ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ರೋಟರಿ ಕ್ಲಬ್ ವತಿಯಿಂದ ಚಿತ್ತೂರು ಸರಕಾರಿ ಪ್ರೌಢಶಾಲೆಯ ಇಂಟರಾಕ್ಟ್ ಕ್ಲಬ್ ಸಹಯೋಗದೊಂದಿಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸಾಲಿನ ಪರೀಕ್ಷೆ ಎದುರಿಸುವ ಕುರಿತು ಮಾಹಿತಿ ನೀಡಲಾಯಿತು. ಅತಿಥಿಯಾಗಿದ್ದ ಕುಮಾರ್ ಎಸ್. ಕಾಂಚನ್ ಪರೀಕ್ಷೆ ಭಯ, ಪರೀಕ್ಷೆ ಎದುರಿಸುವ ರೀತಿ, ಪರೀಕ್ಷೆಗೆ ತಯಾರಿ ಮತ್ತು ಶಿಕ್ಷಣದ ಬಗ್ಗೆ ಸುದೀರ್ಘವಾಗಿ ಮಾತನಾಡಿ ಶುಭ ಹಾರೈಸಿದರು. ಕುಂದಾಪುರ ರೋಟರಿ ಅಧ್ಯಕ್ಷ ರೊ.ವೆಂಕಟೇಶ್ ನಾವುಂದ ಶುಭಹಾರೈಸಿದರು. ಇಂಟರಾಕ್ಟ್ ಅಧ್ಯಕ್ಷ ಶುಶಾಂತ್, ಕಾರ್ಯದರ್ಶಿ ಅಮೂಲ್ಯ, ಇಂಟರಾಕ್ಟ್ ಕೋ-ಆರ್ಡಿನೇಟರ್ ಶಿಕ್ಷಕಿ ಮೀನಾ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಜಗದೀಶ ಶೆಟ್ಟಿ ಸ್ವಾಗತಿಸಿ, ವಂದಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಹದಿನಾರನೆಯ ಶತಮಾನದ ವಿದೇಶಿ ಆಕ್ರಮಣಕಾರರು, ವಿಶೇಷವಾಗಿ ಬ್ರಿಟಿಷರು ಭಾರತದಲ್ಲಿ ನಿರಂತರವಾಗಿ ಕೇವಲ ಸಂಪತ್ತನ್ನು ಮಾತ್ರ ಲೂಟಿ ಮಾಡಲಿಲ್ಲ, ತಮ್ಮ ದುಷ್ಟ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ, ನಮ್ಮ ಆರ್ಥಿಕತೆಗೆ ಕೊಡಲಿ ಪೆಟ್ಟು ಕೊಟ್ಟು, ಸಮಾಜ ರಚನೆಯನ್ನು ಮತ್ತು ವಿವಿಧ ಉತ್ಪಾದನಾ ಕ್ಷೇತ್ರವನ್ನು ಹಾಳು ಮಾಡಿದರು. ಆದರೆ ಯುವಶಕ್ತಿಯ ಪ್ರಮಾಣ ಮತ್ತು ಅವರಲ್ಲಿನ ಅಂತರ್ಗತ ಪ್ರತಿಭೆಯಿಂದಾಗಿ ಕಳೆದ 30 ವರ್ಷಗಳಲ್ಲಿ ಭಾರತ ಬಲಿಷ್ಟವಾಗಿದೆ ಎಂದು ಉಡುಪಿ ಜಿಲ್ಲಾ ಸ್ವಾವಲಂಬಿ ಭಾರತ್ ಅಭಿಯಾನದ ಸಹ ಸಂಯೋಜಕ್ ಪ್ರಸನ್ನ ಉಪ್ಪುಂದ ಹೇಳಿದರು. ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸ್ವಾವಲಂಭಿ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ.