Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ದೆಹಲಿಯ ರಾಜ್‌ಪಥ್‌ನಲ್ಲಿ ಗಣರಾಜ್ಯೋತ್ಸವದಂದು ನಡೆದ ಪಥಸಂಚಲನದಲ್ಲಿ ಭಾರತೀಯ ಕರಾವಳಿ ಕಾವಲು ಪಡೆಯ ಡೆಪ್ಯೂಟಿ ಕಮಾಂಡೆಂಟ್ ಹೆಚ್. ಟಿ. ಮಂಜುನಾಥ್ ಅವರು ತಮ್ಮ ತಂಡವನ್ನು ಮುನ್ನಡೆಸಿದ್ದಾರೆ. ಕುಂದಾಪರ ತಾಲೂಕಿನ ಕುಂಭಾಶಿಯವರಾದ ಹೆಚ್. ಟಿ ಮಂಜುನಾಥ್ ಅವರು ಕಳೆದ ಕೆಲವು ವರ್ಷಗಳಿಂದ ಭಾರತಿಯ ಕರಾವಳಿ ಕಾವಲು ಪಡೆಯ ಡೆಪ್ಯೂಟಿ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದು, ಗಣರಾಜ್ಯೋತ್ಸವದಂದು ನಡೆದ ಪಥ ಸಂಚಲನದ್ದಲ್ಲಿ ಭಾರತಿಯ ಕರಾವಳಿ ಕಾವಲು ಪಡೆಯ ನೇತೃತ್ವ ವಹಿಸಿ ಮುನ್ನೆಡೆಸಿದ್ದರು. ಅವರು ನಿವೃತ್ತ ಪಿ.ಎಸ್.ಐ ಟಿ. ಎನ್ ತಿಮ್ಮಪ್ಪ ಹಾಗೂ ವಿಜಯಲಕ್ಮ್ಷೀ ಅವರ ಪುತ್ರರಾಗಿದ್ದಾರೆ. ಹೆಚ್. ಟಿ. ಮಂಜುನಾಥ್ ಹಾಗೂ ವಿದ್ಯಾರಾಣಿ ಎ. ದಂಪತಿಗಳಿಗೆ ಒರ್ವ ಪುತ್ರ ಹಾಗೂ ಪುತ್ರಿ ಇದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸುಮಾರು ಐದು ನೂರು ವರ್ಷಗಳ ಇತಿಹಾಸ ಹೊಂದಿರುವ ಬೈಂದೂರಿನ ಯಡ್ತರೆಯ ನಾಕಟ್ಟೆಯ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿಯ ಗರ್ಭಗೃಹ ಸಮರ್ಪಣೆ ಹಾಗೂ ಇಲ್ಲಿನ ಪ್ರಧಾನ ಶಕ್ತಿಗಳಾದ ಶ್ರೀಬ್ರಹ್ಮ, ಶ್ರೀಯಕ್ಷೆ, ಕೋಟಿ ಚೆನ್ನಯ್ಯ, ದೇಯಿಬೈದೆದಿ, ಮಾಯಿಂದಾಲೆ, ಹಾಗುಳಿ ಸಹಿತ ಹಲವು ಶಕ್ತಿಗಳಿಗೆ ಸಾನಿಧ್ಯ ಪ್ರತಿಷ್ಠಾಪನೆ ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯ, ಆಗಮ ಪಂಡಿತ ಕೇಂಜ ಶ್ರೀಧರ ತಂತ್ರಿಯವರ ಮಾರ್ಗದರ್ಶನದಲ್ಲಿ ಸೋಮವಾರ ವೈಭವದಿಂದ ಜರುಗಿತು. ಭಾನುವಾರ ಬೆಳಿಗ್ಗೆ ಪುಣ್ಯಾಹ, ದೇವನಾಂದಿ, ಮಹಾಸಂಕಲ್ಪ, ಜೀವ ಕಲಶ, ಶ್ರೀ ಬ್ರಹ್ಮಬದರ್ಕಳ ದೇವರ ಪುನ: ಪ್ರತಿಷ್ಠೆ, ಕಲಾತತ್ವ ಹೋಮ, ರಾತ್ರಿ ೭:೫೦ರ ಶುಭಮುಹೂರ್ತದಲ್ಲಿ ಜೀವಕಲಶಾಭಿಷೇಕ, ಪ್ರಸನ್ನ ಪೂಜೆ ನಡೆಯಿತು. ಸಂಜೆ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರು ಕೋಟಿ ಚೆನ್ನಯ್ಯ ಯಕ್ಷಗಾನ ಪ್ರದರ್ಶಿಸಿದರು. ಸೋಮವಾರ ಬೆಳಿಗ್ಗೆ ಮೀನ ಲಗ್ನ ಸುಮೂಹೂರ್ತದಲ್ಲಿ ಬ್ರಹ್ಮಕುಂಭಾಭಿಷೇಕ, ಪಲ್ಲಪೂಜೆ, ಶ್ರೀ ಬ್ರಹ್ಮಬದರ್ಕಳ ದೇವರ ದರ್ಶನ ಸೇವೆ, ಹಾಲಾವಳಿ, ಮಹಾಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ ಮಹಾಅನ್ನಸಂತರ್ಪಣೆ ನಡೆಯಿತು. ಸಂಜೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕೋಟದ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್‌ಗೆ ಸ್ವಾತಂತ್ರ್ಯ ಹೋರಾಟಗಾರ ವೀರಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ಭೇಟಿ ನೀಡಿದರು. ಥೀಮ್ ಪಾರ್ಕ್ ಕೆರೆಯ ಮಧ್ಯದಲ್ಲಿರುವ ಕಾರಂತರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ರಂಗ ಮಂದಿರ, ಆರ್ಟ್ ಗ್ಯಾಲರಿ, ಅಂಗನವಾಡಿ, ಗ್ರಂಥಾಲಯ ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು. ಭಾಷೆಗಳನ್ನು ಶ್ರೀಮಂತಗೊಳಿಸುವಲ್ಲಿ ಕವಿಗಳ ಪಾತ್ರ ಅಮೋಘವಾದದ್ದು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ|| ಶಿವರಾಮ ಕಾರಂತರ ನೆನಪಿನಲ್ಲಿ ಈ ಥೀಮ್ ಪಾರ್ಕ್ ನಿರ್ಮಾಣ ಶ್ಲಾಘನೀಯ, ಕಾರಂತರ ಸಾಧನೆಗಳು ಮುಂದಿನ ಜನಾಂಗಕ್ಕೆ ತಲುಪುವಂತಾಗಲಿ ಎಂದರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಟ್ರಸ್ಟಿ ಸುಬ್ರಾಯ್ ಆಚಾರ್ಯ, ಕೋಟತಟ್ಟು ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಹಂದಟ್ಟು, ಪ್ರಕಾಶ್ ಮಲ್ಪೆ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘದ ಅರ್ಹ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಯೋಜನೆ ಮೂಲಕ ಪ್ರತಿ ತಿಂಗಳು ಸುಜ್ಞಾನನಿಧಿ ವೇತನ ನೀಡಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲೂ ಮಕ್ಕಳ ನಿರಂತರ ಕಲಿಕೆಗಾಗಿ ಸುಜ್ಞಾನನಿಧಿ ವೇತನವನ್ನು ವಿತರಿಸಲಾಗಿದ್ದು, ಇದರ ಪ್ರಯೋಜನ ಪಡೆದುಕೊಂಡ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆದುಕೊಂಡು ಇದನ್ನು ಇನ್ನಷ್ಟು ಮಕ್ಕಳಿಗೆ ನೀಡಲು ಸಹಕರಿಸಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಸಮಿತಿ ಒಕ್ಕೂಟದ ಅಧ್ಯಕ್ಷ ರಘುರಾಮ ಪೂಜಾರಿ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬೈಂದೂರು ತಾಲೂಕು ಇವರ ಆಶ್ರಯದಲ್ಲಿ ತ್ರಾಸಿಯಲ್ಲಿರುವ ತಾಲೂಕು ಯೋಜನಾ ಕಛೇರಿಯಲ್ಲಿ ಮಂಗಳವಾರ ಸುಜ್ಞಾನನಿಧಿ ವೇತನ ಮಂಜೂರಾತಿ ಪತ್ರ ವಿತರಿಸಿ ಅವರು ಮಾತನಾಡಿದರು. ಬೈಂದೂರು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸುಧಾಕರ ಆಚಾರ್ಯ ಶುಭಾಶಂಸನೆಗೈದರು. ಬೈಂದೂರು ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಕೃಷ್ಣ ಪೂಜಾರಿ, ಪ್ರಗತಿಬಂಧು ಸ್ವಸಹಾಯ ಸಂಘಗಳ ತ್ರಾಸಿ ವಲಯ ಅಧ್ಯಕ್ಷ ನಾಗರಾಜ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಮಹಿಳಾ ಮೀನುಗಾರರ ಸ್ವಸಹಾಯ ಸಂಘಗಳ ಸದಸ್ಯರಿಗೆ ಕಡಿಮೆ ಬಡ್ಡಿ ದರದಲ್ಲಿ ಯೂನಿಯನ್ ಬ್ಯಾಂಕ್ ಉಡುಪಿ ಡಿಜಿಎಂ ಡಾ. ಎಚ್.ಟಿ ವಾಸಪ್ಪ ಇವರು ಯೂನಿಯನ್ ಬ್ಯಾಂಕ್ ಗೋಪಾಡಿ ಶಾಖೆಯಲ್ಲಿ ಸಾಲ ಮಂಜೂರಾತಿ ಪತ್ರವನ್ನು ಶುಕ್ರವಾರ ವಿತರಣೆ ಮಾಡಿ ಶುಭ ಹಾರೈಸಿದರು. ಇದೇ ಸಂದರ್ಭ ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ ರಮೇಶ ಕಾಂಚನ್ ಮಾತನಾಡಿ, ಈಗಾಗಲೇ ಬ್ಯಾಂಕಿನಿಂದ ಪ್ರಸ್ತುತ ಮಹಿಳಾ ಮೀನುಗಾರರಿಗೆ ಸುಮಾರು 6 ಕೋಟಿ ಸಾಲ ವಿತರಣೆ ಮಾಡಲಾಗಿದೆ ಎಂಬ ಮಾಹಿತಿ ತಿಳಿದು ಸಂತಸ ತಂದಿದೆ. ಇದೇ ರೀತಿ ಮಹಿಳಾ ಮೀನುಗಾರರಿಗೆ ಬರಬೇಕಾದ ಬಾಕಿ ಇರುವ ಸಾಲ ಮನ್ನಾ ಮತ್ತು ಬಡ್ಡಿ ಸಹಾಯ ಧನವನ್ನು ಶೀಘ್ರವಾಗಿ ವಿಲೇವಾರಿ ಮಾಡುವ ಬಗ್ಗೆ ಡಿಜಿಎಂ ಇವರಿಗೆ ಮನವಿ ಮಾಡಿದರು. ಯೂನಿಯನ್ ಬ್ಯಾಂಕ್ ಗೋಪಾಡಿ ಶಾಖೆಯ ಮ್ಯಾನೇಜರ್ ಪವನ್‌ಕುಮಾರ ತೆಗ್ಗಿನ್, ಸಿಬ್ಬಂದಿಗಳು, ಸ್ವಸಹಾಯ ಸಂಘದ ಸದಸ್ಯರು, ಬ್ಯಾಂಕಿನ ಗ್ರಾಹಕರು ಮತ್ತಿತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಕೊಡೇರಿ ಕಿರುಬಂದರು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಅಧಿಕಾರಿಗಳು ವಿಳಂಬ ಧೋರಣೆ ಹಾಗೂ ಉಪ್ಪುಂದ, ಪಡುವರಿ ಗ್ರಾಮದ ಮೀನುಗಾರರ ಬೇಡಿಕೆಯ ಬಗ್ಗೆ ನಿರ್ಲಕ್ಷ ವಹಿಸಿರುವುದನ್ನು ಖಂಡಿಸಿ ಸೋಮವಾರ ಉಪ್ಪುಂದ ರಾಣಿಬಲೆ ಮೀನುಗಾರರ ಒಕ್ಕೂಟ ರಿ ವತಿಯಿಂದ ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮೀ ಎಚ್. ಎಸ್ ಅವರಿಗೆ ಮನವಿ ಸಲ್ಲಿಸಲಾಯಿತು. ಉಪ್ಪುಂದ ರಾಣಿಬಲೆ ಮೀನುಗಾರರ ಒಕ್ಕೂಟ ರಿ. ಅಧ್ಯಕ್ಷ ವೆಂಟಕರಮಣ ಖಾರ್ವಿ ಮಾತನಾಡಿ ನಾವು ಸಾಂಕೇತಿಕವಾಗಿ ಸರ್ಕಾರದ ಕೋವಿಡ್ ನಿಯಮಾವಳಿಯ ಉದ್ದೇಶದಿಂದ ನಾವು ಇಂದು ಸಾಂಕೇತಿಕವಾಗಿ ಬೈಂದೂರು ತಹಶೀಲ್ದಾರ್‌ಗೆ ಮನವಿ ನೀಡಿದ್ದೇವೆ. ಒಂದು ವೇಳೆ ಕಾಮಗಾರಿಗಳು ಪ್ರಾರಂಭವಾಗದಿದ್ದರೆ ಕೋವಿಡ್ ನಿಯಮಾವಳಿಗಳು ಸಡಿಲಗೊಂಡ ನಂತರ ನಮ್ಮ ಹಕ್ಕನ್ನು ಕೇಳುವ ಸಲುವಾಗಿ ೫ ಸಾವಿರ ಜನ ಸೇರಿ ಬೈಂದೂರು ತಹಶೀಲ್ದಾರ್ ಕಛೇರಿಯ ಮುಂದಭಾಗದಲ್ಲಿ ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದರು. ತಹಶೀಲ್ದಾರ್ ಶೋಭಾಲಕ್ಷ್ಮೀ ಎಚ್.ಎಸ್ ಅವರು ಮನವಿ ಸ್ವೀಕರಿಸಿ ಮಾತನಾಡಿ, ಈ ಮನವಿಯನ್ನು ಸ್ವೀಕರಿಸಿ, ನನ್ನ ಮೇಲಾಧಿಕಾರಿಗಳಿಗೆ ತಿಳಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಯಡ್ತರೆ ಬಂಟರ ಭವನದಲ್ಲಿ ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಷನ್ ಕುಂದಾಪುರ – ಬೈಂದೂರು ತಾಲೂಕು ವಲಯದ 27ನೇ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಜರುಗಿತು. ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇದು ಬದಲಾವಣೆ ಯುಗವಾಗಿದ್ದು, ಪ್ರತಿಯೊಬ್ಬ ವೃತ್ತಿಪರರು ಹಾಗೂ ಸಂಘಟನೆಗಳು ಇಂದಿನ ವ್ಯವಸ್ಥೆಗೆ ತಕ್ಕಂತೆ ಬದಲಾಗಬೇಕು. ಸಾಮಾಜಿಕ ಬದುಕಲ್ಲಿ ಛಾಯಾಗ್ರಾಹಕರ ಜವಬ್ದಾರಿ ಮತ್ತು ಪಾತ್ರ ಬಹುಮುಖ್ಯವಾಗಿದೆ. ಸಂಘಟನೆಯಿಂದ ವೃತ್ತಿ ಬದುಕಿನಲ್ಲಿ ಇನ್ನಷ್ಟು ಶಕ್ತಿ ಪಡೆಯಲು ಸಾಧ್ಯವಾಗುತ್ತದೆ ಎಂದರು. ಕೋವಿಡ್ ಸಂಕಷ್ಟ ಅನೇಕ ಉದ್ಯಮಕ್ಕೆ ಸಂಕಟ ನೀಡಿದೆ. ಅದರಲ್ಲಿ ಛಾಯಾಗ್ರಾಹಕರ ಬದುಕು ಕೂಡ ಹೊರತಾಗಿಲ್ಲ. ಇದರ ನಡುವೆಯೂ ಅತ್ಯತ್ತಮ ಕಾರ್ಯಕ್ರಮಗಳ ಮೂಲಕ ಸೌತ್ ಕೆನರಾ ಪೋಟೋಗ್ರಾಪರ್ಸ್ ಕುಂದಾಪುರ – ಬೈಂದೂರು ಘಟಕ ಸಾಮಾಜಿಕವಾಗಿ ಗುರುತಿಸಿಕೊಂಡಿದೆ ಎಂದು ಅವರು ಶ್ಲಾಘಿಸಿದರು. ನಿರ್ಗಮಿತ ಅಧ್ಯಕ್ಷ ರಾಜಾ ಮಠದಬೆಟ್ಟು ಈ ಸಾಲಿನ ನೂತನ ಅಧ್ಯಕ್ಷ ಬಿ. ದೊಟ್ಟಯ್ಯ ಪೂಜಾರಿ ಅವರಿಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪುರಾಣ ಪ್ರಸಿದ್ಧ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರನ ಸನ್ನಿಧಿಯಲ್ಲಿ ಮಕರ ಸಂಕ್ರಮಣದ ಶುಭದಿನದಂದು ವಾರ್ಷಿಕ ಹಾಲು ಹಬ್ಬ, ಗೆಂಡಸೇವೆ, ಜಾತ್ರೆ ವೈಭವದಿಂದ ಜರುಗಿತು. ಬೆಳಿಗ್ಗಿನಿಂದ ದೇವಳದಲ್ಲಿ ಧಾರ್ಮಿಕ ವಿಧಿಗಳು ಜರುಗಿದವು. ಸಿಂಗಾರ ಮತ್ತು ಸೇವಂತಿಗೆ ಬ್ರಹ್ಮಲಿಂಗೇಶ್ವರನಿಗೆ ಪ್ರಿಯವಾದುದರಿಂದ ಬುಟ್ಟಿಯಲ್ಲಿ ಅವುಗಳನ್ನು ಹೊತ್ತು ಭಕ್ತರು ಸರದಿಯಲ್ಲಿ ಕಾಣಿಕೆ ಸಲ್ಲಿಸಿದರು. ನಾಡಿನ ವಿವಿಧೆಡೆಗಳಲ್ಲಿ ನೆಲೆಸಿರುವ ಭಕ್ತರು ಜಾತ್ರೆಯ ಸಂದರ್ಭದಲ್ಲಿ ಮಾರಣಕಟ್ಟೆಗೆ ಆಗಮಿಸಿ ದೇವರ ದರ್ಶನ ಪಡೆದು ಪುನೀತರಾಗುತ್ತಾರೆ. ಜ. 14ರಿಂದ ಜ. 16ರ ವರೆಗೆ ಮಾರಣಕಟ್ಟೆ ಕ್ಷೇತ್ರದಲ್ಲಿ ಮಹಾ ಮಂಗಳಾರತಿ ಅನಂತರ ಮಂಡಲ ಸೇವೆ ಜರಗಲಿದೆ. ಕುಂದಾಪುರ, ಬೈಂದೂರು ಹಾಗೂ ಉಡುಪಿ ತಾಲೂಕಿನಿಂದ ಆಗಮಿಸಿದ ಭಕ್ತರಿಗೆ ಸಕಲ ಸೌಕರ್ಯ ಒದಗಿಸುವಲ್ಲಿ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಹೆಚ್ಚಿನ ಕಾಳಜಿ ವಹಿಸಿ ಪೊಲೀಸರೊಡನೆ ಸಹಕರಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಾಳಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಗ್ರಾಮಗಳನ್ನು