Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸ್ವಾತಂತ್ರ್ಯ ನಂತರ ದೇಶವನ್ನು ಆಳಿದ ಸರಕಾರಗಳು ಭಾರತ ದೇಶಕ್ಕೆ ಮತ್ತು ಜನತೆಗೆ ಏನು ಮಾಡಿಲ್ಲ ಬಿಜೆಪಿಗೆ ಅಧಿಕಾರ ಕೊಟ್ಟರೆ ದೇಶದ ಎಲ್ಲಾ ಪ್ರಚೆಗಳನ್ನು 5 ವರ್ಷಗಳಲ್ಲಿ ಶ್ರೀಮಂತರನ್ನಾಗಿ ಮಾಡುತ್ತೆವೆಂದು ಜನರನ್ನು ಭ್ರಮಾ ಲೋಕದಲ್ಲಿ ತೆಲಿಸಿ ಅಧಿಕಾರಕ್ಕೆ ಬಂದ ನರೇಂದ್ರ ಮೋಧಿ ನೇತ್ರತ್ವದ ಬಿಜೆಪಿ ಸರಕಾರ ನೋಟ್ ಬ್ಯಾನ್, ಜಿಎಸ್‍ಟಿಯಂತಹ ಅವೈಜ್ಞಾನಿಕ ಮಸೂದೆ ಜ್ಯಾರಿ ಮಾಡುವ ಜೊತೆಗೆ ಕರೋನಾದಂತಹ ಮಹಾಮಾರಿ ಸಾಂಕ್ರಾಮಿಕ ರೋಗ ಇರುವ ಸಂದರ್ಭದಲ್ಲಿ ಜನತೆ ಆಹಾರ ವಸ್ತು ಖರಿದಿಗೆ ಕಷ್ಟದಲ್ಲಿರುವಾಗ ನಿರಂತರ ಡಿಸೇಲ್, ಪೆಟೊಲ್, ಗ್ಯಾಸ್ ದರ ಎರಿಸಿ ತನ್ನನ್ನು ಅಧಿಕಾರ ದಲ್ಲಿ ಕೂರಿಸಿದ ಪ್ರಜೆಗಳನ್ನು ಸಂಕಷ್ಟಕ್ಕೆ ತಂದು ನಿಲ್ಲಿಸಿದ್ದಾರೆಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಹೇಳಿದರು. ತೈಲ ಬೆಲೆ ಏರಿಕೆಯ 3ನೇ ದಿನದ ಪ್ರತಿಭಟನೆಯ ಪ್ರಯುಕ್ತ ಹುಣ್ಸೆಮಕ್ಕಿ ಇಂಡಿಯಾನ್ ಆಯಿಲ್ ಪಂಪ್ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಗ್ಯಾಸ್ ಸಿಲಿಂಡರ್ ಗೆ 400 ರೂಪಾಯಿ ಇದ್ದಾಗ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮ ಬೋಳಂಬಳ್ಳಿ ದೇವಸ್ಥಾನ ಬಳಿ ಅಕ್ರಮವಾಗಿ ಸಂಗ್ರಹಿಸಿದ್ದ ಅಪಾರ ಪ್ರಮಾಣದ ಪಡಿತರ ಅಕ್ಕಿ ಆಹಾರ ಇಲಾಖೆ ನಿರೀಕ್ಷಕರು ಪೋಲೀಸ್ ಸಹಕಾರದಲ್ಲಿ ಮಂಗಳವಾರ ಸಂಜೆ ದಾಳಿ ನಡೆಸಿ ವಶ ಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಆಧಾರದಲ್ಲಿ ಕುಂದಾಪುರ ಅಹಾರ ನಿರೀಕ್ಷಕ ಸುರೇಶ್ ನೇತೃತ್ವದಲ್ಲಿ ದಾಳಿ ನಡೆಸಿದ್ದು ಒಟ್ಟು 3.60 ಲಕ್ಷ ಮೌಲ್ಯದ 300 ಚೀಲದ 150 ಕ್ವಿಂಟಲ್ ಅಕ್ಕಿ ವಶಕ್ಕೆ ಪಡೆಯಲಾಗಿದೆ. ಬೈಂದೂರು ಆಹಾರ ನಿರೀಕ್ಷಕ ವಿನಯ ಕುಮಾರ್, ಸಿಬ್ಬಂದಿಗಳಾದ ಪುನೀತ್, ವಿನೂತ, ಬೈಂದೂರು ಠಾಣೆಯ ಮಹಾಬಲ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು ಮತ್ತು ಪ್ರಸಿದ್ದ ಮೈಕ್ರೋಸಾಫ್ಟ್ನ ಟ್ರೈನಿಂಗ್ ಪಾರ್ಟ್ನರ್ ಕಂಪನಿಯು ಒಂದು ಮಹತ್ವದ ಒಪ್ಪಂದಕ್ಕೆ ಸಹಿ ಮಾಡುವ ಮೂಲಕ ತನ್ನ ಬೆಳವಣಗೆಯ ಚಟುವಟಿಕೆಗೆ ಸಾಕ್ಷಿಯಾಯ್ತು. ಈ ಒಪ್ಪಂದದಿಂದ ವಿದ್ಯಾರ್ಥಿಗಳು ಉನ್ನತ ಶ್ರೇಣಿಯ ಮತ್ತು ಹೊಸ ತಂತ್ರಜ್ಞಾನ ಭರಿತ ಕೋರ್ಸ್ ಗಳನ್ನು ಕಲಿತು, ವಿಶ್ವದ ಪ್ರಸಿದ್ಧ ಸಾಫ್ಟ್ವೇರ್ ಕಂಪೆನಿಯಾದ ಮೈಕ್ರೋಸಾಫ್ಟ್ ನಿಂದ ಪ್ರಮಾಣಪತ್ರ ಪಡೆಯುವ ಅವಕಾಶವಿರುತ್ತದೆ. ವಿದ್ಯಾರ್ಥಿಗಳು ಅಂಕಗಳಿಗೆ ಮಾತ್ರ ಸೀಮಿತರಾಗದೆ, ಉದ್ಯೋಗವಕಾಶಕ್ಕೆ ಮುಖ್ಯವಾಗಿರುವ, ಜ್ಞಾನವನ್ನ ವೃದ್ಧಿಗೊಳಿಸುವ ಚಟುವಟಿಕೆಗಲ್ಲಿ ಒಳಗೊಂಡು ಅಧ್ಯಯನ ಮಾಡುವ ಉದ್ದೇಶದಿಂದ ಈ ಒಪ್ಪಂದ ಬಹಳ ಪ್ರಮುಖ ಪಾತ್ರ ವಹಿಸಿದೆ ಎಂದು ಕಾಲೇಜಿನ ಪ್ರಾಂಶುಪಾಲರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕಂಪನಿಯ ವತಿಯಿಂದ ಸಂದೀಪ್ ಜಿಯಾನ್ ಜತೇನಿ ಸಹಿ ಮಾಡಿದರು. ಕಾಲೇಜು ವತಿಯಿಂದ ಪ್ರಾಂಶುಪಾಲ ಡಾ. ಚಂದ್ರರಾವ್ ಮದಾನೆ ಸಹಿ ಮಾಡಿದರು. ಕಾಲೇಜಿನಲ್ಲಿ ಬಹಳ ವೇಗದಲ್ಲಿ ಆಗುತ್ತಿರುವ ಬೆಳವಣಿಗೆ, ಮತ್ತು ಇದಕ್ಕೆ ಅನುಗುಣವಾಗಿ ಈ ವರ್ಷದಲ್ಲಿ ಕ್ಯಾಂಪಸ್ ಸಂದರ್ಶನದ ಮೂಲಕ ವಿದ್ಯಾರ್ಥಿಗಗೆ ದೊರಕಿದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಳ್ಳಿಹೊಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ವಿಶೇಷ ಚೇತನರಿಗೆ ಎಪಿಡಿ( ದಿ ಅಸೋಸಿಯೇಶನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ) ಸಂಸ್ಥೆಯಿಂದ ದಿನಸಿ ಕಿಟ್ ವಿತರಣಾ ಕಾರ್ಯಕ್ರಮ ಪಂಚಾಯತ್ ಸಭಾಂಗಣದಲ್ಲಿ ಜರುಗಿತು. ಈ ಕಾರ್ಯಕ್ರಮದಲ್ಲಿ ಎಪಿಡಿ ಸಂಸ್ಥೆಯ ನೋಡಲ್ ಅಧಿಕಾರಿಗಳಾದ ಹರೀಶ ಶೆಟ್ಟಿ ಕಿಟ್ ವಿತರಿಸಿ ಮಾತನಾಡಿ, ಎಪಿಡಿ ಸಂಸ್ಥೆಯ ಬಗ್ಗೆ ಮತ್ತು ಜೀವನೋಪಾಯ ಕಾರ್ಯಕ್ರಮದ ತರಬೇತಿ ಬಗ್ಗೆ ಸ್ವವಿಸ್ತಾರವಾದ ಮಾಹಿತಿಯನ್ನು ನೀಡಿದರು, ಈ ಸಂದರ್ಭ ಹಳ್ಳಿಹೊಳೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರದೀಪ ಕೊಠಾರಿ, ಉಪಾಧ್ಯಕ್ಷರು, ಸರ್ವ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಮತ್ತು ಗ್ರಾಮದ ಎಲ್ಲಾ ವಿಶೇಷಚೇತನರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಮಾಧವ ದೇವಾಡಿಗರು ಸ್ವಾಗತಿಸಿ, ನಿರೂಪಿಸಿದರು ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಆಕಾಶ್ ಶೆಟ್ಟಿ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಲಾಕ್‌ಡೌನ್ ಸಂಕಷ್ಟದಲ್ಲಿರುವ ೧೦ ಕರೋನಾ ಸೋಂಕಿತ ಬಡ ಕುಟುಂಬಗಳಿಗೆ ನಮ್ಮ ಭೂಮಿ ಸಂಸ್ಥೆ ಕನ್ಯಾನ ಅವರು ಕೊಡಮಾಡಿದ ಆಹಾರ ಸಾಮಾಗ್ರಿಗಳ ಕಿಟ್‌ನ್ನು ಫಲಾನುಭವಿಗಳಿಗೆ ಗಂಗೊಳ್ಳಿ ಗ್ರಾಮ ಪಂಚಾಯತ್‌ನಲ್ಲಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಸದಸ್ಯರಾದ ಶ್ರೀನಿವಾಸ ಖಾರ್ವಿ, ಬಿ. ರಾಘವೇಂದ್ರ ಪೈ, ಗ್ರಾಪಂ ಸಿಬ್ಬಂದಿಗಳಾದ ನಾರಾಯಣ ಶ್ಯಾನುಭಾಗ್, ಶೇಖರ ಜಿ., ಉದಯ ಕುಮಾರ್, ಸಂದೀಪ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ 2021-22ರ ಸಾಲಿನಲ್ಲಿ ಖಾಲಿ ಇರುವ ಪ್ರಾಥಮಿಕ ವಿಭಾಗದ ಬಿಐಇಆರ್‌ಟಿ ಹುದ್ದೆಗೆ ಅರ್ಹ ಸರಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಂದ ಅರ್ಜಿ ಆಹ್ವಾನಿಸಲಾಗಿದೆ. ವಿಶೇಷ ಚೇತನ ಮಕ್ಕಳ ಮನೆ-ಮನೆ ಭೇಟಿ ಮಾಡಿ ಬೋಧಿಸುವ ಮತ್ತು ಸಂಪನ್ಮೂಲ ಕೇಂದ್ರದಲ್ಲಿ ಬೋಧಿಸುವವರಿಗಾಗಿ ಇರುವ ಪ್ರಾಥಮಿಕ ವಿಭಾಗದ ಈ ಬಿಐಇಆರ್‌ಟಿ ಹುದ್ದೆಗೆ , ಶಿಕ್ಷಕ ತರಬೇತಿಯೊಂದಿಗೆ ವಿಶೇಷ ಡಿ. ಇಡಿ ಕಡ್ಡಾಯವಾಗಿರುತ್ತದೆ. ನಿವೃತ್ತರಿಗೆ ಅವಕಾಶವಿಲ್ಲ. ಆಸಕ್ತರು ಹತ್ತಿರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಸೂಕ್ತ ದಾಖಲೆಗಳೊಂದಿಗೆ ಜೂನ್ 21 ರಂದು