ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಎದುರಾಗಿರುವ ದುರವಸ್ಥೆ ಪರಿಹರಿಸುವಂತೆ ಆಗ್ರಹಿಸಿ ಸೋಮವಾರ ರಾಷ್ಟ್ರೀಯ ಹೆದ್ದಾರಿ ಹೋರಾಟ ಜಾಗೃತಿ ಸಮಿತಿಯು ಸಹಾಯಕ ಕಮಿಷನರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಮಳೆಗಾದಲ್ಲಿ ಸರ್ವಿಸ್ ರಸ್ತೆ ಮೇಲೆ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಕುಂದಾಪುರದ ಹೆಬ್ಬಾಗಿಲು ಶಾಸ್ತ್ರೀ ಸರ್ಕಲ್ ಸುತ್ತ ಸರ್ವಿಸ್ ರಸ್ತೆ ದುಸ್ಥಿತಿಗೆ ತಲುಪಿದೆ. ಇಲ್ಲಿ ಸರ್ವಿಸ್ ರಸ್ತೆಯ ಮಿತಿ ಎಷ್ಟು ಎನ್ನುವುದು ಇನ್ನೂ ನಿಗದಿಯಾಗಿಲ್ಲ. ಶಾಸ್ತ್ರೀ ಸರ್ಕಲ್ ವಿರೂಪಗೊಂಡಿದೆ. ಪಾದಚಾರಿಗಳು ನಡೆದು ಹೋಗುವ ಪುಟ್ಪಾತ್’ಗಳು ಮರೆಯಾಗಿವೆ. ಸಂಗಮ್’ನಿಂದ ಕೋಟೇಶ್ವರದ ತನಕ ರೋಡ್ ಕ್ರಾಸಿಂಗ್ ಅಸಮರ್ಪಕವಾಗಿದೆ. ಎಲ್.ಐ.ಸಿ ರಸ್ತೆ ಸಮೀಪ 17 ಕಛೇರಿಗಳಿದ್ದರೂ ಇಲ್ಲ ಕ್ರಾಸಿಂಗ್ ನೀಡಿಲ್ಲ. ಜಿಲ್ಲಾಡಳಿತ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು ಎಂದು ಸಮಿತಿಯ ಪ್ರಮುಖರು ಆಗ್ರಹಿಸಿದರು.
ಸಮಿತಿಯ ಸಂಚಾಲಕ ಕೆಂಚನೂರು ಸೋಮಶೇಖರ ಶೆಟ್ಟಿ, ಪ್ರಮುಖರಾದ ಬಿ. ಕಿಶೋರ್ ಕುಮಾರ್ , ರಾಜೇಶ್ ಕಾವೇರಿ, ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ಗಣೇಶ್ ಪುತ್ರನ್, ವಿವೇಕ್ ನಾಯಕ್, ಶಶಿಧರ ಹೆಮ್ಮಾಡಿ, ಶ್ರೀಪತಿ ಆಚಾರ್, ಜೋಯ್ ಕರ್ವಾಲೋ, ರಾಘವೇಂದ್ರ ಶೇಟ್ ಮತ್ತಿತರರು ಉಪಸ್ಥಿತರಿದ್ದರು.