ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಬಡಾಕೆರೆ ರೈಲ್ವೆ ಸೇತುವೆ ಮೇಲೆ ಮಂಗಳವಾರ ನಸುಕಿನ ಸಮಯ ಅಪರೂಪದ ಕರಿ ಚಿರತೆಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಅಸುನೀಗಿದೆ. 3 ರಿಂದ 4 ವರ್ಷದ ಗಂಡು ಕರಿ ಚಿರತೆ ಮೃತಪಟ್ಟಿದ್ದು, ಆಹಾರ ಅರಸಿ ನಾಡಿಗೆ ಬಂದಿದ್ದು ರೈಲು ಸೇತುವೆ ಮೇಲೆ ಸಿಕ್ಕಿಕೊಂಡಿದ್ದರಿಂದ ತಪ್ಪಿಸಿಕೊಳ್ಳಲಾಗಿದೆ ಮೃತಪಟ್ಟಿದೆ. ಸ್ಥಳೀಯರು ರೈಲ್ವೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ರೈಲ್ವೆ ಅಧಿಕಾರಿಗಳು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಚಿರತೆ ಮೃತದೇಹ ವಶಕ್ಕೆ ಪಡೆದು ವಂಡ್ಸೆ ವಲಯ ಅರಣ್ಯ ಇಲಾಖೆಗೆ ಸಾಗಿಸಿದ್ದಾರೆ. ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದರು. ಕರಿ ಚಿರತೆ ನಮ್ಮಲ್ಲಿ ಶೇ.10ರಷ್ಟಿದ್ದು, ಜನರ ಕಣ್ಣಿಗೆ ಕಾಣಸಿಗುವುದು ತುಂಬಾ ಅಪರೂಪ. ಬಡಾಕೆರೆ ಹೊಳೆ ದಾಟಲು ಚಿರತೆ ಲೈಲ್ವೆ ಸೇತುವೆ ಮಾರ್ಗ ಬಳಸಿಕೊಳ್ಳುತ್ತಿದ್ದು, ರೈಲು ಬರುವ ಸಮಯ ಸೇತುವೆ ಮೇಲಿದ್ದರಿಂದ ತಪ್ಪಿಸಿಕೊಳ್ಳಲಾಗದೆ ರೈಲು ಡಿಕ್ಕಿಯಾಗಿ ಅಸುನೀಗದೆ. ವನ್ಯಜೀವ ನಿಯಮದ ಪ್ರಕಾರ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಆಶ್ರಯದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಹೃದಯದಲ್ಲಿ ರಾಮಚಂದಿರ ಎಂಬ ಜಿಲ್ಲಾಮಟ್ಟದ ಕವಿಗೋಷ್ಠಿ ಮಂಗಳೂರು ನಗರದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕವಿ, ಸಾಹಿತಿ ಡಾ. ವಸಂತಕುಮಾರ ಪೆರ್ಲ, ಶ್ರೀರಾಮಚಂದ್ರ ಎಂಬ ಮಾದರಿ ವ್ಯಕ್ತಿತ್ವವು ನಮ್ಮ ಆದರ್ಶಗಳ ಒಂದು ಪ್ರತಿರೂಪ. ಜಾತಿ ಮತ ಪಂಥ ಪಂಗಡ ದೇಶ ಮೊದಲಾದ ಗಡಿರೇಖೆಗಳನ್ನು ಮೀರಿದ ಮಾನವತ್ವದ ಉತ್ತುಂಗತೆಯ ಸಂಕೇತವೇ ಶ್ರೀರಾಮಚಂದ್ರ. ಆತ ಮೌಲ್ಯಗಳ ಮೊತ್ತ. ಆತನ ಉದಾರ ವ್ಯಕ್ತಿತ್ವ ನಮ್ಮದಾಗಬೇಕೆಂಬ ಆದರ್ಶದಿಂದಾಗಿಯೇ ಶ್ರೀರಾಮಚಂದ್ರನು ಯಾವ ಕಾಲಕ್ಕೂ ಸಲ್ಲುವ ಓರ್ವ ನಾಯಕನಾಗಿ ಉಳಿದಿದ್ದಾನೆ. ಎಂದು ಹೇಳಿದರು. ವಿವಾದಗಳಿಗೆ ಹೊರತಾಗಿ ನಿಲ್ಲುವ ವ್ಯಕ್ತಿತ್ವ ಪ್ರಭು ಶ್ರೀರಾಮಚಂದ್ರನದು. ಆತನ ಬಗ್ಗೆ ಹೆಚ್ಚು ಹೆಚ್ಚು ಸಾಹಿತ್ಯ ನಿರ್ಮಾಣವಾದಂತೆ ಜನಸಾಮಾನ್ಯರ ಹೃದಯ ಮಂದಿರದಲ್ಲಿ ಸ್ಥಾನ ಪಡೆಯುವ ಅವಕಾಶ ಹೆಚ್ಚುತ್ತ ಹೋಗುತ್ತದೆ. ಎಲ್ಲ ಕವಿಗಳೂ ವಿಭಿನ್ನವಾಗಿ ಶ್ರೀರಾಮಚಂದ್ರನ ಕುರಿತು ಬರೆದಿದ್ದಾರೆ. ಇದೊಂದು ಹೊಸ ಪರಿಕಲ್ಪನೆ ಎಂದು ಹೇಳಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ವಿಶೇಷ ಉಪನ್ಯಾಸ ಕಾರ್ಯಕ್ರಮ ಮಲ್ಟಿಮೀಡಿಯಾ ಸ್ಟುಡಿಯೋದಲ್ಲಿ ನಡೆಯಿತು. ಮುಖ್ಯ ಅಥಿತಿಯಾಗಿ ತುಮಕೂರು ವಿಶ್ವವಿದ್ಯಾನಿಲಯ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪದ್ಮನಾಭ ಕೆ.ವಿ ಅಭಿವೃದ್ಧಿಯಲ್ಲಿ ಸಂವಹನದ ಪಾತ್ರದ ಕುರಿತು ಮಾತನಾಡಿದರು. ಅಭಿವೃದ್ದಿಯೆಂದರೆ ಕೇವಲ ತಾವು ಶ್ರೀಮಂತರಾಗವುದಲ್ಲ. ಬದಲಿಗೆ ಅಭಿವೃದ್ಧಿ ಪಥದಲ್ಲಿ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವುದು. ಕೊನೆಯಲ್ಲಿದಾರೆಂದು ಯಾರನ್ನು ಬಿಟ್ಟು ಹೋಗಬಾರದು ಎಂದರು. ಪರಿಹಾರಯಿಲ್ಲದ ಸಮಸ್ಯೆಯಿಲ್ಲ, ಅಭಿವೃದ್ದಿಯಿಲ್ಲದೆ ದೇಶದಲ್ಲಿ ಏಳಿಗೆಯಿಲ್ಲ ಎಂದರು. ಪ್ರಾದೇಶಿಕ ಕಲೆಯಾದ ಯಕ್ಷಗಾನದ ಮೂಲಕ ಸಂವಹನ ನಡೆದು ಬಂದ ರೀತಿಯನ್ನು ವಿವರಿಸಿ ಯಕ್ಷಗಾನದಲ್ಲಿ ಪೌರಾಣಿಕ ಕಥೆಗಳಲ್ಲದೆ “ಕಾಲಕ್ಕನುಗುಣವಾಗಿ ಜನರಿಗೆ ಅರ್ಥವಾಗುವ ರೀತಿಯಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಯಕ್ಷಗಾನ ಮಾಡುತ್ತಾ ಬಂದಿದೆ ಎಂದರು”. ಸಸ್ಯ ಸಂದಾನ, ಇಳಯಣ್ಣನ ಕಥೆ, ಅಕ್ಷರ ವಿಮೋಚನೆ, ವಿದ್ಯಾ ವಿಜಯ, ಮಿತ ಸಂತಾನದ ಮಹಿಮೆ, ನಿಸರ್ಗ ಸಂದಾನ ಮೊಹಿನಿ ಚರಿತ್ರೆ, ತಂಬಾಕು ಮಹಾತ್ಮೆ ಮುಂತಾದ ಹಳೆಯ ಪ್ರಸಂಗಗಳ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ಪರಿಸರ ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಸರಣಿ ಕಾರ್ಯಕ್ರಮ ಸ್ವಚ್ಛತಾ ಆಂದೋಲನದ 17ನೇ ದಿನ ಸ್ಥಳೀಯ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಸದಸ್ಯರ ಮತ್ತು ಗ್ರಾಮಸ್ಥರು ಏಕಕಾಲದಲ್ಲಿ ಸೌಪರ್ಣಿಕಾ ನದಿತೀರ, ಸಲಗೇರಿ, ದಳಿ ಭಾಗಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. 