ಮಧ್ಯಾಹ್ನ 12 ಗಂಟೆ ಒಳಗೆ ಅರ್ಜಿ ಸಲ್ಲಿಸುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಪಡೆಯುವಂತೆ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉತ್ತರಪ್ರದೇಶದಲ್ಲಿ ನಡೆದ ಮನಿಷಾ ಎಂಬ ದಲಿತ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿತ್ತು, ಬಾಲಕಿಯ ಮನೆಗೆ ಭೇಟಿ ನೀಡಲು ತೆರಳಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ನಾಯಕರಾದ ಆತಿಕುರ್ರಹ್ಮಾನ್,ಮಸೂದ್ ಹಾಗೂ ಪತ್ರಕರ್ತ ಸಿದ್ದೀಕ್ ಕಪ್ಪನ್ , ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರವೂಫ್ ಶರೀಫ್ ನ್ನು ಕೂಡ ಅನ್ಯಾಯವಾಗಿ ಬಂಧಿಸಿ ಇಂದಿಗೆ 250 ದಿನಗಳಾಗಿದ್ದು, ಇದನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರಾದ್ಯಂತ ಕರೆ ನೀಡಿದ ಪ್ರತಿಭಟನೆಯ ಭಾಗವಾಗಿ ಕ್ಯಾಂಪಸ್ ಫ್ರಂಟ್ ಕುಂದಾಪುರ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲೆಯ ಬಸ್ರೂರ್, ಕಂಡ್ಲೂರ್, ಗಂಗೊಳ್ಳಿ, ಶಿರೂರಿನಲ್ಲಿ, ಪ್ರತಿಭಟನೆ ನಡೆಯಿತು. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕುಂದಾಪುರ ಜಿಲ್ಲಾಧ್ಯಕ್ಷರಾದ ಫಯೀಜ್ ಬಸ್ರೂರ್ ಮಾತನಾಡಿ, ಮೋದಿಯ ಸರ್ವಾಧಿಕಾರದ ದೇಶದಲ್ಲಿ ಇವರ ವಿರುಧ್ದ ಯಾರೆಲ್ಲಾ ಧ್ವನಿಯೆತ್ತುತ್ತಾರೋ ಅವರನ್ನು ಇಂದು ಭೇಟೆಯಾಡುತ್ತಿದ್ದಾರೆ , ಅತ್ಯಾಚಾರಕ್ಕೊಳಪಟ್ಟು ಕೊಲೆಗೈಯಲ್ಪಟ್ಟ ಬಾಲಕಿಯ ಮನೆಗೆ ಭೇಟಿ ನೀಡುವುದು ಕೂಡ ಈ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಶ್ರೀ ವರಮಹಾಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ತ್ರಾಸಿ, ಹೊಸಾಡು ಹಾಗೂ ಗುಜ್ಜಾಡಿ ಗ್ರಾಮದ ಆಶಾ ಕಾರ್ಯಕರ್ತೆಯರು ಸೇರಿದಂತೆ ಸುಮಾರು 400ಕ್ಕೂ ಮಿಕ್ಕಿ ಬಡ ಕುಟುಂಬಗಳಿಗೆ ಟ್ರಸ್ಟ್‌ನ ಮುಖ್ಯಸ್ಥ ಗೋವಿಂದ ಬಾಬು