Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕು ವ್ಯಾಪ್ತಿಯ 15 ಗ್ರಾಮ ಪಂಚಾಯತ್‌ಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪ್ರಕ್ರಿಯೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರ ಅಧ್ಯಕ್ಷತೆಯಲ್ಲಿ ಇಂದು ಬೈಂದೂರು ಯಡ್ತರೆಯ ಜೆಎನ್‌ಆರ್ ಕಲಾಮಂದಿರದಲ್ಲಿ ನಡೆಯಿತು. ತಾಲೂಕು ವ್ಯಾಪ್ತಿಯ ಎಲ್ಲಾ ಪಂಚಾಯತ್ ಗಳ ನೂತನ ಸದಸ್ಯರು ಆಯ್ಕೆ ಪ್ರಕ್ರಿಯೆ ಸಂದರ್ಭ ಭಾಗವಹಿಸಿದರು. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಬೈಂದೂರು ತಹಶೀಲ್ದಾರ್ ಕಿರಣ್ ಗೋರಯ್ಯ ಹಾಗೂ ಜಿಲ್ಲಾ ತಂತ್ರಜ್ಞಾನ ಇಲಾಖೆಯ ತಾಂತ್ರಿಕ ನಿರ್ದೇಶಕ ಮಂಜುನಾಥ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಬೈಂದೂರು ತಾಲೂಕಿನ 15 ಪಂಚಾಯತಿಗಳಿಗೆ ಆಯ್ಕೆಯಾದವರ ವಿವರ ಈ ಕೆಳಗಿನಂತಿದೆ

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ವಿ-ಶೈನ್ ಕೋಚಿಂಗ್ ಸೆಂಟರ್ ವತಿಯಿಂದ ನಡೆದ ಎಫ್.ಡಿ.ಎ ಮತ್ತು ಎಸ್.ಡಿ.ಎ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ಅಣುಕು ಪರೀಕ್ಷೆ ಕಾರ್ಯಗಾರ ನಡೆಯಿತು. ದ.ಕ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯಾವುದೇ ಭಯಪಡದೆ ಧೈರ್ಯವಾಗಿ ಎದುರಿಸಿದಾಗ ಗೆಲ್ಲಲು ಸಾಧ್ಯ, ವಿ-ಶೈನ್ ನಂತಹ ಕೋಚಿಂಗ್ ಸೆಂಟರ್‌ಗಳು ವಿದ್ಯಾರ್ಥಿಗಳಿಗೆ, ಪರೀಕ್ಷಾರ್ಥಿಗಳಿಗೆ ಒಂದು ಭರವಸೆಯಾಗಿ ಕೆಲಸ ನಿರ್ವಹಿಸುತ್ತವೆ. ಬದುಕಿನಲ್ಲಿ ಪ್ರಯತ್ನ ಪಡದೇ ಯಾವುದೂ ಕೂಡಾ ಸಾಧ್ಯವಿಲ್ಲ, ಪ್ರಯತ್ನಗಳು ನಿರಂತರವಾಗಿದ್ದಾಗ ಮಾತ್ರ ಏನಾದರೂ ಸಾಧನೆ ಮಾಡಲು ಸಾಧ್ಯ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆದಷ್ಟು ನಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು. ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ. ಕುಂದರ್ ಮಾತನಾಡಿ, ವಿ-ಶೈನ್ ಸೆಂಟರ್ ವಿದ್ಯಾರ್ಥಿಗಳಿಗೆ, ಒಂದು ದಾರಿ ದೀಪವಾಗಿ ಕೆಲಸ ನಿರ್ವಹಿಸುತ್ತಿದೆ ಅಲ್ಲದೇ ಕಳೆದ ಸಾಲಿನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪರೀಕ್ಷೆಯಲ್ಲಿ ಹನ್ನೆರಡಕ್ಕೂ ಹೆಚ್ಚಿನ ಮಂದಿ ಆಯ್ಕೆಯಾಗಿ ಉದ್ಯೋಗ ಪಡೆದುಕೊಂಡದು ಸಂತಸದ ವಿಷಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಹೀರೋ ಸಂಸ್ಥೆಯ 100 ಮಿಲಿಯನ್ ಬೈಕ್‌ಗಳನ್ನು ಮಾರಾಟ ಮಾಡಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಹೀರೋ ಶೋರೂಮ್ಗಳಲ್ಲಿ ಸಂಭ್ರಮಾಚರಣೆ ನಡೆದಿದ್ದು, ಬೈಂದೂರು ಎಸ್‌ಎಸ್‌ವಿ ಮೋಟರ್ಸ್ ಆವರಣದಲ್ಲಿಯೂ ಸಂಭ್ರಮಾಚರಣೆ ನಡೆಯಿತು. ಬೈಂದೂರು ವೃತ್ತ ನಿರೀಕ್ಷಕರಾದ ಸಂತೋಷ್ ಕಾಯ್ಕಿಣಿ ಅವರು ಕೇಕ್ ಕತ್ತರಿಸಿ ಶುಭಹಾರೈಸಿದರು. ಈ ಸಂದರ್ಭ ಬೈಂದೂರು ತಾಪಂ ಉಪಾಧ್ಯಕ್ಷರಾದ ಮಾಲಿನಿ ಕೆ., ಎಪಿಎಂಸಿ ಅಧ್ಯಕ್ಷರಾದ ವೆಂಕಟ ಪೂಜಾರಿ, ಬೈಂದೂರು ಬಿಜೆಪಿ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ, ಉದ್ಯಮಿಗಳಾದ ಸದಾಶಿವ ಪಡುವರಿ, ವೆಂಕಟರಮಣ ಬಿಜೂರು, ಸುರೇಶ್ ಹೋಬಳಿದಾರ್, ಭೀಮೇಶ್ ಕುಮಾರ್, ಶಿವಾನಂದ್, ಉದಯಕುಮಾರ್ ಶೆಟ್ಟಿ, ಕರ್ನಾಟಕ ಬ್ಯಾಂಕ್ ಬೈಂದೂರು ಶಾಖಾ ಪ್ರಂಬಂಧಕರಾದ ಪರಮೇಶ್ವರ ಪೂಜಾರಿ, ವಿಜಯ ಬ್ಯಾಂಕ್ ಶಾಖಾ ಪ್ರಬಂಧಕರಾದ ನಾಗೇಶ್ ಮೊದಲಾದವರು ಇದ್ದರು. ಬೈಂದೂರು ಎಸ್‌ಎಸ್‌ವಿ ಮೋಟರ್ಸ್‌ ಕೃಷ್ಣಯ್ಯ ಮದ್ದೋಡಿ ಸ್ವಾಗತಿಸಿ, ಶಿಕ್ಷಕರಾದ ಆನಂದ ಮದ್ದೋಡಿ ಕಾರ್ಯಕ್ರಮ ನಿರೂಪಿಸಿದರು.  

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಜನವರಿ 23 ರಂದು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯು ಅಜ್ಜರಕಾಡು ಡಾ ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಪಿ ಜಿ ಸೆಂಟರ್ ಹಾಗೂ ಜನವರಿ 24 ರಂದು ವಿವಿಧ ಇಲಾಖೆಗಳಲ್ಲಿನ ಸಹಾಯರು/ಪ್ರಥಮ ದರ್ಜೆ ಸಹಾಯಕರು, ಹಾಗೂ ಕಿರಿಯ ಸಹಾಯಕರು/ದ್ವಿತೀಯ ದರ್ಜೆ ಸಹಾಯಕರ ಸ್ಪರ್ಧಾತ್ಮಕ ಪರೀಕ್ಷೆಯು ಜಿಲ್ಲೆಯ ಒಟ್ಟು 11 ಪರೀಕ್ಷಾ ಕೇಂದ್ರಗಳಾದ ಉಡುಪಿ ಪೂರ್ಣಪ್ರಜ್ಞ ಕಾಲೇಜು, ಅಜ್ಜರಕಾಡು ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಉಡುಪಿ ಪೂರ್ಣಪ್ರಜ್ಞ ಪಿ.ಯು ಕಾಲೇಜು, ಮಣಿಪಾಲ ಪ್ರಿ-ಯುನಿವರ್ಸಿಟಿ ಕಾಲೇಜು, ಉಡುಪಿ ಸರ್ಕಾರಿ ಪಿ.ಯು ಕಾಲೇಜು, ಕುಂಜಿಬೆಟ್ಟು ಟಿ.ಎ. ಪೈ ಇಂಗ್ಲೀಷ್ ಮೀಡಿಯಮ್ ಹೈ ಸ್ಕೂಲ್, ಕಡಿಯಾಳಿ ಯು. ಕಮಲಾಬಾಯಿ ಹೈ ಸ್ಕೂಲ್, ಉಡುಪಿ ಸರ್ಕಾರಿ ಪಿ.