ಕೊರೋನಾ ಏರಿಕೆ ಹಿನ್ನೆಲೆ: ಧಾರ್ಮಿಕ ಆಚರಣೆ, ಮದುವೆ, ಇತರೆ ಸಮಾರಂಭಗಳಿಗೆ ಲಗಾಮ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ಕರ್ನಾಟಕದಲ್ಲಿ ದಾಖಲೆ ಪ್ರಮಾಣದಲ್ಲಿ ಕೊರೊನಾ ಸೋಂಕು ವರದಿಯಾಗುತ್ತಿರುವ ಹಿನ್ನೆಲೆಯುಲ್ಲಿ ಸಾರ್ವಜನಿಕ ಸಮಾರಂಭ/ ಆಚರಣೆ/ ಮನರಂಜನೆ ಕಾರ್ಯಕ್ರಮಗಳಿಗೆ ಮಾರ್ಗಸೂಚಿ ಪ್ರಕಟಗೊಂಡಿದೆ.

Call us

Click Here

ಧಾರ್ಮಿಕ ಆಚರಣೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು ಕರ್ನಾಟಕ ಸರ್ಕಾರದ ಪರವಾಗಿ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಆದೇಶ ಪ್ರಕಟಿಸಿದ್ದಾರೆ. ಈ ಆದೇಶವನ್ನು ಉಲ್ಲಂಘಿಸುವ ವ್ಯಕ್ತಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 51 ರಿಂದ 60 ಹಾಗೂ ಐಪಿಸಿ ಸೆಕ್ಷನ್ ಮತ್ತು ಇತರ ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಯಾವುದಕ್ಕೆ ಎಷ್ಟು ಜನ?

  • ಮದುವೆ:
    ತೆರೆದ ಪ್ರದೇಶದಲ್ಲಿ ಗರಿಷ್ಠ 200 ಮಂದಿಗೆ ಅನುಮತಿ. ಕಲ್ಯಾಣ ಮಂಟಪ/ ಸಭಾಂಗಣ/ ಹಾಲ್ ಇತ್ಯಾದಿ ಮುಚ್ಚಿದ ಪ್ರದೇಶದಲ್ಲಿ ಗರಿಷ್ಟ 100 ಮಂದಿಗೆ ಮಾತ್ರ ಅವಕಾಶ.
  • ಜನ್ಮದಿನ ಇತರೇ ಆಚರಣೆ:
    ತೆರೆದ ಪ್ರದೇಶದಲ್ಲಿ 50 ಮಂದಿಗೆ ಅನುಮತಿ. ಸಭಾಂಗಣ, ಹಾಲ್, ಇತ್ಯಾದಿ ಮುಚ್ಚಿದ ಪ್ರದೇಶದಲ್ಲಿ 25 ಮಂದಿಗೆ ಅನುಮತಿ.
  • ನಿಧನ/ ಶವಸಂಸ್ಕಾರ:
    ತೆರೆದ ಪ್ರದೇಶದಲ್ಲಿ 50 ಮಂದಿ, ಸಭಾಂಗಣ, ಹಾಲ್, ಇತ್ಯಾದಿ ಮುಚ್ಚಿದ ಪ್ರದೇಶದಲ್ಲಿ 25 ಮಂದಿಗೆ ಅವಕಾಶ.
  • ಅಂತ್ಯ ಕ್ರಿಯೆಯಲ್ಲಿ 25 ಮಂದಿಗೆ ಮಾತ್ರ ಅನುಮತಿ
  • ಇತರೇ ಸಮಾರಂಭಗಳಿಗೆ 50 ಮಂದಿ ಮಾತ್ರ ಅವಕಾಶ
  • ರಾಜಕೀಯ ಸಮಾರಂಭಗಳಿಗೆ ತೆರೆದ ಪ್ರದೇಶದಲ್ಲಿ 200 ಮಂದಿಗೆ ಮಾತ್ರ ಅನುಮತಿ ನೀಡಲಾಗಿದೆ.
  • ಧಾರ್ಮಿಕ ಆಚರಣೆ, ಸಮಾರಂಭವನ್ನು ನಿಷೇಧಿಸಲಾಗ

ಇದನ್ನೂ ಓದಿ
► ಉಡುಪಿ: ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಜಿಲ್ಲಾ ತಜ್ಞರ ಸಮಿತಿ ಸಭೆ – https://kundapraa.com/?p=47346 .

Leave a Reply