ಪೂಜಾರಿ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಿದರು. ಬಳಿಕ ಮಾತನಾಡಿದ ಅವರು, ಕರೋನಾದಿಂದ ನೂರಾರು ಬಡ ಕುಟುಂಬಗಳು ಸಂಕಷ್ಟದಲ್ಲಿವೆ. ಮೀನುಗಾರರು, ಕೂಲಿ ಕಾರ್ಮಿಕರು ಸೇರಿದಂತೆ ಅನೇಕರು ಕೆಲಸವಿಲ್ಲದೆ ಜೀವನ ನಡೆಸುವುದು ಕಷ್ಟವಾಗುತ್ತಿದೆ. ಹೀಗಾಗಿ ಇಂತಹ ಕುಟುಂಬಗಳ ಸಂಕಷ್ಟಗಳಿಗೆ ಸ್ಪಂದಿಸುವ ಉದ್ದೇಶದಿಂದ ಅನೇಕ ಗ್ರಾಮಗಳಲ್ಲಿನ ಬಡ ಕುಟುಂಬಗಳಿಗೆ ಹಾಗೂ ಕರೋನಾ ನಿಯಂತ್ರಣಕ್ಕೆ ಮುಂಚೂಣಿಯಲ್ಲಿರುವ ಆಶಾ ಕಾರ್ಯಕರ್ತೆಯರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದರು. ಈ ಸಂದರ್ಭ ಗುರುರಾಜ ಪೂಜಾರಿ, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ, ಉಪಾಧ್ಯಕ್ಷ ಸೂರಜ್ ಖಾರ್ವಿ, ಗುಜ್ಜಾಡಿ ಗ್ರಾಪಂ ಸದಸ್ಯ ಹರೀಶ ಮೇಸ್ತ, ಮಿಥುನ್ ದೇವಾಡಿಗ ತ್ರಾಸಿ, ರವೀಂದ್ರ ಖಾರ್ವಿ, ರವಿ ಶೆಟ್ಟಿಗಾರ್ ತ್ರಾಸಿ, ಗುಜ್ಜಾಡಿ…

Read More

ಸೊಳ್ಳೆಗಳು ಯಾವುದೇ ಕಾಲಮಾನಕ್ಕೆ ಸೀಮಿತವಾಗದೇ ಎಲ್ಲಾ ಹವಾಮಾನದಲ್ಲೂ ಕಾಡುವ ಮಾರಣಾಂತಿಕ ಕೀಟವಾಗಿದೆ. ಯಕಶ್ಚಿತ್ ಸೊಳ್ಳೆ ಎಂದು ನಿರ್ಲಕ್ಷಿಸಿದರೆ ಅತ್ಯಂತ ಭೀಕರ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಸೊಳ್ಳೆಯಿಂದ ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾ, ಜಿಕಾ ವೈರಸ್, ಜ್ವರ, ಎನ್ಸೆಫಾಲಿಟಿಸ್ಗಳಂತಹ ಗಂಭೀರ ಕಾಯಿಲೆಗಳು ಹರಡುತ್ತವೆ. ಈ ಖಾಯಿಲೆಗಳು ಮನುಷ್ಯನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇನ್ನು ನೀವೇನಾದರೂ ಸಾಕುಪ್ರಾಣಿಗಳನ್ನು ಸಾಕಿದ್ದರೆ ಅದರಲ್ಲೂ ನಾಯಿಗಳ ಹೃದಯದ ಹುಳುಗಳಿಗೆ ಸೊಳ್ಳೆಗಳೇ ಕಾರಣವಾಗುತ್ತದೆ. ಆದ್ದರಿಂದ ಇದು ಕೇವಲ ಕಿರಿಕಿರಿ ಅಥವಾ ಕಡಿತದ ಬಗ್ಗೆ ಅಷ್ಟಕ್ಕೇ ಸೀಮಿತಗೊಳಿಸದೇ ಇದು ಮನೆಗೆ ನುಸುಳದಂತೆ ಎಚ್ಚರಿಕೆ ವಹಿಸಬೇಕಿದೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಾಕಷ್ಟು ಔಷಧಗಳು, ರಿಪೆಲ್ಲೆಂಟ್ ಸ್ಪ್ರೇಗಳು ಲಭ್ಯವಿದ್ದರೂ ಬಹುತೇಕ ರಾಸಾಯನಿಕಗಳಿಂದ ಕೂಡಿರುತ್ತದೆ, ಇವು ಮತ್ತೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ನೈಸರ್ಗಿಕವಾಗಿಯೇ ಯಾವುದೇ ರಾಸಾಯನಿಕ ಇಲ್ಲದೇ, ಮನೆಯಲ್ಲೇ ಕೆಲವು ಗಿಡಗಳನ್ನು ಬೆಳೆಸುವ ಮೂಲಕ ಸೊಳ್ಳೆಗಳನ್ನು ನಿವಾರಣೆ ಮಾಡಬಹುದು. ಈ ಗಿಡಗಳಿದ್ದರೆ ಸೊಳ್ಳೆಗಲು ಮನೆಗೆ ಬರುವುದೇ ಇಲ್ಲ, ಯಾವೆಲ್ಲಾ ಗಿಡಗಳು,…

Read More

ಕೆಮಿಕಲ್‌ಯುಕ್ತ ಆಹಾರ, ಮಾಲಿನ್ಯಮಯ ಪರಿಸರ ಮುಂತಾದವುಗಳಿಂದಾಗಿ ಇಂದು ಮಕ್ಕಳಲ್ಲೇ ಮರೆವು. ಸಾಮಾನ್ಯ ಸಮಸ್ಯೆಯಾಗಿದೆ. ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರೂ ಮರೆವಿನ ಕಾರಣದಿಂದ ಆಗಾಗ ಹಲವು. ಸಮಸ್ಯೆಗಳನ್ನೆದುರಿಸುತ್ತಿದ್ದಾರೆ. ಈ ಮರೆವು ಹೆಚ್ಚಾದರೆ ಅದು ಬದುಕಿನ ಎಲ್ಲ ಮಜಲುಗಳನ್ನೂ ಬುಡಮೇಲು ಮಾಡಿಬಿಡಬಲ್ಲದು. ಹಾಗಾಗಿ ಮೆಮೋರಿ ಪವರ್ ಹೆಚ್ಚಿಸಿಕೊಳ್ಳುವುದು, ಅದನ್ನು ಶಾರ್ಪ್ ಆಗಿಟ್ಟುಕೊಳ್ಳುವುದು ಅಗತ್ಯ. ಮೆದುಳಿನ ಆರೋಗ್ಯ ಕಾಪಾಡಿಕೊಂಡು ಮೆಮೋರರಿ ಪವರ್ ಹೆಚ್ಚಿಸಿಕೊಳ್ಳಲು ಹೀಗ್ ಮಾಡಿ.. ಆಹಾರಾಭ್ಯಾಸ: ನಾವು ಸಾಮಾನ್ಯವಾಗಿ ನಮ್ಮ ಆಹಾರದ ಕಡೆ ಗಮನ ಹರಿಸುವುದಿಲ್ಲ. ಆಗಾಗ ಊಟವನ್ನು ಬಿಡುತ್ತೇವೆ, ಬದಲಿಗೆ ಎಣ್ಣೆಯಲ್ಲಿ ಕರಿದ, ಮಸಾಲೆಯುಕ್ತ ಆಹಾರ ಸೇವಿಸುತ್ತೇವೆ. ಇವೆಲ್ಲವೂ ಬದುಕಿನ ನಂತರದ ಘಟ್ಟಗಳಲ್ಲಿ ಮರೆವಿಗೆ ಕಾರಣವಾಗುತ್ತದೆ. ಒಂದು ಹೊತ್ತು ಊಟ ಬಿಡುವುದು ಸಾಮಾನ್ಯ ವಿಷಯದಂತೆ ಕಾಣಬಹುದು. ಆದರೆ, ಇದು ಮಾನಸಿಕ ಆರೋಗ್ಯದ ಮೇಲೆ ದೊಡ್ಡ ರೀತಿಯ ಪರಿಣಾಮ ಬೀರುತ್ತದೆ. ಡಯಟ್ನಲ್ಲಿ ಹೆಚ್ಚು ಬಣ್ಣಗಳಿಂದ ಕೂಡಿದ ತರಕಾರಿ, ಸೊಪ್ಪು, ಹಣ್ಣುಗಳನ್ನು ಸೇರಿಸ .ಇವುಗಳಲ್ಲಿರುವ ನ್ಯೂಟ್ರಿಯೆಂಟ್ಸ್ ಹಾಗೂ ಆ್ಯಂಟಿ ಆಕ್ಸಿಡೆಂಟ್ಗಳು ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುತ್ತವೆ…

Read More