ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಡಾ. ಶಿವರಾಮ ಕಾರಂತ ಪ್ರತಿಷ್ಠಾನ ರಿ.ಕೋಟ, ಡಾ. ಕಾರಂತ ಟ್ರಸ್ಟ್ ರಿ. ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಆಶ್ರಯದಲ್ಲಿ ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ನಡೆಯುವ ಉಡುಪಿ ಜಿಲ್ಲಾ ಮಹಿಳಾ ಸಾಹಿತ್ಯ-ಸಂಸ್ಕೃತಿ ಸಮ್ಮೇಳನಾಧ್ಯಕ್ಷೆಯಾಗಿ ಶಿಕ್ಷಕಿ-ಸಾಹಿತಿ ಸುಮಿತ್ರಾ ಡಿ. ಐತಾಳ್ ಅವರನ್ನು ಆಯ್ಕೆ ಮಾಡಲಾಗಿದೆ.
ಸುಮಿತ್ರಾ ಡಿ ಐತಾಳ್ ಅವರು ಬಿ.ಇಡ್, ಎಂ.ಎ ವ್ಯಾಸಂಗ ಪೂರೈಸಿ, ಸಾಹಿತ್ಯಿಕ ಸಾಂಸ್ಕೃತಿಕ ಚಟುವಟಿಕೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಕವನ ಸಂಕಲನ ಭಾವಗಾನ, ಅಂತರಗಂಗೆ, ಗಡಿಯಾರ, ಹಣತೆ, ಮೌನರತಿ ರಚಿಸಿದ್ದು, ಕಥಾಸಂಕಲನದಲ್ಲಿ ಫಲಿತಾಂಶ ರಚಿಸಿದ್ದಾರೆ.ಅಲ್ಲದೇ ಸುದ್ದಿಮನೆ, ವಿಜಯಕರ್ನಾಟಕ, ಕುಂದಾಪುರ ಮಿತ್ರ, ಕುಂದಪ್ರಭಾ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿದೆ. ’ಬಾ ಗೆಳತಿ’ ಮಹಿಳಾ ಸ್ಪಂದನ ಕಾರ್ಯಕ್ರಮ ಸ್ಪಂದನ ದೂರದರ್ಶನದಲ್ಲಿ ಸಾಹಿತ್ಯದ ನುಡಿಯಲ್ಲಿ ಕೂಡಾ ಭಾಗವಹಿಸಿರುತ್ತಾರೆ.
ಎಪ್ರಿ 25 ರಂದು ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ಕಾರ್ಯಕ್ರಮ ಬೆಳಿಗ್ಗೆ10ರಿಂದ ಸಂಜೆ 4ಗಂಟೆ ತನಕ ಕಾರ್ಯಕ್ರಮ ನಡೆಯಲಿದ್ದು ಬಹುವಿಧಗೋಷ್ಠಿ, ಸಂವಾದ, ನೃತ್ಯ, ಮಾತುಕತೆ, ಹಾಸ್ಯ-ಹಾಸ್ಯ, ಚಿತ್ರಸಂತೆ ಕಾರ್ಯಕ್ರಮಗಳು ನಡೆಯಲಿದ್ದು, ಕೋವಿಡ್ ಮಾರ್ಗಸೂಚಿಯಂತೆ ಕಾರ್ಯಕ್ರಮ ನಡೆಯಲಿದೆ ಎಂದು ಡಾ|| ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಕಾರಂತ ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.