ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಮೇ 13: ಜಿಲ್ಲೆಯಲ್ಲಿ ಈವರೆಗೆ ಇ-ಕೆವೈಸಿ ಆಗದೇ ಇರುವ ಪಡಿತರ ಚೀಟಿಯ ಸದಸ್ಯರು ಮೇ 20 ರ ಒಳಗೆ ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ, ಬೆರಳಚ್ಚು ನೊಂದಾಯಿಸಿಕೊಳ್ಳಲು (ಆಧಾರ ದೃಢೀಕರಣ ಇ-ಕೆವೈಸಿ) ಅಂತಿಮ ಅವಕಾಶ ಕಲ್ಪಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಪಡಿತರ ಚೀಟಿದಾರರು ಜಾತಿ ಪ್ರಮಾಣ ಪತ್ರ ಹಾಗೂ ಅನಿಲ ಸಂಪರ್ಕ ಹೊಂದಿರುವ ಪಡಿತರ ಚೀಟಿದಾರರು, ಅನಿಲ ಸಂಪರ್ಕದ ಮಾಹಿತಿ ಮತ್ತು ಮೊಬೈಲ್ ಸಂಖ್ಯೆಯನ್ನು ಇ-ಕೆವೈಸಿ ಮಾಡುವ ನ್ಯಾಯಬೆಲೆ ಅಂಗಡಿಗಳಿಗೆ ನೀಡಬೇಕು. ಸರಕಾರದ ಆದೇಶದಂತೆ ಮೇ 20ರ ಒಳಗೆ ಇ-ಕೆವೈಸಿ ಮಾಡಿಸದೇ ಇರುವ ಪಡಿತರ ಚೀಟಿಯ ಸದಸ್ಯರ ಹೆಸರನ್ನು ರದ್ದು ಪಡಿಸಲು ಕ್ರಮವಹಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿಉಡುಪಿ,ಮೇ.13 (ಕವಾ): ಮೀನುಗಾರಿಕೆ ಇಲಾಖೆಯ ವತಿಯಿಂದ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಗೆ ಹಾಗೂ & ಯೋಜನೆಯಡಿ 2018-19 ಮತ್ತು 2019-20 ರಲ್ಲಿ ಬಾಕಿ ಉಳಿದಿರುವ ಘಟಕಗಳಿಗಾಗಿ ಅರ್ಹ ಫಲಾಪೇಕ್ಷಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ. ಒಳನಾಡು ಮೀನುಗಾರಿಕೆ ಮತ್ತು ಜಲಕೃಷಿ ಅಭಿವೃದ್ಧಿ, ಕಡಲ ಕೃಷಿ ಮತ್ತು ಕಡಲ ಕಳೆ ಕೃಷಿಗೆ ಸೇರಿದಂತೆ ಸಮುದ್ರ ಮೀನುಗಾರಿಕೆ ಅಭಿವೃದ್ಧಿ, ಅಲಂಕಾರಿಕ ಮತ್ತು ಮನೋರಂಜನೆ ಮೀನುಗಾರಿಕಾ ಅಭಿವೃದ್ಧಿ, ಆಳಸಮುದ್ರದ ಮೀನುಗಾರಿಕೆಗೆ ಅಭಿವೃದ್ಧಿ ಮತ್ತು ಮೀನುಗಾರಿಕೆ ನಿರ್ವಹಣೆ ಹಾಗೂ ನಿಯಂತ್ರಣ ವಿಧಿಗಳ ಅಭಿವೃದ್ಧಿ ಕಾರ್ಯಗಳ ವಿವಿಧ ಘಟಕಗಳಿಗೆ ಆರ್ಥಿಕ ಸೌಲಭ್ಯ ಪಡೆಯಲು ಮೇ 31 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಡುಪಿ, ಕಾರ್ಕಳ ಹಾಗೂ ಕುಂದಾಪುರ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ಅಥವಾ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರನ್ನು