ರಘು ನಾಯ್ಕ್ ಸ್ವಾಗತಿಸಿದರು. ರಾಘವೇಂದ್ರ ಬಿ. ಕೆ ವಂದಿಸಿದರು. ತುಳಸಿದಾಸ್ ಶಿರೂರು ನಿರೂಪಿಸಿದರು. ವಿದ್ಯಾರ್ಥಿಗಳಿಗೆ ಪ್ರೊಜೆಕ್ಟರ್ ಮೂಲಕ ಪವರ್ ಪಾಯಿಂಟ್ ಪ್ರೆಸೆಂಟೇಶನ್ ತೋರಿಸಿಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಲಾಕ್ಷೇತ್ರ-ಕುಂದಾಪುರ ಟ್ರಸ್ಟ್ ವತಿಯಿಂದ ಆಯೋಜಿಸಲಾಗುತ್ತಿರುವ 11ನೇ ಇನಿದನಿ ಕಾರ್ಯಕ್ರಮ ಜನವರಿ 15ರ ಭಾನುವಾರ ಸಂಜೆ 6 ಗಂಟೆಗೆ ಇಲ್ಲಿನ ಬೋರ್ಡ್ ಹೈಸ್ಕೂಲಿನಲ್ಲಿ ಜರುಗಲಿದೆ. ಪ್ರಸಿದ್ಧ ಹಾಗೂ ಯುವ ಪ್ರತಿಭಾನ್ವಿತ ಕಲಾವಿದರು ಸೇರಿದಂತೆ ಒಟ್ಟು 27 ಮಂದಿ ಕಲಾವಿದರ ಇನಿದನಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ಹೇಳಿದರು. ಅವರು ಕಲಾಕ್ಷೇತ್ರ ಕುಂದಾಪುರ ಕಛೇರಿಯಲ್ಲಿ ಆಯೋಜಿಸಲಾಗಿದ್ದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಶಿವಮೊಗ್ಗದ ವೇಣುಗೋಪಾಲ, ಬೆಂಗಳೂರಿನ ರಮೇಶ್ಚಂದ್ರ ಮತ್ತು ಶೃತಿ ಭಿಡೆ, ಸಂಗೀತ ಬಾಲಚಂದ್ರ ಉಡುಪಿ, ರವೀಂದ್ರ ಪ್ರಭು ಮೂಲ್ಕಿ, ವೈ ಎನ್. ರವೀಂದ್ರ ಮಂಗಳೂರು, ಅಶೋಕ್ ಸಾರಂಗ್ ಕುಂದಾಪುರ ಹಾಗೂ ಯುವ ಪ್ರತಿಭೆ ಪ್ರಾಪ್ತಿ ಹೆಗ್ಡೆ, ಧಾರಿಣಿ ಕುಂದಾಪುರ ಮತ್ತು ಕಮಲ್ ಕುಂದಾಪುರ ಗಾಯಕ ಗಾಯಕಿಯರು ಭಾಗವಹಿಸಲಿದ್ದು, ಗಿಟಾರ್ ಮಾಂತ್ರಿಕ ಮಂಗಳೂರಿನ ರಾಜಗೋಪಾಲ್ ಮತ್ತು ಕೀಬೋರ್ಡ್ ಮಾಂತ್ರಿಕ ದೀಪಕ್ ಶಿವಮೊಗ್ಗ ಮತ್ತು ಇತರೇ ಪರಿಪಕ್ವ ಕಲಾವಿದರುಗಳನ್ನೊಳಗೊಂಡ ತಂಡದಲ್ಲಿ ಅಂತಾರಾಷ್ಟ್ರೀಯ ಮಟ್ಟದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕಳೆದ 45 ವರ್ಷಗಳಿಂದ ಸಕ್ರೀಯವಾಗಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ರಂಗಚಟುವಟಿಕೆಗಳ ಮೂಲಕ ರಾಜ್ಯದಾದ್ಯಂತ ಗುರುತಿಸಿಕೊಂಡಿರುವ ಪ್ರತಿಷ್ಠಿತ ಲಾವಣ್ಯ ಬೈಂದೂರು ಸಂಸ್ಥೆಯ 2023-25ನೇ ಸಾಲಿನ ನೂತನ ಅಧ್ಯಕ್ಷರಾಗಿ ನರಸಿಂಹ ಬಿ. ನಾಯಕ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎಚ್. ವಿಶ್ವನಾಥ ಆಚಾರ್ಯ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಲಾವಣ್ಯ ರಂಗಮನೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರೀಯೆ ನಡೆಯಿತು. ಗೌರವಾಧ್ಯಕ್ಷರಾಗಿ ಯು. ಶ್ರೀನಿವಾಸ ಪ್ರಭು, ವಿ. ಆರ್. ಬಾಲಚಂದ್ರ, ಉಪಾಧ್ಯಕ್ಷರಾಗಿ ರಾಮ ಕೆ., ರವೀಂದ್ರ ಶ್ಯಾನುಭಾಗ್, ಜೊತೆ ಕಾರ್ಯದರ್ಶಿಯಾಗಿ ಗಣೇಶ್ ಪರಮಾನಂದ, ರೋಶನ್ ಕುಮಾರ್, ರಾಜೇಶ್ ನಾಯ್ಕ, ಕೋಶಾಧಿಕಾರಿ ಸುರೇಶ್ ಹುದಾರ್, ಸಂಘಟನಾ ಕಾರ್ಯದರ್ಶಿಯಾಗಿ ಸುಮಂತ್ ಆಚಾರ್ಯ, ಶಶಾಂಕ್ ಕಾರಂತ್, ಶ್ರೀಧರ್ ವಸ್ರೆ. ವ್ಯವಸ್ಥಾಪಕರಾಗಿ ಹರೆಗೋಡು ಉದಯ್ ಆಚಾರ್ಯ, ಮೂರ್ತಿ ಬೈಂದೂರು, ಸುಬ್ರಹ್ಮಣ್ಯ ಎಸ್., ಗೌರವ ಸಲಹೆಗಾರರಾಗಿ ನಾಕಟ್ಟೆ ನಾಗರಾಜ ಶೆಟ್ಟಿ, ಸದಾಶಿವ ಡಿ. ಪಡುವರಿ, ನಾಗರಾಜ ಗಾಣಿಗ ಬಂಕೇಶ್ವರ, ವಿಶ್ವನಾಥ ಶೆಟ್ಟಿ, ಸುನಿಲ್ ಎಚ್. ಹಾಗೂ ಕಾರ್ಯಕಾರಿ ಸಮಿತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಿಎ/ಸಿಎಸ್ ಪ್ರೊಫೆಶನಲ್ ಕೋರ್ಸುಗಳ ತರಬೇತಿ ಸಂಸ್ಥೆ ಶಿಕ್ಷಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್ (ಸ್ಪೇಸ್)ನ ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಚಾರ್ಟ್ರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯ ನವೆಂಬರ್ 2022ರಲ್ಲಿ ನೆಡೆಸಿದ ಸಿಎ ಇಂಟರ್ಮೀಡಿಯೇಟ್ ಮತ್ತು ಸಿಎ ಅಂತಿಮ ಪರೀಕ್ಷೆಯಲ್ಲಿ ಅನೇಕ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿ ಉತ್ತಮ ಸಾಧನೆಗೈದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿ ವೆಂಕಟೇಶ್ ಪುರಾಣಿಕ್ (526) ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಾಧನೆಗೈದಿದ್ದಾರೆ. ಸಾತ್ವಿಕ್ (202), ಸಚಿನ್ (226) ಸಿಎ ಅಂತಿಮ ಪರೀಕ್ಷೆಯ ಮೊದಲನೇ ಹಂತ ಮತ್ತು ಷಣ್ಮುಖ (236) ಅಂತಿಮ ಪರೀಕ್ಷೆಯ ಎರಡನೇಯ ಹಂತದಲ್ಲಿ ತೇರ್ಗಡೆ ಹೊಂದಿದರೆ, ಸಂಸ್ಥೆಯ ವಿದ್ಯಾರ್ಥಿಗಳಾದ ಆನುಷ್ಕ ಕುಂದರ್ (545) ಸಂಸ್ಥೆಗೆ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿ ಮತ್ತು ಎನ್. ಅಕ್ಷಯ್ ಕಾಮತ್ (215), ಕಿರಣ್ ಕಾಮತ್ (237), ಅಂಕಗಳೊಂದಿಗೆ ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಿಎ ಅಂತಿಮ ಪರೀಕ್ಷೆಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ಅಕ್ಷಿತಾ (258),…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹೊಸ ಹೊಸ ದಾಖಲೆಗಳನ್ನು ಸೃಷ್ಠಿಸುತ್ತಾ 100 ದಿನ ಪೂರೈಸಿರುವ ‘ಕಾಂತಾರ’ಸಿನಿಮಾ ಇದೀಗ ಆಸ್ಕರ್ ಪ್ರಶಸ್ತಿಯ ಅರ್ಹತಾ ಸುತ್ತಿಗೆ ಪ್ರವೇಶ ಪಡೆದಿದೆ. ಈ ಮೂಲಕ ಕನ್ನಡದ ಸೂಪರ್ ಹಿಟ್ ‘ಕಾಂತಾರ ಮತ್ತೊಂದು ಮೈಲಿಗಲ್ಲು ನಿರ್ಮಿಸಲು ಸಜ್ಜಾಗಿದೆ. ಕನ್ನಡದ ಹೆಮ್ಮೆಯ ‘ಕಾಂತಾರ‘ ಆಸ್ಕರ್ ರೇಸ್ಗೆ ಎಂಟ್ರಿ ಕೊಟ್ಟಿದ್ದಲ್ಲದೇ ಎರಡು ವಿಭಾಗಗಳಲ್ಲಿ ಅರ್ಹತೆ ಪಡೆದುಕೊಂಡಿದೆ. ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ನಟ ವಿಭಾಗದಲ್ಲಿ ‘ಕಾಂತಾರಾ ಅರ್ಹತಾ ಸುತ್ತು ಪಾಸ್ ಮಾಡಿದ್ದು, ಕನ್ನಡಿಗರ ಖುಷಿಯನ್ನು ಹೆಚ್ಚಿಸಿದೆ. ಕುಂದಾಪುರ ಕೆರಾಡಿಯ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸುರುವ ಚಿತ್ರ ಬಿಡುಗಡೆಯಾದಾಗಲಿಂದಲೂ ಸಾಕಷ್ಟು ದಾಖಲೆ ಸೃಷ್ಟಿಸಿತ್ತು. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ಮಂಗಳವಾರ ಟ್ವೀಟ್ ಸಂತಸ ಹಂಚಿಕೊಂಡಿದ್ದಾರೆ. ‘ಕಾಂತಾರ’ ಚಿತ್ರವು 2 ಆಸ್ಕರ್ ಅರ್ಹತೆಗಳನ್ನು ಪಡೆದಿರುವ ವಿಚಾರ ತಿಳಿಸಲು ನಮಗೆ ಖುಷಿಯಾಗುತ್ತಿದೆ. ನಮ್ಮನ್ನು ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು’ಎಂದು