ಯು ಕಾಲೇಜು ಫಾರ್ ಗರ್ಲ್ಸ್ ಹೈ ಸ್ಕೂಲ್ ಸೆಕ್ಷನ್, ಉಡುಪಿಯ ಕ್ರಿಶ್ಚಿಯನ್ ಹೈ ಸ್ಕೂಲ್, ಉಡುಪಿಯ ಸೈಂಟ್ ಸಿಸಿಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸ್ಥಳೀಯ ಮತ್ತು ಮಿಕ್ಕುಳಿದ ವೃಂದಗಳ ಒಟ್ಟು 545 ಪೊಲೀಸ್ ಸಬ್-ಇನ್ಸ್ಪೆಕ್ಟರ್ (ಸಿವಿಲ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಪುರುಷ, ಮಹಿಳಾ ಮತ್ತು ಸೇವೆಯಲ್ಲಿರುವವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಫೆ.22 ಕೊನೆಯ ದಿನ, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ https://recruitment.ksp.gov.in ವೀಕ್ಷಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ನಡೆದ ಡಾ. ಶಿವರಾಮ ಕಾರಂತ ಪ್ರತಿಷ್ಠಾನ ರಿ. ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ ರಿ. ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಪ್ರಸ್ತುತಿ ರೋಟರಿ ಕ್ಲಬ್ ಹಂಗಾರಕಟ್ಟೆ-ಸಾಸ್ತಾನ, ಅಕ್ಷರ ಜ್ಯೋತಿ ಗಝಲ್ ಬಳಗ, ಉಡುಪಿ ಜಿಲ್ಲೆ ಅವರ ಸಹಯೋಗದಲ್ಲಿ ಉಡುಪಿ ಜಿಲ್ಲಾ ಮೊದಲ ಗಝುಲ್ ಕವಿಗೋಷ್ಠಿ ಮತ್ತು ಮ್ಯಾಂಡಲಿನ್ ನಿನಾದ ಸಂಕ್ರಮಣ-2021(ತಂಪೆರೆವ ಬಿನ್ನಾಣ) ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ, ಕ್ಷೇತ್ರ ಅಮೃತೇಶ್ವರಿ ದೇವಸ್ಥಾನದ ಧರ್ಮದರ್ಶಿ ಆನಂದ್ ಸಿ. ಕುಂದರ್ ಮಾತನಾಡಿ, ಯುವ ಬರಹಗಾರನ್ನು ಪ್ರೋತ್ಸಾಹಿಸಿ ಮುಖ್ಯವಾಹಿನಿಗೆ ತಂದಾಗ ಅವರಲ್ಲಿರುವ ಪ್ರತಿಭೆಗಳು ಅನಾವರಣಗೊಳ್ಳಲು ಸಾಧ್ಯ, ಈ ನಿಟ್ಟಿನಲ್ಲಿ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ಇನ್ನಷ್ಟೂ ಸಾಹಿತ್ಯಿಕ ಚಟುವಟಿಕೆ, ವಿವಿಧ ಸಮ್ಮೇಳನಗಳನ್ನು ಆಯೋಜಿಸುವ ಯೋಜನೆ ಹಾಕಲಾಗುವುದು ಎಂದು ಹೇಳಿದರು. ಅಕ್ಷರ ಜ್ಯೋತಿ ಗಝುಲ್ ಬಳಗ ಮುಖ್ಯ ಗಣೇಶ್ ಪ್ರಸಾದ ಪಾಂಡೇಲು ಮಾತನಾಡಿ, ಕಾರಂತ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೋಡಿಯ ಬ್ಯಾರೀಸ್ ವಿದ್ಯಾಸಂಸ್ಥೆಯ ಕೋಟೆ ಮನ್ಸೂರ್ ಕೋಟೆ ಮತ್ತು ಅವರ ತಂಡದಿಂದ ಆಯೋಜಿಸಲಾದ ಕೋಟೆ ಫ್ರೆಂಡ್ಸ್ ಕ್ರಿಕೆಟರ್ಸ ಕೋಡಿ ಫ್ರೆಂಡ್ಸ್ ಟ್ರೋಫಿ 2020-21ರ ಸಮಾರೋಪ ಸಮಾರಂಭ ನಡೆಯಿತು. ಮುಖ್ಯ ಅಥಿತಿಯಾಗಿ ಆಗಮಿಸಿದ ಮಂಗಳೂರು ಭಾಗದ ಶಾಸಕರಾದ ಜನಾಬ್ ಯು. ಟಿ ಖಾದರ್ ಮಾತನಾಡುತ್ತಾ ಯುವಕರು ಹೆಚ್ಚಿನ ಸಮಯವನ್ನು ಕ್ರೀಡೆಯಲ್ಲಿ ಕಳೆಯುವುದರಿಂದ ಕ್ರೀಡಾಭಿಮಾನವು ದೇಶದ ಸಂಸ್ಕೃತಿ ಮತ್ತು ಮೌಲ್ಯಗಳನ್ನು ರಕ್ಷಿಸಲು ಪ್ರೇರಣೆಯಾಗುತ್ತದೆ.