18ನೇ ದಿನದ ಸ್ವಚ್ಛತಾ ಆಂದೋಲನ ಇಲ್ಲಿನ ಮಾರಿಕಟ್ಟೆ, ಶ್ರೀ ಮೂಕಾಂಬಿಕಾ ಪ್ರೌಢಶಾಲಾ ಆವರಣ, ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪರಿಸರ ಸ್ವಚ್ಛಗೊಳಿಸಲಾಯಿತು. ಒಂದು ಹಂತದ ಸರಣಿ ಸ್ವಚ್ಛತಾ ಅಭಿಯಾನ ಮುಗಿದಿದ್ದು, ಮುಂದಿನ ದಿನಗಳಲ್ಲಿ ಪ್ರತೀ ಮಾತ್ರ ವಿವಿದೆಡೆ ಸ್ವಚ್ಛತಾ ಆಂದೋಲನ ಮುಂದುವರಿಯಲಿದೆ ಎಂದು ಅಭಿವೃದ್ಧಿ ಸಮಿತಿಯ ಡಾ. ಶ್ರೀಕಾಂತ್ ತಿಳಿಸಿದರು. ಅಲ್ಲದೇ ಗ್ರಾಮದ ಪ್ರತಿಯೊಬ್ಬರೂ ಕೂಡ ಈ ಅಭಿಯಾನದಲ್ಲಿ ಪಾಲ್ಗೊಂಡು ಕಸಮುಕ್ತ ಕೊಲ್ಲೂರು ನಿರ್ಮಾಣಕ್ಕೆ ಕೈಜೋಡಿಸುವಂತೆ ಮನವಿ ಮಾಡಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಭಾರತೀಯ ಸೇನೆಗೆ ಸೇರಲು ಈಗಾಗಲೇ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿರುವ , ಬಾಗಲಕೋಟೆ, ವಿಜಯಪುರ, ಧಾರವಾಢ, ಉತ್ತರ ಕನ್ನಡ, ಉಡುಪಿ, ದ.ಕನ್ನಡ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ತರುಣರಿಗೆ, ಉಡುಪಿ ಜಿಲ್ಲೆಯ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಮಾರ್ಚ್ 17ರಿಂದ ಸೇನಾ ನೇಮಕಾತಿ ರ್ಯಾಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು. ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೇನಾ ನೇಮಕಾತಿ ರ್ಯಾಲಿಯ ಪೂರ್ವಭಾವಿ ಸಭೆಯನ್ನು ಉದ್ಧೇಶಿಸಿ ಮಾತನಾಡಿದರು. ಸೇನಾ ರ್ಯಾಲಿಯಲ್ಲಿ, 38500 ಸಾವಿರ ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆ ಇದ್ದು, ಅವರಿಗೆ ಶೌಚಗೃಹ, ಕುಡಿಯುವ ನೀರಿನ ಸೌಲಭ್ಯ ಒದಗಿಸಿ. ಸ್ವಚ್ಚತೆ, ಶ್ಯಾಮಿಯಾನ, ಬ್ಯಾರಿಕೇಡ್ ಅಳವಡಿಕೆ, ಲೈಟ್ ವ್ಯವಸ್ಥೆ, ತುರ್ತು ಪರಿಸ್ಥಿತಿಗಳಲ್ಲಿ ವೈದ್ಯಕೀಯ ಮತ್ತು ಅಗ್ನಿಶಾಮಕ ವ್ಯವಸ್ಥೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಪೊಲೀಸ್ ನಿಯೋಜನೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳ ಒಗದಿಸುವಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು. ರ್ಯಾಲಿಯಲ್ಲಿ ಭಾಗವಹಿಸುವ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಂಟ್ವಾಡಿ ಬಾಲ ವಿಕಾಸ ಸಮಿತಿ, ಸ್ತ್ರೀ ಶಕ್ತಿ ಸಂಘಟನೆ, ಸೇನಾಪುರ ಗ್ರಾಮಸ್ಥರ ಆಶ್ರಯದಲ್ಲಿ ಬಂಟ್ವಾಡಿ ನಿವೃತ್ತ ಅಂಗವಾಡಿ ಶಿಕ್ಷಕಿ ಲೀಲಾವತಿ ನಾರಾಯಣ ಹೆಬ್ಬಾರ್ ಅವರಿಗೆ ಇಲ್ಲಿನ ನ್ಯೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸನ್ಮಾನ ನಡೆಯಿತು. ಸನ್ಮಾನ ಸ್ವಿಕರಿಸಿ ಮಾತನಾಡಿದ ನಿವೃತ್ತ ಬಂಟ್ವಾಡಿ ಅಂಗನವಾಡಿ ಶಿಕ್ಷಕಿ ಲೀಲಾವತಿ ನಾರಾಯಣ ಹೆಬ್ಬಾರ್, ಮಾತೃಭಾಷೆ ಹಾಗೂ ಅಂಗನವಾಡಿಯಲ್ಲಿ ಕಲಿತ ಮಕ್ಕಳು ಜೀವನದಲ್ಲಿ ಎಂದೂ ಸೋಲೋದಿಲ್ಲ. ಮನೆಯ ಮಕ್ಕಳಿಗೆ ತಾಯಿಯಾಗುವ ಭಾಗ್ಯ ಎಲ್ಲರಿಗೂ ಸಿಗುತ್ತಿದ್ದು, ಸಮಾಜದ ಮಕ್ಕಳಿಗೆ ತಾಯಿಯಾಗುವ ಭಾಗ್ಯ ಅಂಗನವಾಡಿ ಕೊಡುತ್ತದೆ. ಯಾವುದೇ ಕೆಲಸವಿರಲಿ ಶ್ರದ್ಧೆ ನಿಷ್ಠೆಯಿಂದ ದುಡಿದರೆ ಸಮಾಜ ಗುರುತಿಸುತ್ತದೆ ಎಂದು ಹೇಳಿದರು. ಬಂಟ್ವಾಡಿ ನ್ಯೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಸಂಚಾಲಕ ಬಿ.ಅರುಣ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪದ್ಮಾವತಿ ಜಗನ್ನಾಥ ಶ್ಯಾನುಭಾಗ್ ಸನ್ಮಾನಿಸಿದರು. ಸ್ತ್ರೀ ಶಕ್ತಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ನಿವೃತ್ತ ಅಂಗನವಾಡಿ ಶಿಕ್ಷಕಿ ಲೀಲಾವತಿ ಅವರಿಗೆ ಉಡಿ ತಂಬಿ ಬಾಗೀನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಭಯ ತಿಟ್ಟುಗಳ ಅಪ್ರತಿಮ ಸ್ತ್ರೀ ಪಾತ್ರದಾರಿ ವಂಡ್ಸೆ ನಾರಾಯಣ ಗಾಣಿಗ (84) ಅಲ್ಪಕಾಲದ ಅಸೌಖ್ಯದಿಂದ ವಂಡ್ಸೆಯ ಸ್ವಗೃಹದಲ್ಲಿ ಸೋಮವಾರ ನಿಧನರಾದರು. ಉತ್ತರ ಕನ್ನಡ, ದಕ್ಷಿಣ ಕನ್ನಡ, ತೆಂಕು ತಿಟ್ಟುಗಳಲ್ಲಿ ಮೆರೆದ ಏಕೈಕ ಕಲಾವಿದ ನಾರಾಯಣ ಗಾಣಿಗ 40 ವರ್ಷ ನಿರಂತರ ವೃತ್ತಿ ಕಲಾವಿದರಾಗಿ ಉತ್ತಂಗಕ್ಕೆ ಏರಿದ್ದರು. 12ನೇ ವಯಸ್ಸಿಗೆ ಬಣ್ಣಹಚ್ಚಿದ ಗಾಣಿಗ ಸ್ತ್ರೀ ಪಾತ್ರದ ಮೂಲಕ ಹಲವು ಪಾತ್ರಗಳಿಗೆ ರಂಗದಲ್ಲಿ ಜೀವ ತುಂಬಿದರು. ವಂಡ್ಸೆ ಶೇಷ ಗಾಣಿಗ ಹಾಗೂ ಪಣಿಯಮ್ಮ ಪುತ್ರನಾಗಿ 1937ರಲ್ಲಿ ಜನಿಸಿದ ಗಾಣಿಗರು ಪ್ರಾಥಮಿಕ ಶಿಕ್ಷಣ ಪಡೆದಿದ್ದರು. ಗಾಣಿಗ ಸಹೋದರ ಮುತ್ತ ಗಾಣಿಗ ಯಕ್ಷಗಾನ ಪ್ರವೇಶಕ್ಕೆ ಪ್ರೇರಣೆ. ಮಾರಣಕಟ್ಟೆ ಮೇಳದಲ್ಲಿ ಕೋಡಂಗಿ ವೇಷ ಮೂಲಕ ರಂಗಸ್ಥಳ ಪ್ರವೇಶಿಸಿದ ಗಾಣಿಗ ಮತ್ತೆ ಹಿಂದಕ್ಕೆ ತಿರುಗಿ ನೋಡಲಿಲ್ಲ. ವೀರಭದ್ರ ನಾಯ್ಕ್ ಮತ್ತು ಮಟ್ಪಾಡಿ ಶ್ರೀನಿವಾಸರಂತಹ ಮೇರು ಕಲಾವಿದರ ಶಿಷ್ಯರಾದ ಗಾಣಿಗರು ಉಭಯತಿಟ್ಟುಗಳ ಪ್ರಸಿದ್ಧ ಸ್ತ್ರೀ ಪಾತ್ರಧಾರಿಯಾಗಿ ರಂಗದಲ್ಲಿ ಮಿಂಚು ಹರಿಸಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕುಂದಾಪುರ ತಾಲೂಕು ಕೃಷಿ ಇಲಾಖೆ ಮತ್ತು ಬೈಂದೂರು ರೈತ ಸಂಪರ್ಕ ಕೇಂದ್ರದ ಆಶ್ರಯದಲ್ಲಿ 2020-21ನೇ ಸಾಲಿನ ಮಣ್ಣು ಆರೋಗ್ಯ ಚೀಟಿ ಕಾರ್ಯಕ್ರಮದಡಿ ಸೋಮವಾರ ಆರಂಭವಾದ ಎರಡು ದಿನಗಳ ರೈತ ತರಬೇತಿ ಕಾರ್ಯಕ್ರಮ ಇಲ್ಲಿನ ಮರವಂತೆ ಸಾಧನಾ ಸಮುದಾಯ ಭವನದ ವಿ. ಕೆ. ಕಾಮತ್ ಸಭಾಗೃಹದಲ್ಲಿ ನಡೆಯಿತು. ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಕೆ. ಬಾಬು ಶೆಟ್ಟಿ, ಕೃಷಿ ಲಾಭದಾಯಕ ಅಗಬೇಕೆಂದಿದ್ದರೆ ಮಿತವ್ಯಯದಲ್ಲಿ ಹೆಚ್ಚು ಉತ್ಪಾದನೆ ಆಗಬೇಕು. ಹಾಗಾಗಬೇಕಾದರೆ ರೈತರು ಕೃಷಿ ಸಂಬಂಧಿ ಅರಿವು ಪಡೆದು ಕೃಷಿ ಮಾಡಬೇಕು. ಜಿಲ್ಲೆಯಲ್ಲಿ ಹಿಂದಿದ್ದ ಸಾಂಪ್ರದಾಯಿಕ ಜಲ ಸಂವರ್ಧನ ಮೂಲಗಳು ನಶಿಸಿರುವುದರಿಂದ ಕೃಷಿಗೆ ಮತ್ತು ಕುಡಿಯಲು ನೀರಿನ ಅಭಾವ ಕಾಡುತ್ತಿದೆ. ಜನರು ನೀರು ಪೋಲಾಗುವುದನ್ನು ತಡೆಗಟ್ಟಿ, ಮಳೆಗಾಲದಲ್ಲಿ ನೀರು ಇಂಗಿಸುವ ಮೂಲಕ ನೀರಿನ ಕೊರತೆಯನ್ನು ನಿಭಾಯಿಸಬೇಕು ಎಂದು ಹೇಳಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ಜನಾರ್ದನ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಅಧಿಕಾರಿ ಪರಶುರಾಮ ಸ್ವಾಗತಿಸಿದರು. ಗಾಯತ್ರಿದೇವಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಕನ್ನಡ ಸಹ ಪ್ರಾಧ್ಯಾಪಕರಾದ ಗಣಪತಿ ಭಟ್ ಪಿ. ಅವರಿಗೆ ಬೀಳ್ಕೊಡುಗೆ ಸಮಾರಂಭ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್. ಪಿ. ನಾರಾಯಣ ಶೆಟ್ಟಿ ಮಾತನಾಡಿ, ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಗಣಪತಿ ಭಟ್ವರನ್ನು ನಾನು ಹಿಂದಿನಿಂದಲೂ ಗಮನಿಸಿದಂತೆ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ. ಕಷ್ಟಕರ ದಿನವಾದ ಕೊರೋನಾ ಸಂದರ್ಭದಲ್ಲಿಯೂ ಕೂಡ ತಂತ್ರಜ್ಞಾನದ ಆನ್ಲೈನ್ ತರಗತಿಯನ್ನು ನಿರ್ವಹಣೆ ಮಾಡಿರುವುದನ್ನು ನೆನಪಿಸಿಕೊಂಡರು. ವಿದ್ಯಾರ್ಥಿಗಳಿಗೆ ಒಳ್ಳೆಯ ಉಪನ್ಯಾಸಕನಾಗಿ ಕನ್ನಡ ಜ್ಞಾನಧಾರೆಯೆರೆಯುವಲ್ಲಿ ಪ್ರಯತ್ನಶೀಲರಾಗಿದ್ದರೆಂದು ಎಂದು ಹೇಳಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ರೇಖಾ. ವಿ. ಬನ್ನಾಡಿ ಮಾತನಾಡಿ, ಸಹೋದ್ಯೋಗಿಯಾದ ಗಣಪತಿ ಭಟ್ರವರು ಪ್ರತಿದಿನ ದೂರದ ಊರಿನಿಂದ ಬರುತ್ತಿದ್ದರೂ ಕೂಡ ಹಾಗೆ 20 ವರ್ಷ ನಮ್ಮ ಜೊತೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ಸಹಕಾರ ಮನೋಭಾವವನ್ನು ತೋರಿರುವುದನ್ನು ಸ್ಮರಿಸಿಕೊಂಡರು. ಸನ್ಮಾನಿತರಾದ ಗಣಪತಿ ಭಟ್ ಮಾತನಾಡಿ, ತಮ್ಮ ಕಲಿಕೆಯ ಕಾಲಘಟ್ಟವನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ನೆಲ್ಲಿಕಟ್ಟೆ ಕತ್ಕೊಡು ಎಂಬಲ್ಲಿ ಕರ್ನಾಟಕ ದಲಿತ ಸಂಘ ಸಮಿತಿ ಭೀಮ ಘರ್ಜನೆಯ ನೂತನ ಗ್ರಾಮ ಶಾಖೆ ಮತ್ತು ನಮ್ಮ ಭೂಮಿ ನಮ್ಮ ಹೋರಾಟದ ಉದ್ಘಾಟನೆ ನಡೆಯಿತು. ಉದ್ಘಾಟಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಉದಯ್ ಕುಮಾರ್ ತಲ್ಲೂರು, ಮನೆ, ಮನೆಯಲ್ಲೂಬಾಬಾ ಸಾಹೇಬ್ ಅವರ ಹೋರಾಟದ ಕ್ರಾಂತಿ ಜ್ಯೋತಿ ಬೆಳಗಬೇಕು, ಆ ಮೂಲಕ ಈ ಭಾಗದಲ್ಲಿ ಒತ್ತುವರಿಯಾದ ದಲಿತರ ಭೂಮಿಯನ್ನ ಕಾನೂನು ಮೂಲಕ ಮರಳಿ ಪಡೆಯಬೇಕು ಎಂದರು ಗ್ರಾಮ ಶಾಖೆಯ ಪದಾಧಿಕಾರಿಯನ್ನ ಆಯ್ಕೆ ಮಾಡಿ ಸಂಘಟನೆಯ ದ್ವಜವನ್ನ ಅವರಿಗೆ ಹಸ್ತಾಂತರಿಸಿ ಪ್ರಮಾಣ ವಚನ ನೀಡಲಾಯಿತು. ಮುಖ್ಯ ಅಥಿತಿಯಾಗಿ ಸಂಘಟನೆಯ ಕಲಾ ಮಂಡಳಿಯ ವಸಂತ ವಂಡ್ಸೆ ಅಂಬೇಡ್ಕರ್ ಬಾವ ಚಿತ್ರಕ್ಕೆ ಮಾಲಾರ್ಪಣೆ ನೆರವೇರಿಸಿ ಕ್ರಾಂತಿ ಗೀತೆಯ ಹಾಡಿ ಮಾತಾಡಿದರು. ಕಾರ್ಯಕ್ರಮದಲ್ಲಿ ಚಂದ್ರಮ ತಲ್ಲೂರು, ರತ್ನಾಕರ ಕುಂದಾಪುರ ಸುರೇಶ್ ಬಾಬು, ಗುರು ಜನ್ಸಾಲೆ ರಾಮ ಬೆಳ್ಳಾಲ ಹಾಗೂ ನೂತನ ಶಾಖೆಯ ಸಂಚಾಲಕರಾದ ಗುರುರಾಜ ಕತ್ಕೂಡು,…