ಕಸ ಮುಕ್ತ ಗ್ರಾಮವನ್ನಾಗಿ ಮಾಡುವ ಉದ್ದೇಶದಿಂದ ಈಗಾಗಲೇ ಕಸ ಮುಕ್ತ ಗ್ರಾಮಕ್ಕೆ ಭಾನುವಾರ ವಕ್ವಾಡಿಯಲ್ಲಿ ಚಾಲನೆ ನೀಡಲಾಯಿತು. ಕಾಳಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾಲತಾ ಶೆಟ್ಟಿ ಇವರು ವಕ್ವಾಡಿಯ ಸ್ನೇಹಜೀವಿ ರಿಕ್ಷಾ ನಿಲ್ದಾಣದಲ್ಲಿ ರಿಕ್ಷಾ ಚಾಲಕರಿಗೆ ತ್ಯಾಜ್ಯ ಹಾಕುವ ಕೈ ಚೀಲಗಳನ್ನು ವಿತರಿಸಿ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಿ ಶುಭ ಹಾರೈಸಿದರು. ಇದೇ ಸಂದರ್ಭ ಘನ ತ್ಯಾಜ್ಯ ವಿಲೇವಾರಿಗಾಗಿ ಅಂಗಡಿ ಮತ್ತು ಮನೆಗಳಿಗೆ ಪಂಚಾಯತ್ ಸದಸ್ಯರ ತಂಡ ಭೇಟಿ ನೀಡಿ ಕೈ ಚೀಲಗಳನ್ನು ವಿತರಿಸಿ ಕಸ ಮುಕ್ತ ಗ್ರಾಮದ ಕುರಿತು ಮಾಹಿತಿ ನೀಡಲಾಯಿತು. ಪಂಚಾಯತ್ ಉಪಾಧ್ಯಕ್ಷ ರಾಮಚಂದ್ರ ನಾವಡ, ಪಿಡಿಓ ಪಾಂಡುರಂಗ ಶೇಟ್, ಪಂಚಾಯತ್ ಸದಸ್ಯರಾದ ರಮೇಶ್ ಶೆಟ್ಟಿ ವಕ್ವಾಡಿ, ಭಾರತಿ, ಚಂದ್ರ ಪೂಜಾರಿ, ರಿಕ್ಷಾ ಚಾಲಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪದವಿ ಕಾಲೇಜು ವಿಜ್ಞಾನ ವಿದ್ಯಾರ್ಥಿಗಳಿಗಾಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ವತಿಯಿಂದ ಉಪ್ಪಿನಂಗಡಿಯಲ್ಲಿ ನಡೆಸಲಾದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಕನ್ನಡ ವಿಜ್ಞಾನ ಉಪನ್ಯಾಸ ಸ್ಪರ್ಧೆಯ ಗಣಿತಶಾಸ್ತ್ರ ವಿಭಾಗದಲ್ಲಿ ಕೋಟೇಶ್ವರದ ಶ್ರೀ ಕಾಳಾವರ ವರದರಾಜ ಎಂ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ತೃತೀಯ ಬಿಎಸ್ಸಿ ವಿದ್ಯಾರ್ಥಿನಿ ಶ್ರುತಿ ಇವರು ದ್ವಿತೀಯ ಬಹುಮಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಈ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಸರಕಾರಿ ಕಾಲೇಜಿನ ಏಕೈಕ ವಿದ್ಯಾರ್ಥಿನಿಯಾಗಿದ್ದಾರೆ. ಉಪನ್ಯಾಸಕರಾದ ಡಾ.ಶ್ರೀಮತಿ ಅಡಿಗ ಮಾರ್ಗದರ್ಶನ ಮಾಡಿ ಸಹಕರಿಸಿದ್ದರು.

Read More