ಆದ್ದರಿಂದ ಕ್ರೀಡೆಯ ಮೂಲಕವೂ ಕೂಡ ಸೌಹಾರ್ದತೆ ನಮ್ಮ ಬದುಕಾಗಬೇಕು ಎಂದರು. ತಾಯಿಯ ಗರ್ಭದಲ್ಲಿ ಮಕ್ಕಳಾಗಿ ನಂತರ ಪರಿಸರ ದಲ್ಲಿ ಬೆಳೆಯುವ ನಾವು ಯಾವ ಕ್ಷಣದಲ್ಲಾದರೂ ಮಣ್ಣಲ್ಲಿ ಮಣ್ಣಾಗುವವರು. ಆದ್ದರಿಂದ ಎಲ್ಲರೂ ಸೌಹಾರ್ದತೆಯಿಂದ ಬದುಕಿ ಬಾಳೋಣ ಎಂದರು. ಬ್ಯಾರೀಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಸಯ್ಯಾದ್ದ್ ಮಹಮ್ಮದ್ ಬ್ಯಾರೀ, ಕೃಷ್ಣಾನಂದ ಹೆಗ್ಡೆ ಟ್ರಸ್ಟೀ ಜನಪ್ರತಿನಿಧಿ ಸೇವಾ ಟ್ರಸ್ಟ್ ರಿ.ಕೋಟೇಶ್ವರ, ಪ್ರತಿಪಾಡಿ ನ್ಯಾಷನಲ್ ಕೌನ್ಸಿಲ್ ಜೆಡಿಎಸ್ ಸದಸ್ಯರಾದ ಜನಾಬ್ ಹೈದರ್, ಉತ್ತರ ಕನ್ನಡ ಜನತಾದಳ ಮುಖಂಡರಾದ ಇನಾಯ್ತುಲ್ಲಾ ಶಭಾನಂಧಾರೀ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಶನ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದದ ಸಹಯೋಗದಲ್ಲಿ ನಡೆಯುತ್ತಿರುವ 36ನೇ ರಾಜ್ಯ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ಶಿಪ್ನಲ್ಲಿ 287 ಅಂಕಗಳೊದಿಗೆ, 33 ಚಿನ್ನ, 29 ಬೆಳ್ಳಿ ಹಾಗೂ 35 ಕಂಚಿನ ಪದಕಗಳೊಂದಿಗೆ ಆಳ್ವಾಸ್ ಕ್ರೀಡಾಪಟುಗಳು ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ಗೆ ಸಮಗ್ರ ಚಾಂಪಿಯನ್‌ಶಿಪ್‌ಗೆ ಭಾಜನವಾಗಿದೆ. ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ 90 ಅಂಕಗಳೊದಿಗೆ ದ್ವಿತೀಯ ಹಾಗೂ ಮೈಸೂರು ಡಿಸ್ಟ್ರಿಕ್ಟ್  ಅಥ್ಲೆಟಿಕ್ಸ್ ಅಸೋಸಿಯೇಶನ್ 84 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿವೆ. ಕ್ರೀಡಾಕೂಟದ ಮೂರನೇ ದಿನದ ಅಥ್ಲೆಟಿಕ್ ಒಟ್ಟು 18 ಇವೆಂಟ್‌ಗಳು ನಡೆದಿವೆ. ಮೂರು ದಿನದ ಚಾಂಪಿಯನ್ಶಿಪ್ನಲ್ಲಿ ಒಟ್ಟು 6 ಕೂಟ ದಾಖಲೆಗಳು ದಾಖಲಾಗಿದ್ದು, ಮೂರನೇ ದಿನ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್ನ ರಮ್ಯಶ್ರೀ ಜೈನ್ ಜಾವೆಲಿನ್ ಥ್ರೋನಲ್ಲಿ 44.54 ಮೀ. (39.50 ಮೀ- ಹಳೆಯ ದಾಖಲೆ) ದೂರ ದಾಖಲಿಸಿ ಹೊಸ ಕೂಟ ದಾಖಲೆ ಬರೆದಿದ್ದಾರೆ. ಪದಕಗಳ ವಿವರ: ಪ್ರಥಮ: ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್(287 ಅಂಕಗಳು) ಚಿನ್ನ-33 ಬೆಳ್ಳಿ-29…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಬ್ರಹ್ಮಾವರ ತಾಲೂಕು ಘಟಕ ಸಾರಥ್ಯದಲ್ಲಿ ಶ್ರೀ ವಿನಾಯಕ ಯುವಕ ಮಂಡಲ ರಿ. ಸಾಬ್ರಕಟ್ಟೆ – ಯಡ್ತಾಡಿ ಸಹಕಾರದಲ್ಲಿ ನಡೆಯುವ ಬ್ರಹ್ಮಾವರ ತಾಲೂಕು ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನ ಹಗ್ಗಿನ ಹನಿ – 2021 (ಗುರುತಿನ ಅನುಸಂಧಾನ) ಕಾರ್ಯಕ್ರಮದ ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ, ಸಂಶೋಧಕ ಬಾಬು ಶಿವಪೂಜಾರಿ ಅವರನ್ನು ಆಯ್ಕೆ ಮಾಡಲಾಗಿದೆ. ಜ.24ರಂದು ಸಾಬ್ರಕಟ್ಟೆ ಮಹಾತ್ಮ ಗಾಂಧಿ ಫ್ರೌಡ ಶಾಲೆಯಲ್ಲಿ ಸಮ್ಮೇಳನ ವಿವಿಧ ಗೋಷ್ಠಿ, ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟ, ಬ್ರಹ್ಮಾವರ ತಾಲೂಕು ಕ.ಸಾ.ಪ ಅಧ್ಯಕ್ಷ ಸೂರಾಲು ನಾರಾಯಣ ಮಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಅಂಧ ವಿದ್ಯಾರ್ಥಿಗಳು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಸ್ವಾವಲಂಬಿಗಳಾಗಲು ಟಾಕಿಂಗ್ ಮೊಬೈಲ್, ಬ್ರೈಲ್ ವಾಚ್, ವಾಕಿಂಗ್ ಸ್ಟಿಕ್ ಮತ್ತು ಇನ್ನಿತರ ಸಾಧನಗಳನ್ನು ಒಳಗೊಂಡ ತಲಾ 25,000 ರೂ.ಗಳ ಬ್ರೈಲ್ ಕಿಟ್‌ಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ. ಅಂಧ ವಿದ್ಯಾರ್ಥಿಗಳ ವಿಕಲತೆಯ ಪ್ರಮಾಣ ಶೇ.40 ಅಥವಾ ಅದಕ್ಕಿಂತ ಹೆಚ್ಚಾಗಿರುವ, ಎಸ್.ಎಸ್.ಎಲ್.ಸಿ ಹಾಗೂ ನಂತರದ ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿರುವ, ರಾಜ್ಯದಲ್ಲಿ ಕನಿಷ್ಠ 10 ವರ್ಷಗಳ ನಿವಾಸಿಯಾಗಿರುವವರು, ಸಂಬಂಧಪಟ್ಟ ಶಾಲಾ ಕಾಲೇಜುಗಳ ಮುಖ್ಯಸ್ಥರಿಂದ ಶಿಕ್ಷಣ ಪಡೆಯುತ್ತಿರುವ ಬಗ್ಗೆ ದೃಢೀಕರಣ ಒದಗಿಸಬೇಕು. ಅರ್ಜಿ ಸಲ್ಲಿಸಲು ಫೆಬ್ರವರಿ 6 ಕೊನೆಯ ದಿನ, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ದೂರವಾಣಿ ಸಂಖ್ಯೆ: 0820-2574810/811 ಅಥವಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸಿ ಬ್ಲಾಕ್, ತಳಮಹಡಿ, ಸಿಂಡಿಕೇಟ್ ಬ್ಯಾಂಕ್ ಹತ್ತಿರ, ಜಿಲ್ಲಾ ಪಂಚಾಯತ್ ವಿಭಾಗ, ರಜತಾದ್ರಿ,…

Read More