ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲ, ಗಂಗೊಳ್ಳಿ (ತ್ರಾಸಿ) ಮಹಾಶಕ್ತಿ ಕೇಂದ್ರ ಹಾಗೂ ರೆಡ್ಕ್ರಾಸ್ ಸಂಸ್ಥೆ ಬೈಂದೂರು-ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ಪ್ರಯುಕ್ತ ಸ್ವಯಂಪ್ರೇರಿತ ರಕ್ತದಾನ ಶಿಬಿರ ತ್ರಾಸಿಯ ಅಣ್ಣಪ್ಪಯ್ಯ ಸಭಾಭವನದಲ್ಲಿ ಶುಕ್ರವಾರ ಜರಗಿತು. ಶಿಬಿರ ಉದ್ಘಾಟಿಸಿ ಮಾತನಾಡಿದ ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕಕುಮಾರ್ ಶೆಟ್ಟಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸಮಗ್ರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಮಾದರಿ ಆಡಳಿತದ ಮೂಲಕ ವಿಶ್ವ ಮಟ್ಟದಲ್ಲಿ ದೇಶದ ಘನತೆ ಹೆಚ್ಚಿಸಿದ್ದಾರೆ. ಕರೋನಾ ವಿರುದ್ಧ ಯಶಸ್ವಿ ಹೋರಾಟ ನಡೆಸಿ, ದೇಶದ ಎಲ್ಲರಿಗೂ ಕೋವಿಡ್ ಲಸಿಕೆ ನೀಡಲು ಲಸಿಕಾ ಅಭಿಯಾನವನ್ನು ಹಮ್ಮಿಕೊಂಡು ದೇಶದ ಜನರ ಪ್ರಾಣರಕ್ಷಣೆಗೆ ಮುಂದಾಗಿದ್ದಾರೆ. ಅವರ ಜನ್ಮದಿನ ಅವಿಸ್ಮರಣೀಯವಾಗಿಸಲು ೨೦ ದಿನಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಭಾಗವಾಗಿ ಆಯೋಜಿಸಿರುವ ರಕ್ತದಾನ ಶಿಬಿರದ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು. ರಕ್ತದಾನ ಎಲ್ಲಾ ದಾನಗಳಲೇ ಶ್ರೇಷ್ಠವಾಗಿದೆ. ಜೀವ ಉಳಿಸಲು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಎಳೆ ವಯಸ್ಸಿನಿಂದ ಮಕ್ಕಳಿಂದ ಇಳಿ ವಯಸ್ಸಿನ ಮಹಿಳೆಯವರೆಗೂ ನಡೆದ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ, ಅತ್ಯಾಚಾರಗೈದ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ಮಂಗಳೂರು ಇವರ ನೇತೃತ್ವದಲ್ಲಿ ಕುಂದಾಪುರದಲ್ಲಿ ಪ್ರತಿಭಟನೆ ನಡೆಯಿತು. ಅ.ಭಾ.ವಿ.ಪ ಉಡುಪಿ ಜಿಲ್ಲೆ ಜಿಲ್ಲಾ ಸಂಚಾಲಕ್ ಅಶೀಶ್ ಶೆಟ್ಟಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, ವೀರ ವನಿತೆಯರನ್ನು ಹೊಂದಿರುವ ಈ ನಾಡಿನಲ್ಲಿ ಹೆಣ್ಣಿಗೆ ಪೂಜನೀಯವಾದ ಸ್ಥಾನ ನೀಡಿದೆ. ನೆಲ, ಜಲ, ದೇಶ ಎಲ್ಲದ್ದಕ್ಕೂ ಹೆಣ್ಣಿನ ಸ್ಥಾನ ನೀಡಿರುವ ಪರಂಪರೆ ನಮ್ಮದು. ಆದರೆ ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ಮನುಷ್ಯತ್ವವನ್ನು ಮೀರಿದವುಗಳಾಗಿವೆ. ಅತ್ಯಾಚಾರಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ಮತ್ತೆ ಇಂಥಹ ಕೃತ್ಯಗಳು ನಡೆಯಂತೆ ಕಾನೂನಿನ ಭಯ ಮೂಡಿಸುವ ಕೆಲಸ ಆಗಬೇಕು ಎಂದರು. ಈ ಸಂದರ್ಭದಲ್ಲಿ ರಾಜ್ಯ ಸಹ ಕಾರ್ಯದರ್ಶಿ ಮಣಿಕಂಠ ಕಳಸ, ನಿರಕ್ಷಿತ, ಪ್ರಸನ್ನ, ತಾ.ಸಂಚಾಲಕ ಪ್ರಜ್ವಲ್, ಆಶಿಶ್ ಬೋಳ, ವಿಜೇತ್, ಯಶಸ್ವಿನಿ ಬೀಜಾಡಿ, ದೀಪಕ್, ರಶ್ಮಿತಾ, ರಾಹುಲ್,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ರೋಟರಿ ಕ್ಲಬ್ ಗಂಗೊಳ್ಳಿ ವತಿಯಿಂದ ಇಂಜಿನಿಯರ್ಸ್ ದಿನಾಚರಣೆ ಅಂಗವಾಗಿ ಇಂಜಿನಿಯರ್ ರಘುನಂದನ ನಾಯಕ್ ತ್ರಾಸಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ರೋ. ರಾಜೇಶ ಎಂ.ಜಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಲಯ ಸೇನಾನಿ ಕೆ. ರಾಮನಾಥ ನಾಯಕ ಶುಭಾಶಂಸನೆಗೈದರು. ರೋಟರಿ ಸದಸ್ಯರಾದ ಜನಾರ್ದನ ಪೂಜಾರಿ, ನಾಗರಾಜ ಶೆಟ್ಟಿ, ಎಂ. ನಾಗೇಂದ್ರ ಪೈ, ನಾಗೇಶ ನಾಯಕ್, ಲಿಪ್ಟನ್ ಒಲಿವೇರಾ ಹಾಗೂ ಪ್ರವೀಣ್ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಿಕಲಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಮತ್ತು ಲಯನ್ಸ್ ಕ್ಲಬ್ ವಡೆರಹೋಬಳಿ, ಕುಂದಾಪುರ ಹಾಗೂ ನಾರಾಯಣ ವಿಶೇಷ ಮಕ್ಕಳ ಶಾಲೆ ತಲ್ಲೂರು ಇವುಗಳ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ವಿಶೇಷ ಶಾಲೆಗಳ ಶಿಕ್ಷಕರಿಗಾಗಿ ಒಂದು ದಿನದ ಪುನಶ್ಚೇತನ ತರಬೇತಿ ಕಾರ್ಯಾಗಾರ ನಡೆಯಿತು. ಡಿಸ್ಯಾಬಿಲಿಟಿ ಎನ್ಜಿಒ ಅಲಯನ್ಸ್ ಮ್ಯಾನೇಜರ್ ರೂಪಲಕ್ಷ್ಮೀ ಅವರು ಕಾರ್ಯಾಗಾರವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿ ಮತ್ತು ಸಂಪನ್ಮೂಲ ವ್ಯಕ್ತಿಗಳಾಗಿ ಕುಂದಾಪುರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್.ಕೆ ಪದ್ಮನಾಭ, ವಿಶೇಷ ಶಾಲಾ ಶಿಕ್ಷಕರಿಗೆ ಅಂಗವಿಕಲರ ಹಕ್ಕುಗಳ ಅಧಿನಿಯಮ -೨೦೧೬ರ ಕುರಿತು ಮಾಹಿತಿಯನ್ನು ನೀಡಿದರು. ಈ ಕಾಯಿದೆಯು ಅಂಗವಿಕಲರ ಹಕ್ಕುಗಳ ರಕ್ಷಣೆಯೊಂದಿಗೆ ವಿವಿಧ ಸವಲತ್ತುಗಳನ್ನು ನೀಡಿದೆ. ವಿಶೇಷವಾಗಿ ಈ ಕಾಯಿದೆಯು ಅಂಗವಿಕಲರ ಬದುಕನ್ನು ಉತ್ತಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು ಮತ್ತು ಕಾಯಿದೆಯಲ್ಲಿರುವ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯು ಆಯೋಜಿಸಿದ ಯಶೋಗಾನ ಲೇಖನ ಸ್ಪರ್ಧೆಯಲ್ಲಿ ಆಯ್ಕೆಯಾದ ಲೇಖಕರಿಗೆ ನಗದು ಪುರಸ್ಕಾರ ಮತ್ತು ತಲ್ಲೂರು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದರ ಜತೆಗೆ ಉತ್ತಮ ಸಂಸ್ಕಾರ ರೂಢಿಸಿಕೊಳ್ಳಬೇಕು ಎಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ ಹೇಳಿದರು. ದೇವಸ್ಥಾನ ಅಧೀನದ ಅರೆಶಿರೂರು ಪ್ರೌಢಶಾಲೆಯ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳಿಗೆ ದೇವಳ ವತಿಯಿಂದ ಬುಧವಾರ ಉಚಿತ ನೋಟ್ ಬುಕ್ ವಿತರಿಸಿ ಅವರು ಮಾತನಾಡಿದರು. ಗುರುಹಿರಿಯರನ್ನು ಗೌರವಿಸಬೇಕು. ಕಷ್ಟದಲ್ಲಿರುವವರಿಗೆ ನೆರವಾಗಬೇಕು. ವ್ಯಕ್ತಿ ಕರುಣೆ, ಮಾನವ ಸಂಬಂಧ, ಸತ್ಯ, ನ್ಯಾಯಪರತೆ, ಸಾಮಾಜಿಕ ಕಳಕಳಿ ಹೊಂದಿದ್ದರೆ ಜೀವನದಲ್ಲಿ ವಿಶೇಷ ಸಾಧನೆ ಮಾಡಬಹುದು ಎಂದು ಹೇಳಿದರು. ಮುಖ್ಯೋಪಾಧ್ಯಾಯ ಎ. ಶಿವರಾಮ ಸ್ವಾಗತಿಸಿದರು. ಶಿಕ್ಷಕ ಉದಯ ನಾಯ್ಕ್ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ರಾಜೀವ ಶೆಟ್ಟಿ ನಿರೂಪಿಸಿದರು. ವ್ಯವಸ್ಥಾಪನಾ ಸಮಿತಿಯ ಸದ್ಯರಾದ ಜಯಾನಂದ ಹೋಬಳಿದಾರ್, ಶಿಕ್ಷಕರಾದ ಪ್ರಶಾಂತ ಶ್ಯಾನುಭಾಗ್, ಗೀತಾ ಎಚ್, ಗೋವಿಂದ ಗೊಂಡ, ವೇಣುಗೋಪಾಲ ಶೆಟ್ಟಿ, ಸುಧೀಂದ್ರ ಗೊಂಡ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜಿಲ್ಲಾ ವಿಕಲಚೇತನರ ಇಲಾಖೆ ಉಡುಪಿ ಜಿಲ್ಲೆ, ಎಪಿಡಿ ಸಂಸ್ಥೆ ಬೆಳಗಾವಿ, ಗ್ರಾಮ ಪಂಚಾಯತ್ ಹಾಲಾಡಿ ಹಾಗೂ ಗ್ರಾಮ ಪಂಚಾಯತ್ ಹಾರ್ದಳ್ಳಿ ಮಂಡಳ್ಳಿ ಆಶ್ರಯದಲ್ಲಿ ಸಮುದಾಯಾಧಾರಿತ ಔದ್ಯೋಗಿಕ ತರಬೇತಿ ಕಾರ್ಯಕ್ರಮ ಹಾಲಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ತಾಲೂಕಿನ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಾದ ಮಂಜುನಾಥ ಹೆಬ್ಬಾರ್ ಮಾತನಾಡಿ ವಿಶೇಷ ಚೇತನರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿ ಸಂಸ್ಥೆಯ ಜಿಲ್ಲಾ ನೋಡಲ್ ಅಧಿಕಾರಿಗಳಾದ ಹರೀಶ ಶೆಟ್ಟಿ ಮಾತನಾಡಿ, ನಮ್ಮ ಸಂಸ್ಥೆ 1959 ರಲ್ಲಿ ಸ್ಥಾಪನೆಯಾಗಿ ವಿಶೇಷ ಚೇತನರಿಗೆ ಸ್ವಾವಲಂಬಿ ಬದುಕು ಕಲ್ಪಿಸುವ ಕೆಲಸ ಮಾಡುತ್ತಿದೆ ಮತ್ತು ಅವರಿಗೆ ಇಷ್ಟವಾಗುವ ತರಬೇತಿ ನೀಡಿ, ಗ್ರಾಮೀಣ ಮಟ್ಟದಲ್ಲಿ ವಿಶೇಷ ಚೇತನರು ಪೂರಕ ಜೀವನ ಸಾಗಿಸಲು ನಮ್ಮ ಸಂಸ್ಥೆ ಸಹಕಾರಿಯಾಗುತ್ತಿದೆ ಎಂದರು. ಡಿಎನ್ಎ ಸಂಸ್ಥೆಯ ವ್ಯವಸ್ಥಾಪಕಿ ರೂಪ ಲಕ್ಷ್ಮೀ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶೇಷ ಚೇತನರು