ಸಂಪರ್ಕಿಸುವAತೆ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಮೇ12: ಸಾಧಕರು, ದಾರ್ಶನಿಕರ ತತ್ವ, ಆದರ್ಶಗಳನ್ನು ಇಂದಿನ ಯುವ ಪೀಳಿಗೆ ಮೈಗೂಡಿಸಿಕೊಳ್ಳುವುದರೊಂದಿಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ತಿಳಿಸಿದರು. ಇಂದು ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ, ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ ಭಗೀರಥ ಮಹರ್ಷಿ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ, ಮಹನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದರು. ಹೇಮರೆಡ್ಡಿ ಮಲ್ಲಮ್ಮ ಅಚಲವಾದ ವಿಶ್ವಾಸ, ತಾಳ್ಮೆಯಿಂದ ತಮ್ಮ ಕುಟುಂಬದವರ ಮನಸ್ಸನ್ನು ಗೆಲ್ಲುವುದರ ಜೊತೆಗೆ ಅವರ ಮನ ಪರಿವರ್ತನೆ ಮಾಡುವುದರೊಂದಿಗೆ ಸಮಾಜದಲ್ಲಿ ಬದಲಾವಣೆಯನ್ನು ತರುವುದರ ಮೂಲಕ ಸಮಾಜ ಸುಧಾರಣೆಯನ್ನು ಮಾಡಿದರು. ತನ್ನ ಭಕ್ತಿ ಕಾಯಕದಿಂದ ಮನೆ ಮಾತಾಗಿದ್ದರು. ಕೌಟುಂಬಿಕ ಕಷ್ಟಗಳನ್ನು ಮೆಟ್ಟಿನಿಂತು ಆದರ್ಶ ಮೌಲ್ಯಗಳನ್ನು ಬದುಕಿನಲ್ಲಿ ರೂಢಿಸಿಕೊಂಡು, ಸಾಮಾಜಿಕ ಹಾಗೂ ಧಾರ್ಮಿಕ ಚಿಂತನೆಯಲ್ಲಿ ಸಾಧನೆಗೈದ ಶಿವಶರಣೆಯೇ ಹೇಮರೆಡ್ಡಿ ಮಲ್ಲಮ್ಮ ನಮ್ಮೆಲ್ಲರಿಗೆ ಮಾದರಿ ಎಂದರು. ಭಗೀರಥ ಮಹರ್ಷಿಯು ತನ್ನ ಸತತ ಪ್ರಯತ್ನದಿಂದ ಶಿವನ ಜಟೆಯಲ್ಲಿದ್ದ ಗಂಗೆಯನ್ನು ಧರೆಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಮೇ12: 75 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಜ್ಯದಾದ್ಯಂತ ಸ್ವಾತಂತ್ರ್ಯ ಸಂಗ್ರಾಮದ ನೆನಪುಗಳನ್ನು ಮೆಲುಕು ಹಾಕುವ ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮವು ಆಂದೋಲನದ ರೀತಿ ನಡೆಯಲಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಹೇಳಿದರು. ಅವರು ನಗರದ ಜಿಲ್ಲಾ ಪಂಚಾಯತ್ನ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ 75 ನೇ ಸ್ವಾತಂತ್ರ್ಯ ಸಂಗ್ರಾಮದ ಅಂಗವಾಗಿ ನಡೆಯಲಿರುವ ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ದೊರಕಿಸಿಕೊಡಲು ಅನೇಕ ಮಹಾನ್ ನಾಯಕರುಗಳು ತಮ್ಮ ಜೀವವನ್ನೇ ತ್ಯಾಗ ಮಾಡಿ, ಹೋರಾಟವನ್ನು ನಡೆಸಿದ್ದಾರೆ. ಇಂತಹ ಹೋರಾಟಗಾರರ ಜೀವನ ಕಥೆ, ಹೋರಾಟದ ವಿವಿಧ ಹಂತಗಳು ಸೇರಿದಂತೆ, ಸ್ವಾತಂತ್ರö್ಯ ಹೋರಾಟಕ್ಕೆ ಕನ್ನಡಿಗರ ಕೊಡುಗೆಯನ್ನು ಇಂದಿನ ಯುವಜನರಿಗೆ, ಸಾರ್ವಜನಿಕರಿಗೆ ಹಾಗೂ ಹೊರರಾಜ್ಯದವರಿಗೆ ತಿಳಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ವಿಭಿನ್ನವಾಗಿ ಹಮ್ಮಿಕೊಳ್ಳಲಾಗಿದೆ ಎಂದರು. ಜಿಲ್ಲೆಯಲ್ಲಿ ಮೇ 28 ರಂಧು ಬೆಳಗ್ಗೆ 10.30 ಕ್ಕೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತ್ರಾಸಿ ವಲಯದ ಹೊಸಾಡು ಕಾರ್ಯಕ್ಷೇತ್ರದ ಹೊಸಾಡು ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾಗಿರುವ ೨ ಲಕ್ಷ ರೂ. ಅನುದಾನದ ಡಿಡಿಯನ್ನು ಯೋಜನೆಯ ಬೈಂದೂರು ತಾಲೂಕು ಯೋಜನಾಧಿಕಾರಿ ವಿನಾಯಕ ಪೈ ಅವರು ದೇವಸ್ಥಾನದ ಆಡಳಿತ ಮಂಡಳಿಯವರಿಗೆ ಮಂಗಳವಾರ ಹಸ್ತಾಂತರಿಸಿದರು. ಜನಜಾಗೃತಿ ವೇದಿಕೆ ಸದಸ್ಯ ರಮೇಶ ಆಚಾರ್ಯ, ತ್ರಾಸಿ ವಲಯ ಮೇಲ್ವಿಚಾರಕ ಗಿರೀಶ್, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ರಕ್ತದೊತ್ತಡವನ್ನು ಸಮನಾಗಿ ಕಾಯ್ದುಕೊಳ್ಳಲು ಡಯಟ್ ಮಾಡುವುದು ಹಿಂಸೆಯ ಕೆಲಸ. ಅದರಲ್ಲೂ ಡಯಾಬಿಟೀಸ್ ಇದ್ದರೆ ಮುಗಿಯಿತು ಯಾರಿಗೂ ಬೇಡ ಆ ಹಿಂಸೆ. ದೇಹದ ತೂಕ, ಮಾನಸಿಕ ಒತ್ತಡ, ನಮ್ಮ ಚಟುವಟಿಕೆಗಳೂ ರಕ್ತದೊತ್ತಡ ಏರಿಳಿತದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಆರೋಗ್ಯಕರವಾದ ಡಯಟ್ ಮೂಲಕ ಬಿಪಿ ಕಂಟ್ರೋಲ್ನಲ್ಲಿಟ್ಟುಕೊಳ್ಳಬಹುದು. ನಮ್ಮ ನಿಸರ್ಗವೇ ನಮ್ಮ ಬಿಪಿ ಕಂಟ್ರೋಲ್ ಮಾಡಲು ಬೇಕಾದ ಅಗತ್ಯ ಆಹಾರ ವಸ್ತುಗಳನ್ನು ಹೊಂದಿದೆ. ನಾವು ಉಪಯೋಗಿಸಿಕೊಳ್ಳಬೇಕಷ್ಟೆ. ಸಿಹಿಗುಂಬಳ ಕಾಯಿ ಮತ್ತು ಅದರ ಬೀಜ:ಇರಾನ್ ಮೆಕ್ಸಿಕೋದಲ್ಲಿ ಸಿಹಿಗುಂಬಳಕಾಯಿ ಹಾಗೂ ಅದರ ಬೀಜವನ್ನು ಡಯಾಬಿಟೀಸ್ಗೆ ಸಾಂಪ್ರದಾಯಿಕ ಪರಿಹಾರವಾಗಿ ಬಳಸುತ್ತಾರೆ. ಆಂಟಿ ಆಕ್ಸೈಡೆನ್ಸ್ ಹಾಗೂ ಫೈಬರ್ ಇರುವುದರಿಂದ ಸಿಹಿಗುಂಬಳಕಾಯಿ ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ. ಸಿಹಿಗುಂಬಳಕಾಯಿಯ ಬೀಜದ ಹುಡಿ ಮನುಷ್ಯರು ಹಾಗೂ ಪ್ರಾಣಿಗಳಲ್ಲಿಯೂ ರಕ್ತದೊತ್ತಡ ಸಮತೋಲನ ಮಾಡಲು ಸಹಕಾರಿ. ಸೀಫುಡ್-ಮೀನು, ಏಡಿ, ಸಿಗಡಿ ಇತ್ಯಾದಿ:ಸೀಪುಡ್ನಲ್ಲಿರುವ ಪ್ರೋಟೀನ್ ಹೆಚ್ಚಾಗಿರುತ್ತದೆ. ಮೀನು, ಚಿಪ್ಪು ಮೀನುಗಳು, ಏಡಿ, ಸಿಗಡಿಗಳಲ್ಲಿ ಆರೋಗ್ಯಕರ ಫಾಟ್, ಮಿನರಲ್ಸ್, ವಿಟಮಿನ್ಗಳಿರುತ್ತದೆ ಸೀಪುಡ್ನಲ್ಲಿರುವ ವಿಶೇಷವಾಗಿ ಸಾಲ್ಮನ್ ಹಾಗೂ ಸಾರ್ಡೈನ್ಸ್ಗಳಲ್ಲಿ ಆಂಟಿಆಕ್ಸಿಡೆಂಟ್ ಹೆಚ್ಚಾಗಿರುತ್ತದೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಮೇ.11: ಕೇರಳ ವಯನಾಡ್ ಸುಲ್ತಾನ್ ಬತೇರಿಯಲ್ಲಿ ಬಂಧನವಾದ ನಂತರ ಮೇ.24ರಂದು ಕೇರಳ ಪೊಲೀಸರಿಂದ ರಾಜ್ಯ ಪೊಲೀಸರಿಗೆ ಹಸ್ತಾತರವಾದ ನಕ್ಸಲೈಟ್ ಬಿ.ಜಿ.ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಎಂಬವರ ಪೊಲೀಸರು ಕುಂದಾಪುರ 1ನೇ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ಇಬ್ಬರನ್ನೂ ಹತ್ತುದಿನ ಪೊಲೀಸ್ ಕಸ್ಟಡಿಗೆ ನೀಡಿದೆ. ಶಂಕಿತ ನಕ್ಸಲ್ ವಾದಿ ಬಿ.ಜಿ.ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಅಮಾಸೆಬೈಲ್ ಠಾಣೆಯಲ್ಲಿ 2006ರಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಘಟನೆ ನಡೆದ ಸ್ಥಳದ ಮಹಜರಿಗೆ ಇಬ್ಬರನ್ನೂ ಪರಿಶೀಲನೆಗೆ ಕೊಂಡೊಯ್ಯಲಿದ್ದರೆ. ನ್ಯಾಯಾಂಗ ಬಂಧನದಲ್ಲಿದ್ದ ಬಿ.ಜಿ.ಕೃಷ್ಣಮೂರ್ತಿ, ಸಾವಿತ್ರಿ ಅವರ ಕಾರ್ಕಳ, ಹೆಬ್ರಿ ಹಾಗೂ ಅಜೆಕಾರು ನಡೆದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೇ.3 ರಂದು ಪೊಲೀಸ್ ಕಸ್ಟಡಿ ಪಡೆದು ವಿಚಾರಣೆ ಹಾಗೂ ಸ್ಥಳ ಮಹಜರು ನಡೆಸಿದ ಬಳಿಕ ಮಂಗಳವಾರ ಮರಳಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿ ಕೇಶವ್ ಯಡಿಯಾಳ ಪ್ರಕರಣಗಳ ವಿಚಾರಣೆಗಾಗಿ ಕುಂದಾಪುರ ಉಪ ವಿಭಾಗದ ಪೊಲೀಸರು ವಶಕ್ಕೆ ಪಡೆದು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಮೇ.12: ಅಸಾನಿ ಚಂಡಮಾರುತದ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಮೋಡಕಟ್ಟಿದ ವಾತಾವರಣ, ಬುಧವಾರ ಪೂರ್ತಿ ಮಳೆಯಾಗಿ ಸುರಿದಿದೆ. ಬೆಳಗ್ಗೆಯಿಂದ ನಿರಂತರ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿತು. ಬೆಳಗ್ಗೆ ಹತ್ತು ಗಂಟೆಯಿಂದ ಆರಂಭವಾದ ಮಳೆ ಮಧ್ಯಾಹ್ನ ಮೂರರ ತನಕ ಸುರಿದಿದ್ದು, ನಂತರ ತುಂತುರು ಮಳೆಗೆ ಸೀಮಿತವಾಯಿತು. ಕಡಲಬ್ಬರ ಹೆಚ್ಚಾಗಿ ಇದ್ದಿದ್ದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಲಿಲ್ಲ. ಮಳೆಯ ಹಿನ್ನೆಲೆಯಲ್ಲಿ ಕೃಷಿಕರು ಕೃಷಿ ಚಟುವಟಿಕೆ ಆರಂಭಿಸಿದ್ದು, ಗದ್ದೆ ಉಳುವ ಯಂತ್ರಗಳು, ಗೊಬ್ಬರ ಹರಡುವ ಮಹಿಳೆಯರು ಭತ್ತದ ಗದ್ದೆಗಳಲ್ಲಿ ಕಂಡುಬಂತು. ಇನ್ನು ಗುರುವಾರವೂ ಮೋಡಕವಿದ ವಾತಾವರಣ ಮುಂದುವರಿದಿದ್ದು, ಮೇ.13ರ ತನಕವೂ ಚಂಡಮಾರುತದ ಪ್ರಭಾವ ಇರಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಸರ್ವಿಸ್ ರಸ್ತೆಯಾಯ್ತು ನೀರಿನ ತೋಡು!ಕುಂದಾಪುರರ ಪುರಸಭಾ ವ್ಯಾಪ್ತಿಯಲ್ಲಿ ಸರ್ವಿಸ್ ರಸ್ತೆಯ ಚರಂಡಿಯ ಬದಲಿಗೆ ರೋಡಿನಲ್ಲಿಯೇ ನೀರು ತುಂಬಿ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಎ.10 ಒಳಗೆ ಎಲ್ಲಾ ಹೆದ್ದಾರಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಸಹಾಯಕ ಕಮೀಷನರ್ ಆದೇಶಿಸಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಕುಂದಾಪುರ ಕೆ.ಎಸ್.ಆರ್.ಟಿ.ಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಇಲ್ಲಿಗೆ ಸಮೀಪದ ಹಾಲ್ಕಲ್ನಲ್ಲಿರುವ ಅಂತರ್ವನಮ್ ಹೋಮ್ಸ್ಟೇನಲ್ಲಿ ಸದಾನಂದ ಕಾನ್ಫರೆನ್ಸ್ ಹಾಲ್ನ್ನು ಸಂಸದ ಬಿ. ವೈ. ರಾಘವೇಂದ್ರ ಉದ್ಘಾಟಿಸಿದರು. ಈ ಸಂದರ್ಭ ಸಂಸದರು ಮಾತನಾಡಿ, ಸದಾ ಕ್ರೀಯಾಶೀಲವಾಗಿ ಊರಿನ ಅಭಿವೃದ್ಧಿಯ ಬಗ್ಗೆ ತೊಡಗಿಸಿಕೊಳ್ಳುವ ವೆಂಕಟೇಶ ಕಿಣಿ ಅವರು, ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡುವ ಬಗ್ಗೆ ಯಾವಾಗಲೂ ಬೇಡಿಕೆ ಇರಿಸುತ್ತಾರೆ. ಇಂತಹ ಜನಪರ ಕಾಳಜಿ ಇರುವ ವ್ಯಕ್ತಿಗಳಿಂದ ಸಲಹೆ ನೀಡುವುದರಿಂದ ಒಂದಿಷ್ಟು ಉತ್ತಮ ಯೋಜನೆಗಳ ಅನುಷ್ಠಾನ ಸಾಧ್ಯವಾಗುತ್ತದೆ ಎಂದರು. ಶಾಸಕರಾದ ಬಿ. ಎಂ. ಸುಕುಮಾರ ಶೆಟ್ಟಿ, ಬಿಜೆಪಿ ಬೈಂದೂರು ಕ್ಷೇತ್ರಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿ ಕೃಷ್ಣಪ್ರಸಾದ್ ಅಡ್ಯಂತಾಯ, ಜಿಪಂ ಮಾಜಿ ಸದಸ್ಯ ಸುರೇಶ್ ಬಟ್ವಾಡಿ, ಸದಾಶಿವ ಡಿ. ಪಡುವರಿ, ಆರ್.ಎಸ್. ವೆಂಚರ್ಸ್ನ ರಾಜೀವ ಕುಮಾರ್, ಅಂತರ್ವನಮ್ ಮಾಲಕರಾದ ಕೆ. ವೆಂಕಟೇಶ ಕಿಣಿ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು : ಕೊಡಚಾದ್ರಿಗೆ ರೋಪ್ವೇ: ರಾಷ್ಟ್ರೀಯ ಪರ್ವತ್ ಮಾಲ್ ಯೋಜನೆಯಡಿಯಲ್ಲಿ ದೇಶದ ಪ್ರಮುಖ 10 ಪರ್ವತ ಪ್ರಧೇಶಗಳಿಗೆ ರೋಪ್ವೇ ನಿರ್ಮಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು. ಇದಕ್ಕಾಗಿ ಅರ್ಜಿ ಸಲ್ಲಿಸಿದ್ದ ರಾಜ್ಯದ 15 ಯೋಜನೆಗಳ ಪೈಕಿ ಅಂಜನಾದ್ರಿ ಬೆಟ್ಟ ಹಾಗೂ ಕೊಡಚಾದ್ರಿಗೆ ರೋಪ್ವೇ ನಿರ್ಮಾಣಕ್ಕೆ ಒಪ್ಪಿಗೆ ದೊರಕಿದ್ದು, ಶೀಘ್ರದಲ್ಲಿ ಆದೇಶ ಪತ್ರ ಸಿಗಲಿದೆ. ಇದರಿಂದ ಪ್ರವಾಸೋದ್ಯಮ ಅಭಿವೃಧ್ಧಿಯಾಗಲಿದೆ. ಕೊಡಚಾದ್ರಿಗೆ ಕ್ರಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವ ಪ್ರಾಸ್ತಾಪವನ್ನು ಕೈಬಿಡಲಾಗಿದ್ದು, ಬೆಟ್ಟಕ್ಕೆ ತೆರಳುವ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಹೇಳಿದರು. ಕೊಲ್ಲೂರು ಸಮೀಪದ ಹಾಲ್ಕಲ್ನಲ್ಲಿ ಬುಧವಾರ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಒಂದೇ ಸರ್ಕಾರದ ಅವಧಿಯಲ್ಲಿ ಸೌಕೂರು ನೀರಾವರಿ ಯೋಜನೆ ದಾಖಲೆಯ ಅವಧಿಯಲ್ಲಿ ಪೂರ್ಣಗೊಳ್ಳುತ್ತಿದೆ. ಬೈಂದೂರು ವಿಧಾನಸಭಾ ಕ್ಷೇತ್ರದ 2.69 ಲಕ್ಷ ಜನರಿಗೆ ಕುಡಿಯುವ ನೀರು ಒದಗಿಸಲು 596 ಕೋಟಿ ರೂ. ವೆಚ್ಚದಲ್ಲಿ ರೂಪಿಸಿರುವ ಬಹುಗ್ರಾಮ ಯೋಜನೆಯ ಟೆಂಡರ್ ಪ್ರಕ್ರಿಯೆ ಶೀಘ್ರದಲ್ಲಿ ನಡೆಯಲಿದೆ.…
