ಯಕ್ಷ ಮರವಂತೆ ನಾಗರಾಜ ಹೆಬ್ಬಾರ್ ತಿಳಿಸಿದ್ದಾರೆ. ಮಾಧ್ಯಮ ಜಾಣ ಪ್ರಶಸ್ತಿ: ಮಾಧ್ಯಮ ಕ್ಷೇತ್ರದ ಹಿರಿಯರೂ ಜಾನಪದ ವಿದ್ವಾಂಸರೂ ಆಗಿರುವ ಕೆ. ಎಲ್. ಕುಂಡಂತಾಯ, ಕಾರ್ಕಳದ ಕೃಷಿ ಬಿಂಬ ಪತ್ರಿಕೆ ಸಂಪಾದಕ ರಾಧಾಕೃಷ್ಣ ತೋಡಿಕಾನ ಮತ್ತು ಕುಂದಾಪುರದ ಕುಂದಪ್ರಭ ಪತ್ರಿಕೆ ಸಂಪಾದಕ ಯು. ಸುರೇಂದ್ರ ಶೆಣೈ ಅವರಿಗೆ ಮರವಂತೆ ರಾಮಕೃಷ್ಣ ಹೆಬ್ಬಾರ್ ಸ್ಮಾರಕ ಮಾಧ್ಯಮ ಜಾಣ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸಾಧಕರಿಗೆ ಗೌರವ: ಇದೇ ಸಂದರ್ಭದಲ್ಲಿ ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯಾಧ್ಯಕ್ಷ, ಕರಾವಳಿ ಎಕ್ಸ್ಪ್ರೆಸ್ ಡಾಟ್ ಕಾಮ್ ಪ್ರವರ್ತಕ ಜನಾರ್ದನ ಕೊಡವೂರು ಅವರಿಗೆ ಕರಾವಳಿ-ಇ-ಧ್ವನಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಗುಲ್ವಾಡಿ ಮೆಹರಾಜ್ ಜುಮ್ಮ ಮಸೀದಿಯ 2021-2022 ಸಾಲಿನ ಅಧ್ಯಕ್ಷರಾಗಿ ಉದ್ಯಮಿ ಜಿ.ಟಿ.ಉಸ್ಮಾನ್ ಅವಿರೋಧ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಸಂತೆಮಕ್ಕಿ ಪಕೀರ್ ಸಾಹೇಬ್, ಉಪಾಧ್ಯಕ್ಷರಾಗಿ ಜಿ.ಪಿ.ಮೊಹಮ್ಮದ, ಹಾಜಿ.ಹಮೀದ್ ಸಾಹೇಬ್, ಪ್ರಧಾನ ಕಾರ್ಯದರ್ಶಿಯಾಗಿ ಆಲಿ ಅಕ್ಬರ್, ಜೊತೆ ಕಾರ್ಯದರ್ಶಿಯಾಗಿ ಪಳ್ಳಿ ಉಸ್ಮಾನ್, ಕೋಶಾಧಿಕಾರಿಯಾಗಿ ಜಿ.ಕೆ. ಹಂಝ, ಗೌರವ ಸದಸ್ಯರಾಗಿ ಪಕೀರ್ ಹಸನಬ್ಬ, ಹೆಚ್.ಎಂ.ಹಂಝ, ಎಸ್.ಎಸ್.ಹನೀಫ್, ಜಿ.ಹೆಚ್. ಇಬ್ರಾಹಿಂ, ಜಿ.ಹೆಚ್. ಅಬ್ದುಲ್ಲ ಆಯ್ಕೆಯಾಗಿದ್ದಾರೆ.

Read More