ಹೇಳಿದ್ದಾರೆ. ಆಸ್ಕರ್ ರೇಸ್ನಲ್ಲಿರುವ 301 ಸಿನಿಮಾಗಳು ಅರ್ಹತಾ ಸುತ್ತನ್ನು ಪಾಸ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಭಾರತದ ಮೇಲಿನ ದಾಳಿಗಳಿಗೆ ಕಾರಣವೇ ಭಾರತದ ಆರ್ಥಿಕ ಸಮೃದ್ಧಿ. ಮೊದಲ ಶತಮಾನದಿಂದ 15 ನೇ ಶತಮಾನದವರೆಗೆ ಪ್ರಪಂಚದ ಉತ್ಪಾದನೆಯ ಶೇಕಡಾ 32 ಭಾರತವೊಂದರಿಂದಲೇ ಆಗಿತ್ತು ಎಂದು ಸ್ವಾವಲಂಬಿ ಭಾರತ ಅಭಿಯಾನದ ಉಡುಪಿ ಜಿಲ್ಲಾ ಸಹ ಸಂಯೋಜಕ ಪ್ರಸನ್ನ ಕುಮಾರ್ ಹೇಳಿದರು. ಅವರು ಕಂಬದಕೋಣೆ ಪದವಿ ಪೂರ್ವ ಕಾಲೇಜು ಇಲ್ಲಿ ನಡೆದ ಸ್ವಾವಲಂಬಿ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರಾಚೀನ ಭಾರತ ಸಮೃದ್ಧ ಆರ್ಥಿಕತೆಯಾಗಿರಲು ಕಾರಣ ಸಮಾಜದ ಪ್ರತಿಯೊಬ್ಬ ಯುವಕರು ಸ್ವಯಂ ಪ್ರೇರಿತರಾಗಿ ಉತ್ಪಾದನೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರು. ಪ್ರತಿಯೊಂದು ವ್ಯಾಪಾರ, ಉದ್ಯಮ ಅಥವಾ ಕೃಷಿಯಲ್ಲಿ ಜನರು ಸ್ವಾಭಾವಿಕವಾಗಿ ಸೇರಿಕೊಳ್ಳುತ್ತಿದ್ದರು ಎಂದರು. ಕಾಲೇಜು ಪ್ರಾಂಶುಪಾಲರಾದ ಗಣಪತಿ ಅವಭೃತ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉಡುಪಿ ಜಿಲ್ಲಾ ಸ್ವಾವಲಂಭಿ ಭಾರತ ಅಭಿಯಾನದ ಸಂಯೋಜಕರಾದ ವಿಜಯ ಕೊಡವೂರು ಉಪಸ್ಥಿತರಿದ್ದರು. ರಾಘವೇಂದ್ರ ಬಿ.ಕೆ. ಸ್ವಾಗತಿಸಿದರು. ತುಳಸಿದಾಸ್ ನಿರೂಪಿಸಿದರು. ಆ ನಂತರ ವಿದ್ಯಾರ್ಥಿಗಳಿಗೆ ಪ್ರೊಜೆಕ್ಟರ್ ಮೂಲಕ ಪವರ್ ಪಾಯಿಂಟ್ ಪ್ರಸೆಂಟೇಶನ್ ತೋರಿಸಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಔಟ್ ಬೋರ್ಡ್ ಇಂಜಿನ್ ಅಳವಡಿಸಿ ಮೀನುಗಾರಿಕೆ ಮಾಡುವ ಸಾಂಪ್ರದಾಯಿಕ ನಾಡದೋಣಿಗಳಿಗೆ ರಾಜ್ಯ ಸರಕಾರ ಈ ಹಿಂದೆ ಒದಗಿಸುತ್ತಿರುವ ಮಾಸಿಕ ತಲಾ 150 ಲೀಟರ್ ಸೀಮೆಎಣ್ಣೆ ಮಾತ್ರ ಒದಗಿಸುತ್ತಿದ್ದು, ಸರಕಾರ ನೀಡುವ ಸೀಮೆಎಣ್ಣೆ ಪ್ರಮಾಣ ತೀರಾ ಕಡಿಮೆಯಾಗಿದ್ದರಿಂದ ನಾಡದೋಣಿಯವರು ಪ್ರತಿದಿನ ಸಮುದ್ರಕ್ಕೆ ಮೀನುಗಾರಿಕೆಗೆ ಹೋಗಲು ಕಷ್ಟವಾಗಿರುತ್ತದೆ. ಸೀಮೆಎಣ್ಣೆ ಪ್ರಮಾಣವನ್ನು 300 ಲೀಟರಿಗೆ ಏರಿಸಿದ್ದರೂ ಈ ತನಕ ಹಂಚಿಕೆ ಮಾಡದೇ ಮೀನುಗಾರರಿಗೆ ಸರಕಾರ ಅನ್ಯಾಯ ಮಾಡುತ್ತಿದೆ ಎಂದು ಬೈಂದೂರು ಬ್ಲಾಕ್ ಕಾಂಗ್ರೆಸ್ ಮೀನುಗಾರರ ಸಮಿತಿ ಅಧ್ಯಕ್ಷ ಬಿ. ನಾಗೇಶ್ ಖಾರ್ವಿ ಆರೋಪಿಸಿದ್ದಾರೆ. ಕೇಂದ್ರ ಸರ್ಕಾರದ ಆದೇಶದಲ್ಲಿ 2021-22ನೇ ಸಾಲಿಗೆ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕಾರ್ಯಚರಿಸುತ್ತಿರುವ ಒಟ್ಟು 8,030 ಮೀನುಗಾರಿಕಾ ದೋಣಿಗಳಿಗೆ 3,540 ಕೆ.ಎಲ್ ಪ್ರಮಾಣದ ಸೀಮೆಎಣ್ಣೆಯನ್ನು ವಿಶೇಷ ಉದ್ದೇಶಕ್ಕಾಗಿ ಬಿಡುಗಡೆಗೊಳಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಈ ಹಿಂದೆ ಒಟ್ಟು 2,610 ಮೀನುಗಾರಿಕೆ ದೋಣಿಗಳಿಗೆ ಸೀಮೆಎಣ್ಣೆ ಪರ್ಮಿಟ್ ನೀಡಲಾಗಿದ್ದು, ನಂತರ ಈಗ ಹೊಸದಾಗಿ ಸುಮಾರು 1,900…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹಾವೇರಿಯಲ್ಲಿ ಜರುಗಿದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅನಿವಾಸಿ ಭಾರತೀಯ, ಬೈಂದೂರು ತಗ್ಗರ್ಸೆಯ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರ ಕನ್ನಡ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಮೂಲತಃ ಬೈಂದೂರಿನವರು. ಪ್ರಾಥಮಿಕ ಶಿಕ್ಷಣದಿಂದ ಪದವಿಯವರೆಗೆ ಕರ್ನಾಟಕದಲ್ಲಿ ಪೂರ್ಣಗೊಳಿಸಿ ವೃತ್ತಿಯನ್ನು ಅರಸಿ ಕತಾರ್’ಗೆ 2007ರಲ್ಲಿ ಪಯಣ ಬೆಳೆಸಿದರು. ಉದ್ಯೋಗದ ಜೊತೆಗೆ ಕತಾರ್ ಕರ್ನಾಟಕ ಸಂಘದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಆಡಳಿತ ಸಮಿತಿಯ ಸದಸ್ಯರಾಗಿ, ಉಪಾಧ್ಯಕ್ಷರಾಗಿ, ಸದಸ್ಯತ್ವ ಸಂಚಾಲಕರಾಗಿ ಸಂಘ ಬೆಳೆಯಲು ಹಾಗೂ ಅದರ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ಪಾಲ್ಗೊಂಡರು. ಮಂದೆ ಐಸಿಬಿಎಫ್ ಭಾರತೀಯ ಸಮುದಾಯ ಹಿತೈಷಿ ವೇದಿಕೆ ಇದರಲ್ಲಿ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಲು ಅವಕಾಶ ದೊರಕಿತು. ಇವರ ಕಾರ್ಯಕ್ಷಮತೆಯನ್ನು ಭಾರತೀಯ ದೂತಾವಾಸದ ಕಾರ್ಯಾಲಯವು ಗಮನಿಸಿ ಶ್ಲಾಘಿಸಿತು. ಪೂರ್ವ ರಾಯಭಾರಿಗಳು, ಸುಬ್ರಹ್ಮಣ್ಯ ಅವರಿಗೆ ಅಭಿನಂದಿಸಿ ಪ್ರಮಾಣಪತ್ರವನ್ನು ಹಾಗೂ ನೆನಪಿನ ಕಾಣಿಕೆಯನ್ನು ನೀಡಿದ್ದಾರೆ. ಮಹಾಮಾರಿಯ ಕರೋನಾ ಉತ್ತುಂಗದಲ್ಲಿದ್ದ ಕಾಲದಲ್ಲಿ ಎಲ್ಲರೂ ಮನೆಯಿಂದ ಹೊರಬರಲು ಹೆದರುತ್ತಿದ್ದ ಸಂದರ್ಭ, ಸುಬ್ರಹ್ಮಣ್ಯ ಹೆಬ್ಬಾಗಿಲು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ದೇಶದಲ್ಲಿ ನಾವು ಮತ್ತು ನಮ್ಮ ಕುಟುಂಬ ಎಂಬ ಸ್ವಾರ್ಥದಲ್ಲಿ ಬದುಕುತ್ತಿದ್ದೇವೆ. ನಾವು ನಿಶ್ಚಿಂತೆಯಿಂದ ಸುಂದರ ಬದುಕು ಕಾಣಲು ತಮ್ಮ ಜೀವದ ಹಂಗು ತೊರೆದು ನಮ್ಮನ್ನು ನಮ್ಮ ದೇಶವನ್ನು ಹಗಲಿರುಳು ಕಾಯುತ್ತಿರುವ ಸೈನಿಕರ ನೆನಪು ಯಾರಿಗೂ ಆಗದಿರುವುದು ಬೇಸರದ ಸಂಗತಿ ಎಂದು ಉದ್ಯಮಿ ಡಾ. ಗೋವಿಂದ ಬಾಬು ಪೂಜಾರಿ ಹೇಳಿದರು. ಬೈಂದೂರು ವತ್ತಿನಕಟ್ಟೆ ಶ್ರೀ ಮಹಾಸತಿ ದೇವಳದ ಸಭಾಂಗಣದಲ್ಲಿ ಭಾನುವಾರ ಲೇಖಕ ಬೈಂದೂರು ಚಂದ್ರಶೇಖರ ನಾವಡರ ’ಸೈನಿಕನ ಆಂತರ್ಯದ ಪಿಸುನುಡಿ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ ದೇಶದ ಭದ್ರತೆ ಮತ್ತು ರಕ್ಷಣೆಗೆ ಗಡಿಭಾಗದಲ್ಲಿ ಹಗಲಿರುಳು ಕಾಯುತ್ತಿರುವ ಸೈನಿಕರ ದೈನಂದಿನ ಚಟುವಟಿಕೆಗಳು, ಅವರ ಜೀವನಶೈಲಿಯನ್ನು ನಿವೃತ್ತ ಸೈನಿಕ, ಲೇಖಕರು ಎಳೆಎಳೆಯಾಗಿ ತಮ್ಮ ಕೃತಿಯಲ್ಲಿ ಬಿಚ್ಚಿಟ್ಟಿದ್ದಾರೆ. ತಮ್ಮ ನೈಜ ಅನುಭವದ ಘಟನಾವಳಿಗಳನ್ನು ಭಾವನಾತ್ಮಕವಾಗಿ ಪುಸ್ತಕ ರೂಪದಲ್ಲಿ ಮೆಲುಕು ಹಾಕಿರುವುದು ಖುಷಿ ನೀಡಿದೆ ಎಂದರು. ದೇವಳದ ಸೇವ ಸಮಿತಿ ಅಧ್ಯಕ್ಷ ನಾಕಟ್ಟೆ ನಾಗರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸೇನೆಯ ಮೂರೂ ಪಡೆಗಳಲ್ಲಿ ಸೇವೆ…