ಸಾಕಷ್ಟು ಕ್ಷೇತ್ರದಲ್ಲಿ ಸಾಧನೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೆರಾಡಿ ವರಸಿದ್ಧಿ ವಿನಾಯಕ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ಗಳಾದ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಶಿಕ್ಷಣದ ಪ್ರವೇಶ ಪರೀಕ್ಷೆಗಳಆದ ನೀಟ್, ಸಿಇಟಿ ಮತ್ತು ಜೆಇಇ ಪರೀಕ್ಷೆ ಎದುರಿಸಲು ಒಂದು ದಿನದ ಮಾಹಿತಿ ಕಾರ್ಯಾಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿ ಎಮ್. ಎಸ್. ರಾಮಚಂದ್ರ ಐಐಟಿ ರೂರ್ಕೆ ಅವರು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿಯನ್ನು ನೀಡಿದರು. ಕಾಲೇಜಿನ ಸಂಚಾಲಕರಾದ ಕೆರಾಡಿ ಚಂದ್ರಶೇಖರ ಶೆಟ್ಟಿ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದು, ಪ್ರಾ0ಶುಪಾಲರಾದ ಪ್ರಸಾದ್ ಕುಮಾರ್ ಆರ್ ಪ್ರಾಸ್ತವಿಕ ಮಾತುಗಳನ್ನಾಡಿದರು. ಉಪನ್ಯಾಸಕಿ ಶ್ವೇತಾ ಕಾರ್ಯಕ್ರಮ ನಿರೂಪಿಸಿ, ಚೈತ್ರ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ವಿದ್ಯಾಗಮ ಹಾಗೂ ಕರ್ನಾಟಕದ ನಾಲ್ಕು ರೋಟರಿ ಜಿಲ್ಲೆಗಳ ಪ್ರಯೋಜಕತ್ವದ ಮಹತ್ವಾಕಾಂಕ್ಷಿ, ಕನ್ನಡ ಮಾಧ್ಯಮದಲ್ಲಿ ಎಸ್.ಎಸ್.ಎಲ್.ಸಿ ಓದುತ್ತಿರುವ ವಿದ್ಯಾರ್ಥಿಗಳ ಪ್ರೋತ್ಸಾಹಕ ‘ವಿದ್ಯಾಸೇತು’ ಪುಸ್ತಕಗಳ ವಿತರಣಾ ಕಾರ್ಯಕ್ರಮ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಗಂಗೊಳ್ಳಿ ರೋಟರಿ ಅಧ್ಯಕ್ಷ ರಾಜೇಶ್ ಎಂ. ಜಿ., ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ವಿದ್ಯಾರ್ಥಿಗಳು ಈ ಪುಸ್ತಕದ ಸದುಪಯೋಗಪಡಿಸಿಕೊಂಡು ಮುಂಬರುವ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸುವಲ್ಲಿ ಪ್ರಯತ್ನಿಸಬೇಕು ಎಂದರು. ವಲಯ ಸೇನಾನಿ ಕೆ.ರಾಮನಾಥ್ ನಾಯಕ್ ಮತ್ತು ಉಪಪ್ರಾಂಶುಪಾಲ ಉಮೇಶ್ ಕರ್ಣಿಕ್ ರೋಟರಿಯ ಕಾರ್ಯವನ್ನು ಶ್ಲಾಘಿಸಿ ಕೃತಜ್ಞತೆ ಸಲ್ಲಿಸಿದರು. ಶಿಕ್ಷಕರಾದ ಗೋಪಾಲ ದೇವಾಡಿಗ, ಶ್ರೀಲತಾ, ಲವೀನಾ, ಕಚೇರಿ ಸಹಾಯಕ ಶ್ರೀಧರ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು. ರೋಟರಿ ಕಾರ್ಯದರ್ಶಿ ನಾರಾಯಣ ಇ. ನಾಯ್ಕ್ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇನ್ಟಿಟ್ಯೂಟ್ ಆಫ್ ಚಾರ್ಟರ್ ಅಕೌಂಟೆಂಟ್ ಆಫ್ ಇಂಡಿಯಾ ನಡೆಸಿದ ಸಿಎ ಅಂತಿಮ ಮತ್ತು ಸಿಎ ಪೌಂಡೇಶನ್ ಪರೀಕ್ಷೆಯಲ್ಲಿ ಶಿಕ್ಷಪ್ರಭಾ ಅಕಾಡಮಿ ಆಫ್ ಕಾಮರ್ಸ್ ಏಜುಕೇಶನ್ (ಸ್ಪೇಸ್) ಸಿಎ/ಸಿಎಸ್/ಸಿಎಂಎ ಮತ್ತು ಬ್ಯಾಂಕಿಂಗ್ ತರಬೇತಿ ಸಂಸ್ಥೆಯು ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ವಿಲಾಸ್ ಶೆಟ್ಟಿ, ಸಿಎ ಅಂತಿಮ ಪರೀಕ್ಷೆಯಲ್ಲಿ 528 ಅಂಕ ಗಳಿಸುವುದರೊಂದಿಗೆ ಸಿ.ಎ. ಕೋರ್ಸ್ ಪೂರ್ಣಗೊಳಿಸಿ ಲೆಕ್ಕ ಪರಿಶೋಧಕರಾಗಿ ಆಯ್ಕೆಯಾಗಿದ್ದಾರೆ. ಪುನೀತ್ ಶೆಟ್ಟಿ 215 ಅಂಕಗಳೊಂದಿಗೆ ಸಿ.ಎ. ಅಂತಿಮ ಪರೀಕ್ಷೆಯ ಪ್ರಥಮ ಗ್ರೂಪಿನಲ್ಲಿ ತೇರ್ಗಡೆ ಹೊಂದಿದ್ದಾರೆ. ಸಿ.ಎ. ಪೌಂಡೇಶನ್ ಪರೀಕ್ಷೆಯಲ್ಲಿ ಅನುಷ್ಕಾ ಎ. ಕುಂದರ್ – 332, ಅಭಿಷೇಕ್ ಡಿ. 302, ಕಿರಣ್ ಕಾಮತ್ 299, ಆದಿತ್ಯ ದೇವಾಡಿಗ -298, ಜೆಸಿತಾ ಡಿ. -284, ರಾಮನಾಥ ಶೆಣೈ -282, ಸುಪ್ರೀತಾ- 274, ಶ್ರೇಯಾ ಭಟ್ -268, ರೋಹನ್ ಶೆಟ್ಟಿ- 266, ಅಭಿಶ್ರೀ- 263, ಮಂದಾರಾ – 260, ಭುವನ್ ರಾಜ್ ಶೆಟ್ಟಿ -252, ಹರೀಶ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರಾಷ್ಟ್ರೀಯ ಶಿಕ್ಷಣ ನೀತಿ – 2020 ವಿದ್ಯಾರ್ಥಿ ಕೇಂದ್ರಿತ ನೀತಿಯಾಗಿದ್ದು, ಇದರಲ್ಲಿನ ಪ್ರತಿ ಅಂಶವನ್ನೂ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ರೂಪಿಸಲಾಗಿದೆ. ಹೊಸ ಶಿಕ್ಷಣ ನೀತಿಯ ಮೂಲಕ ಆಸಕ್ತಿ-ಕೌಶಲ್ಯ ಆಧಾರಿತ ಕಲಿಕೆ ಹಾಗೂ ದೇಶದ ಮಾನವ ಸಂಪನ್ಮೂಲದ ಸದ್ಬಳಕೆ ನಿಜಾರ್ಥದಲ್ಲಿ ಆಗಲಿದೆ ಎಂದು ಮಣಿಪಾಲ ಎಂಐಟಿಯ ಪ್ರಾಧ್ಯಾಪಕ ಹಾಗೂ ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಪ್ರೋ. ಕರುಣಾಕರ ಕೊಟೇಗಾರ್ ಹೇಳಿದರು. ಅವರು ಗುರುವಾರ ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟೀಯ ಶಿಕ್ಷಣ ನೀತಿ ಕುರಿತು ಆಯೋಜಿಸಲಾದ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶಿಕ್ಷಣ ವ್ಯವಸ್ಥೆ ಸರಿಯಿದ್ದಲ್ಲಿ ದೇಶ ಅಭಿವೃದ್ಧಿ ಹೊಂದುವುದರಲ್ಲಿ ಯಾವುದೇ ಸಂಶಯವಿಲ್ಲ. ಎಳು ದಶಕಗಳ ಹಳೆಯದಾದ ಪಾಶ್ಚಾತ್ಯರ ಪಳೆಯುಳಿಕೆಯಂತಿರುವ ಶಿಕ್ಷಣ ನೀತಿಯು ಭಾರತೀಯರ ವ್ಯಕ್ತಿತ್ವನ್ನು ರೂಪಿಸಲು ಸಾಧ್ಯವಿಲ್ಲ. ಹಾಗಾಗಿಯೇ ದೇಶದಲ್ಲಿ ನೂತನ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ ಎಂದರು. ಅಂಕ ಗಳಿಸುವುದಕ್ಕಾಗಿ ಪಡೆಯುವ ಶಿಕ್ಷಣಕ್ಕೂ, ಅಂತಹ ಶಿಕ್ಷಣದ ಹೊರತಾಗಿ ಪಡೆಯುವ ಕೌಶಲ್ಯಕ್ಕೂ…
