Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜಿಸಿ ಮೂವಿಸ್‌ರವರ ‘ದಿ ಸ್ಟ್ರೇಂಜ್ ಕೇಸ್ ಆಫ್ ಕುಂದಾಪುರ’ ಚಿತ್ರದ ಟ್ರೇಲರ್ ಗುರುವಾರ ಇಲ್ಲಿನ ಕುಂದೇಶ್ವರ ದೇವಸ್ಥಾನದ ಸಭಾಭವನದಲ್ಲಿ ಬಿಡುಗಡೆಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಮಾತನಾಡಿ ನಮ್ಮೂರಿನ ಪ್ರತಿಭೆಗಳೆ ನಿರ್ಮಿಸಲಿರುವ ಚಲನಚಿತ್ರ ನಮ್ಮೂರಿನ ವೈಶಿಷ್ಟ್ಯತೆಯನ್ನು ತೋರಿಸಲಿದೆ. ಚಲನಚಿತ್ರದಲ್ಲಿ ಹಲವು ಸ್ಥಳೀಯ ಪ್ರತಿಭೆಗಳು ಬೆಳಕಿಗೆ ಬರಲಿದ್ದಾರೆ ಎಂದ ಅವರು ನಮ್ಮತನವನ್ನು ಉಳಿಸಿಕೊಳ್ಳಲು ಚಲನಚಿತ್ರ ಸ್ಥೂರ್ತಿಯಾಗುವಂತಾಗಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಕುಂದಾಪ್ರ ಕನ್ನಡದ ವಾಗ್ಮಿ ಮನು ಹಂದಾಡಿ, ಉದ್ಯಮಿ ಪ್ರವೀಣ್ ಕುಮಾರ್, ನಟ ರಾಹುಲ್ ಹೆಗ್ಡೆ, ಸಿನೆಮಾ ನಿರ್ದೇಶಕ, ನಟ ಓಂಗುರು ಬಸ್ರೂರು, ನಿರ್ಮಾಪಕ, ನಟ ಚಂದ್ರಶೇಖರ್ ಬಸ್ರೂರು, ಸಂಗೀತ ನಿರ್ದೇಶಕ ಉತ್ತಮ ಸಾರಂಗ್ ಮೊದಲಾದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕು ವ್ಯಾಪ್ತಿಯ 45 ಗ್ರಾಮ ಪಂಚಾಯತ್ಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪ್ರಕ್ರಿಯೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರ ಅಧ್ಯಕ್ಷತೆಯಲ್ಲಿ ಇಂದು ಕೋಟೇಶ್ವರದ ಯುವ ಮೆರಿಡಿಯನ್ ಹಾಲ್‌ನಲ್ಲಿ ನಡೆಯಿತು. ತಾಲೂಕು ವ್ಯಾಪ್ತಿಯ ಎಲ್ಲಾ ಪಂಚಾಯತ್ ಗಳ ನೂತನ ಸದಸ್ಯರು ಆಯ್ಕೆ ಪ್ರಕ್ರಿಯೆ ಸಂದರ್ಭ ಭಾಗವಹಿಸಿದರು. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಎಸಿ ರಾಜು ತಹಶೀಲ್ದಾರ್ ಆನಂದಪ್ಪ, ಕುಂದಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಣಾಧಿಕಾರಿ ಕೇಶವ ಶೆಟ್ಟಿಗಾರ್ ಹಾಗೂ ಜಿಲ್ಲಾ ತಂತ್ರಜ್ಞಾನ ಇಲಾಖೆಯ ತಾಂತ್ರಿಕ ನಿರ್ದೇಶಕ ಮಂಜುನಾಥ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಕುಂದಾಪುರ ತಾಲೂಕಿನ 45 ಪಂಚಾಯತಿಗಳಿಗೆ ಆಯ್ಕೆಯಾದವರ ವಿವರ ಈ ಕೆಳಗಿನಂತಿದೆ. ಮೀಸಲಾತಿ ವಿವರ : ಆಲೂರು : ಅಧ್ಯಕ್ಷ ಸ್ಥಾನ – ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ –    ಹಿಂದುಳಿದ ವರ್ಗ- ಬ . ಕೆರಾಡಿ : ಅಧ್ಯಕ್ಷ ಸ್ಥಾನ –  ಹಿಂದುಳಿದ ವರ್ಗ- ಬ (ಮಹಿಳೆ) ಹಾಗೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದರೆ: ಆಳ್ವಾಸ್ ಕಾಲೇಜಿನ ಪದವಿ ಪತ್ರಿಕೋದ್ಯಮ ವಿಭಾಗದಿಂದ ನಡೆದ ಆಳ್ವಾಸ್ ಮುದಮ್-ಪಾಡ್‌ಕಾಸ್ಟ್‌ನ ಮೊದಲ ಸಂಚಿಕೆ ಬಿಡುಗಡೆಯ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಮಾತನಾಡಿದ ಆಳ್ವಾಸ್ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಬೆಳೆಸಕೊಳ್ಳಬೇಕು. ಅದೇ ನಮ್ಮನ್ನು ಉತ್ತಮ ಬರಹಗಾರರಾಗಿ, ಸಂವಹನಕಾರರಾಗಿ ರೂಪುಗೊಳಿಸಬಲ್ಲದು. ಕಲಿಕೆ ಎಂಬುದು ನಿರಂತರ ಪಕ್ರಿಯೆ ಹೊಸ ಹೊಸ ಪ್ರಯತ್ನಗಳ ಮೂಲಕ ವಿಷಯಗಳನ್ನು ಕಲಿಯುತ್ತಿರಬೇಕು. ವಿದ್ಯಾರ್ಥಿಗಳು ಓದಿನ ಜೊತೆಗೆ ವಿಭಾಗದ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಬೆಳವಣಿಗೆ ಸಾಧ್ಯವಾಗುತ್ತದೆ. ಕಾಲೇಜಿನ ಪತ್ರಿಕೋದ್ಯಮ ವಿಭಾಗವು ವಿದ್ಯಾರ್ಥಿಗಳಿಗೆ ಪೂರಕವಾದ ಶಿಕ್ಷಣವನ್ನು ನೀಡುತ್ತಿದ್ದು, ಪ್ರತಿಯೊಬ್ಬ ವಿದ್ಯಾರ್ಥಿ ನೂತನ ಪ್ರಯೋಗಗಳಲ್ಲಿ ತೊಡಗಿಸಿಕೊಂಡು, ಸದುಪಯೋಗವನ್ನು ಪಡಿಸಿಕೊಳ್ಳಬೇಕು ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ ಅದಕ್ಕಾಗಿ ವಿದ್ಯಾರ್ಥಿಗಳು ಈಗಲೇ ತಯಾರಾಗಿರಬೇಕು. ಕಾಲೇಜುಗಳಲ್ಲಿ ಕಲಿತ ಪ್ರಾಯೋಗಿಕ ಪಾಠಗಳು ಮುಂದೆ ವೃತ್ತಿಕ್ಷೇತ್ರಕ್ಕೆ ಸುಲಭವಾದ ದಾರಿಯನ್ನು ಮಾಡಿಕೊಡುತ್ತದೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮನ್ನು ತಾವು ಪ್ರತಿಯೊಂದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರೈತರು ದುಡಿಮೆಯ ಮೂಲಕ ಆದಾಯ ಹೆಚ್ಚಿಸಿಕೊಂಡು, ಭವಿಷ್ಯಕ್ಕಾಗಿ ಉಳಿತಾಯ ಮಾಡಲು ಸಾಧ್ಯವಾಗುವಂತೆ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದಿಂದ ಸೂಕ್ತ ಅವಕಾಶ ಕಲ್ಪಿಸಬೇಕು ಎಂಬ ಉದ್ದೇಶದಿಂದ ‘ರೈತರೆಡೆಗೆ ಸಹಕಾರಿ ನಡಿಗೆ’ ಎಂಬ ವಿನೂತನ ಅಭಿಯಾನ ಕೈಗೊಂಡಿದೆ ಎಂದು ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು. ಸಹಕಾರಿ ಸಂಘ, ರೈತಸಿರಿ ಹಾಗೂ ರೈತ ಸೇವಾ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಈಚೆಗೆ ಕೆರ್ಗಾಲು ಗ್ರಾಮದ ಚೆರುಮಕ್ಕಿಯಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ಸಂಘದಿಂದ ರೈತರಿಗೆ ಒದಗಿಸುತ್ತಿರುವ ಸೌಲಭ್ಯಗಳ ಮಾಹಿತಿಯನ್ನು ಮತ್ತು ಲಾಭದಾಯಕ ಕ್ರಮಗಳ ಅರಿವನ್ನು ವ್ಯಾಪ್ತಿಯ ಎಲ್ಲ ರೈತರಿಗೆ ತಲುಪಿಸುವುದು ‘ರೈತರೆಡೆಗೆ ಸಹಕಾರಿ ನಡಿಗೆ’ ಕಾರ್ಯಕ್ರಮದ ಉದ್ದೇಶ. ಕೃಷಿ ಇಂದು ವಿಜ್ಞಾನವಾಗಿ ಪರಿವರ್ತಿತವಾಗಿದೆ. ರೈತರು ಪರಿಣಿತರಿಂದ ವೈಜ್ಞಾನಿಕ ಮಾಹಿತಿ ಪಡೆದು, ಆಧುನಿಕ ವಿಧಾನ ಮತ್ತು ಯಂತ್ರೋಪಕರಣ ಬಳಸಿ ಕೃಷಿಯಿಂದ ಲಾಭ ಗಳಿಸಬೇಕು. ಪ್ರತಿ ಗ್ರಾಮದಲ್ಲಿ ರೈತ ಸಂಘಟನೆ ಇರಬೇಕು. ರೈತರು ತಮ್ಮ ಬೆಳೆಗೆ ಸೂಕ್ತ ಮಾರುಕಟ್ಟೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಕ್ಲಾಡಿ ಭಜನಾ ಮಂದಿರ ಯಕ್ಷ ಮಿತ್ರರು ಪ್ರತಿವರ್ಷ ನಡೆಸುವ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶನಿವಾರ ಯಕ್ಷಗಾನ ಪ್ರದರ್ಶನ, ಭಜನೆ, ಧಾರ್ಮಿಕ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಹಕ್ಲಾಡಿ ಭಜನಾ ಮಂದಿರ ವಠಾರದಲ್ಲಿಈ ಬಾರಿಯ ಕಾರ್ಯಕ್ರಮದ ಅಂಗವಾಗಿ ನಡೆದ ಆಜ್ರಿ ಜೋನನ ಮನೆ ಶನೇಶ್ವರ ಮೇಳದ ಯಕ್ಷಗಾನ ಪ್ರದರ್ಶನದಲ್ಲಿ ಹಕ್ಲಾಡಿ ಗ್ರಾಮಸ್ಥರ ಪರವಾಗಿ ಯಕ್ಷಮಿತ್ರರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಶ್ರೀಪತಿ ಹೆಗಡೆ ಹಕ್ಲಾಡಿ ಹಾಗೂ ಸ್ಥಳೀಯ ವೈದ್ಯ ಡಾ. ಸುಕೇಶ್ ಶೆಟ್ಟಿ ಹೊಳ್ಮಗೆ ಅವರನ್ನು ಸನ್ಮಾನಿಸಲಾಯಿತು. ಹಕ್ಲಾಡಿ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯಶಿಕ್ಷಕ ವಸಂತ್ ಹೆಗ್ಡೆ ಸನ್ಮಾನಿಸಿದರು. ಹೆಮ್ಮಾಡಿ ಪಂಚಗಂಗ ರೈತರ ಸೇವಾ ಸಹಕಾರಿ ಬ್ಯಾಂಕ್ನ ಜಗನ್ನಾಥ ಶೆಟ್ಟಿ, ಹಕ್ಲಾಡಿ ಸುರೇಂದ್ರ ಪೂಜಾರಿ ತೊಪ್ಲು, ಗಣೇಶ್ ಮೇಸ್ತ್ರಿ , ಅರ್ಚಕ ರಾಜು, ವಸಂತ, ಸತೀಶ್, ಶರತ್, ಉಮೇಶ್, ನಾಗರಾಜ ಡಿ, ಗಣೇಶ್, ಹರೀಶ್, ರತ್ನಾಕರ, ಗಣಪತಿ, ಚಂದ್ರ ಪೂಜಾರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆದ ಪರಿಶಿಷ್ಟ ಗೆಳೆಯರು(ಕೊರಗ), ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ದಕ್ಷಣ ಕನ್ನಡ ಜಿಲ್ಲೆ, ಕೆಳಪೇಟೆ ಶಿರೂರು, ಬೈಂದೂರು ತಾಲೂಕು ಮಹಾತ್ಮ ಜ್ಯೋತಿ ಬಾಪುಲೆ ಕೊರಗರ ಯುವ ಕಲಾ ವೇದಿಕೆ ಯೋಜನ ನಗರ ಬೈಂದೂರು ಇವರ ಸಹಕಾರದೊಂದಿಗೆ ರಾಜ್ಯ ಮಟ್ಟದ ಕೊರಗರ ಕ್ರೀಡಾಕೂಟ ಒಟ್ಟಾಮ್ ಬಲ್ಲಾ(ಒಂದಾಗೋಣ ಬನ್ನಿ) 2021 ಸಮಾರೋಪ ಸಮಾರಂಭ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿ ಉಡುಪಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಾಬು ಶೆಟ್ಟಿ, ಕೊರಗರು ಅತ್ಯಂತ ಹಿಂದುಳಿದ ಪಂಗಡದವರಾಗಿದ್ದಾರೆ. ನಾವು ಬಾಲ್ಯದಿಂದಲೇ ಈ ಪಂಗಡವನ್ನು ಅತೀ ಹತ್ತಿರದಿಂದ ನೋಡಿದ್ದೇವೆ ಇವರಿಗೆ ಮೂಲಭೂತ ಸೌಕರ್ಯಗಳ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ನಾವು ಅವರ ಅಭಿವೃದ್ಧಿ ಕೆಲಸವನ್ನು ಮಾಡುತ್ತೇವೆ ಮತ್ತು ಬಹಳ ಅಚ್ಚುಕಟ್ಟಾಗಿ ಈ ಕ್ರೀಡಾಕೂಟವನ್ನು ಆಯೋಜಿಸಿದ್ದಾರೆ. ಈ ಆಯೋಜನೆಯು ಬೇರೆ ಬೇರೆ ಸಮುದಾಯದವರಿಗೂ ಕೂಡ ಮಾದರಿಯಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಉಪವಿಭಾಗದ ನೂತನ ಡಿವೈಎಸ್ಪಿ ಆಗಿ ಕೆ. ಶ್ರೀಕಾಂತ್ ಅಧಿಕಾರ ಸ್ವೀಕರಿಸಿದ್ದಾರೆ. ಈ ಮೊದಲು ಅವರು ಕಾರವಾರದ ಎಸಿಬಿಯಲ್ಲಿ ಡಿವೈಎಸ್ಪಿ ಆಗಿ ಸೇವೆ ಸಲ್ಲಿಸಿದ್ದು ಕುಂದಾಪುರಕ್ಕೆ ವರ್ಗಾವಣೆಗೊಂಡಿದ್ದರು. ಮೂಲತಃ ಕಾರ್ಕಳದವರಾದ ಶ್ರೀಕಾಂತ್ ಅವರು, ಪೊಲೀಸ್ ಸೇವೆಗೆ ಬರುವ ಮೊದಲು ಹಾಸನದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ್ದರು.  1998ರಲ್ಲಿ ಪೊಲೀಸ್ ಇಲಾಖೆಯಲ್ಲಿ ಸೇವೆ ಆರಂಭಿಸಿದ ಅವರು ಮೊದಲಿಗೆ ಮೈಸೂರಿನ ಕೆ.ಆರ್ ನಗರದಲ್ಲಿ ಪ್ರೊಬೆಷನರಿಯಾಗಿದ್ದು ಬಳಿಕ ಸೋಮವಾರಪೇಟೆ, ಹೊಳೆನರಸಿಪುರದಲ್ಲಿ ಪಿಎಸ್ಐ ಆಗಿ ಅಲ್ಲಿಂದ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಪದೋನ್ನತಿ ಹೊಂದಿ ಮಂಗಳೂರಿನ ಮೆಸ್ಕಾಂ ವಿಜಿಲೆನ್ಸ್, ಸಕಲೇಶಪುರ,ಪುತ್ತೂರು, ಕಾರವಾರದ ಕುಮಟಾ, ಉಡುಪಿ ನಗರ ಹಾಗೂ ಬ್ರಹ್ಮಾವರದಲ್ಲಿ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದು ಅಲ್ಲಿಂದ ಡಿವೈಎಸ್ಪಿ ಆಗಿ ಪದೋನ್ನತಿ ಹೊಂದಿ ಕಾರವಾರ ಎಸಿಬಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಅಪರಾಧ ವಿಭಾಗದಲ್ಲಿ ಉತ್ತಮ ಪರಿಣಿತಿ ಹೊಂದಿರುವ ಶ್ರೀಕಾಂತ್ ಅವರಿಗೆ ಬ್ಯಾಂಕೊಂದರ ಡಕಾಯಿತಿ ಪ್ರಕರಣ ಪತ್ತೆಹಚ್ಚಿದ್ದ ಹಿನ್ನೆಲೆ 2012ರಲ್ಲಿ ಮುಖ್ಯಮಂತ್ರಿ ಚಿನ್ನದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಮರವಂತೆಯ ಪ್ರವೀಣ ಖಾರ್ವಿ ಅವರ ಲಕ್ಷ್ಮೀ ಎಂಟರ್‌ಪ್ರೈಸಸ್ ಅಧೀನ ಮಾರುತಿ ಕಾಂಪ್ಲೆಕ್ಸ್‌ನಲ್ಲಿ ಆರಂಭಿಸಿರುವ ಸೇವಾ ಸಿಂಧು ಡಿಜಿಟಲ್ ಸೇವಾ ಕೇಂದ್ರದ ಉದ್ಘಾಟನೆ ನಡೆಯಿತು. ಉದ್ಘಾಟಿಸಿ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಎಂ. ಶಂಕರ ಖಾರ್ವಿ, ಸರ್ಕಾರ ಮತ್ತು ಸರ್ಕಾರೇತರ ವ್ಯವಸ್ಥೆಗಳ ನೂರಾರು ಸೇವೆಗಳನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ಪಡೆಯುವ ಅನಿವಾರ್ಯತೆ ಇದೆ. ಗ್ರಾಮೀಣ ಪ್ರದೇಶವಾಗಿರುವ ಮರವಂತೆಯಲ್ಲಿ ವಿಶೇಷ ಚೇತನರಾದ ಪ್ರವೀಣ ಖಾರ್ವಿ ಅಂತಹ ಸೇವೆಗಳನ್ನು ನೀಡುವ ಕೇಂದ್ರವನ್ನು ಆರಂಭಿಸುತ್ತಿರುವುದು ಸ್ತುತ್ಯರ್ಹ. ಇದು ಪ್ರದೇಶದ ಅಗತ್ಯವನ್ನು ಈಡೇರಿಸಲಿದೆ ಎಂದು ಹೇಳಿದರು. ಸ್ವಾಗತಿಸಿದ ಪ್ರವೀಣ ಖಾರ್ವಿ, ತಮ್ಮ ಕೇಂದ್ರದಲ್ಲಿ ಪಾಸ್‌ಪೋರ್ಟ್, ರೇಷನ್ ಕಾರ್ಡ್, ಜಾತಿ ದೃಢೀಕರಣ, ಗುರುತು ಚೀಟಿ ಸೇರಿ ಹಿರಿಯ ನಾಗರಿಕರ ಸಾಮಾನ್ಯ ಸೇಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇನ್ನೂರಕ್ಕಿಂತ ಅಧಿಕ ಸೇವೆಗಳು ಕನಿಷ್ಠ ಶುಲ್ಕದಲ್ಲಿ ಸಾರ್ವಜನಿಕರಿಗೆ ಸಿಗಲಿದೆ ಎಂದರು. ಕಟ್ಟಡದ ಮಾಲೀಕ ಚಂದ್ರ ಖಾರ್ವಿ ವಂದಿಸಿದರು. ಸಿಎಸ್‌ಸಿ ಬೈಂದೂರು ವ್ಯವಸ್ಥಾಪಕ ಗೋವರ್ಧನ ಎಚ್, ಜಿಲ್ಲಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ರೋಟರಿ ಕ್ಲಬ್ ಕುಂದಾಪುರ ಮಿಡ್‌ಟೌನ್ ಆಶ್ರಯದಲ್ಲಿ ಕುಂದಾಪುರದ ಈಸ್ಟ್‌ವೆಸ್ಟ್ ಕ್ಲಬ್‌ನಲ್ಲಿ ಜರಗಿದ ರೋಟರಿ ಜಿಲ್ಲೆ 3182ರ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಗಂಗೊಳ್ಳಿ ರೋಟರಿ ಕ್ಲಬ್ ಏಳು ಪ್ರಥಮ ಬಹುಮಾನದೊಂದಿಗೆ ಚಾಂಪಿಯನ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಗೀತ ಗಾಯನ ವಿಭಾಗದ ಏಕವ್ಯಕ್ತಿ ಸೋಲೋ, ಏಕವ್ಯಕ್ತಿ 12 ವರ್ಷ ಮೇಲ್ಪಟ್ಟು ಸೋಲೋ, ಯುಗಳ ಗೀತೆ, ಸಮೂಹ ಗಾಯನದಲ್ಲಿ ಪ್ರಥಮ ಸ್ಥಾನವನ್ನು, ನೃತ್ಯ ವಿಭಾಗದ ಏಕ ವ್ಯಕ್ತಿ ಸೋಲೋ ಮತ್ತು ಸಮೂಹ ನೃತ್ಯದಲ್ಲಿ ಪ್ರಥಮ ಸ್ಥಾನವನ್ನು ರಂಗೋಲಿಯಲ್ಲಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡು ಚಾಂಪಿಯನ್ ಆಗಿ ಮೂಡಿ ಬಂದಿದೆ. ರೋಟರಿ ಜಿಲ್ಲೆಯ ಮಾಜಿ ಗವರ್ನರ್ ಅಭಿನಂದನ ಎ. ಶೆಟ್ಟಿ ವಿಜೇತರರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಬಿ.ಲಕ್ಷ್ಮೀಕಾಂತ ಮಡಿವಾಳ, ಕಾರ್ಯದರ್ಶಿ ಎಂ.ನಾಗೇಂದ್ರ ಪೈ, ರೋಟರಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಾವು ಭಾರತೀಯರು ಎನ್ನುವ ಘನತೆಯೊಂದಿಗೆ ಜಾತ್ಯಾತೀತ, ಪ್ರಜಾಸತ್ತಾತ್ಮಕ, ಭಾತೃತ್ವದ ತಳಹದಿಯೊಂದಿಗೆ ರೂಪಿತವಾಗಿರುವ ಸಂವಿಧಾನದ ಅಳವಡಿಕೆ ಸ್ಮರಣೀಯ ಎಂದು ಉಪವಿಭಾಗಾಧಿಕಾರಿ ಕೆ. ರಾಜು ಹೇಳಿದರು. ಇಲ್ಲಿನ ಗಾಂಧಿ ಮೈದಾನದಲ್ಲಿ ಮಂಗಳವಾರ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ನೇತ್ರತ್ವದಲ್ಲಿ ನಡೆದ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಅವರು ಧ್ವಜಾರೋಹಣ ನಡೆಸಿ ಗಣರಾಜ್ಯೋತ್ಸವದ ಸಂದೇಶ ನೀಡಿದರು. ದೇಶದ ನಾಗರಿಕರ ಹಿತರಕ್ಷಣೆಯನ್ನ ಆದ್ಯತೆಯಾಗಿ ಇರಿಸಿಕೊಂಡು ಡಾ. ಬಿ. ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ನಮ್ಮ ಹಿರಿಯರು ವಿಶ್ವಕ್ಕೆ ಮಾದರಿಯಾಗಿ ರೂಪಿಸಿರುವ ನಮ್ಮ ಹೆಮ್ಮೆಯ ಸಂವಿಧಾನವನ್ನು ಅನುಸರಿಸುವುದು ನಮ್ಮ ಹೊಣೆಯಾಗಿದೆ. ಕೋವಿಡ್ ಮಹಾವಿಪತ್ತಿನ ಸಂದರ್ಭದಲ್ಲಿ ಜಿಲ್ಲೆಯ ಜನತೆ ತೋರಿದ ಸ್ಪಂದನೆ ದೇಶಕ್ಕೆ ಮಾದರಿಯಾಗಿದೆ. ಕುಸಿದಿರುವ ಉದ್ಯಮ ಹಾಗೂ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಬೇಕಾದ ಅನೀವಾರ್ಯತೆ ಇದೆ. ಕರಾವಳಿಯ ನೈಸರ್ಗಿಕ ಸೊಬಗನ್ನು ಬಳಸಿಕೊಂಡು ಪ್ರವಾಸೋದ್ಯಮವನ್ನು ಉತ್ತೇಜಿಸಬೇಕಾಗಿದೆ. ಸರ್ಕಾರದ ಕಾರ್ಯಕ್ರಮಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಬೇಕು. ಈ ನಿಟ್ಟಿನಲ್ಲಿ ನಮ್ಮ ಬದ್ಧತೆಯನ್ನು ತೋರಬೇಕು ಎಂದು ಅವರು ಹೇಳಿದರು.…

Read More